MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಶಾಪ್ ಯಾಕಿರಲ್ಲ? ಎಮೆರ್ಜೆನ್ಸಿಗೆ ಏನು ಮಾಡಬೇಕು?

ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಶಾಪ್ ಯಾಕಿರಲ್ಲ? ಎಮೆರ್ಜೆನ್ಸಿಗೆ ಏನು ಮಾಡಬೇಕು?

Medical Shop in Indian Railway Station: ನೀವು ರೈಲ್ವೆ ಪ್ರಯಾಣಿಕರಾಗಿದ್ರೆ ಪ್ಲಾಟ್‌ಫಾರಂಗಳಲ್ಲಿ ಮೆಡಿಕಲ್ ಶಾಪ್‌ಗಳಿಲ್ಲದಿರೋದು ನಿಮ್ಮ ಗಮನಕ್ಕೂ ಬಂದಿರುತ್ತದೆ. ರೈಲ್ವೆ ನಿಯಮಗಳಲ್ಲಿನ ಬದಲಾವಣೆಯಿಂದ ಔಷಧಿ ಮಳಿಗೆಗಳು ಕಾಣಿಸಲ್ಲ. 

2 Min read
Author : Mahmad Rafik
Published : Jun 06 2026, 01:19 PM IST
Share this Photo Gallery
  • FB
  • TW
  • Linkdin
  • Whatsapp
15
ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ Medical Shop ನೋಡಿದ್ದೀರಾ?
Image Credit : Gemini

ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ Medical Shop ನೋಡಿದ್ದೀರಾ?

ಭಾರತೀಯ ರೈಲಿನಲ್ಲಿ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂಗಳಲ್ಲಿ ಪ್ರಯಾಣಿಕರಿಗಾಗಿ ವಿವಿಧ ಆಹಾರ ಮಳಿಗೆ, ಹಣ್ಣಿನ ಅಂಗಡಿ, ಪುಸ್ತಕದಂಗಡಿ ಸೇರಿದಂತೆ ಅನೇಕ ಶಾಪ್ ನೋಡಿರುತ್ತವೆ. ಆದ್ರೆ ಮೆಡಿಕಲ್ ಶಾಪ್ ಇಲ್ಲದಿರೋದು ನಿಮ್ಮ ಗಮನಕ್ಕೆ ಬಂದಿದೆಯಾ? ಪ್ಲಾಟ್‌ಫಾರಂಗಳಲ್ಲಿ ಯಾಕೆ ಮೆಡಿಕಲ್ ಶಾಪ್ ಇಲ್ಲವೆಂದು ಯೋಚಿಸಿದ್ದೀರಾ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮೆಡಿಕಲ್ ಶಾಪ್
Image Credit : Gemini

ಮೆಡಿಕಲ್ ಶಾಪ್

ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಶಾಪ್ ಇರಲಿಲ್ಲ ಅಂತ ಅಲ್ಲ. ರೈಲ್ವೆ ಅಧಿಕಾರಿಗಳ ಪ್ರಕಾರ, 2001ರಲ್ಲಿ ರೈಲ್ವೆ ಮಂಡಳಿ ಒಂದು ನೀತಿಯನ್ನು ರೂಪಿಸಿತ್ತು. ಈ ನಿಯಮದ ಪ್ರಕಾರ, ವೈದ್ಯರ ಸೌಲಭ್ಯವುಳ್ಳ ನಿಲ್ದಾಣದಲ್ಲಿ ಮೆಡಿಕಲ್ ಶಾಪ್‌ಗಾಗಿ 108 ಚದರ ಗಡಿ ಜಾಗ ಮೀಸಲಿಡಲು ನಿರ್ಧರಿಸಲಾಗಿತ್ತು. ಪುಸ್ತಕ ಮಳಿಗೆಯಲ್ಲಿ ಸಣ್ಣದಾದ ಜಾಗದಲ್ಲಿ ಮೆಡಿಕಲ್ ಶಾಪ್ ಮಾಡಿಕೊಳ್ಳಲು ಯಾವುದೇ ನಿರ್ಬಂಧಗಳಿರಲಿಲ್ಲ. ಇದಕ್ಕೂ ಮೊದಲು ಪ್ಲಾಟ್‌ಫಾರಂನಲ್ಲಿಯೇ ಔಷಧದಂಗಡಿ ತೆಗೆಯುವ ಅನುಮತಿ ನೀಡಲಾಗಿತ್ತು.

Related Articles

Related image1
ರೈಲಿನಲ್ಲಿ ಇವರಿಗೆ ಟಿಕೆಟ್ ಬೇಕಿಲ್ಲ, ಫ್ರೀಯಾಗಿ ಪ್ರಯಾಣಿಸಿ! ಯಾರು ಗೊತ್ತಾ ಈ ಅದೃಷ್ಟವಂತರು?
Related image2
ಬೆಂಗಳೂರು-ತುಮಕೂರು ಚತುಷ್ಪಥ ರೈಲ್ವೆ ಮಾರ್ಗಕ್ಕೆ 6000 ಕೋಟಿಯ ಕ್ರಿಯಾ ಯೋಜನೆ ಘೋಷಣೆ
35
ರೈಲ್ವೆ ನಿಯಮಗಳಲ್ಲಿ ಬದಲಾವಣೆ
Image Credit : AI Meta

ರೈಲ್ವೆ ನಿಯಮಗಳಲ್ಲಿ ಬದಲಾವಣೆ

ಸಮಯ ಬದಲಾದಂತೆ ರೈಲ್ವೆ ನಿಯಮಗಳಲ್ಲಿಯೂ ಬದಲಾವಣೆ ಕಂಡು ಬಂದವು. ಪ್ಲಾಟ್‌ಫಾರಂನಲ್ಲಿ ಹೊಸ ಅಥವಾ ಪ್ರತ್ಯೇಕವಾದ ಮೆಡಿಕಲ್ ಶಾಪ್ ಆರಂಭಿಸುವ ಅನುಮತಿಯನ್ನು ಹಿಂಪಡೆದುಕೊಳ್ಳಲಾಯ್ತು. ಬುಕ್‌ಸ್ಟಾಲ್, ಮೆಡಿಕಲ್ ಸ್ಟಾಲ್ ಮತ್ತು ಜನರಲ್ ಸ್ಟೋರ್ ಸ್ಟಾಲ್ ಎಂಬ ಮೂರು ಅಂಗಡಿ ತೆರೆಯಬಹುದಿತ್ತು. ಆದ್ರೆ ಈ ಅಂಗಡಿಗಳಿಂದಾಗಿ ಪ್ಲಾಟ್‌ಫಾರಂನಲ್ಲಿ ಜನಸಂದಣಿ ಹೆಚ್ಚಾಗಲಾರಂಭಿಸಿತು. ಪ್ಲಾಟ್‌ಫಾರಂನಲ್ಲಿ ಉಂಟಾಗುವ ಜನರ ಸಂಖ್ಯೆ ನಿಯಂತ್ರಣಕ್ಕಾಗಿ ನಿಯಮಗಳಲ್ಲಿ ಬದಲಾವಣೆ ಮಾಡಲಾಯ್ತು.

45
ಮಲ್ಟಿ ಪರ್ಪಸ್‌ ಸ್ಟಾಲ್‌ಗಳು
Image Credit : Gemini

ಮಲ್ಟಿ ಪರ್ಪಸ್‌ ಸ್ಟಾಲ್‌ಗಳು

ಹೊಸ ನಿಯಮಗಳ ಪ್ರಕಾರ, ಪ್ಲಾಟ್‌ಫಾರಂಗಳಲ್ಲಿ ಮಲ್ಟಿ ಪರ್ಪಸ್‌ ಸ್ಟಾಲ್‌ಗಳು (MPS) ಬಂದವು. ಮೆಡಿಕಲ್ ಶಾಪ್‌ಗೆ ಜಾಗ ನೀಡದೇ ಇದೇ ಮಲ್ಟಿ ಪರ್ಪಸ್‌ ಸ್ಟಾಲ್‌ನಲ್ಲಿಯೇ ಪ್ರಯಾಣಿಕರಿಗೆ ಬೇಕಾಗುವ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಯ್ತು. ಸದ್ಯ ಭಾರತದ A One ಶ್ರೇಣಿಯ 21 ನಿಲ್ದಾಣಗಳಲ್ಲಿ ಮಾತ್ರ ಪ್ರತ್ಯೇಕ ಮೆಡಿಕಲ್ ಶಾಪ್‌ಗಳನ್ನು ನೋಡಬಹುದು. ಔಷಧಿ ಅಂಗಡಿ ತೆರೆಯುವ ಕುರಿತು ರೈಲ್ವೆ ಇಲಾಖೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

55
ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಏನು ಮಾಡಬೇಕು?
Image Credit : Indian Railways

ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಏನು ಮಾಡಬೇಕು?

ಪ್ರಯಾಣದ ಸಮಯದಲ್ಲಿ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರು ಅನಾರೋಗ್ಯಕ್ಕೊಳಗಾದ್ರೆ ರೈಲ್ವೆ ಇಲಾಖೆ ಬಲವಾದ ಎಮೆರ್ಜೆನ್ಸಿ ಸೇವೆಯನ್ನು ಹೊಂದಿದೆ. ಟಿಟಿಇಗಳು, ಗಾರ್ಡ್‌ಗಳು, ರೈಲು ಸೂಪರಿಂಟೆಂಡೆಂಟ್‌ಗಳು ಮತ್ತು ಸ್ಟೇಷನ್ ಮಾಸ್ಟರ್‌ಗಳು ಪ್ರಥಮ ಚಿಕಿತ್ಸೆಯಲ್ಲಿ ವಿಶೇಷವಾಗಿ ತರಬೇತಿ ಪಡೆದಿರುತ್ತಾರೆ. ಎಲ್ಲಾ ರೈಲು ನಿಲ್ದಾಣಗಳು ಪ್ರಥಮ ಚಿಕಿತ್ಸೆಯ ಕಿಟ್ ಹೊಂದಿರುತ್ತವೆ. ತುರ್ತು ಸಂದರ್ಭದಲ್ಲಿ ಸಿಬ್ಬಂದಿ, ಸಮೀಪ ಅಥವಾ ಸ್ಥಳೀಯ ವೈದ್ಯರನ್ನು ನಿಲ್ದಾಣಕ್ಕೆ ಕರೆಸಿಕೊಳ್ಳುತ್ತಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಭಾರತೀಯ ರೈಲ್ವೆ
ರೈಲು
Latest Videos
Recommended Stories
Recommended image1
ಲಂಡನ್‌ನಲ್ಲಿ ಸಿಜೆಐ ಸೂರ್ಯಕಾಂತ್ ಕಾರ್ಯಕ್ರಮದಲ್ಲಿ ಹೈಡ್ರಾಮಾ: ಭಾರತದಲ್ಲಿ ಪ್ರಜಾಪ್ರಭುತ್ವ ದಮನ ಎಂದ ಮಹಿಳೆ
Recommended image2
ಕರ್ನಾಟಕದಿಂದ ಕೇರಳಕ್ಕೆ ಹೋಗಿ, ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕರ ಹಣ ಕದ್ದು ಸಿಕ್ಕಿಬಿದ್ದ ಮಹಿಳೆ!
Recommended image3
ಅಂಡಮಾನ್‌ ಕಡಲಲ್ಲಿ ನೈಸರ್ಗಿಕ ಅನಿಲ ಪತ್ತೆ; 1900 ಮೀಟರ್‌ಗಿಂತಲೂ ಹೆಚ್ಚು ಆಳದಲ್ಲಿರುವ ಬಾವಿ
Related Stories
Recommended image1
ರೈಲಿನಲ್ಲಿ ಇವರಿಗೆ ಟಿಕೆಟ್ ಬೇಕಿಲ್ಲ, ಫ್ರೀಯಾಗಿ ಪ್ರಯಾಣಿಸಿ! ಯಾರು ಗೊತ್ತಾ ಈ ಅದೃಷ್ಟವಂತರು?
Recommended image2
ಬೆಂಗಳೂರು-ತುಮಕೂರು ಚತುಷ್ಪಥ ರೈಲ್ವೆ ಮಾರ್ಗಕ್ಕೆ 6000 ಕೋಟಿಯ ಕ್ರಿಯಾ ಯೋಜನೆ ಘೋಷಣೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved