MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • News
  • India News
  • ನಾನು ಭಾರತೀಯ, ಪೌರತ್ವ ಸಾಬೀತುಪಡಿಸಲು 16 ದಾಖಲೆ ನೀಡಿದರೂ ವಿದೇಶಿ ಎಂದು ಹೈಕೋರ್ಟ್ ತೀರ್ಪು

ನಾನು ಭಾರತೀಯ, ಪೌರತ್ವ ಸಾಬೀತುಪಡಿಸಲು 16 ದಾಖಲೆ ನೀಡಿದರೂ ವಿದೇಶಿ ಎಂದು ಹೈಕೋರ್ಟ್ ತೀರ್ಪು

ಅಮಿನಲ್ ಹಖ್ ತಾನು ಭಾರತೀಯ ಎಂದು ಸಾಬೀತು ಪಡಿಸಲು ಕೋರ್ಟ್‌ಗೆ 16 ದಾಖಲೆ ನೀಡಿದ್ದಾರೆ. ಆದರೆ ಹೈಕೋರ್ಟ್ ವಿದೇಶಿ ಎಂದು ಐತಿಹಾಸಿಕ ತೀರ್ಪು ನೀಡಿದೆ. ಕೋರ್ಟ್ ತೀರ್ಪಿಗೆ ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಏನಿದು ಪ್ರಕರಣ?

2 Min read
Author : Chethan Kumar
Published : Jul 03 2026, 05:29 PM IST
Share this Photo Gallery
  • FB
  • TW
  • Linkdin
  • Whatsapp
16
16 ದಾಖಲೆ ನೀಡಿದರೂ ಪೌರತ್ವ ಸಾಬೀತುಪಡಿಸಲು ವಿಫಲ
Image Credit : stockPhoto

16 ದಾಖಲೆ ನೀಡಿದರೂ ಪೌರತ್ವ ಸಾಬೀತುಪಡಿಸಲು ವಿಫಲ

ಭಾರತೀಯ ಎಂದು ಸಾಬೀತುಪಡಿಸಲು ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ 16 ದಾಖಲೆಗಳನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದಾನೆ. ಆದರೆ ಈ 16 ದಾಖಲೆಗಳು ಅಮಿನಲ್ ಹಖ್‌ನ ಕಾಪಾಡಲಿಲ್ಲ. ವಿದೇಶಿ ಕಾಯ್ದೆ 1964ರ ಸೆಕ್ಷನ್ 9ರ ಅಡಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 16 ದಾಖೆಗಳಿದ್ದರೂ ಪೌರತ್ವ ಸಾಬೀತುಪಡಿಸಲು ಯಾಕೆ ಸಾಧ್ಯವಾಗಲಿಲ್ಲ. ಏನಿದು ಪ್ರಕರಣ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸಾಬೀತುಪಡಿಸುವ ಜವಾಬ್ದಾರಿ ಆತನದ್ದೇ
Image Credit : Asianet News

ಸಾಬೀತುಪಡಿಸುವ ಜವಾಬ್ದಾರಿ ಆತನದ್ದೇ

ಅಸ್ಸಾಂ ಗೌವ್ಹಾಟಿ ಹೈಕೋರ್ಟ್‌ನ ಜಸ್ಟಿಸ್ ಕಲ್ಯಾಣ್ ರೈ ಸುರಾನ ಹಾಗೂ ಶಮಿಮಾ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಅಮಿನಲ್ ಹಕ್ ವಲಸೆ ಕಾರ್ಮಿಕ ಎಂದು ಕೋರ್ಟ್‌ನಲ್ಲಿ ವಾದಿಸಲಾಯಿತು. ಆದರೆ ಭಾರತೀಯ ಎಂದು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಒಬ್ಬ ಪೌರನ ಪೌರತ್ವದ ಮೇಲೆ ಅನುಮಾನ ವ್ಯಕ್ತವಾದರೆ ಅದನ್ನು ಸಾಬೀತುಪಡಿಸುವ ಜವಾಬ್ದಾರಿ ಆತನದ್ದೇ ಆಗಿರುತ್ತದೆ ಎಂದು ತೀರ್ಪಿನಲ್ಲಿ ಹೈಕೋರ್ಟ್ ಉಲ್ಲೇಖಿಸಿದೆ.

Related Articles

Related image1
ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್
Related image2
ಪಾಸ್‌ಪೋರ್ಟ್ ಇದ್ದ ಮಾತ್ರಕ್ಕೆ ನೀವು ಭಾರತದ ಪೌರರಲ್ಲ! ಪೌರತ್ವ ಸಾಬೀತುಪಡಿಸಲು ಬೇಕಾದ 5 ದಾಖಲೆಗಳು ಇಲ್ಲಿವೆ
36
ಶಾಲಾ ಪ್ರಮಾಣ ಪತ್ರವೂ ರಿಜೆಕ್ಟ್
Image Credit : ANI

ಶಾಲಾ ಪ್ರಮಾಣ ಪತ್ರವೂ ರಿಜೆಕ್ಟ್

ಅಸ್ಸಾಂ ಕಾರ್ಮಿಕ ಅಮಿನಲ್ ಹಖ್ ವಿದೇಶಿಗ ಎಂದು ಕೋರ್ಟ್ ತೀರ್ಪು ನೀಡಿದೆ. ಕುಟುಂಬ ಹಲವು ದಶಗಳಿಂದ ಅಸ್ಸಾಂನಲ್ಲಿ ನೆಲೆಸಿದೆ. ಅಜ್ಜ ಅಜ್ಜಿಯ ದಾಖಲೆ, ತಂದೆ ತಾಯಿಯ ದಾಖಲೆ, 1966ರಿಂದ 2017ರ ವರೆಗಿನ ಮತದಾರರ ಪಟ್ಟಿಯಲ್ಲಿನ ಹೆಸರು, ಜಮೀನು ಖರೀದಿ ಪತ್ರ, ಪ್ಯಾನ್ ಕಾರ್ಡ್, ಶಾಲಾ ಪ್ರಮಾಣ ಪತ್ರ ಸೇರಿದಂತೆ 16 ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿತ್ತು. ದಾಖಲೆ ಪರಿಶೀಲಿಸಿದ ಕೋರ್ಟ್, ದಾಖಲೆ ತಿರಸ್ಕರಿಸಿ ಹಖ್ ವಿರುದ್ದ ತೀರ್ಪು ನೀಡಿದೆ.

46
ದಾಖಲೆಗಳಲ್ಲಿ ಲೋಪದೋಷ
Image Credit : X

ದಾಖಲೆಗಳಲ್ಲಿ ಲೋಪದೋಷ

ಹೈಕೋರ್ಟ್‌ಗೆ ಅಮಿನಲ್ ಹಕ್ ಎನ್‌ಸಿಆರ್ ದಾಖಲೆ ನೀಡಿದ್ದರು. ಆದರೆ 1951ರ ಎನ್‌ಸಿಆರ್ ಪ್ರತಿ ಕೇವಲ ಕಂಪ್ಯೂಟರ್ ಜನರೇಟೆಡ್ ಪ್ರಿಂಟ್ಔಟ್ ಆಗಿತ್ತು. ಇದು ಸರ್ಕಾರದಿಂದ ನೀಡಿದ ಅಧಿಕೃತ ದಾಖಲೆಯಲ್ಲ ಅನ್ನೋದು ಪರಿಶೀಲನೆ ವೇಳೆ ಸಾಬೀತಾಗಿತ್ತು. ಇನ್ನು ತಂದೆಯ ಹೆಸರು ಹಲವು ದಾಖಲೆಗಳಲ್ಲಿ ಬೇರೆ ಬೇರೆಯಾಗಿತ್ತು. ಜೊತೆಗೆ ವಲಸೆ ಹೋದ ಯಾವುದೇ ದಾಖಲೆ ಎಲ್ಲೂ ಇರಲಿಲ್ಲ.

56
ತಂದೆ ಸಾಕ್ಷ್ಯ ನುಡಿದರೂ ದಾಖಲೆ ಇಲ್ಲ
Image Credit : stockPhoto

ತಂದೆ ಸಾಕ್ಷ್ಯ ನುಡಿದರೂ ದಾಖಲೆ ಇಲ್ಲ

ಶಾಲೆಯ ಮುಖ್ಯೋಪಾದ್ಯಯರು ನೀಡಿದ ಸರ್ಟಿಫಿಕೇಟ್ ಸಾಬೀತುಪಡಿಸಲು ಕೋರ್ಟ್‌ಗೆ ಹೆಡ್‌ಮಾಸ್ಟರ್ ಹಾಜರಾಗಿಲ್ಲ. ಇತ್ತ ಅಮಿನಲ್ ಹಕ್ ಸಾಕ್ಷಿ ನುಡಿದರೂ ಸಾಬೀತುಪಡಿಸುವ ಯಾವುದೇ ದಾಖಲೆ ಅವರ ಬಳಿ ಇರಲಿಲ್ಲ. ಹೀಗಾಗಿ ಕೋರ್ಟ್ ಹಮಿನಲ್ ಹಕ್ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ ವಿದೇಶಿಗ ಎಂದು ತೀರ್ಪು ನೀಡಿದೆ.

66
ಪಾಸ್‌ಪೋರ್ಟ್ ದಾಖಲೆ ಬೆನ್ನಲ್ಲೇ ತೀರ್ಪು
Image Credit : FREEPIK

ಪಾಸ್‌ಪೋರ್ಟ್ ದಾಖಲೆ ಬೆನ್ನಲ್ಲೇ ತೀರ್ಪು

ಇತ್ತೀಚೆಗೆ ವಿದೇಶಾಂಗ ಇಲಾಖೆ ಭಾರತೀಯ ಪೌರತ್ವಕ್ಕೆ ಪಾಸ್‌ಪೋರ್ಟ್ ದಾಖಲೆ ಅಲ್ಲಎಂದಿತ್ತು. ಇದರ ಬೆನ್ನಲ್ಲೇ ಗೌವ್ಹಾಟಿ ಹೈಕೋರ್ಟ್ ನೀಡಿದ ತೀರ್ಪು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತೀಯ ನಾಗರಿಕತ್ವ
ಅಸ್ಸಾಂ
ನ್ಯಾಯಾಲಯ

Latest Videos
Recommended Stories
Recommended image1
ಮೀಸಲಾತಿಯನ್ನು ಬೆಂಬಲಿಸಿದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ ಗೇಟ್ಸ್​: ಆದ್ರೆ ಇಲ್ಲೊಂದಿದೆ ಸಕತ್​ ಟ್ವಿಸ್ಟ್​
Recommended image2
ಹಬ್ಬದ ತಯಾರಿ ನಡುವೆ, ನಡು ರಸ್ತೆಯಲ್ಲಿ ಧ್ವಂಸಗೊಂಡ ಗಣೇಶ ಮೂರ್ತಿ
Recommended image3
20 ವರ್ಷ ಚಿಕ್ಕವಳಾದ ನೀನು ವಿಧವೆಯಂತೆ ಬಾಳೋದು ಇಷ್ಟವಿಲ್ಲ- ತಲಾಖ್​ ಕೊಡುವೆ: ಉಗ್ರ ಯಾಸಿನ್​​ ಮಲಿಕ್​ ಪತ್ರ
Related Stories
Recommended image1
ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್
Recommended image2
ಪಾಸ್‌ಪೋರ್ಟ್ ಇದ್ದ ಮಾತ್ರಕ್ಕೆ ನೀವು ಭಾರತದ ಪೌರರಲ್ಲ! ಪೌರತ್ವ ಸಾಬೀತುಪಡಿಸಲು ಬೇಕಾದ 5 ದಾಖಲೆಗಳು ಇಲ್ಲಿವೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved