ಒಂದು ತೊಗೊಂಡ್ರೆ ಮತ್ತೊಂದು ಫ್ರೀ ಬಾಟೆಲ್; ಹೊಸ ಅಬಕಾರಿ ನೀತಿಯಲ್ಲಿ ಮಹತ್ವದ ಬದಲಾವಣೆ?
Rekha Gupta Excise Policy : ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ನೀತಿಯು ಮದ್ಯದಂಗಡಿಗಳನ್ನು ಆಧುನೀಕರಿಸುವುದು, ಮಾಲ್‌ಗಳಲ್ಲಿ ಮಾರಾಟಕ್ಕೆ ಅವಕಾಶ ನೀಡುವುದು ಮತ್ತು ಪ್ರೀಮಿಯಂ ಬ್ರ್ಯಾಂಡ್‌ಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.

ರಾಜಧಾನಿಯಲ್ಲಿ ಹೊಸ ಅಬಕಾರಿ ನೀತಿ
ರಾಜಧಾನಿ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಕರಡು ಮಾಡಲು ಮುಂದಾಗಿದೆ. ಈ ನೀತಿಯಲ್ಲಿ ಮದ್ಯ ಮಾರಾಟಕ್ಕೆ ಸಂಬಂಧಿಸಿದ ಹಲವು ನೀತಿಗಳು ಬದಲಾಗಲಿವೆ ಎಂದು ಅಂದಾಜಿಸಲಾಗಿದೆ. Economics Times ವರದಿ ಪ್ರಕಾರ, ಗ್ರಾಹಕರಿಗೆ ಉತ್ತಮ ಖರೀದಿಯ ಅನುಭವ ನೀಡುವ ಉದ್ದೇಶದಿಂದ ಮದ್ಯವನ್ನು ವ್ಯಾಪಾರ ಮಳಿಗೆ ಅಥವಾ ಮಾಲ್ ಅಥವಾ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಮಾರಾಟಕ್ಕೆ ಅವಕಾಶ ನೀಡುವ ಕುರಿತು ಸಾಧ್ಯತೆಗಳಿವೆ.
ಸರ್ಕಾರದ 700 ಮದ್ಯದಂಗಡಿಗಳು
ಸದ್ಯ ದೆಹಲಿಯಲ್ಲಿ DSIIDC, DTTDC, DSCSC ಮತ್ತು ದಿಲ್ಲಿ ಕಂಜ್ಯೂಮರ್ ಕೊಪರೇಟಿವ್ ಹೋಲ್‌ಸೇಲ್ ಸ್ಟೋರ್ ಈ ನಾಲ್ಕು ಸರ್ಕಾರಿ ಸಂಸ್ಥೆಗಳು ಮದ್ಯ ಮಾರಾಟವನ್ನು ನಿರ್ವಹಣೆ ಮಾಡುತ್ತವೆ. ಸದ್ಯ ದೆಹಲಿಯಲ್ಲಿ ಸರ್ಕಾರದ 700 ಮದ್ಯದಂಗಡಿಗಳಿವೆ. ಹೊಸ ನೀತಿಯ ಪ್ರಕಾರ, ಈ ಮದ್ಯದಂಗಡಿಗಳನ್ನು ಮತ್ತಷ್ಟು ಆಧುನಿಕ ಮತ್ತು ಗ್ರಾಹಕರ ಸ್ನೇಹಿಯನ್ನಾಗಿ ಮಾಡಲು ಸರ್ಕಾರ ಯೋಜಿಸಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಶಾಲೆ, ಧಾರ್ಮಿಕ ಸ್ಥಳ ಮತ್ತು ವಸತಿ ಪ್ರದೇಶಗಳಿಂದ ದೂರ
ಹೊಸ ಅಬಕಾರಿ ನೀತಿ ಪ್ರಕಾರ. ಮದ್ಯದಂಗಡಿಗಳು ಶಾಲೆ, ಧಾರ್ಮಿಕ ಸ್ಥಳ ಮತ್ತು ವಸತಿ ಪ್ರದೇಶಗಳಿಂದ ದೂರವಿರಬೇಕು ಎಂಬ ನಿಯಮವನ್ನು ಪ್ರಸ್ತಾಪಿಸಲಾಗಿದೆ. ವಾಣಿಜ್ಯ ಮತ್ತು ಸಾರ್ವಜನಿಕ ಹಿತಾಸಕ್ತಿ ನಡುವೆ ಸಮನ್ವಯತೆ ಕಾಯ್ದುಕೊಂಡು ಮದ್ಯದಂಗಡಿಗಳನ್ನು ನಿರ್ವಹಣೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಸಿಎಂ ರೇಖಾ ಗುಪ್ತಾ ನೇತೃತ್ವದ ಕಮೀಟಿ ಹೊಸ ಅಬಕಾರಿ ನೀತಿಯ ಕರಡುಸ ಸಿದ್ಧಪಡಿಸಿದೆ.
ಮಾರಾಟಗಾರರ ಸ್ಥಿರ ಲಾಭ
ಸಿಎಂ ರೇಖಾ ಗುಪ್ತಾ ನೇತೃತ್ವದ ಸಮಿತಿ ದೇಶದ ವಿವಿಧ ರಾಜ್ಯಗಳಲ್ಲಿರುವ ಅಬಕಾರಿ ನೀತಿಯನ್ನು ಅಧ್ಯಯನ ನಡೆಸಿದ್ದು, ಸಾಧಕ-ಬಾಧಕಗಳ ಕುರಿತು ಚರ್ಚಿಸಿದೆ. ಹೊಸ ನೀತಿಯು ಮದ್ಯ ಮಾರಾಟಗಾರ ಸ್ಥಿರ ಲಾಭದ ಅಂತರ ತೆಗೆದು ಹಾಕಲು ಪ್ರಸ್ತಾಪಿಸಿದೆ ಎಂದು ವರದಿಯಾಗಿದೆ. ಸದ್ಯ ಮದ್ಯ ಮಾರಾಟಗಾರರು ಸ್ಥಿರ ಲಾಭದ ಅಂತರ ಪಡೆದುಕೊಳ್ಳುತ್ತಾರೆ.
ಗ್ರಾಹಕರಿಗೆ ಹೆಚ್ಚಿನ ಆಯ್ಕೆ ನೀಡುವ ಗುರಿ
ಉದಾಹರಣೆಗೆ ಭಾರತೀಯ ಬ್ರ್ಯಾಂಡ್‌ಗಳಿಗೆ (IMFL) ₹50 ಮತ್ತು ವಿದೇಶಿ ಬ್ರ್ಯಾಂಡ್‌ಗಳಿಗೆ ₹100 ಲಾಭ ಪಡೆಯುತ್ತಾರೆ. ಹಾಗಾಗಿ ವ್ಯಾಪಾರಿಗಳಿಗೆ ಉನ್ನತ-ಮಟ್ಟದ ಅಥವಾ ಪ್ರೀಮಿಯಂ ಬ್ರ್ಯಾಂಡ್ ಸ್ಟಾಕ್ ಮಾಡೋದರಲ್ಲಿ ಆಸಕ್ತಿ ತೋರಿಸುವುದಿಲ್ಲ. ಹೊಸ ನೀತಿ ಬ್ರ್ಯಾಂಡ್ ಮತ್ತು ಬೆಲೆಯ ಆಧಾರದ ಮೇಲೆ ಲಾಭದ ಪ್ರಮಾಣ ಬದಲಿಸುತ್ತದೆ. ಇದರಿಂದಾಗಿ ಪ್ರೀಮಿಯಂ ಮದ್ಯದ ಸ್ಟಾಕ್ ಅಧಿಕಗೊಂಡು, ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳು ದೊರೆಯಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಇದನ್ನೂ ಓದಿ: ಬೆಂಗಳೂರು Ola, Uber, Rapido ಕ್ಯಾಬ್ ಬುಕ್ಕಿಂಗ್ ಬಿಲ್‌ಗೂ, ಪೇಮೆಂಟ್ ಬಿಲ್‌ಗೂ ವ್ಯತ್ಯಾಸ, ಯಾಕೆ?
ಆಮ್ ಆದ್ಮಿ ಸರ್ಕಾರದ ಅನುಮೋದನೆ
2011-22ರಲ್ಲಿ, ಆಮ್ ಆದ್ಮಿ ಸರ್ಕಾರ ಮದ್ಯ ಮಾರಾಟ ಹೆಚ್ಚಳ ಮಾಡಲ ಸರ್ಕಾರಿ ಮಳಿಗೆಗಳನ್ನು ಖಾಸಗಿಗೆ ಬದಲಾಯಿಸಲು ಅನುಮೋದನೆ ನೀಡಿತು. ಈ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ನಂತರ ರದ್ದುಗೊಳಿಸಲಾಯ್ತು. ಸೆಪ್ಟೆಂಬರ್ 2022 ರಲ್ಲಿ ಸರ್ಕಾರಿ ಮದ್ಯದಂಗಡಿಗಳು ಮತ್ತೆ ಆರಂಭವಾಗಿದ್ದು, ಮಾರ್ಚ್ 31, 2026 ರವರೆಗೆ ಮುಂದುವರಿಯುತ್ತದೆ.
ಇದನ್ನೂ ಓದಿ: ಟ್ಯಾಕ್ಸಿಯಲ್ಲಿನ ಕ್ಯೂಆರ್ ಕೋಡ್ ಪಾವತಿಗಲ್ಲ, ಸ್ಕ್ಯಾನ್ ಮಾಡಿದ ಯುವತಿಗೆ ತೆರೆದುಕೊಂಡ ಅಚ್ಚರಿ ಲೋಕ
ಬೈ ಒನ್, ಗೆಟ್ ಒನ್ ಫ್ರೀ?
ದೆಹಲಿಯ ಬಿಜೆಪಿ ಸರ್ಕಾರ ಮದ್ಯ ಮಾರಾಟವನ್ನು ಪಾರದರ್ಶಕ, ಜವಾಬ್ದಾರಿಯುತ ಮತ್ತು ಗ್ರಾಹಕ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಸಿಎಂ ರೇಖಾ ಗುಪ್ತಾ ಕಮಿಟಿಯ ಪ್ರಸ್ತಾವನೆಯನ್ನು ದೆಹಲಿ ಕ್ಯಾಬಿನೆಟ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಅನುಮೋದನೆಗೆ ಕಳುಹಿಸಲಾಗುತ್ತದೆ. ಈ ಪ್ರಸ್ತಾವನೆಯು ಅತ್ಯಾಧುನಿಕ ಮಾರಾಟ ವ್ಯವಸ್ಥೆ ಸೇರಿದಂತೆ ಹಲವು ಪ್ರಸ್ತಾವನೆಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಈ ನೀತಿಯು ಒಂದು ಬಾಟೆಲ್ ಖರೀದಿಸಿದ್ರೆ ಮತ್ತೊಂದು ಉಚಿತವಾಗಿ ನೀಡುವ ಆಫರ್ ಒಳಗೊಂಡಿದೆಯಾ ಎಂದು ಮದ್ಯಪ್ರಿಯರು ಕೇಳುತ್ತಿದ್ದಾರೆ.
ಇದನ್ನೂ ಓದಿ: ಕೇರಳ ಕಡುಬಡತನ ಮುಕ್ತ ರಾಜ್ಯ -ಇನ್ನೆಂದೂ ಕಡುಬಡತನ ಬರದಂತೆ ಮಾಡ್ತೇವೆ : ಸಿಎಂ