MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಪ್ರಧಾನಿ ಮೋದಿ ಬೋಟ್ ಹತ್ತುತ್ತಾರೆ ಎಂದು ಗೊತ್ತಿರಲಿಲ್ಲ,ರೋಚಕ ಘಟನೆ ಬಿಚ್ಚಿಟ್ಟ ಮೊಹಮ್ಮದ್ ಇಫ್ತಿಕರ್

ಪ್ರಧಾನಿ ಮೋದಿ ಬೋಟ್ ಹತ್ತುತ್ತಾರೆ ಎಂದು ಗೊತ್ತಿರಲಿಲ್ಲ,ರೋಚಕ ಘಟನೆ ಬಿಚ್ಚಿಟ್ಟ ಮೊಹಮ್ಮದ್ ಇಫ್ತಿಕರ್

ಪ್ರಧಾನಿ ಮೋದಿ ಬೋಟ್ ಹತ್ತುತ್ತಾರೆ ಎಂದು ಗೊತ್ತಿರಲಿಲ್ಲ,ರೋಚಕ ಘಟನೆ ಬಿಚ್ಚಿಟ್ಟ ಮೊಹಮ್ಮದ್ ಇಫ್ತಿಕರ್ ಅಹಮ್ಮದ್ ಹೇಳಿದ್ದಾರೆ. ಬೋಟ್‌ಮ್ಯಾನ್ ಜೊತೆ ಮೋದಿ ಮಾತುಕತೆ ಸೇರಿದಂತೆ ಕೆಲ ರೋಚಕ ಘಟನೆ ಬಯಲಾಗಿದೆ. 

2 Min read
Author : Chethan Kumar
Published : Apr 24 2026, 03:19 PM IST
Share this Photo Gallery
  • FB
  • TW
  • Linkdin
  • Whatsapp
16
ಹೂಗ್ಲಿ ನದೆಯಲ್ಲಿ ಪ್ರಧಾನಿ ಮೋದಿ ಬೋಟಿಂಗ್
Image Credit : PM Modi

ಹೂಗ್ಲಿ ನದೆಯಲ್ಲಿ ಪ್ರಧಾನಿ ಮೋದಿ ಬೋಟಿಂಗ್

ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಇಂದು ಬೆಳಗ್ಗೆ ಮೋದಿ ಹೂಗ್ಲಿ ನದಿಯಲ್ಲಿ ಬೋಟಿಂಗ್ ಮಾಡಿದ್ದಾರೆ. ಬೋಟಿಂಗ್ ವೇಳೆ ಕ್ಯಾಮೆರಾ ಮೂಲಕ ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಕೋಲ್ಕತ್ತಾದ ಹೂಗ್ಲಿ ನದಿಯಲ್ಲಿ ತಮ್ಮ ದಿನವನ್ನು ಆರಂಭಿಸಿದ ಪ್ರಧಾನಿ, ಗಂಗಾ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯನ್ನು ಹೂಗ್ಲಿ ನದೆಯಲ್ಲಿ ಕರೆದುಕೊಂಡ ಹೋದ ಬೋಟ್‌ಮ್ಯಾನ್ ಕೆಲ ರೋಚಕ ಘಟನೆ ಬಿಚ್ಚಿಟ್ಟಿದ್ದಾರೆ.

26
ಏಳು ಬೋಟ್ ಬೇಕು ಎಂದ ಸಿಬ್ಬಂದಿಗಳು
Image Credit : X

ಏಳು ಬೋಟ್ ಬೇಕು ಎಂದ ಸಿಬ್ಬಂದಿಗಳು

ಹೂಗ್ಲಿ ಘಾಟ್ ಏರಿಯಾದಲ್ಲಿ ಕೆಲ ಸಿಬ್ಬಂದಿಗಳು ಆಗಮಿಸಿ ಬೋಟ್ ಬೇಕು ಎಂದು ಕೇಳಿದ್ದರು. 7 ಬೋಟ್ ಬೇಕು ಎಂದು ಕೇಳಿದ್ದರು. ನಾನು ಸರಿ ಎಂದಿದ್ದೆ ಎಂದು ಬೋಟ್ ಮಾಲೀಕ ಮೊಹಮ್ಮದ್ ಇಫ್ತಿಕರ್ ಅಹಮ್ಮದ್ ಹೇಳಿದ್ದಾರೆ. ತಕ್ಷಣವೇ ಬೋಟ್ ವ್ಯವಸ್ಥೆ ಮಾಡಲು ಹೇಳಿದ್ದರು. ಆಗಲೂ ಯಾವ ಸುಳಿವು ನನಗೆ ಇರಲಿಲ್ಲ. ಸರಿ ಎಂದು ತಕ್ಷಣಕ್ಕೆ ಇತರರಿಗೂ ಮಾಹಿತಿ ನೀಡಿ ನನ್ನ ಬೋಟ್ ಸೇರಿದಂತೆ ಇತರ ಬೋಟ್ ವ್ಯವಸ್ಥೆ ಮಾಡಿದೆ.

Related Articles

Related image1
Modi in Bengal: ಟಿಎಂಸಿಯ 'ಮಹಾ ಜಂಗಲ್ ರಾಜ್'ಗೆ ಮಹಿಳೆಯರೇ ಸವಾಲು: ಮಮತಾ, ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು
Related image2
ಬಂಗಾಳದಲ್ಲಿ ಶೇ.92% ಮತದಾನ ಸ್ವತಂತ್ರ ಭಾರತದಲ್ಲೇ ಮೊದಲು, ಮೋದಿ ಎಚ್ಚರಿಕೆಗೆ ದೀದಿ ತಿರುಗೇಟು
36
ಪ್ರಧಾನಿ ಮೋದಿ ಬರುತ್ತಾರೆ ಎಂದು ಗೊತ್ತಿರಲಲ್ಲ
Image Credit : Asianet News

ಪ್ರಧಾನಿ ಮೋದಿ ಬರುತ್ತಾರೆ ಎಂದು ಗೊತ್ತಿರಲಲ್ಲ

ಬೋಟ್ ರೆಡಿ ಮಾಡಿದ ಮರು ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಎಲ್ಲರಿಗೂ ಅಚ್ಚರಿಯಾಗಿತ್ತು. ಪ್ರಧಾನಿ ನರೇಂದ್ರ ಈ ಸಣ್ಣ ಬೋಟ್ ಹತ್ತುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಈ ಕುರಿತು ಯಾವುದೇ ಸುಳಿವು ಕೂಡ ನನಗೆ ಇರಲಿಲ್ಲ ಎಂದು ಇಫ್ತಿಕರ್ ಹೇಳಿದ್ದಾರೆ.

46
ಮೋದಿ ಸಂದೇಶ ನೆನಪಿಸಿದ ಇಫ್ತಿಕರ್
Image Credit : Asianet News

ಮೋದಿ ಸಂದೇಶ ನೆನಪಿಸಿದ ಇಫ್ತಿಕರ್

ಪ್ರಧಾನಿ ಮೋದಿ ಬೋಟ್ ಹತ್ತಿದ ಬಳಿಕ ಮಾತುಕತೆ ಆರಂಭಿಸಿದ್ದಾರೆ. ಪ್ರಧಾನಿ ಬಳಿ ಏನು ಮಾತನಾಡಲಿ, ಹೇಗೆ ಮಾತನಾಡಲಿ ಅನ್ನೋ ಆತಂಕವೇ ನನ್ನಲ್ಲಿ ತುಂಬಿತ್ತು. ಅಷ್ಟರಲ್ಲೇ ಮೋದಿಯೇ ಮಾತನಾಡಲು ಆರಂಭಿಸಿದ್ದರು. ಇದರ ನಡುವೆ ನಾವೆಲ್ಲಾ ಜೊತೆಯಾಗಿ ಸಹಬಾಳ್ವೆಯಿಂದ ಬದುಕುಬೇಕು ಎಂದು ಮೋದಿ ಹೇಳಿದ್ದಾರೆ ಎಂದು ಮೊಹಮ್ಮದ್ ಇಫ್ತಿಕರ್ ಹೇಳಿದ್ದಾರೆ

56
1,000 ರೂಪಾಯಿ ನೀಡಿದ ಮೋದಿ
Image Credit : X

1,000 ರೂಪಾಯಿ ನೀಡಿದ ಮೋದಿ

ಪ್ರಧಾನಿ ಮೋದಿ ಒಂದು ಬೋಟಿನಲ್ಲಿದ್ದರೆ, ಭದ್ರತಾ ಸಿಬ್ಬಂದಿಗಳು ಇನ್ನುಳಿದ ಬೋಟ್‌ನಲ್ಲಿದ್ದರು. ಮತ್ತೊಬ್ಬ ಬೋಟ್ ಮಾಲೀಕ ಗೌರಂಗ್ ಬಿಸ್ವಾಸ್ ಈ ಕುರಿತು ಮಾತನಾಡಿದ್ದಾರೆ. ಮೋದಿ ಸುಮಾರು 1 ಗಂಟೆ ಹೂಗ್ಲಿ ನದಿಯಲ್ಲಿ ಬೋಟಿಂಗ್ ಮಾಡಿದ್ದಾರೆ. ಇಳಿದು ಬಂದ ಬಳಿಕ ಮೋದಿ ತಬ್ಬಿಕೊಂಡರು. ಬಳಿಕ 1000 ರೂಪಾಯಿ ನೀಡಿದರು ಎಂದು ಬಿಸ್ವಾಸ್ ಹೇಳಿದ್ದಾರೆ.

66
ಸಂಭ್ರಮ ಹಂಚಿಕೊಂಡ ಮೋದಿ
Image Credit : X

ಸಂಭ್ರಮ ಹಂಚಿಕೊಂಡ ಮೋದಿ

ಪವಿತ್ರ ಗಂಗಾ ನದಿಯ ಮಹತ್ವದ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೋದಿ, "ಗಂಗಾ ನದಿ ಬಂಗಾಳದ ಆತ್ಮದ ಮೂಲಕ ಹರಿಯುತ್ತದೆ" ಎಂದು ಹೇಳಿದ್ದಾರೆ. ಚುನಾವಣೆಯ ಈ ಸಮಯದಲ್ಲಿ ಪಶ್ಚಿಮ ಬಂಗಾಳ ರಾಜ್ಯವನ್ನು ಅಭಿವೃದ್ಧಿಪಡಿಸುವ ಬದ್ಧತೆಯನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ. ಹೂಗ್ಲಿ ನದಿಯಲ್ಲಿ ಬೋಟ್‌ನಲ್ಲಿ ಸಾಗುತ್ತಿರುವ ತಮ್ಮ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಸಂಭ್ರಮ ಹಂಚಿಕೊಂಡ ಮೋದಿ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ನರೇಂದ್ರ ಮೋದಿ
ಭಾರತ ಸುದ್ದಿ
ಪಶ್ಚಿಮ ಬಂಗಾಳ

Latest Videos
Recommended Stories
Recommended image1
ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮಹೀಂದ್ರ ಸ್ಕಾರ್ಪಿಯೋ ಕಾರಿನಿಂದ ಮದುವೆ ಕ್ಯಾನ್ಸಲ್
Recommended image2
ನಿನ್ನ ನೋಡಿದ್ರೆ ಮೂಡ್​ ಬರಲ್ಲ, ಗರ್ಲ್​ಫ್ರೆಂಡ್ಸೇ ಬೆಸ್ಟ್​ ಎಂದ ಶಹಜಹಾನ್​, ನೇಣಿಗೆ ಕೊರಳೊಡ್ಡಿದ ಭಾವಿ ಪತ್ನಿ
Recommended image3
ಉಳ್ಳವರು ರಾಮೇಶ್ವರಂ ಕೆಫೆಗೆ ಹೋಗುವವರಯ್ಯ, ಈ ಬಿಲ್​ ನೋಡಿದ್ರೆ ನಿಮಗೂ ತಲೆ ತಿರುಗುವುದಯ್ಯಾ!
Related Stories
Recommended image1
Modi in Bengal: ಟಿಎಂಸಿಯ 'ಮಹಾ ಜಂಗಲ್ ರಾಜ್'ಗೆ ಮಹಿಳೆಯರೇ ಸವಾಲು: ಮಮತಾ, ಕಾಂಗ್ರೆಸ್ ವಿರುದ್ಧ ಮೋದಿ ಗುಡುಗು
Recommended image2
ಬಂಗಾಳದಲ್ಲಿ ಶೇ.92% ಮತದಾನ ಸ್ವತಂತ್ರ ಭಾರತದಲ್ಲೇ ಮೊದಲು, ಮೋದಿ ಎಚ್ಚರಿಕೆಗೆ ದೀದಿ ತಿರುಗೇಟು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved