MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಭಾರತದಲ್ಲಿದೆ ಕ್ರಿಸ್ಟಲ್ ಕ್ಲಿಯರ್ ನದಿ! ನೀರಲ್ಲಿ ದೋಣಿ ತೇಲುತ್ತಿದೆಯೋ, ಗಾಳಿಯಲ್ಲಿ ಹಾರುತ್ತಿದೆಯೋ ಅನಿಸುತ್ತೆ!

ಭಾರತದಲ್ಲಿದೆ ಕ್ರಿಸ್ಟಲ್ ಕ್ಲಿಯರ್ ನದಿ! ನೀರಲ್ಲಿ ದೋಣಿ ತೇಲುತ್ತಿದೆಯೋ, ಗಾಳಿಯಲ್ಲಿ ಹಾರುತ್ತಿದೆಯೋ ಅನಿಸುತ್ತೆ!

ಭಾರತದ ಅತ್ಯಂತ ಸ್ವಚ್ಛ ಪರಿಶುದ್ಧ ನದಿ ಇದು. ಈ ನದಿಗೆ ಇಳಿಯದೆ ನದಿಯ ತಳಭಾಗ ನೋಡಬಹುದಾದಷ್ಟು ನೀರು ಸ್ಪಟಿಕದಂತೆ ಹರಿಯುತ್ತದೆ. ಒಳಗಿನ ಚಲಚರಗಳನ್ನು ದಂಡೆಯ ಮೇಲೆ ನಿಂತೇ ವೀಕ್ಷಿಸಬಹುದು. ನೀವು ಪ್ರವಾಸ ಹೋಗಲು ಬಯಸಿದ್ದರೆ ಈ ನದಿಯ ವಿವರ ಇಲ್ಲಿ ನೋಡಿ.

2 Min read
Author : Ravi Janekal
Published : Oct 01 2026, 12:11 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತದ ಅತ್ಯಂತ ಸ್ವಚ್ಛ ನದಿ ಯಾವುದು?
Image Credit : Getty

ಭಾರತದ ಅತ್ಯಂತ ಸ್ವಚ್ಛ ನದಿ ಯಾವುದು?

ಭಾರತ ಹಲವು ಅದ್ಭುತ ನೈಸರ್ಗಿಕ ತಾಣಗಳನ್ನು ಹೊಂದಿರುವ ದೇಶ. ಇಲ್ಲಿರುವಷ್ಟು ನೈಸರ್ಗಿಕ ವಿಸ್ಮಯಗಳು ಜಗತ್ತಿನಲ್ಲೇ ಕಡಿಮೆ ಎನ್ನಬಹುದು. ಅವುಗಳಲ್ಲಿ ಮುಖ್ಯವಾಗಿ ಮೇಘಾಲಯದಲ್ಲಿನ ಉಮಂಗೋಟ್ ನದಿ. ಈ ನದಿ ನೈಸರ್ಗಿಕವಾಗಿ ಅದೆಷ್ಟು ಸ್ವಚ್ಛ ಪರಿಶುದ್ಧವಾಗಿ ಹರಿಯುತ್ತಿದೆ ಎಂದರೆ ಮೇಲಿನಿಂದ ನೋಡಿದರೆ ಅದರ ತಳವನ್ನು ಸ್ಪಷ್ಟವಾಗಿ ನೋಡಬಹುದು! ಈ ಕಾರಣಕ್ಕೆ ಉಮಂಗೋಟ್ ನದಿ ದೇಶದ ಅತ್ಯಂತ ಸ್ವಚ್ಛ ನದಿಗಳಲ್ಲಿ ಒಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಉಮಂಗೋಟ್: ಭಾರತದ ಅತ್ಯಂತ ಸ್ವಚ್ಛ ನದಿ
Image Credit : Getty

ಉಮಂಗೋಟ್: ಭಾರತದ ಅತ್ಯಂತ ಸ್ವಚ್ಛ ನದಿ

ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ದಾವ್ಕಿ ಪಟ್ಟಣದ ಸಮೀಪದಲ್ಲಿ ಈ ನದಿ ಹರಿಯುತ್ತದೆ. ಇದು ಭಾರತದ ಅತ್ಯಂತ ಸ್ವಚ್ಛ ನದಿ ಎಂದೇ ಪ್ರಸಿದ್ಧಿ. ನದಿಯ ನೀರು ಎಷ್ಟು ಪಾರದರ್ಶಕವೆಂದರೆ ಇದು ತೆಳುವಾದ ಗಾಜಿನಂತೆ ಹರಿಯುತ್ತದೆ. ಈ ನದಿಯ ಮೇಲೆ ದೋಣಿಗಳು ಸಾಗುತ್ತಿದ್ದರೆ ಮೇಲಿನಿಂದ ನೋಡುವವರಿಗೆ ಗಾಳಿಯಲ್ಲಿ ತೇಲುತ್ತಿರುವಂತೆ ಭಾಸವಾಗುತ್ತದೆ

ಮೇಘಾಲಯದ ವೆಸ್ಟ್ ಜೈಂತಿಯಾ ಹಿಲ್ಸ್ ಪ್ರದೇಶದಲ್ಲಿರುವ ಈ ಉಮಂಗೋಟ್ ನದಿ ತನ್ನ ಸ್ಫಟಿಕದಷ್ಟು ಸ್ವಚ್ಛ ನೀರಿಗೆ ಪ್ರಸಿದ್ಧಿಯಾಗಿದೆ. ಮೇಘಾಲಯ ಪ್ರವಾಸೋದ್ಯಮ ಇಲಾಖೆಯೂ ಈ ನದಿಯನ್ನು ರಾಜ್ಯದ ಪ್ರಮುಖ ನೈಸರ್ಗಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿ ಗುರುತಿಸಿದೆ. ಆಕಾಶ ಸ್ವಚ್ಛವಾಗಿರುವ ದಿನಗಳಲ್ಲಿ ನೀರಿನೊಳಗಿನ ಕಲ್ಲುಗಳು ಹಾಗೂ ಇತರ ವಸ್ತುಗಳನ್ನು ಸುಲಭವಾಗಿ ನೋಡಬಹುದು. ಹೀಗಾಗಿ ಇಲ್ಲಿ ದೋಣಿ ವಿಹಾರ ಮಾಡುವುದೆಂದರೆ ಇಲ್ಲಿನ ವಿಶೇಷ ಅನುಭವವಾಗಿದೆ. ಈ ಕಾರಣಕ್ಕೆ ಪ್ರವಾಸಿಗರು ದೇಶ ವಿದೇಶಗಳಿಂದ ಇಲ್ಲಿಗೆ ಬರುತ್ತಾರೆ. ದೋಣಿ ವಿಹಾರ ಮಾಡುವುದು ಮರೆಯಲಾಗದ ಅನುಭವವಾಗಿದೆ.

Related Articles

Related image1
World Tourism Day 2022: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಮಹತ್ವವೇನು ?
Related image2
ರೋಡ್ ಸೈಡ್ ಮೋಮೊ ತಿನ್ನುತ್ತಾ ಮೇಘಾಲಯ ಎಕ್ಸ್ ಪ್ಲೋರ್ ಮಾಡಿದ ನಟಿ ಆಶಿಕಾ
35
ಉಮಂಗೋಟ್ ನದಿಯ ವಿಶೇಷತಯೇ ಇದು!
Image Credit : Getty

ಉಮಂಗೋಟ್ ನದಿಯ ವಿಶೇಷತಯೇ ಇದು!

ಉಮಂಗೋಟ್ ನದಿಯನ್ನ ದಾವ್ಕಿ ಪಟ್ಟಣದ ನದಿ ಎಂದೇ ಗುರುತಿಸುತ್ತಾರೆ. ಗಡಿ ಪಟ್ಟಣವಾದ ಈ ಊರಿನ ಮೂಲಕವೇ ನದಿ ಹರಿಯುತ್ತದೆ. ನದಿ ನೀರು ಅತ್ಯಂತ ಪಾರದರ್ಶಕ. ದೋಣಿಗಳಲ್ಲಿ ಸಾಗುವುದನ್ನ ನೋಡಿದರೆ ಅವರು ನೀರಿನ ಮೇಲೆ ಸಾಗುತ್ತಿದ್ದಾರೋ ಗಾಳಿಯಲ್ಲಿ ತೇಲುತ್ತಿದ್ದಾರೋ ಎಂಬ ಕಾಣುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಪ್ಪದೇ ಇಲ್ಲಿನ ಫೋಟೋಗಳು ಮತ್ತು ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ ಇದರಿಂದಲೇ ಸಾಕಷ್ಟು ಜನಪ್ರಿಯವಾಗಿದೆ.

ನದಿಗಳ ಮಾಲೀನ್ಯ

ಉಮಂಗೋಟ್ ನದಿಯ ವಿಶೇಷವೆಂದರೆ ಅದರ ಸ್ವಚ್ಛತೆ, ಪರಿಶುದ್ಧವಾಗಿ ಹರಿಯುವ ನೀರು. ನೀರಿನೊಳಗಿಂದ ತಳವೂ ಕೂಡ ಸ್ಪಷ್ಟವಾಗಿ ಕಾಣಿಸುವ ದೃಶ್ಯ. ನದಿಗಿಳಿಯದೆಯೇ ನದಿಯ ತಳಭಾಗ ಹಾಗೂ ಜಲಚರಗಳನ್ನು ನೋಡಬಹುದು. ಸ್ವಚ್ಛ ನೀರು, ಸುತ್ತಲಿನ ಹಸಿರು ಪರಿಸರ ಮತ್ತು ಬೆಟ್ಟಗಳ ಸಾಲು ಸೇರಿ ಈ ಪ್ರದೇಶಕ್ಕೆ ಶಾಂತವಾದ ನೈಸರ್ಗಿಕ ಸೌಂದರ್ಯವನ್ನು ನೀಡುತ್ತವೆ. ಆದರೆ ನದಿಯ ಈ ಸೌಂದರ್ಯವು ಭಾರತದ ಸಿಹಿನೀರಿನ ಸಂಪನ್ಮೂಲಗಳನ್ನು ರಕ್ಷಿಸುವ ಅಗತ್ಯವನ್ನೂ ನೆನಪಿಸುತ್ತದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ ಮಾಹಿತಿಯ ಪ್ರಕಾರ ದೇಶದ ಬಹುತೇಕ ನದಿಗಳು ಮಾಲಿನ್ಯಕ್ಕೆ ಒಳಗಾಗಿವೆ. ನದಿಗಳಿಗೆ ಸಂಸ್ಕರಿಸದ ಒಳಚರಂಡಿ ನೀರು, ಕೈಗಾರಿಕಾ ತ್ಯಾಜ್ಯ ಮತ್ತು ಕೃಷಿ ಚಟುವಟಿಕೆಗಳಿಂದ ಉಂಟಾಗುವ ಮಾಲಿನ್ಯ ನದಿ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಸಮಸ್ಯೆಯಾಗಿದೆ.

45
ಯಾವ ತಿಂಗಳಲ್ಲಿ ಉಮಂಗೋಟ್ ನದಿ ಪ್ರವಾಸಕ್ಕೆ ಹೋಗಬೇಕು?
Image Credit : Getty

ಯಾವ ತಿಂಗಳಲ್ಲಿ ಉಮಂಗೋಟ್ ನದಿ ಪ್ರವಾಸಕ್ಕೆ ಹೋಗಬೇಕು?

ಈ ಲೇಖನ ಓದಿದ ಬಳಿಕ ನಿಮಗೂ ಉಮಂಗೋಟ್ ನದಿ ನೋಡಬೇಕೆಂಬ ಆಸೆಯಾದರೆ ಯಾವ ತಿಂಗಳಲ್ಲಿ ಹೋಗುವುದು ಸೂಕ್ತ? ವರ್ಷದ ಎಲ್ಲ ಸಮಯದಲ್ಲೂ ಪಾರದರ್ಶಕ, ಸ್ಪಟಿಕದಂತೆ ಹರಿಯುವ ನದಿ ನೋಡಲು ಸಾಧ್ಯವಾಗುವುದಿಲ್ಲ. ಅಲ್ಲಿನ ಹವಾಮಾನ, ವಾತಾವರಣದಲ್ಲಿನ ಬದಲಾವಣೆ ನೋಡಿಕೊಂಡು ಪ್ರವಾಸ ಹೋಗುವುದು ಮುಖ್ಯ. ಅಂದಹಾಗೆ ನೀವು ಉಮಂಗೋಟ್‌ ಪ್ರವಾಸ ಹೋಗಲು ನಿರ್ಧರಿಸಿದ್ದರೆ ನವೆಂಬರ್‌ನಿಂದ ಏಪ್ರಿಲ್‌ವರೆಗಿನ ಅವಧಿ ಬೆಸ್ಟ್. ಏಕೆಂದರೆ ಈ ಸಮಯದಲ್ಲಿ ನದಿಯ ನೀರು ಹೆಚ್ಚು ಸ್ವಚ್ಛವಾಗಿ ಕಾಣುವುದರ ಜೊತೆಗೆ ದೋಣಿ ವಿಹಾರವೂ ಮಾಡಬಹುದು. ಮಳೆಗಾಲದಲ್ಲಿ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ, ನೀರಿನ ಪಾರದರ್ಶಕತೆ ಕಡಿಮೆಯಾಗಬಹುದು.

55
ಉಮಂಗೋಟ್ ನದಿ ಎಲ್ಲಿದೆ, ತಲುಪುವುದು ಹೇಗೆ?
Image Credit : Asianet News

ಉಮಂಗೋಟ್ ನದಿ ಎಲ್ಲಿದೆ, ತಲುಪುವುದು ಹೇಗೆ?

ಉಮಂಗೋಟ್ ನದಿ ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿದೆ. ಇದು ಭಾರತ-ಬಾಂಗ್ಲಾದೇಶ ಗಡಿಯ ಸಮೀಪದಲ್ಲಿದೆ. ಪ್ರವಾಸಿಗರು ವಿಮಾನ ಅಥವಾ ರೈಲಿನ ಮೂಲಕ ಶಿಲ್ಲಾಂಗ್ ಅಥವಾ ಗುವಾಹಟಿಗೆ ತಲುಪಿ, ಅಲ್ಲಿಂದ ರಸ್ತೆ ಮಾರ್ಗವಾಗಿ ದಾವ್ಕಿಗೆ ತೆರಳಬಹುದು.

ದಾವ್ಕಿಯ ಪ್ರಸಿದ್ಧ ಸೇತುವೆ ಮತ್ತು ನದಿಯ ದಡದ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಶೇಷವಾಗಿ ಪ್ರವಾಸದ ದಿನಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ. ಇಲ್ಲಿನ ಶಾಂತ ವಾತಾವರಣ ಅನುಭವಿಸಬೇಕೆಂದರೆ ದಾವ್ಕಿ ಪ್ರದೇಶದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಶ್ನಾಂಗ್‌ಪ್ಡೆಂಗ್ ಗ್ರಾಮಕ್ಕೆ ತೆರಳಬಹುದು. ಈ ಗ್ರಾಮವೂ ದೋಣಿ ವಿಹಾರಕ್ಕೆ ಹೆಸರುವಾಸಿ. ಉಮಂಗೋಟ್ ನದಿಯ ಪಾರದರ್ಶಕ ನೀರನ್ನು ಮತ್ತೊಂದು ರೀತಿಯಲ್ಲಿ ಅನುಭವಿಸಲು ಪ್ರವಾಸಿಗರಿಗೆ ಅವಕಾಶ ನೀಡುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಪ್ರವಾಸೋದ್ಯಮ
ಮೇಘಾಲಯ
ನದಿ
 

Latest Videos
Recommended Stories
Recommended image1
Wildlife: ಇರಾನ್, ಪಾಕಿಸ್ತಾನದಲ್ಲಿದ್ದ ಅಪರೂಪದ ಹಾವು ಭಾರತಕ್ಕೆ ಎಂಟ್ರಿ! ರಾಜಸ್ಥಾನದಲ್ಲಿ ಪತ್ತೆ
Recommended image2
ಕಾಂಗ್ರೆಸ್‌ ಮುಸುಕಿನ ಗುದ್ದಾಟದಿಂದ ಪಿಪಿಸಿಸಿ ಅಧ್ಯಕ್ಷರ ರಾಜೀನಾಮೆಗೆ ಸೂಚನೆ, ರೇಸ್‌ನಲ್ಲಿ ಮಾಂಜಿ ಸಂಸದ
Recommended image3
ಪುಣೆ ಕೊ*ಲೆಗೂ ಮುನ್ನ ಬೆಂಗಳೂರಿನಲ್ಲೇ ನಡೆದಿತ್ತು ಭೀಕರ ಸಂಚು: ಕೇತನ್ ಕೈ-ಕಾಲು ಮುರಿಯಲು ಸ್ಕೆಚ್ ಹಾಕ್ಕಿದ್ದ ಭಾವಿ ಪತ್ನಿ!
Related Stories
Recommended image1
World Tourism Day 2022: ವಿಶ್ವ ಪ್ರವಾಸೋದ್ಯಮ ದಿನದ ಇತಿಹಾಸ ಮತ್ತು ಮಹತ್ವವೇನು ?
Recommended image2
ರೋಡ್ ಸೈಡ್ ಮೋಮೊ ತಿನ್ನುತ್ತಾ ಮೇಘಾಲಯ ಎಕ್ಸ್ ಪ್ಲೋರ್ ಮಾಡಿದ ನಟಿ ಆಶಿಕಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved