Indian Railways: ಇವತ್ತಿನಿಂದ ಟಿಕೆಟ್ ತಪಾಸಣೆ ಮತ್ತಷ್ಟು ಕಠಿಣ, ಈ ದಾಖಲೆ ಕಡ್ಡಾಯ!
ಸೆಂಟ್ರಲ್ ರೈಲ್ವೆ ಅಕ್ಟೋಬರ್ 1ರಿಂದ ವಿಶೇಷ ಟಿಕೆಟ್ ತಪಾಸಣೆ ಅಭಿಯಾನ ಶುರು ಮಾಡುತ್ತಿದೆ. ರೈಲು ಪ್ರಯಾಣದ ವೇಳೆ ಟಿಕೆಟ್ ಜೊತೆಗೆ ಒರಿಜಿನಲ್ ಐಡಿ ಕಾರ್ಡ್ ಇಟ್ಟುಕೊಳ್ಳುವುದು ಕಡ್ಡಾಯ. ಒಂದು ವೇಳೆ ಐಡಿ ಕಾರ್ಡ್ ತೋರಿಸದಿದ್ದರೆ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದೀರಿ ಎಂದು ಪರಿಗಣಿಸಿ ದಂಡ ಹಾಕಲಾಗುತ್ತದೆ.

ಹೊಸ ನಿಯಮಗಳು ಜಾರಿ
ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ದೊಡ್ಡ ಅಪ್‌ಡೇಟ್. ರೈಲ್ವೆ ಟಿಕೆಟ್ ತಪಾಸಣೆ ಇನ್ಮುಂದೆ ಮತ್ತಷ್ಟು ಕಠಿಣವಾಗಲಿದೆ. 2026ರ ಅಕ್ಟೋಬರ್ 1ರಿಂದ ಟಿಕೆಟ್ ತಪಾಸಣೆಯಲ್ಲಿ ರೈಲ್ವೆ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ.
ಟಿಕೆಟ್‌ಗಳ ಮೇಲೆ ಹದ್ದಿನ ಕಣ್ಣು
ಸೆಂಟ್ರಲ್ ರೈಲ್ವೆ ಅಕ್ಟೋಬರ್ 1ರಿಂದ 31ರವರೆಗೆ ವಿಶೇಷ ಟಿಕೆಟ್ ತಪಾಸಣೆ ಅಭಿಯಾನ ನಡೆಸಲಿದೆ. ಈ ವೇಳೆ ರೈಲು ಹಾಗೂ ನಿಲ್ದಾಣಗಳಲ್ಲಿ ತಪಾಸಣೆ ಜೋರಾಗಿರಲಿದೆ. ರಿಯಾಯಿತಿ ಟಿಕೆಟ್, ರಿಸರ್ವೇಶನ್ ಕೋಟಾ, ಪಾಸ್ ಮತ್ತು ಪಿಟಿಒ (PTO) ಟಿಕೆಟ್‌ಗಳ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ.
ಐಡಿ ಕಾರ್ಡ್ ಕಡ್ಡಾಯ
ಈ ಅಭಿಯಾನದ ಸಮಯದಲ್ಲಿ ಪ್ರಯಾಣಿಕರು ಟಿಕೆಟ್ ಜೊತೆಗೆ ತಮ್ಮ ಒರಿಜಿನಲ್ ಐಡಿ ಪ್ರೂಫ್ ಇಟ್ಟುಕೊಳ್ಳಲೇಬೇಕು. ತಪಾಸಣೆ ವೇಳೆ ಐಡಿ ಕಾರ್ಡ್ ತೋರಿಸದಿದ್ದರೆ ನಿಮ್ಮ ಟಿಕೆಟ್ ಅಮಾನ್ಯವಾಗಬಹುದು. ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ ಎಲ್ಲರ ಐಡಿ ಕಾರ್ಡ್ ಕಡ್ಡಾಯವಾಗಿ ಬೇಕು.
ಕಠಿಣ ಕ್ರಮ
ಒಂದು ವೇಳೆ ನೀವು ಒರಿಜಿನಲ್ ಐಡಿ ಕಾರ್ಡ್ ತೋರಿಸದಿದ್ದರೆ, ನಿಮ್ಮ ಬಳಿ ಟಿಕೆಟ್ ಇದ್ದರೂ ಅದನ್ನು ಮಾನ್ಯ ಮಾಡುವುದಿಲ್ಲ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದೀರಿ ಎಂದು ಪರಿಗಣಿಸಿ, ರೈಲ್ವೆ ನಿಯಮಗಳ ಪ್ರಕಾರ ದಂಡ ವಿಧಿಸಲಾಗುತ್ತದೆ ಅಥವಾ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಇರಲಿ ಎಚ್ಚರ
ರೈಲ್ವೆ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಹೆಚ್ಚಾಗಿ ಪಿಟಿಒ (PTO) ಬಳಸಿ ಕಡಿಮೆ ದರದಲ್ಲಿ ಟಿಕೆಟ್ ಪಡೆಯುತ್ತಾರೆ. ಈಗ ಅವರಿಗೂ ಒರಿಜಿನಲ್ ಐಡಿ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಪ್ರಯಾಣ ಶುರು ಮಾಡುವ ಮುನ್ನ ಟಿಕೆಟ್ ಹಾಗೂ ಐಡಿ ಕಾರ್ಡ್ ಎರಡನ್ನೂ ತಪ್ಪದೆ ಇಟ್ಟುಕೊಳ್ಳಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

