ಪಾಕಿಸ್ತಾನದ ಕಡೆ ಸುದರ್ಶನ ಚಕ್ರ ತಿರುಗಿಸಿದ ಭಾರತ! ಏನಿದು S-400 ಟ್ರಯಂಪ್
ಪಾಕಿಸ್ತಾನದ ವೈಮಾನಿಕ ದಾಳಿಯನ್ನು ವಿಫಲಗೊಳಿಸಲು ಭಾರತೀಯ ವಾಯುಪಡೆ S-400 ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಿದೆ. S-400 ಟ್ರಯಂಪ್ ವಿಶ್ವದ ಅತ್ಯಂತ ಮುಂದುವರಿದ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಆಪರೇಷನ್ ಸಿಂದೂರಗೆ ಪ್ರತೀಕಾರವಾಗಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ವಿಫಲಗೊಳಿಸಲು ಭಾರತೀಯ ವಾಯುಪಡೆ ಬುಧವಾರ ರಾತ್ರಿ ತನ್ನ ಬಲಿಷ್ಠ ಎಸ್ -400 ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ. S-400 Triumf ಪ್ರಪಂಚದ ಅತ್ಯಂತ ಸುಧಾರಿತ ವಾಯು ರಕ್ಷಣಾ ವ್ಯವಸ್ಥೆಗಳಲ್ಲಿ ಒಂದಾಗಿದೆ.
ಸುದರ್ಶನ ಚಕ್ರ ಅಂತ ಕರೆಯೋದ್ಯಾಕೆ?
ರಕ್ಷಣಾ ಅಧಿಕಾರಿಗಳ ಪ್ರಕಾರ, ಪಾಕಿಸ್ತಾನವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ ಅನೇಕ ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆವಂತಿಪೋರಾ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಲುಧಿಯಾನ ಮತ್ತು ಭುಜ್‌ನಲ್ಲಿರುವ ನೆಲೆಗಳು ಗುರಿಗಳಲ್ಲಿ ಸೇರಿವೆ. "ಸುದರ್ಶನ ಚಕ್ರ" ಎಂದು ಕರೆಯಲ್ಪಡುವ S-400 ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆಗಳಿಂದ ಸ್ಪೋಟಕಗಳನ್ನು ತಡೆಹಿಡಿದು ತಟಸ್ಥಗೊಳಿಸಲಾಯಿತು. ಭಾರತಕ್ಕೆ ಮೊದಲ S-400 ಟ್ರಯಂಪ್ 2021ರಲ್ಲಿ ಬಂದು, ಮಿಕ್ಕ ಎರಡು ಕ್ರಮವಾಗಿ 2022 ಮತ್ತು 2023ರಲ್ಲಿ ಭಾರತದ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದೆ. 2023ರ ಹೊತ್ತಿಗೆ, ಭಾರತದ ಬಳಿ 3 ಸ್ಕ್ವಾಡ್ರನ್‌ಗಳಿವೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಉಳಿದ 2 ಸ್ಕ್ವಾಡ್ರನ್‌ಗಳ ಕೆಲಸ ಸದ್ಯಕ್ಕೆ ಸ್ಥಗಿತಗೊಂಡಿವೆ. ಈ S-400 ಟ್ರಯಂಫ್ ಅನ್ನು ಭಾರತವು ಪಾಕಿಸ್ತಾನ ಮತ್ತು ಚೀನಾದ ಗಡಿಯಲ್ಲಿ ನಿಯೋಜಿಸಿದೆ.
ಏನಿದು S-400 ಟ್ರಯಂಪ್?
ರಷ್ಯಾ ಮತ್ತು ಭಾರತದ ನಡುವಿನ ಮಹತ್ವದ ರಕ್ಷಣಾ ಸಾಮಗ್ರಿ ಒಪ್ಪಂದದ ಭಾಗವಾಗಿ ಭಾರತಕ್ಕೆ S-400 ಕ್ಷಿಪಣಿ 40 ಸಾವಿರ ರೂ ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಯ್ತು. ಇದು ನಮ್ಮ ತಲೆಮಾರಿನಲ್ಲಿ ತಯಾರಿಸಲಾದ ವಿಶೇಷ ಕ್ಷಿಪಣಿ ನಿರೋಧಕ ವ್ಯವಸ್ಥೆ ಅಮೆರಿಕ ಸಿದ್ಧಪಡಿಸಿರುವ ಥಾಟ್ ಕ್ಷಿಪಣಿ ನಿರೋಧಕ ವ್ಯವಸ್ಥೆಗಿಂತ ಸಾಕಷ್ಟು ಸುಧಾರಿತ ತಂತ್ರಜ್ಞಾನಗಳನ್ನು ಇದು ಹೊಂದಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಆರಾಮವಾಗಿ ಇದನ್ನು ತೆಗೆದುಕೊಂಡು ಹೋಗಬಹುದು. ಅದು ಕೂಡ ಕೇವಲ 5 ನಿಮಿಷಗಳಲ್ಲಿ. ಇದರ ಜೊತೆಗೆ ಅಮೆರಿಕ ನಿರ್ಮಿತ ಸೂಪರ್ ಫ್ಲೈಟ್ ಎಂದು ಕರೆಯುವ ಶಕ್ತಿಶಾಲಿ ಎಫ್ 35 ಸೇರಿದಂತೆ ವಾಯು ಒಂದೇ ಸಲಕ್ಕೆ ಮಾರ್ಗದಲ್ಲಿರುವ 100 ಗುರಿಗಳನ್ನು ಹಿಂಬಾಲಿಸುವ ಮತ್ತು 6 ಗುರಿಗಳನ್ನು ಏಕಕಾಲಕ್ಕೆ ನಿರೋಧಿಸುವ ಪವರ್ ಅನ್ನು ಹೊಂದಿದೆ.
S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ
S-400 ಟ್ರಯಂಫ್ ಒಂದು ಶಕ್ತಿಶಾಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಇದನ್ನು ರಷ್ಯಾದ NPO ಅಲ್ಮಾಜ್ ಸಂಸ್ಥೆ 1990ರ ದಶಕದಲ್ಲಿ ಅಭಿವೃದ್ಧಿಪಡಿಸಿತು. ಈ ವ್ಯವಸ್ಥೆ S-300 ಎಂಬ ಹಳೆಯ ವ್ಯವಸ್ಥೆಯನ್ನೆ ಆಧಾರವನ್ನಾಗಿ ಮಾಡಿಕೊಂಡು ಮಾಡಲಾಗಿದೆ. S-400 ರಷ್ಯಾ ಸೇನೆಗೆ 2007ರ ಏಪ್ರಿಲ್ 28ರಂದು ಸೇರ್ಪಡೆಗೊಳಿಸಲಾಯ್ತು ಜೊತೆಗೆ ಆಗಸ್ಟ್ 6 ರಂದು ಇದು ಮೊದಲ ಬಾರಿಗೆ ಕಾರ್ಯಾಚರಣೆ ನಡೆಸಿತು. ಇತ್ತೀಚೆಗೆ ರಷ್ಯಾ ಹೊಸದಾಗಿ S-500 ಎಂಬ ಇನ್ನೂ ಮುಂದುವರಿದ ತಂತ್ರಜ್ಞಾನದ ವ್ಯವಸ್ಥೆಯನ್ನು ಪರಿಚಯಿಸಿದೆ, ಅದು S-400ಗೆ ಪೂರಕವಾಗಿದೆ.
S-400 ಯಾಕೆ ಮಹತ್ವದ್ದು?
ಇದನ್ನು ನ್ಯಾಟೋ "SA-21 ಗ್ರಾವ್ಲರ್" ಎಂದು ಕರೆಯುತ್ತದೆ.
ಇದು ಶತ್ರುಗಳ ವಿಮಾನ, ಕ್ಷಿಪಣಿ ಮತ್ತು ಡ್ರೋನ್ಗಳನ್ನು ಹಾರುತ್ತಿದ್ದಾಗಲೆ ಹೊಡೆದುರಳಿಸಲು ಮಾಡಲಾಗಿದೆ.
400 ಕಿಲೋಮೀಟರ್ ದೂರದ ಗುರಿಗಳನ್ನು ನಾಶಪಡಿಸಬಹುದು.
600 ಕಿಲೋಮೀಟರ್ ವ್ಯಾಪ್ತಿಯವರೆಗೆ ಗುರಿಗಳನ್ನು ಪತ್ತೆ ಹಚ್ಚಬಹುದು.
S-300ಗೆ ಹೋಲಿಸಿದರೆ, S-400 ಹೆಚ್ಚು ವೇಗದಲ್ಲಿ ಕ್ಷಿಪಣಿಗಳನ್ನು ಹೊಡೆದುಬಿಡಬಹುದು.
ಸ್ಟೆಲ್ತ್ ತಂತ್ರಜ್ಞಾನ ಹೊಂದಿದ ಗುರಿಗಳನ್ನೂ ಪತ್ತೆಹಚ್ಚಿ ಹೊಡೆಯುವ ಸಾಮರ್ಥ್ಯವಿದೆ.
ಭಾರತದ ಪಾಲಿಗೆ ಇದರ ಮಹತ್ವ
2018ರಲ್ಲಿ, ಭಾರತವು ರಷ್ಯಾವಿನಿಂದ ಐದು S-400 ಘಟಕಗಳನ್ನು ಖರೀದಿಸಲು 5 ಶತಕೋಟಿ ಡಾಲರ್ (ಅಂದರೆ ಲಕ್ಷಾಂತರ ಕೋಟಿ ರೂಪಾಯಿ) ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಿತು. ಆಗ ಅಮೆರಿಕದಿಂದ ನಿರ್ಬಂಧಗಳ ಬೆದರಿಕೆ ಇದ್ದರೂ, ಭಾರತ ಈ ನಿರ್ಧಾರವನ್ನು ತೆಗೆದುಕೊಂಡಿತು.
S-400 ಯಂತ್ರದ ರಚನೆ ಹೇಗಿದೆ?
ಒಂದು S-400 ವ್ಯವಸ್ಥೆಯಲ್ಲಿ:
ಉದ್ದಮಟ್ಟದ ರೇಡಾರ್,
ಕಮಾಂಡ್ ಕಂಟ್ರೋಲ್ ವಾಹನ,
ಗುರಿಗಳನ್ನು ಪತ್ತೆಹಚ್ದುವ ಇನ್ನೊಂದು ರೇಡಾರ್,
2 ಲಾಂಚರ್ ಬಳಕೆಯ ಘಟಕಗಳಿರುತ್ತವೆ.
ಪ್ರತಿ ಲಾಂಚರ್‌ನಲ್ಲಿ 4 ಕ್ಷಿಪಣಿಗಳನ್ನು ಇಡಬಹುದಾಗಿದೆ.
S-400 ಶಸ್ತ್ರಸಜ್ಜಿತವಾಗಿರುವ ನಾಲ್ಕು ಬಗೆಯ ಕ್ಷಿಪಣಿಗಳ ವ್ಯಾಪ್ತಿಯನ್ನು ಹೊಂದಿದೆ – 40 ಕಿ.ಮೀ., 120 ಕಿ.ಮೀ., 250 ಕಿ.ಮೀ., ಮತ್ತು 400 ಕಿ.ಮೀ.
ಇದರ ರೇಡಾರ್ ಒಂದೇ ಸಮಯದಲ್ಲಿ 100ಕ್ಕಿಂತ ಹೆಚ್ಚು ಗುರಿಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು 12 ಗುರಿಗಳನ್ನು ತಕ್ಷಣ ತಡಕಿಕೊಳ್ಳಬಹುದು.
27 ಕಿ.ಮೀ ಎತ್ತರದಲ್ಲಿರುವ ಗುರಿಗಳನ್ನು ಕೂಡ ಇದು ಹೊಡೆದು ಬಿಡಬಹುದು.