ಸಂಸತ್ ಭವನ ಮೇಲೆ ದಾಳಿ ಹಿಂದೆ ಖಲಿಸ್ತಾನಿ ಉಗ್ರ ಕೈವಾಡ, ಪನ್ನುನ್ ಡೆಡ್‌ಲೈನ್ ದಿನವೇ ಆ್ಯಟಾಕ್!
ದೆಹಲಿ ಸಂಸತ್ ಭವನದ ಮೇಲೆ ಇಬ್ಬರು ಅಪರಿಚಿತರು ದಾಳಿ ನಡೆಸಿದ್ದಾರೆ. ಈ ದಾಳಿ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ. ಖಲಿಸ್ತಾನಿ ಉಗ್ರ ಪನ್ನುನ್ ಎಚ್ಚರಿಕೆ ನೀಡಿದ ಡೆಡ್‌ಲೈನ್ ದಿನವೇ ದಾಳಿ ನಡೆದಿದೆ.
ದೆಹಲಿ(ಡಿ.13) ನೂತನ ಸಂಸತ್ ಭವನದ ಮೇಲೆ ದಾಳಿ ಹಿಂದೆ ಉಗ್ರ ಖಲಿಸ್ತಾನಿ ಸಂಘಟನೆ ಕೈವಾಡ ವ್ಯಕ್ತವಾಗುತ್ತಿದೆ. ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ದಾಳಿಯ ಎಚ್ಚರಿಕೆ ನೀಡಿದ್ದ. ಪನ್ನುನ್ ನೀಡಿದ ಡೆಡ್‌ಲೈನ್ ದಿನವೇ ಇದೀಗ ಇಬ್ಬರು ಅಪರಿಚಿತರು ಸದನಗೊಳಗೆ ನುಗ್ಗಿ ದಾಳಿ ಮಾಡಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತರು ಕೆಮಿಕಲ್ ಸ್ಪ್ರೇ ನಡೆಸಿದ್ದಾರೆ. ಸದನದಲ್ಲಿ ಹಲವು ನಾಯಕರು ಇರುವಾಗಲೇ ಈ ದಾಳಿ ನಡೆದಿದೆ.
ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಇಬ್ಬರು ಪಾಸ್ ಪಡೆದಿದ್ದಾರೆ. ಸಾಗರ್ ಶರ್ಮಾ ಹೆಸರಿನಲ್ಲಿ ಯುವಕ ಪಾಸ್ ಪಡೆದುಕೊಂಡಿದ್ದಾನೆ. ಮತ್ತೊಬ್ಬ ಯುವತಿ ನೀಲಂ ಕೌರ್ ಇಬ್ಬರು ದಾಳಿ ನಡೆಸಿದ್ದಾರೆ. ಮೈಸೂರಿನವರು ಎಂದು ಪಾಸ್ ಪಡೆದ ಇಬ್ಬರು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದ ದಾಳಿಕೋರರು,ಸದನದ ಒಳಗೆ ನುಗ್ಗಿದ್ದಾರೆ. ಬಳಿಕ ಶೂ ಒಳಗಡೆ ಇಟ್ಟಿದ್ದ ಕೆಮಿಕಲ್ ಸ್ಪ್ರೇ ಸಿಂಪಡಿಸಿದ್ದಾರೆ. ದಾಳಿಯಿಂದ ಸಂಸದರು, ಸಿಬ್ಬಂದಿಗಳು, ಸ್ಪೀಕರ್ ಆತಂಕಗೊಂಡಿದ್ದಾರೆ. ತಕ್ಷಣವೇ 2 ಗಂಟೆ ವರೆಗೆ ಸದನ ಮುಂದೂಡಲಾಗಿದೆ.
ಲೋಕಸಭೆಯಲ್ಲಿ ಭದ್ರತಾ ಲೋಪ, ಸಂಸತ್ ಭವನದಲ್ಲಿ ಅಪರಿಚಿತರಿಂದ ಟಿಯರ್ ಗ್ಯಾಸ್ ದಾಳಿ!
ಸದನದ ಶೂನ್ಯವೇಳೆಯಲ್ಲಿ ಈ ದಾಳಿ ನಡೆದಿದೆ. ಸಂಸದರು ಸದನದಲ್ಲಿ ವಿಷಗಳ ಕುರಿತು ಮಾತನಾಡುತ್ತಿದ್ದಂತೆ ಈ ದಾಳಿ ನಡೆದಿದೆ. ದಾಳಿ ನಡೆಸಿದ ಯುವಕ ಹಾಗೂ ಯುವತಿಯನ್ನು ಬಂಧಿಸಲಾಗಿದೆ. ಯುವಕ ಸಾಗರ್ ಶರ್ಮಾ ಎಂಬ ಹೆಸರಿನಲ್ಲಿ ಪಾಸ್ ಪಡೆದು ಒಳ ನುಗ್ಗಿದ್ದ. ಇತ್ತ ಯುವತಿ ನೀಲಂ ಕೌರ್ ಅನ್ನೋ ಹೆಸರಿನಲ್ಲಿ ಪಾಸ್ ಪಡೆದು ಒಳ ನುಗ್ಗಿದ್ದರು.
ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಇತ್ತೀಚೆಗೆ ಭಾರತದ ಸಂಸತ್ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು. ಡಿಸೆಂಬರ್ 13 ಅಥವಾ ಅದಕ್ಕೂ ಮೊದಲೇ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದರು. ಇತ್ತೀಚೆಗೆ ಏರ್ ಇಂಡಿಯಾ ಮೇಲೆ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಹೀಗಾಗಿ ಏರ್ ಇಂಡಿಯಾಗೆ ಭಾರಿ ಬದ್ರತೆ ನೀಡಲಾಗಿತ್ತು. ಹೀಗಾಗಿ ಯಾವುದೇ ದಾಳಿಗೆ ಅವಕಾಶ ಸಿಗಲಿಲ್ಲ. ಬಳಿಕ ಸಂಸತ್ ಭವನದ ಮೇಲೆ ದಾಳಿ ಎಚ್ಚರಿಕೆ ನೀಡಲಾಗಿತ್ತು.
ವಿಧಾನಸೌಧ ಬಜೆಟ್ ಅಧಿವೇಶನದಲ್ಲಿ ಕುಳಿತ ಅನಾಮಿಕ ವ್ಯಕ್ತಿ: 15 ನಿಮಿಷವಾದರೂ ಗೊತ್ತಾಗಿಲ್ಲ