ಬಿಜೆಪಿ ಎಂಎಲ್‌ಸಿ ಡಾ. ಎಂ.ಜಿ. ಮುಳೆ ಅವರು ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ 'ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನಿಲ್ದಾಣ' ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಶಿವಾಜಿ ಮಹಾರಾಜರ ಬಾಲ್ಯವು ಈ ಪ್ರದೇಶದಲ್ಲಿ ಕಳೆದಿದ್ದಾರೆ.

ಬೆಂಗಳೂರು (ಸೆ.16): ಬೆಂಗಳೂರಿನ ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ 'ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನಿಲ್ದಾಣ' ಎಂದು ನಾಮಕರಣ ಮಾಡುವಂತೆ 'ಬಿಜೆಪಿ ಎಂಎಲ್‌ಸಿ ಡಾ. ಎಂ.ಜಿ. ಮುಳೆ' ಅವರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DyCM DK Shivakumar) ಅವರಿಗೆ ಪತ್ರ ಬರೆದಿರುವ ಮುಳೆ ಅವರು, ಶಿವಾಜಿ ಮಹಾರಾಜರ ಸಾಧನೆ ಮತ್ತು ಈ ಪ್ರದೇಶದ ಜೊತೆಗಿನ ಅವರ ಐತಿಹಾಸಿಕ ಸಂಬಂಧವನ್ನು ವಿವರಿಸಿದ್ದಾರೆ.

ಪತ್ರದಲ್ಲಿ ತಿಳಿಸಿರುವಂತೆ, 17ನೇ ಶತಮಾನದ ಮಹಾನ್ ಚಕ್ರವರ್ತಿ ಛತ್ರಪತಿ ಶಿವಾಜಿ (Chatrapathi Shivaji Maharaj) ಮಹಾರಾಜರು ತಮ್ಮ ಬಾಲ್ಯದ ಬಹುಮುಖ್ಯ ಅವಧಿಯನ್ನು ಶಿವಾಜಿನಗರದಲ್ಲೇ ಕಳೆದಿದ್ದರು. ಇದಕ್ಕೆ ಪ್ರಮುಖ ಕಾರಣ ಅವರ ತಂದೆ ಷಹಾಜಿ ಮಹಾರಾಜರು ಬೆಂಗಳೂರಿನಲ್ಲಿ ಆಳ್ವಿಕೆ ನಡೆಸಿದ ಹಿನ್ನೆಲೆ. ಈ ಐತಿಹಾಸಿಕ ಹಿನ್ನೆಲೆಯಿಂದಲೇ ಅಂದಿನ ಮೈಸೂರು ಮಹಾರಾಜರು (mysore wodeyar Dynasty) ಈ ಪ್ರದೇಶಕ್ಕೆ 'ಶಿವಾಜಿನಗರ' (Bengaluru Shivajinagar) ಎಂದು ನಾಮಕರಣ ಮಾಡಿದ್ದರು. ಹೀಗಾಗಿ, ಈ ಪ್ರದೇಶಕ್ಕೆ ಶಿವಾಜಿ ಮಹಾರಾಜರ ಹೆಸರಿನ ಶಾಶ್ವತ ಸಂಬಂಧವಿದೆ ಎಂದು ಮುಳೆ ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿವಾಜಿ ಮಹಾರಾಜರು ಕೇವಲ ಮರಾಠ ಜನಾಂಗಕ್ಕೆ (Karnataka Marata Community) ಸೀಮಿತರಾಗದೆ, ಯಾವುದೇ ಧರ್ಮ-ಜಾತಿ ಭೇದವಿಲ್ಲದೆ ಎಲ್ಲರನ್ನೂ ಒಗ್ಗೂಡಿಸಿ ಆಡಳಿತ ನಡೆಸಿದರು. ಅವರು ಇಂದಿಗೂ ಅನೇಕ ಯುವಕರಿಗೆ ಪ್ರೇರಣೆಯಾಗಿದ್ದು, ಮಹಿಳೆಯರ ಬಗ್ಗೆ ಅಪಾರ ಗೌರವ ತೋರಿದ ರಾಜನಾಗಿ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರು ಸ್ಥಾಪಿಸಿದ 'ಹಿಂದುವಿ ಸ್ವರಾಜ್ಯ' ದೇಶಕ್ಕೆ ದೊಡ್ಡ ಕೊಡುಗೆಯಾಗಿದೆ.

ಮರಾಠ ಸಮುದಾಯದ ಪರವಾಗಿ ಬೇಡಿಕೆ:

ಪ್ರಸ್ತುತ, ಶಿವಾಜಿನಗರ ಪ್ರದೇಶದಲ್ಲಿ ಕನ್ನಡ ಮತ್ತು ಮರಾಠ ಸಮುದಾಯದವರ ವಾಸ್ತವ್ಯ ಹೆಚ್ಚಿದ್ದು, ಎರಡೂ ಸಮುದಾಯಗಳ ನಡುವೆ ಸೌಹಾರ್ದ ಸಂಬಂಧವಿದೆ. ಈ ನಿಟ್ಟಿನಲ್ಲಿ, ಸಮಸ್ತ ಕರ್ನಾಟಕದ ಮರಾಠ ಸಮಾಜ ಮತ್ತು ಅಖಿಲ ಭಾರತ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳ ಪರವಾಗಿ ಈ ಬೇಡಿಕೆಯನ್ನು ಇಡಲಾಗಿದೆ ಎಂದು ಡಾ. ಎಂ.ಜಿ. ಮುಳೆ ಪತ್ರದಲ್ಲಿ (MLA Dr MG Mule) ತಿಳಿಸಿದ್ದಾರೆ. ಒಟ್ಟಾರೆಯಾಗಿ, ಶಿವಾಜಿನಗರ ಮೆಟ್ರೋ ನಿಲ್ದಾಣಕ್ಕೆ ಮಹಾರಾಜರ ಹೆಸರನ್ನು ನಾಮಕರಣ ಮಾಡುವ ಮೂಲಕ ಅವರ ಕೊಡುಗೆಗೆ ಗೌರವ ಸಲ್ಲಿಸಬೇಕು ಎಂಬುದು ಸಮುದಾಯದ ಆಗ್ರಹವಾಗಿದೆ.

ಬೆಂಗಳೂರು ಮೆಟ್ರೋ ನಿಲ್ದಾಣಕ್ಕೆ 'ಸೆಂಟ್ ಮೇರಿ' ಹೆಸರು ನಾಮಕರಣ; ಸಿಎಂ ಸಿದ್ದರಾಮಯ್ಯ!

ಪತ್ರದಲ್ಲೇನಿದೆ?

ನಮ್ಮ ದೇಶದಲ್ಲಿ 17ನೇ ಶತಮಾನದ ಮರಾಠ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಬಾಲ್ಯದ ಅವಧಿಯನ್ನು ಶಿವಾಜಿನಗರ ಪ್ರದೇಶದಲ್ಲೇ ಕಳೆದಿದ್ದರು. ಮಹಾರಾಜರ ತಂದೆ ಷಹಾಜಿ ಮಹಾರಾಜರು ಬೆಂಗಳೂರಿನಲ್ಲಿ ಆಳ್ವಿಕೆ ನಡೆಸಿದ ಹಿನ್ನೆಲೆಯಲ್ಲಿ, ಅಂದಿನ ಮೈಸೂರು ಮಹಾರಾಜರು ಈ ಪ್ರದೇಶಕ್ಕೆ 'ಶಿವಾಜಿನಗರ' ಎಂಬ ನಾಮಕರಣ ಮಾಡಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಆಳ್ವಿಕೆಯಲ್ಲಿ ಧರ್ಮ-ಜಾತಿ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಗೌರವಿಸಲಾಯಿತು. ಅವರು ಮರಾಠ ಜನಾಂಗಕ್ಕೆ ಮಾತ್ರ ಸೀಮಿತರಾಗದೆ, ಎಲ್ಲಾ ಜನಾಂಗದವರನ್ನೂ ಒಗ್ಗೂಡಿಸಿ ರಾಜ್ಯಭಾರ ನಡೆಸಿದ ಸಾಧನೆಯ ಮೂಲಕ 'ಹಿಂದುವಿ ಸ್ವರಾಜ್ಯ' ಸಂಸ್ಥಾಪಕರಾದರು. ಇಂದಿಗೂ ಅನೇಕ ಯುವಕರಿಗೆ ಅವರು ಶ್ರದ್ಧಾ ಮತ್ತು ಪ್ರೇರಣೆಯ ಪ್ರತೀಕರಾಗಿದ್ದಾರೆ. ಮಹಿಳೆಯರ ಬಗ್ಗೆ ಅಪಾರ ಗೌರವ ತೋರಿದ ರಾಜನಾಗಿ ಇತಿಹಾಸದಲ್ಲಿ ಹೆಸರು ಮಾಡಿರುವರು.

ಇದಲ್ಲದೆ, ಶಿವಾಜಿನಗರ ಪ್ರದೇಶದಲ್ಲಿ ಕನ್ನಡ-ಮರಾಠ ಸಮುದಾಯದವರ ವಾಸ್ತವ್ಯ ಹೆಚ್ಚಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರ ಹೆಸರಿನ ಶಾಶ್ವತ ಸಂಬಂಧವೂ ಈ ಪ್ರದೇಶಕ್ಕೆ ಹೊಂದಿದೆ. ಅದರಂತೆ, ಶಿವಾಜಿನಗರ ಮೆಟ್ರೋ ರೈಲು ನಿಲ್ದಾಣಕ್ಕೆ 'ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ನಿಲ್ದಾಣ' ಎಂದು ನಾಮಕರಣ ಮಾಡುವಂತೆ ಸಮಸ್ತ ಕರ್ನಾಟಕದ ಮರಾಠ ಸಮಾಜ ಹಾಗೂ ಅಖಿಲ ಭಾರತ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳ ಪರವಾಗಿ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

View post on Instagram