ರೈಲುಗಳಿಗೂ ನಿವೃತ್ತಿ ಇದೆಯಾ? ಹಳೆಯ ರೈಲುಗಳನ್ನು ಏನು ಮಾಡುತ್ತಾರೆ? ಇಲ್ಲಿದೆ ಮಾಹಿತಿ
ರೈಲುಗಳು ನಿರ್ದಿಷ್ಟ ಸೇವಾ ಅವಧಿಯನ್ನು ಹೊಂದಿದ್ದು, ಹಳೆಯ ಪ್ಯಾಸೆಂಜರ್ ಕೋಚ್‌ಗಳನ್ನು ಗೂಡ್ಸ್ ರೈಲುಗಳಾಗಿ ಪರಿವರ್ತಿಸಲಾಗುತ್ತದೆ. ಅಂತಿಮವಾಗಿ, ಬಳಕೆಗೆ ಬಾರದ ರೈಲುಗಳನ್ನು 'ಮಿಷನ್ ಜೀರೋ ಸ್ಕ್ರ್ಯಾಪ್' ನೀತಿಯಡಿ ತುಂಡರಿಸಿ, ಅದರಲ್ಲಿನ ಲೋಹ ಮತ್ತು ಇತರ ಭಾಗಗಳನ್ನು ಮರುಬಳಕೆ ಮಾಡಲಾಗುತ್ತದೆ.

ರೈಲುಗಳ ನಿವೃತ್ತಿ
ಒಂದು ಆರಂಭಕ್ಕೆ ಅಂತ್ಯವಿರಬೇಕು ಎಂಬ ಮಾತಿದೆ. ಅದೇ ರೀತಿ ಯಾವುದೇ ಒಂದು ವಾಹನ ಬಳಕೆಗೆ ಇಷ್ಟು ಸಮಯ ಎಂಬ ಮಿತಿ ಇರುತ್ತದೆ. ಒಂದು ಸಮಯದ ಬಳಿಕ ವಿಮಾನಗಳು ತಮ್ಮ ಹಾರಾಟವನ್ನು ನಿಲ್ಲಿಸುತ್ತವೆ. ಪ್ರತಿನಿತ್ಯ ಲಕ್ಷಾಂತರ ಪ್ರಯಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದುಕೊಂಡು ಹೋಗುವ ರೈಲುಗಳ ಬಾಳಿಕೆ ಎಷ್ಟು ವರ್ಷ ಎಂಬ ವಿಷಯ ನಿಮಗೆ ಗೊತ್ತಿದೆಯಾ?
ಕೆಲಸಕ್ಕೆ ಬಾರದ ಹಳೆ ರೈಲುಗಳು
ಹಲವು ವರ್ಷಗಳಿಂದ ಲಕ್ಷಾಂತರ ಜನರನ್ನು ಸುರಕ್ಷಿತವಾಗಿ ಅವರ ಗಮ್ಯಸ್ಥಾನಗಳಿಗೆ ತಲುಪಿಸುವ ರೈಲುಗಳಿಗೆ, ಮನುಷ್ಯರಿಗೆ 60 ವರ್ಷಕ್ಕೆ ನಿವೃತ್ತಿ ಇರುವಂತೆ, ನಿವೃತ್ತಿ ಇದೆಯೇ? ಹಳೆಯದಾದ ಅಥವಾ ಕೆಲಸಕ್ಕೆ ಬಾರದ ರೈಲುಗಳನ್ನು ಏನು ಮಾಡುತ್ತಾರೆ ಎಂಬುದರ ವಿವರವಾದ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಕೋಚ್, ಇಂಜಿನ್, ಮತ್ತು ವ್ಯಾಗನ್
ರೈಲಿನ ಪ್ರತಿ ಕೋಚ್, ಇಂಜಿನ್, ಮತ್ತು ವ್ಯಾಗನ್‌ಗಳು ಕೆಲವು ವರ್ಷಗಳವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ, ಹಳೆಯ ಮಾದರಿಯ ಪ್ಯಾಸೆಂಜರ್ ರೈಲುಗಳು 25 ರಿಂದ 30 ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ನಂತರ ಅವುಗಳನ್ನು ಬದಲಾಯಿಸಲಾಗುತ್ತದೆ. ಆಧುನಿಕ ರೈಲುಗಳು 35 ವರ್ಷಗಳವರೆಗೆ ಬಾಳಿಕೆ ಬರುತ್ತವೆ.
ಗೂಡ್ಸ್ ಟ್ರೈನ್
ಯಾವುದೇ ರೈಲಿನ ಕೋಚ್, ಇಂಜಿನ್‌ಗಳು ರಿಪೇರಿಗೆ ಬಂದ ತಕ್ಷಣ ಬದಲಾಯಿಸಲ್ಲ. ಸಮಸ್ಯೆಯನ್ನು ಸರಿಪಡಿಸಿ ಸೇವೆಗೆ ಬಳಸಿಕೊಳ್ಳಲಾಗುತ್ತದೆ. ಒಂದು ವೇಳೆ ಪದೇ ಪದೇ ರಿಪೇರಿಗೆ ಬರುತ್ತಿದ್ರೆ ಸೇವೆಯಿಂದ ತೆಗೆದುಹಾಕಲಾಗುತ್ತದೆ. ಕೆಲವೊಮ್ಮೆ ಪ್ಯಾಸೆಂಜರ್ ರೈಲನ್ನು ಗೂಡ್ಸ್ ರೈಲಾಗಿ ಪರಿವರ್ತಿಸುತ್ತಾರೆ. ನಂತರವೂ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದ್ರೆ ಸಂಪೂರ್ಣವಾಗಿ ಸೇವೆಯಿಂದ ತೆಗೆದು ಹಾಕಲಾಗುತ್ತದೆ. ಒಂದು ಪ್ಯಾಸೆಂಜರ್ ರೈಲು ಗೂಡ್ಸ್ ಟ್ರೈನ್ ಆಗಿ ಮಾರ್ಪಟ್ಟ ನಂತರ ಮತ್ತೆ ನಾಲ್ಕರಿಂದ ಐದು ವರ್ಷಗಳ ಕಾಲ ಬಳಕೆ ಮಾಡಲಾಗುತ್ತದೆ.
ಮಿಷನ್ ಜೀರೋ ಸ್ಕ್ರ್ಯಾಪ್
ಭಾರತೀಯ ರೈಲ್ವೆ'ಮಿಷನ್ ಜೀರೋ ಸ್ಕ್ರ್ಯಾಪ್' ಎಂಬ ಹೊಸ ನೀತಿಯನ್ನು ಜಾರಿಗೆ ತಂದಿದೆ. ಈ ನೀತಿಯ ಭಾಗವಾಗಿ, ಡೀಸೆಲ್ ಇಂಜಿನ್‌ಗಳನ್ನು ಹಂತಹಂತವಾಗಿ ತೆಗೆದುಹಾಕಿ, ಅವುಗಳ ಸ್ಥಾನದಲ್ಲಿ ಎಲೆಕ್ಟ್ರಿಕ್ ರೈಲುಗಳನ್ನು ಪರಿಚಯಿಸಿದೆ.
ಮರುಬಳಕೆ
ಕೆಲಸಕ್ಕೆ ಬಾರದ ಹಳೆಯ ರೈಲುಗಳನ್ನು ಏನು ಮಾಡುತ್ತಾರೆ ಎಂಬ ನಿಮ್ಮ ಅನುಮಾನಕ್ಕೆ ಉತ್ತರ ಇಲ್ಲಿದೆ. ರೈಲು ಇನ್ನು ಬಳಕೆಗೆ ಬರುವುದಿಲ್ಲ ಎಂದು ಖಚಿತವಾದ ನಂತರ, ಅದನ್ನು ತುಂಡು ತುಂಡಾಗಿ ವಿಭಜಿಸುತ್ತಾರೆ. ಅದರಲ್ಲಿರುವ ಕಬ್ಬಿಣ, ಉಕ್ಕು, ತಾಮ್ರ, ಅಲ್ಯೂಮಿನಿಯಂ, ಮತ್ತು ಹಿತ್ತಾಳೆಯಂತಹ ಭಾಗಗಳನ್ನು ಪ್ರತ್ಯೇಕಿಸುತ್ತಾರೆ. ಸೀಟುಗಳು, ಫ್ಯಾನ್‌ಗಳು, ಲೈಟ್‌ಗಳು, ಬ್ಯಾಟರಿಗಳಂತಹ ಸಣ್ಣ ಭಾಗಗಳನ್ನು ಸಹ ತೆಗೆದುಹಾಕಿ, ಅವುಗಳಲ್ಲಿ ಉಪಯುಕ್ತವಾದವುಗಳನ್ನು ಮರುಬಳಕೆ ಮಾಡುತ್ತಾರೆ. ಇಲ್ಲದಿದ್ದರೆ, ಅವುಗಳನ್ನು ಮರುಬಳಕೆಗಾಗಿ (recycle) ಕಳುಹಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

