ಜಿಯೋ ತನ್ನ 10ನೇ ವಾರ್ಷಿಕೋತ್ಸವದ ಪ್ರಯುಕ್ತ ಕೀಪ್ಯಾಡ್ ಫೋನ್ ಪ್ರಿಯರಿಗೆ ಬಂಪರ್ ಆಫರ್ ಘೋಷಿಸಿದೆ. ಗ್ರಾಹಕರು 1499 ರೂ. ಪಾವತಿಸಿ ಜಿಯೋ ಭಾರತ್ 4G ಫೋನ್ ಖರೀದಿಸಿದರೆ, 6 ತಿಂಗಳ ಉಚಿತ ರೀಚಾರ್ಜ್ ಸಿಗಲಿದೆ. ಇದರಿಂದಾಗಿ ಈ ಫೋನ್ ಕೇವಲ 299 ರೂಪಾಯಿಗೆ ಲಭ್ಯವಾದಂತಾಗುತ್ತದೆ.
ಸ್ಮಾರ್ಟ್‌ಫೋನ್ ಜೊತೆಗೆ ಕೀಪ್ಯಾಡ್ ಸೆಟ್‌ಗಳನ್ನ ಈಗಲೂ ಇಷ್ಟಪಡುವ ಒಂದು ವರ್ಗ ಇದೆ. ಅನೇಕ ಹಿರಿಯ ನಾಗರಿಕರು ಕೂಡ ಕೀಪ್ಯಾಡ್ ಫೋನ್ ಬಳಸೋರು ಇದ್ದಾರೆ. ಅಂಥವ್ರಿಗಾಗಿ ಜಿಯೋ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಕೇವಲ 299 ರೂಪಾಯಿಗೆ ಫೋನ್ ಆಫರ್ ಮಾಡಿದೆ. ಹೌದು, ಫೀಚರ್ ಫೋನ್‌ಗಳನ್ನು ಇಷ್ಟಪಡೋರಿಗೆ ಇದು ಒಳ್ಳೆಯ ಸುದ್ದಿ ಇದಾಗಿದೆ.
ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಪ್ರವೇಶಿಸಿ 10 ವರ್ಷಗಳನ್ನು ಪೂರೈಸಿದೆ. ಇತ್ತೀಚೆಗೆ ಜಿಯೋ ತನ್ನ 10ನೇ ವಾರ್ಷಿಕೋತ್ಸವ ಆಚರಿಸಿತು. ಈ ವೇಳೆ ಬಂಪರ್ ಆಫರ್ ಘೋಷಣೆ ಮಾಡಿದೆ. ನೀವು 299 ರೂಪಾಯಿಗೆ ಫೋನ್ (jio bharat 4g phone ) ಖರೀದಿ ಜೊತೆಗೆ ಆರು ತಿಂಗಳವರೆಗೆ ಉಚಿತ ರೀಚಾರ್ಜ್ ಲಾಭ ಸಿಗಲಿದೆ. ಆದರೆ ಜಿಯೋ ಅದಕ್ಕಾಗಿ ಒಂದು ಪ್ಲಾನ್ ನೀಡಿದೆ.
ಕೇವಲ 299 ರೂಪಾಯಿ ಕೊಟ್ರೆ ಫೋನ್ ಸಿಗಲ್ಲ!
ನೀವು ಕೇವಲ 299 ರೂಪಾಯಿ ಹಿಡಿದು ಜಿಯೋ ಸ್ಟೋರ್‍ಗೆ ಹೋದರೆ ಫೋನ್ ಸಿಗಲ್ಲ. ಅದಕ್ಕಾಗಿ ನೀವು ಒಟ್ಟಿ 1499 ರೂಪಾಯಿ ಪಾವತಿ ಮಾಡಬೇಕು. ಆಫರ್‌ನ ಭಾಗವಾಗಿ.. 1499 ರೂ.ಗೆ 4G ಜಿಯೋ ಭಾರತ್ ಫೋನ್ ಸಿಗಲಿದೆ. ಆರು ತಿಂಗಳವರೆಗೆ 1200 ರೂ. ಮೌಲ್ಯದ ಉಚಿತ ರೀಚಾರ್ಜ್ ನೀಡಲಿದೆ. ಆ ಮೂಲಕ ಫೋನ್ 299 ರೂಪಾಯಿಗೆ ಲಭ್ಯ ಆಗಲಿದೆ. ನೀವು ಆರು ತಿಂಗಳವರೆಗೆ ರೀಚಾರ್ಜ್ ಮಾಡಬೇಕಾಗಿಲ್ಲ. ನೀವು ಉಚಿತ ರೀಚಾರ್ಜ್ ಪ್ರಯೋಜನಗಳನ್ನು ಪಡೆಯುತ್ತೀರಿ. ಜೊತೆಗೆ ಅನಿಯಮಿತ ಕರೆಗಳನ್ನು ಮಾಡಬಹುದು.
- ಸಾಮಾನ್ಯ 2G ಫೋನ್ ರೀಚಾರ್ಜ್‌ಗೆ ತಿಂಗಳಿಗೆ ರೂ. 199 ವೆಚ್ಚ ಆಗಲಿದೆ
- ಆರು ತಿಂಗಳವರೆಗೆ ರಿಚಾರ್ಜ್ ವೆಚ್ಚ 1200 ರೂಪಾಯಿ ಆಗುತ್ತದೆ
- ನೀವು 1499 ಪಾವತಿಸಿ ಮುಂಚಿತವಾಗಿಯೇ ಫೋನ್ ಖರೀದಿ ಮಾಡಬೇಕು
- ಆರು ತಿಂಗಳಿಗೆ ರೀಚಾರ್ಜ್ ಮಾಡಲು 1200 ರೂಪಾಯಿ ವೆಚ್ಚ ಆಗಲಿದೆ
- ಆದರೆ ಜಿಯೋ ಆರು ತಿಂಗಳ ಉಚಿತ ರೀಚಾರ್ಜ್ ನೀಡಲಿದೆ
- ಹೀಗಾಗಿ ನೀವು ರೂ. 1200 ಕಡಿತಗೊಳಿಸಿದರೆ 299 ರೂಪಾಯಿಗೆ ಫೋನ್ ಸಿಕ್ಕಂತಾಗುತ್ತದೆ
- ಇನ್ನು ಆರು ತಿಂಗಳವರೆಗೆ ಅನಿಯಮಿತ ಕರೆಗಳನ್ನು ಮತ್ತು ಪ್ರತಿ ತಿಂಗಳು 14GB ಡೇಟಾವನ್ನು ಪಡೆಯಬಹುದು
ಈ ಫೋನ್‌ನಲ್ಲಿ ಹಲವು ಫೀಚರ್ಸ್ ನೋಡಬಹುದಾಗಿದೆ. ಕರೆಗಳು ಮತ್ತು ಸಂದೇಶಗಳ ಜೊತೆಗೆ, ನೀವು ಟಿವಿ ಕಾರ್ಯಕ್ರಮಗಳನ್ನೂ ವೀಕ್ಷಿಸಬಹುದು. ಹಾಡುಗಳನ್ನು ಕೇಳಬಹುದು. ಅಲ್ಲದೇ UPI ಪಾವತಿಗಳನ್ನು ಸಹ ಮಾಡಬಹುದು. HD ಧ್ವನಿ ಕರೆಗಳನ್ನು ಸಹ ಮಾಡಬಹುದು. ಜಿಯೋ ಭಾರತ್ ಸರಣಿಯ ಭಾಗವಾಗಿ, A1, B1, B2, B3 ಸೇರಿದಂತೆ ಹಲವು ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳು ಜಿಯೋ ಪೇ ಮೂಲಕ UPI ಪಾವತಿಗೆ ವ್ಯವಸ್ಥೆ ಮಾಡಲಾಗಿದೆ.
ಜಿಯೋ ಭಾರತ್ 4G ಫೋನ್ ವಿಶೇಷತೆಗಳು
- 2.4-ಇಂಚಿನ ಡಿಸ್ಪ್ಲೇ, 2,000mAh ಬ್ಯಾಟರಿ
- ಜಿಯೋ 4G ನೆಟ್‌ವರ್ಕ್, HD ವಾಯ್ಸ್ ಕರೆ
- ಜಿಯೋಟಿವಿ ಮೂಲಕ 500ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಉಚಿತ
- ಜಿಯೋಹಾಟ್‌ಸ್ಟಾರ್‌ನಲ್ಲಿ ಲೈವ್ ಕ್ರಿಕೆಟ್
- ಜಿಯೋ ಮ್ಯೂಸಿಕ್ ಮೂಲಕ ಹಾಡುಗಳನ್ನು ಕೇಳಬಹುದು
- ಜಿಯೋಪೇ ಮೂಲಕ ಡಿಜಿಟಲ್ ಪಾವತಿಗಳನ್ನು ಮಾಡಬಹುದು
- ಜಿಯೋ ಸೇಫ್ಟಿ ಶೀಲ್ಡ್ ಸುರಕ್ಷಿತ ಕರೆ
- FM ರೇಡಿಯೊವನ್ನು ಸಹ ಕೇಳಬಹುದು
ಇನ್ನು ಜಿಯೋ ಆಫರ್ ವಿಚಾರ ತಿಳಿಯುತ್ತಿದ್ದಂತೆಯೇ ಜನ ಎಕ್ಸೈಟ್ ಆಗಿದ್ದಾರೆ. ಜನ ಮೊಬೈಲ್‌ಗಾಗಿ ರಸ್ತೆಯಲ್ಲಿ ಕ್ಯೂ ಹಚ್ಚಿ ನಿಲ್ಲುತ್ತಾರೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡುತ್ತಾರೆ.


