ಕನ್ನಡ ಚಿತ್ರರಂಗದಲ್ಲಿ ಚುಟು ಚುಟು ಬೆಡಗಿ ಎಂದೇ ಗುರುತಿಸಿಕೊಂಡಿರುವ ನಟಿ ಆಶಿಕಾ ರಂಗನಾಥ್ ಇದೀಗ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು ಟ್ರಾವೆಲ್ ಮಾಡ್ತಿದ್ದಾರೆ ನಟಿ.
ಆಶಿಕಾ ರಂಗನಾಥ್ ಕೊನೆಯದಾಗಿ ತೆಲುಗಿನಲ್ಲಿ ಭರ್ತ ಮಹಾಶಯಲುಕು ವಿಜ್ಞಾಪತಿ ಎನ್ನುವ ಸಿನಿಮಾದಲ್ಲಿ ನಟಿಸಿದ್ದರು. ಮತ್ತೆರಡು ಸಿನಿಮಾಗಳಲ್ಲಿ ನಟಿ ಬ್ಯುಸಿ.
ಸದ್ಯಕ್ಕಂತೂ ಆಶಿಕಾ ವಿಶ್ವಂಭರ ಮತ್ತು ಸರ್ದಾರ್ 2 ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಬ್ರೇಕ್ ತೆಗೆದುಕೊಂಡು ಮೇಘಾಲಯಕ್ಕೆ ತೆರಳಿದ್ದಾರೆ ಆಶಿಕಾ.
ಆಶಿಕಾ ರಂಗನಾಥ್ ಮೇಘಾಲಯದ ಸುಂದರ ತಾಣಗಳಿಗೆ, ಜಲಪಾತಗಳಿಗೆ ಭೇಟಿ ನೀಡಿ ರಸ್ತೆ ಬದಿಯ ಮೊಮೊ ತಿನ್ನುತ್ತಾ, ಮ್ಯಾಗಿ ಸವಿಯುತ್ತಾ ಸರಳವಾಗಿ ಲೈಫ್ ಎಂಜಾಯ್ ಮಾಡಿದ್ದಾರೆ.
ಆಶಿಕಾ ಮೇಘಾಲಯದ ತಮ್ಮ ಸಾಹಸ ಯಾತ್ರೆಯ ಫೋಟೊಗಳನ್ನು ಹಂಚಿಕೊಂಡಿದ್ದು, ಅಲ್ಲಿ ನಟಿ ಭಯಾನಕ ಟ್ರೆಕ್, ಗುಹೆಗಳ ಎಕ್ಸ್ ಪ್ಲೋರ್ ಮಾಡುತ್ತಾ ಮಜಾ ಮಾಡಿದ್ದಾರೆ.
ಆಶಿಕಾ ರಂಗನಾಥ್ ಮೇಘಾಲಯದ ಹಸಿರು ಸಿರಿಗಳಿಂದ ಹಿಡಿದು, ಬೆಟ್ಟ, ಗುಡ್ಡ, ಕಾಡು, ಮೇಡು, ಗುಹೆ, ಜಲಪಾತ, ನದಿ, ತೊರೆ ಎಲ್ಲವನ್ನೂ ಸಹ ಎಕ್ಸ್’ಪ್ಲೋರ್ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಚಂದನವನ ಫಿಲ್ಮ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಸಮಾರಂಭದಲ್ಲಿ ಆಶಿಕಾ ರಂಗನಾಥ್ ಗತವೈಭವ ಸಿನಿಮಾಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು.
ಇತ್ತೀಚಿನ ದಿನಗಳಲ್ಲಿ ಆಶಿಕಾ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ತೆಲುಗು ಸಿನಿಮಾಗಳ ನಡುವೆ ಒಂದು ಕನ್ನಡ ಚಿತ್ರ ಮಾಡುತ್ತಿದ್ದಾರೆ ನಟಿ.
ಮಿನಿ ಸ್ಕರ್ಟ್ ಧರಿಸಿ ಮಿಂಚಿದ ಆರಾಧನಾ ರಾಮ್… ಕಾಮೆಂಟ್ ಸೆಕ್ಷನ್ ಪೂರ್ತಿ ಕೆಂಪಾಯ್ತು
ಕನ್ನಡ ಸಿನಿಮಾ ಮೂಲಕ ನಟನೆ ಅರಂಭಿಸಿ, ಪರಭಾಷೆಯಲ್ಲಿ ಫೇಮಸ್ ಆದ ನಟಿಯರು
ವಿವಾಹ ವಾರ್ಷಿಕೋತ್ಸವದ ದಶಕದ ಸಂಭ್ರಮದಲ್ಲಿ ‘ರಂಗಿತರಂಗ’ ನಟ ನಿರೂಪ್ ಭಂಡಾರಿ
ಸಂಗೀತ ಶೃಂಗೇರಿಗೆ ಲವ್ ಆಗಿದ್ಯಾ? ಫೋಟೊ ಜೊತೆಗಿನ ಕ್ಯಾಪ್ಶನ್ ಗುಟ್ಟೇನು?