ಎಬೋಲಾ ವೈರಸ್ ಸ್ಫೋಟದಿಂದ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ ಆಫ್ರಿಕನ್ ಶೃಂಗಸಭೆ ಮುಂದೂಡಿಕೆ
ಕೊರೋನಾಗಿಂತ ಭೀಕರ ಎಬೋಲಾ ವೈರಸ್ ಸ್ಫೋಟಗೊಂಡ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಿದೆ. ಇದರ ಬೆನ್ನಲ್ಲೇ ದೆಹಲಿಯಲ್ಲಿ ನಡಯಬೇಕಿದ್ದ ಭಾರತ ಆಫ್ರಿಕನ್ ಯೂನಿಯನ್ ಶೃಂಗಸಭೆಯನ್ನು ಮುಂದೂಡಲಾಗಿದೆ.

ಎಬೊಲಾ ವೈರಸ್ ಸ್ಫೋಟ
ಎಬೊಲಾ ವೈರಸ್ ಸ್ಫೋಟಗೊಂಡಿದೆ. ಆಫ್ರಿಕಾದ ಕಾಂಗೋದಲ್ಲಿ ಎಬೋಲಾ ಪ್ರಕರಣ ಹೆಚ್ಚಾಗುತ್ತಿದೆ. ಈಗಾಗಲೇ 80ಕ್ಕೂ ಅಧಿಕ ಮಂದಿ ಎಬೋಲಾ ವೈರಸ್‌ಗೆ ಬಲಿಯಾಗಿದ್ದಾರೆ. 300ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ವೈರಸ್ ಎಲ್ಲೆಡೆ ಹರಡುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ದೆಹಲಿಯಲ್ಲಿ ನಡೆಯಬೇಕಿದ್ದ ಶೃಂಗಸಭೆ ಮುಂದೂಡಿಕೆ
ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟದಿಂದ ಮೇ.28ಕ್ಕೆ ದೆಹಲಿಯಲ್ಲಿ ನಡೆಯಬೇಕಿದ್ದ ಭಾರತ ಹಾಗೂ ಆಫ್ರಿಕಾ ಯೂನಿಯನ್ ಶೃಂಗಸಭೆಯನ್ನು ಮುಂದೂಡಲಾಗಿದೆ. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ, ಎಬೋಲಾ ವೈರಸ್ ಸ್ಫೋಟದಿಂದ ತುರ್ತು ಪರಿಸ್ಥಿತಿ ಘೋಷಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾರ್ಗಸೂಚಿ
ಭಾರತ ಹಾಗೂ ಆಫ್ರಿಕಾ ದೇಶಗಳ ನಾಲ್ಕನೇ ದೆಹಲಿ ಶೃಂಗಸಭೆಗೆ ಭರ್ಜರಿ ತಯಾರಿ ನಡೆದಿತ್ತು. ಆದರೆ ಕಾಂಗೋದಲ್ಲಿನ ಎಬೋಲಾ ಸ್ಫೋಟದಿಂದ ಈ ಶೃಂಗಸಭೆ ಮುಂದೂಡಿಕೆ ಮಾಡಲಾಗಿದೆ. ಆಫ್ರಿಕನ್ ದೇಶದಲ್ಲಿ ತೀವ್ರಗತಿಯಲ್ಲಿ ಎಬೋಲಾ ಹರಡುತ್ತಿದೆ. ಇದೀಗ ವಿದೇಶಗಳಿಗೆ ಹರದದಂತೆ ವಿಶ್ವ ಆರೋಗ್ಯ ಸಂಸ್ಥೆ ಹಲವು ಕಟ್ಟು ನಿಟ್ಟಿನ ಮಾರ್ಗಸೂಚಿ ನೀಡಿದೆ. ಇದರ ಬೆನ್ನಲ್ಲೇ ಭಾರತ ಶೃಂಗಸಭೆ ಮುಂದೂಡಿದೆ.
ಕಾಂಗೋ ಸೇರಿ ಆಫ್ರಿಕಾದಲ್ಲಿ ಮಾರ್ಗಸೂಚಿ
ಕಾಂಗೋ ಸೇರಿದಂತೆ ಆಫ್ರಿಕಾ ದೇಶದಲ್ಲಿ ಕಠಿಣ ಮಾರ್ಗಸೂಚಿ ಹೊರಡಿಸಲಾಗಿದೆ. ಕೊರೋನಾ ಸಂದರ್ಭದಲ್ಲಿನ ಮಾರ್ಗಸೂಚಿಗಳು ಆಫ್ರಿಕಾದಲ್ಲಿ ಮತ್ತೆ ಜಾರಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವೈದ್ಯರ ತಂಡಗಳು ಕಾಂಗೋದಲ್ಲಿ ನಿರಂತರ ಆರೋಗ್ಯ ಸೇವೆಯಲ್ಲಿ ತೊಡಗಿಕೊಂಡಿದೆ.
ಭಾರತದಲ್ಲಿ ಹದ್ದಿನ ಕಣ್ಣಿಟ್ಟ ಆರೋಗ್ಯ ಇಲಾಖೆ
ಆಫ್ರಿಕಾದಲ್ಲಿ ಎಬೋಲಾ ವೈರಸ್ ಸ್ಫೋಟದ ಬೆನ್ನಲ್ಲೇ ಭಾರತದಲ್ಲಿ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಪರಿಸ್ಥಿತಿ ಅವಲೋಕನ ನಡೆಸಿರುವ ಆರೋಗ್ಯ ಇಲಾಖೆ ಆಫ್ರಿಕಾ ದೇಶಗಳಿಂದ ಯಾವುದೇ ರೀತಿಯಲ್ಲಿ ಭಾರತಕ್ಕೆ ಎಬೋಲಾ ವೈರಸ್ ಹರಡದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

