ಮೈಸೂರು-ದರ್ಭಾಂಗ ಭಾಗಮತಿ ಎಕ್ಸ್‌ಪ್ರೆಸ್ ದುರಂತದ ಆಘಾತಕಾರಿ ಚಿತ್ರಗಳು..
ಚೆನ್ನೈನ ಕವರೈಪೆಟ್ಟೈ ರೈಲ್ವೇ ನಿಲ್ದಾಣದ ಬಳಿ ಮೈಸೂರು- ದರ್ಭಾಂಗ ನಡುವಿನ ಭಾಗಮತಿ ಎಕ್ಸ್‌ಪ್ರೆಸ್ ರೈಲು ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದಿದೆ. ಮೂರು ಬೋಗಿಗಳಿಗೆ ಬೆಂಕಿ ಬಿದ್ದು, 6ಕ್ಕೂ ಅಧಿಕ ಕೋಚ್‌ಗಳು ಹಳಿ ತಪ್ಪಿವೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಮೈಸೂರು- ದರ್ಭಾಂಗ ನಡುವಿನ ಭಾಗಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈನ ಕವರೈಪೆಟ್ಟೈ ರೈಲ್ವೇ ನಿಲ್ದಾಣದ ಬಳಿ ಬೀಕರ ಅಪಘಾತಕ್ಕೆ ಈಡಾಗಿದೆ. ಗೂಡ್ಸ್ ರೈಲಲಿಗೆ ಎಕ್ಸ್‌ಪ್ರೆಸ್ ರೈಲು ಗುದ್ದಿದೆ.
ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ಲೂಪ್‌ಲೈನ್‌ಗೆ ಏರಿ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ.ಢಿಕ್ಕಿ ಹೊಡೆದ ರಭಸಕ್ಕೆ ಮೂರು ಬೋಗಿಗಳಿಗೆ ಬೆಂಕಿ ಬಿದ್ದಿದ್ದು, 6ಕ್ಕೂ ಅಧಿಕ ಕೋಚ್‌ಗಳು ಹಳಿ ತಪ್ಪಿವೆ.
ತಿರುವಳ್ಳೂರಿನ ಕವರಪೆಟ್ಟೈ ಬಳಿ ಘಟನೆ ನಡೆದಿದೆ. ರೈಲಿನಿಂದ ಭಾರೀ ಪ್ರಮಾಣದ ಬೆಂಕಿ ಹೊರಬರುತ್ತಿದೆ. ರೈಲಿನ ಕಿಟಕಿಗಳ ಮೂಲಕ ಕೆಲವು ಪ್ರಯಾಣಿಕರು ಹೊರಬಂದಿದ್ದು, ಸ್ಥಳದಲ್ಲಿ ಮುಂದುವರೆದ ರಕ್ಷಣಾ ಕಾರ್ಯ ಮುಂದುವರಿದಿದೆ. ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್ ಮಾಡಿದ ಜಿಲ್ಲಾಡಳಿತ ಶಿಫ್ಟ್ ಮಾಡಿದೆ.
ಘಟನೆಯಲ್ಲಿ ಕೆಲವು ಕನ್ನಡಿಗರು ಸಂಕಷ್ಟಕ್ಕೆ ಸಿಲುಕದ್ದಾರೆ ಎನ್ನಲಾಗಿದೆ. ಮಧ್ಯಾಹ್ನ 1.50ಕ್ಕೆ ಈ ಟ್ರೇನ್ ಬೆಂಗಳೂರಿನಿಂದ ಹೊರಟಿದ್ದರೆ, ಮೈಸೂರಿನಿಂದ ಬೆಳಗ್ಗೆ 10.30ಕ್ಕೆ ಪ್ರಯಾಣ ಆರಂಭಿಸಿತ್ತು.
ಇದನ್ನೂ ಓದಿ: Breaking: ಚೆನ್ನೈ ಬಳಿ ಗೂಡ್ಸ್ ರೈಲಿಗೆ ಢಿಕ್ಕಿ ಹೊಡೆದ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್
ಬೆಂಗಳೂರಿನಿಂದ ಇದೇ ಟ್ರೇನ್‌ನಲ್ಲಿ 45 ಮಂದಿ ನಾಗಪುರಕ್ಕೆ ಹೊರಟ್ಟಿದ್ದರು ಎನ್ನುವ ಮಾಹಿತಿ ಲಭಿಸಿದೆ. ಈ ಪೈಕಿ ಕೆಲವರು ಸಂಕಷ್ಟಕ್ಕೆ ಸಿಲುಕಿರುವ ಮಾಹಿತಿ ಟ್ರೇನ್ ನಲ್ಲಿದ್ದ ಬೆಂಗಳೂರಿಗರಿಂದ ಈ ಮಾಹಿತಿ ಸಿಕ್ಕಿದೆ.
ರೈಲು ನಂ. 12578 ಮೈಸೂರು ವಿಭಾಗದ ಪೊನ್ನೇರಿ- ಕವರಪ್ಪಪೇಟೆ ನಿಲ್ದಾಣಗಳ ಸಮೀಪ ಅಪಘಾತವಾಗಿದೆ. ಸದ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರಿನಲ್ಲಿ ಸಹಾಯವಾಣಿ ಆರಂಭಿಸಲಾಗಿದೆ.
ತುರ್ತು ಮಾಹಿತಿ ಬೇಕಿದ್ದಲ್ಲಿ 9731143981 ಪೋನ್ ನಂಬರ್ ನ್ನು ಸಂಪರ್ಕಿಸುವಂತೆ ಮೈಸೂರು ವಿಭಾಗ ತಿಳಿಸಿದೆ.ಅದರೊಂದಿಗೆ ಮೈಸೂರು ರೈಲು ನಿಲ್ದಾಣದಲ್ಲಿ ಐ ಹೆಲ್ಪ್ ಯೂ ಡೆಸ್ಕ್ ಅನ್ನೂ ತೆರೆಯಲಾಗಿದೆ.
ರೈಲಿಗೆ ಹಳಿ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಎಕ್ಸ್ ಪ್ರೆಸ್ ರೈಲು ಲೂಪ್ ಲೈನ್ ಪ್ರವೇಶಿಸಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ದಕ್ಷಿಣ ರೈಲ್ವೆಯ ಚೆನ್ನೈ ವಿಭಾಗವು ಸಹಾಯವಾಣಿ ಸಂಖ್ಯೆಗಳನ್ನು 044-25354151, 044-24354995 ಪ್ರಕಟಿಸಿದೆ.
ಸಾವು ನೋವುಗಳ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಯಾಗಿಲ್ಲ. ಆದರೆ, ಹೆಚ್ಚಿನ ಪ್ರಯಾಣಿಕರಿಗೆ ಗಾಯವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.
ಚೆನ್ನೈ ಸೆಂಟ್ರಲ್‌ನಿಂದ ಮೆಡಿಕಲ್ ರಿಲಿಫ್ ವ್ಯಾನ್ ಮತ್ತು ರಕ್ಷಣಾ ತಂಡ ಬರಲು ಶುರುವಾಗಿದೆ. ಅಪಘಾತದ ಕಾರಣವನ್ನು ಪರಿಶೀಲಿಸಲು ದಕ್ಷಿಣ ರೈಲ್ವೆ ಡಿಆರ್‌ಎಂ ಚೆನ್ನೈ ವಿಭಾಗ ಮತ್ತು ಹಿರಿಯ ಅಧಿಕಾರಿಗಳು ಚೆನ್ನೈನಿಂದ ಆಗಮಿಸಲಿದ್ದಾರೆ.
ಹೆಚ್ಚಿನ ಫೋಟೋಗಳಲ್ಲಿ ರೈಲಿನ ಬೋಗಿಗಳಿಗೆ ಬೆಂಕಿ ಬಿದ್ದಿರುವುದೇ ಪ್ರಕಟವಾಗಿದೆ. ಘಟನೆ ಹೇಗೆ ನಡೆಯಿತು ಎನ್ನುವುದರ ಬಗ್ಗೆ ರೈಲ್ವೆ ಇಲಾಖೆ ತನಿಖೆ ಕೂಡ ಆರಂಭ ಮಾಡಿದೆ