MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಈ ಊರಿನಲ್ಲಿ ಕೇವಲ 50 ರೂ.ಗೆ 1 ಕೆಜಿ ಗೋಡಂಬಿ; ಬ್ಯುಸಿನೆಸ್ ಮಾಡೋರು ರೈತರಿಂದ ನೇರವಾಗಿ ಖರೀದಿಸಿ!

ಈ ಊರಿನಲ್ಲಿ ಕೇವಲ 50 ರೂ.ಗೆ 1 ಕೆಜಿ ಗೋಡಂಬಿ; ಬ್ಯುಸಿನೆಸ್ ಮಾಡೋರು ರೈತರಿಂದ ನೇರವಾಗಿ ಖರೀದಿಸಿ!

ಗೋಡಂಬಿ ಖರೀದಿಸಬೇಕೆಂದರೆ 1 ಕೆಜಿಗೆ ₹1,000 ಖರ್ಚು ಮಾಡಬೇಕು. ಆದರೆ ಈ ಜಿಲ್ಲೆಯಲ್ಲಿ ಗೋಡಂಬಿ ನಮ್ಮೂರಿನ ತರಕಾರಿಗಳ ಬೆಲೆಗೆ ಸಿಗುತ್ತದೆ. ಈ ಪ್ರದೇಶ ಗೋಡಂಬಿ ಕೃಷಿಯಿಂದ ಗುರುತಿಸಿಕೊಳ್ಳುತ್ತಿದ್ದು, ಕೇವಲ 50 ರೂ.ಗೆ ಕೆಜಿ ಗೋಡಂಬಿ ಸಿಗುತ್ತದೆ.

2 Min read
Author : Sathish Kumar KH
Published : Nov 19 2026, 04:36 PM IST
Share this Photo Gallery
  • FB
  • TW
  • Linkdin
  • Whatsapp
15
ಗೋಡಂಬಿ ಬೆಳೆಯಲು ಅನುಕೂಲಕರ ಪ್ರದೇಶ
Image Credit : Geminiai

ಗೋಡಂಬಿ ಬೆಳೆಯಲು ಅನುಕೂಲಕರ ಪ್ರದೇಶ

ಜಾರ್ಖಂಡ್ ರಾಜ್ಯದ ಸಂತಾಲ್ ಪರಗಣಾ ಪ್ರದೇಶದಲ್ಲಿರುವ ಜಮ್ತಾರಾ ಜಿಲ್ಲೆ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ವಾತಾವರಣ ಗೋಡಂಬಿ ಕೃಷಿಗೆ ಹೇಳಿಮಾಡಿಸಿದಂತಿದೆ. ಮುಖ್ಯವಾಗಿ ಕೆಂಪು ಮಣ್ಣು, ಸಾಧಾರಣ ಮಳೆ, ಹಿತವಾದ ತಾಪಮಾನ ಗೋಡಂಬಿ ಮರಗಳ ಬೆಳವಣಿಗೆಗೆ ಸಹಕರಿಸುತ್ತದೆ. ಈ ಪ್ರದೇಶದಲ್ಲಿ ಹಿಂದೆ ಜಮೀನುಗಳ ಸುತ್ತ ಬೇಲಿಯಾಗಿ ನೆಟ್ಟಿದ್ದ ಕೆಲವು ಸಸಿಗಳು ಕಾಲಕ್ರಮೇಣ ದೊಡ್ಡ ಗೋಡಂಬಿ ಮರಗಳಾಗಿ ಬೆಳೆದಿವೆ.

ಇದರಿಂದ ಪ್ರಸ್ತುತ ಜಿಲ್ಲೆಯ ಹಲವು ಭಾಗಗಳಲ್ಲಿ ಗೋಡಂಬಿ ತೋಟಗಳು ಕಾಣಸಿಗುತ್ತವೆ. ಸ್ಥಳೀಯ ರೈತರಿಗೆ ಗೋಡಂಬಿ ಕೃಷಿ ಆದಾಯದ ಮೂಲವಾಗಿದೆ. ಒಂದು ಕಾಲದಲ್ಲಿ ಸೈಬರ್ ಅಪರಾಧಗಳಿಂದ ಸುದ್ದಿಯಲ್ಲಿದ್ದ ಜಮ್ತಾರಾ, ಈಗ ಗೋಡಂಬಿ ಉತ್ಪಾದನೆಯಿಂದಲೂ ಗುರುತಿಸಿಕೊಳ್ಳುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಇಲ್ಲಿ ಗೋಡಂಬಿ ಇಷ್ಟೊಂದು ಅಗ್ಗ ಯಾಕೆ?
Image Credit : Gemini AIతో రూపొందించిన ప్రతీకాత్మక చిత్రం

ಇಲ್ಲಿ ಗೋಡಂಬಿ ಇಷ್ಟೊಂದು ಅಗ್ಗ ಯಾಕೆ?

ಜಮ್ತಾರಾದಲ್ಲಿ ಗೋಡಂಬಿ ಕಡಿಮೆ ಬೆಲೆಗೆ ಸಿಗಲು ಮುಖ್ಯ ಕಾರಣ ಕೃಷಿ ವೆಚ್ಚ ಕಡಿಮೆ ಇರುವುದು. ಗೋವಾ, ಕೇರಳದಂತಹ ಕರಾವಳಿ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಕೃಷಿ ಭೂಮಿಯ ಬೆಲೆ ಕಡಿಮೆ. ಹಾಗೆಯೇ ಸ್ಥಳೀಯವಾಗಿ ಕಾರ್ಮಿಕರು ಲಭ್ಯವಿರುವುದರಿಂದ ಕೃಷಿ ಚಟುವಟಿಕೆಗಳ ವೆಚ್ಚವೂ ತಗ್ಗುತ್ತದೆ. ಜೊತೆಗೆ ರೈತರು ತಮ್ಮ ಬೆಳೆ ಮಾರಾಟಕ್ಕೆ ದೊಡ್ಡ ವ್ಯಾಪಾರಿಗಳನ್ನು ಸಂಪೂರ್ಣವಾಗಿ ಅವಲಂಬಿಸಿಲ್ಲ.

ಸ್ಥಳೀಯ ಮಾರುಕಟ್ಟೆಗಳು, ಸಣ್ಣ ಸಹಕಾರ ಸಂಘಗಳ ಮೂಲಕ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿ ರೈತರಿಗೆ ಸ್ವಲ್ಪ ಉಳಿತಾಯವಾಗುತ್ತಿದೆ. ಇತರೆ ಗೋಡಂಬಿ ಉತ್ಪಾದಿಸುವ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಬೆಲೆ ಶೇ. 25 ರಿಂದ 30 ರಷ್ಟು ಕಡಿಮೆ ಇರುತ್ತದೆ ಎನ್ನಲಾಗಿದೆ.

Related Articles

Related image1
ಬಾದಾಮಿ, ಗೋಡಂಬಿ ಮಾತ್ರವಲ್ಲ! ಈ ಬೀಜದಲ್ಲೂ ಅಡಗಿದೆ ಆರೋಗ್ಯದ ರಹಸ್ಯ
Related image2
₹1,000ಕ್ಕೂ ಹೆಚ್ಚು ಬೆಲೆ ಕೊಟ್ಟು ಗೋಡಂಬಿ ಖರೀದಿಸ್ತೀರಾ? ಇಲ್ಲಿ ₹300-400ಕ್ಕೆ ಸಿಗುತ್ತೆ!
35
ತರಕಾರಿಯಂತೆ ರಸ್ತೆ ಬದಿಯಲ್ಲೇ ಮಾರಾಟ
Image Credit : Gemini AIతో రూపొందించిన ప్రతీకాత్మక చిత్రం

ತರಕಾರಿಯಂತೆ ರಸ್ತೆ ಬದಿಯಲ್ಲೇ ಮಾರಾಟ

ಸಾಮಾನ್ಯವಾಗಿ ಗೋಡಂಬಿ ಖರೀದಿಸಬೇಕೆಂದರೆ ಸೂಪರ್ ಮಾರ್ಕೆಟ್, ಡ್ರೈ ಫ್ರೂಟ್ಸ್ ಅಂಗಡಿಗಳಿಗೆ ಹೋಗಬೇಕು. ಆದರೆ ಜಮ್ತಾರಾದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿ ರಸ್ತೆ ಬದಿಯ ಸಣ್ಣ ಅಂಗಡಿಗಳು, ತಳ್ಳುಗಾಡಿಗಳಲ್ಲಿ ಗೋಡಂಬಿ ಮಾರಾಟ ಮಾಡುತ್ತಾರೆ. ತರಕಾರಿ ಖರೀದಿಸಿದಷ್ಟೇ ಸುಲಭವಾಗಿ ಜನರು ಗೋಡಂಬಿಯನ್ನೂ ಖರೀದಿಸಬಹುದು. ಮುಖ್ಯವಾಗಿ ಸ್ಥಳೀಯವಾಗಿ ಬೆಳೆದ ಹಸಿ ಗೋಡಂಬಿ ಕಿಲೋಗೆ ಕೇವಲ ರೂ. 50 ಕ್ಕೆ ಸಿಗುತ್ತದೆ.

45
ಗೋಡಂಬಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿವು
Image Credit : Gemini AIతో రూపొందించిన ప్రతీకాత్మక చిత్రం

ಗೋಡಂಬಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿವು

ಜಮ್ತಾರಾದಲ್ಲಿ ಗೋಡಂಬಿ ಕೃಷಿ ಹೆಚ್ಚುತ್ತಿದ್ದರೂ ರೈತರು ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇಲ್ಲಿನ ಬಹುತೇಕ ರೈತರು ಗೋಡಂಬಿ ಹಣ್ಣಿನಿಂದ ತೆಗೆದ ಹಸಿ ಗೋಡಂಬಿಯನ್ನು ಹಾಗೆಯೇ ಮಾರಾಟ ಮಾಡುತ್ತಿದ್ದಾರೆ. ಅವುಗಳನ್ನು ಸ್ವಚ್ಛಗೊಳಿಸಿ, ಸಂಸ್ಕರಿಸಿ, ಪ್ಯಾಕಿಂಗ್ ಮಾಡುವ ಸೌಲಭ್ಯಗಳು ಸಾಕಷ್ಟು ಇಲ್ಲದಿರುವುದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತಿಲ್ಲ.

ಮತ್ತೊಂದೆಡೆ ಸೂಕ್ತ ಶೇಖರಣಾ ಸೌಲಭ್ಯಗಳಿಲ್ಲದಿರುವುದು ಕೂಡ ರೈತರಿಗೆ ಸಮಸ್ಯೆಯಾಗಿದೆ. ಗೋಡಂಬಿಯನ್ನು ಹೆಚ್ಚು ಕಾಲ ಸಂಗ್ರಹಿಸಿಡುವ ಸೌಲಭ್ಯಗಳಿಲ್ಲದ ಕಾರಣ, ಬೆಳೆ ಕೈಗೆ ಬಂದ ತಕ್ಷಣ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಮಾರುಕಟ್ಟೆಗಳಿಗೆ ಸೂಕ್ತ ಸಾರಿಗೆ, ವ್ಯಾಪಾರ ಸಂಪರ್ಕಗಳಿಲ್ಲದಿರುವುದು ಕೂಡ ರೈತರ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ.

55
ಸಂಸ್ಕರಣಾ ಘಟಕಗಳು ಬಂದರೆ ರೈತರಿಗೆ ಇನ್ನಷ್ಟು ಲಾಭ
Image Credit : Gemini AIతో రూపొందించిన ప్రతీకాత్మక చిత్రం

ಸಂಸ್ಕರಣಾ ಘಟಕಗಳು ಬಂದರೆ ರೈತರಿಗೆ ಇನ್ನಷ್ಟು ಲಾಭ

ಜಮ್ತಾರಾ ಗೋಡಂಬಿ ಉದ್ಯಮ ಇನ್ನಷ್ಟು ಅಭಿವೃದ್ಧಿ ಹೊಂದಬೇಕಾದರೆ ಸ್ಥಳೀಯವಾಗಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ಗೋಡಂಬಿ ಶುಚಿಗೊಳಿಸುವುದು, ಸಿಪ್ಪೆ ತೆಗೆಯುವುದು, ಗ್ರೇಡಿಂಗ್, ಪ್ಯಾಕೇಜಿಂಗ್‌ನಂತಹ ಕೆಲಸಗಳಿಗೆ ಅಗತ್ಯ ಸೌಲಭ್ಯಗಳು ಲಭ್ಯವಾದರೆ ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ.

ಹಾಗೆಯೇ ಕೋಲ್ಡ್ ಸ್ಟೋರೇಜ್‌ಗಳು, ಉತ್ತಮ ಸಾರಿಗೆ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ರೈತರು ನೇರವಾಗಿ ದೊಡ್ಡ ಮಾರುಕಟ್ಟೆಗಳಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದರೆ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗುತ್ತದೆ. ಸರ್ಕಾರ, ಕೃಷಿ ಇಲಾಖೆಗಳು ಸೂಕ್ತ ಪ್ರೋತ್ಸಾಹ ನೀಡಿದರೆ ಜಮ್ತಾರಾ ಗೋಡಂಬಿ ಉದ್ಯಮ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಆಹಾರ
ಭಾರತ ಸುದ್ದಿ
ವ್ಯಾಪಾರ ಕಲ್ಪನೆ
ಕೃಷಿ
ರೈತರು
 
27th T20 • WBBLT20
Live
BH-WBH-W
(20.0 ov)225/3
ST-WST-W
(17.5 ov)207/4
ST-W need 19 runs in 13 balls
Schedule ›
1st TEST • NZ vs IND 2026
Stumps
NZNZ
(82.0 ov)243/5
INDIND
-
Day 1
Schedule ›
2nd TEST • PAK vs SL 2026
Live
PAKPAK
325
SLSL
(87.0 ov) 98 & 291/8
Day 3 - Session 3
Schedule ›
28th T20 • WBBLT20
AS-WAS-W
Fri, 20 Nov, 2026
MR-WMR-W
01:40 pm
Match yet to begin.
Schedule ›
26th T20 • WBBLT20
Result
HH-WHH-W
120
PS-WPS-W
148
Perth Scorchers Women beat Hobart Hurricanes Women by 28 runs
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
2nd TEST • NZ vs IND 2026
NZNZ
Fri, 27 Nov, 2026
INDIND
03:30 am
Match yet to begin.
Schedule ›
Latest Videos
Recommended Stories
Recommended image1
ಮ್ಯೂಚುವಲ್ ಫಂಡ್ ಉದ್ಯಮ ವಿಸ್ತರಣೆಗೆ ಅಂಬಾನಿ ಬೃಹತ್ ಹೆಜ್ಜೆ, ಜಿಯೋ ಬ್ಲ್ಯಾಕ್‌ರಾಕ್‌ಗೆ ₹246 ಕೋಟಿ ಭರ್ಜರಿ ಬಂಡವಾಳ!
Recommended image2
ಎಂಕೆ ಸ್ಟ್ಯಾಲಿನ್‌ಗೆ ಚುನಾವಣೆಯಲ್ಲಿ ಮಣ್ಣುಮುಕ್ಕಿಸಿದ್ದ ಕೊಳತ್ತೂರು ಟಿವಿಕೆ ಶಾಸಕ ವಿಎಸ್‌ ಬಾಬು ನಿಧನ
Recommended image3
ನರ್ಮದಾ ನದಿ ದಡದಲ್ಲಿ 4 ಲಕ್ಷ ವರ್ಷಗಳಷ್ಟು ಹಳೆಯದಾದ ನಿಗೂಢತೆ ಪತ್ತೆ; ವಿಶ್ವವೇ ಶಾಕ್
Related Stories
Recommended image1
ಬಾದಾಮಿ, ಗೋಡಂಬಿ ಮಾತ್ರವಲ್ಲ! ಈ ಬೀಜದಲ್ಲೂ ಅಡಗಿದೆ ಆರೋಗ್ಯದ ರಹಸ್ಯ
Recommended image2
₹1,000ಕ್ಕೂ ಹೆಚ್ಚು ಬೆಲೆ ಕೊಟ್ಟು ಗೋಡಂಬಿ ಖರೀದಿಸ್ತೀರಾ? ಇಲ್ಲಿ ₹300-400ಕ್ಕೆ ಸಿಗುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved