MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ

ಸ್ನ್ಯಾಪ್‌ಚಾಟ್‌ನಲ್ಲಿ ಪ್ರೀತಿ.. ಗಡಿದಾಟಿ ಭಾರತಕ್ಕೆ ಎಂಟ್ರಿಯಾಗಿದ್ದ ಪ್ರೇಮಿಗೆ ಇತ್ತು ಒಂದು ಆಸೆ

ಸ್ನ್ಯಾಪ್‌ಚಾಟ್‌ನಲ್ಲಿ ಪರಿಚಯವಾದ ಯುವತಿ ಹಾಗೂ ಪೂರ್ವಜರ ಆಸ್ತಿಗಾಗಿ ಪಾಕ್ ಆಕ್ರಮಿತ ಕಾಶ್ಮೀರದ ಯುವಕನೊಬ್ಬ ಗಡಿ ದಾಟಿ ಭಾರತಕ್ಕೆ ಬಂದಿದ್ದ. ಯಾವುದೇ ದುರುದ್ದೇಶವಿಲ್ಲವೆಂದು ಖಚಿತವಾದ ಬಳಿಕ, ಭಾರತೀಯ ಸೇನೆಯು ಮಾನವೀಯ ನೆಲೆಯಲ್ಲಿ ಆತನನ್ನು ಮರಳಿ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ

2 Min read
Author : Ganesh Mabla Gowda
Published : Jul 05 2026, 12:18 PM IST
Share this Photo Gallery
  • FB
  • TW
  • Linkdin
  • Whatsapp
15
ಪ್ರೀತಿ ಹುಡುಕುತ್ತ ಗಡಿ ದಾಟಿದ
Image Credit : Asianet News

ಪ್ರೀತಿ ಹುಡುಕುತ್ತ ಗಡಿ ದಾಟಿದ

ಶ್ರೀನಗರ: ಪ್ರೀತಿ ಹುಡುಕುತ್ತ ಗಡಿದಾಟಿ ಭಾರತ ಪ್ರವೇಶ ಮಾಡುವ ಪಾಕಿಸ್ತಾನಿಯರ ಸುದ್ದಿ ಹೊಸತೇನೂ ಅಲ್ಲ. ಇದೀಗ ಅಂತಹುದೇ ಮತ್ತೊಂದು ಪ್ರಸಂಗ ನಡೆದಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯ ಮೇಲಿನ ಪ್ರೀತಿ ಹಾಗೂ ತನ್ನ ಪೂರ್ವಜರ ಆಸ್ತಿಯನ್ನು ಮರಳಿ ಪಡೆಯುವ ಹಂಬಲದಿಂದ ಗಡಿ ದಾಟಿ ಭಾರತಕ್ಕೆ ಬಂದಿದ್ದ 22 ವರ್ಷದ ಪಾಕ್ ಆಕ್ರಮಿತ ಕಾಶ್ಮೀರದ (POJK) ಯುವಕನನ್ನು ಭಾರತೀಯ ಸೇನೆಯು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಸ್ನ್ಯಾಪ್‌ಚಾಟ್ ಪ್ರೀತಿಗಾಗಿ ಗಡಿ ದಾಟಿದ..
Image Credit : x.com

ಸ್ನ್ಯಾಪ್‌ಚಾಟ್ ಪ್ರೀತಿಗಾಗಿ ಗಡಿ ದಾಟಿದ..

ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿ ಜೀಶನ್ ಮಿರ್ (22) ಎಂಬಾತ ಮೇ 31 ರಂದು ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ನಿಯಂತ್ರಣ ರೇಖೆಯನ್ನು (LoC) ದಾಟಿ ಭಾರತದೊಳಗೆ ಪ್ರವೇಶಿಸಿದ್ದ. ಆತನನ್ನು ಭಾರತೀಯ ಸೇನೆಯು ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಸುಮಾರು ಒಂದು ತಿಂಗಳ ನಂತರ, ಜುಲೈ 4 ರಂದು ಮಧ್ಯಾಹ್ನ 12:24 ಕ್ಕೆ ಆತನನ್ನು ಅಧಿಕೃತವಾಗಿ ಪಾಕಿಸ್ತಾನ ಸೇನೆಗೆ ಹಸ್ತಾಂತರಿಸಲಾಗಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಮಾಹಿತಿ ನೀಡಿದೆ.

Related Articles

Related image1
ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ಪೋಕ್ಸೋ ಕೇಸ್‌ನಲ್ಲಿ ಹೊನ್ನಾವರ ಮಂಕಿ ಠಾಣೆ PSI ಅರೆಸ್ಟ್
Related image2
ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5 ಕಾರಣಗಳು
35
ಸೇನೆಯಿಂದ ತನಿಖೆ
Image Credit : x.com

ಸೇನೆಯಿಂದ ತನಿಖೆ

ತನಿಖಾ ಸಂಸ್ಥೆಗಳ ಮಾಹಿತಿಯ ಪ್ರಕಾರ, ಜೀಶನ್ ಮಿರ್‌ಗೆ ಬಾರಾಮುಲ್ಲಾದ ತುಲ್ವಾರಿ ಗ್ರಾಮದ ನಿವಾಸಿ ಇರಮ್ ಬಾನೊ ಎಂಬ ಯುವತಿಯ ಪರಿಚಯ ಸ್ನ್ಯಾಪ್‌ಚಾಟ್‌ನಲ್ಲಿ ಆಗಿತ್ತು. ಈ ಸ್ನೇಹ ಕ್ರಮೇಣ ಗಾಢವಾದ ಪ್ರೀತಿಗೆ ತಿರುಗಿತ್ತು. ಪಾಕಿಸ್ತಾನದಲ್ಲಿದ್ದ ಜೀಶನ್ ಕುಟುಂಬ ನಿರ್ವಹಣೆ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಮಾನಸಿಕ ಒತ್ತಡದಲ್ಲಿದ್ದನು. ಇದೇ ಸಮಯದಲ್ಲಿ ತನ್ನ ಪೂರ್ವಜರು ಸಹ ಇರಮ್ ಬಾನೊ ವಾಸಿಸುವ ಅದೇ ತುಲ್ವಾರಿ ಗ್ರಾಮದವರು ಎಂಬ ವಿಷಯ ಆತನಿಗೆ ತಿಳಿದುಬಂದಿತ್ತು.

45
ಕಿಲಾಡಿ ಪ್ಲಾನ್
Image Credit : x.com

ಕಿಲಾಡಿ ಪ್ಲಾನ್

ತನ್ನ ಕಷ್ಟಗಳನ್ನು ಇರಮ್ ಬಾನೊ ಜೊತೆ ಹಂಚಿಕೊಂಡಾಗ, ಆಕೆ ಜೀಶನ್‌ಗೆ ಗಡಿ ದಾಟಿ ಭಾರತಕ್ಕೆ ಬರುವಂತೆ ಸಲಹೆ ನೀಡಿದ್ದಳು. ಗಡಿ ದಾಟಿ ನೇರವಾಗಿ ಭಾರತೀಯ ಸೇನೆಗೆ ಶರಣಾಗುವುದು, ನಂತರ ಅಕ್ರಮ ಪ್ರವೇಶಕ್ಕಾಗಿ ನೀಡಲಾಗುವ ಕಾನೂನುಬದ್ಧ ಶಿಕ್ಷೆಯನ್ನು ಅನುಭವಿಸುವುದು ಮತ್ತು ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಪೂರ್ವಜರ ಆಸ್ತಿಯನ್ನು ಕಾನೂನುಬದ್ಧವಾಗಿ ಪಡೆದು ಇಲ್ಲೇ ನೆಲೆಸುವುದು ಇವರಿಬ್ಬರ ಯೋಜನೆಯಾಗಿತ್ತು.

55
ಭಾರತೀಯ ಸೇನೆಯ ಮಾನವೀಯ ನಡೆ
Image Credit : x.com

ಭಾರತೀಯ ಸೇನೆಯ ಮಾನವೀಯ ನಡೆ

ಮೇ ತಿಂಗಳಲ್ಲಿ ಗಡಿ ದಾಟುವಾಗ ಜೀಶನ್ ಸಿಕ್ಕಿಬಿದ್ದಿದ್ದ. ವಿಚಾರಣೆಯ ವೇಳೆ ಜೀಶನ್ ನೀಡಿದ ಮಾಹಿತಿಯನ್ನು ದೃಢೀಕರಿಸಲು ಸೇನೆಯು ಇರಮ್ ಬಾನೊಳನ್ನು ವಿಚಾರಣೆಗೆ ಒಳಪಡಿಸಿತ್ತು. ಆಕೆ ಜೀಶನ್ ಹೇಳಿದ್ದೆಲ್ಲವೂ ನಿಜವೆಂದು ಒಪ್ಪಿಕೊಂಡು, ಆತನನ್ನು ಇಲ್ಲೇ ಇರಲು ಬಿಡಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದ್ದಳು. ಯಾವುದೇ ಬಾಹ್ಯ ಸಂಚು ಅಥವಾ ದೇಶವಿರೋಧಿ ಅಂಶಗಳಿಲ್ಲ ಎಂಬುದು ಖಚಿತವಾದ ನಂತರ ಭಾರತೀಯ ಸೇನೆಯು ಆತನನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿತು.

ಶನಿವಾರ 'ಕಮನ್ ಅಮನ್ ಸೇತು' ಮೂಲಕ ಜೀಶನ್‌ನನ್ನು ಪಾಕ್ ಸೇನೆಗೆ ಒಪ್ಪಿಸಲಾಯಿತು. ಭಾರತದಲ್ಲಿದ್ದ ಸಮಯದಲ್ಲಿ ಜೀಶನ್‌ನನ್ನು ಅತ್ಯಂತ ಗೌರವ ಮತ್ತು ಕಾಳಜಿಯಿಂದ ನಡೆಸಿಕೊಳ್ಳಲಾಗಿದೆ. ಇದು ಭಾರತೀಯ ಸೇನೆಯ ವೃತ್ತಿಪರತೆ ಮತ್ತು ಮಾನವೀಯ ಮೌಲ್ಯಗಳಿಗೆ ಸಾಕ್ಷಿಯಾಗಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GM
Ganesh Mabla Gowda
ಪ್ರೀತಿ
ಪಾಕಿಸ್ತಾನ
ಗಡಿ ವಿವಾದ

Latest Videos
Recommended Stories
Recommended image1
ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ವಿಷ ಬೀಜ: ಪ್ರತ್ಯೇಕತಾವಾದಿ, ಭಯೋತ್ಪಾದಕರ ವೈಭವೀಕರಣ, ಶಿಕ್ಷಣ ಇಲಾಖೆ 8 ಜನ ಸಿಬ್ಬಂದಿ ವಜಾ
Recommended image2
ಡಾಂಬರ್ ಹಾಕಿದ ಹೊಸ ರಸ್ತೆ ನಾಲ್ಕೇ ದಿನದಲ್ಲಿ ಗುಂಡಿಮಯ! ಒಂದೇ ಮಳೆಗೆ ಬಯಲಾಯ್ತು ಕಾಮಗಾರಿ ಅಸಲಿ ಕಥೆ!
Recommended image3
ಕೊಲೆ ಕೇಸ್ ತನಿಖೆ ನಡೆಯುತ್ತಿರುವಾಗಲೇ ಕೇತನ್ ಅಗರ್ವಾಲ್ ಕುಟುಂಬದಲ್ಲಿ ಮತ್ತೊಂದು ಸಾವು
Related Stories
Recommended image1
ಬೇಲಿಯೇ ಎದ್ದು ಹೊಲ ಮೇಯ್ದ ಕತೆ; ಪೋಕ್ಸೋ ಕೇಸ್‌ನಲ್ಲಿ ಹೊನ್ನಾವರ ಮಂಕಿ ಠಾಣೆ PSI ಅರೆಸ್ಟ್
Recommended image2
ಅಯ್ಯರ್, ಗಂಭೀರ್ ಗೆ ಮತ್ತೊಂದು ಮುಖಭಂಗ! ಟೀಂ ಇಂಡಿಯಾ ಸೋಲಿಗೆ ಇಲ್ಲಿದೆ 5 ಕಾರಣಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved