ದೇವಸ್ಥಾನದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶಾಸಕಿ ಮೈಥಿಲಿ! ಹೀಗಾಗಿದ್ದು ಇದೇ ಮೊದಲು ಎಂದ ಗಾಯಕಿ
ಬಿಹಾರ ಶಾಸಕಿ, ಗಾಯಕಿ ಮೈಥಿಲಿ ಠಾಕೂರ್ ಅವರ ಭಾವುಕ ವಿಡಿಯೋವೊಂದು ವೈರಲ್ ಆಗಿದೆ. ದೇವಸ್ಥಾನವೊಂದರಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವುದನ್ನು ಕಾಣಬಹುದು. 'ನನ್ನ ಜೀವನದಲ್ಲಿ ಹೀಗಾಗಿದ್ದು ಇದೇ ಮೊದಲು, ನನ್ನನ್ನು ನಾನೇ ನಿಯಂತ್ರಿಸಿಕೊಳ್ಳಲು ಆಗಲಿಲ್ಲ' ಎಂದು ಮೈಥಿಲಿ ಠಾಕೂರ್ ಹೇಳದ್ದಾರೆ.

ಶಾಸಕಿ ಮೈಥಿಲಿ ಠಾಕೂರ್
ಗೋವಿಂದ್‌ದೇವ್‌ಜಿ ದೇವಸ್ಥಾನ
ನಿಯಂತ್ರಿಸಿಕೊಳ್ಳಲು ಆಗಲಿಲ್ಲ
ಸಂಗೀತ ಕಾರ್ಯಕ್ರಮ
ಮೈಥಿಲಿ ಠಾಕೂರ್ ಅವರು ಜೈಪುರದಲ್ಲಿ ಆಯೋಜಿಸಲಾಗಿದ್ದ 'ಯೂನಿಕ್ ರಂಗ್ ರಾಜಸ್ಥಾನ್ ರಂಗ್ ರಥ ಯಾತ್ರೆ' ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದರು. ಭಾನುವಾರ ಅವರ ಸಂಗೀತ ಕಾರ್ಯಕ್ರಮವೂ ಇತ್ತು. ಈ ವೇಳೆ ಅವರ ಸಹೋದರರಾದ ರಿಷಭ್ ಮತ್ತು ಅಯಾಚಿ ಕೂಡ ಜೊತೆಗಿದ್ದರು.
ಇದನ್ನೂ ಓದಿ: ಕೊಟ್ಟೂರಿನ 'ಮಗ್ಗಿ ಅಜ್ಜಯ್ಯ'ನ ಗಣಿತದ ಚಮತ್ಕಾರ! ಇವರ ಟ್ಯಾಲೆಂಟ್ ಮುಂದೆ ಕಂಪ್ಯೂಟರ್ ಸ್ಲೋ
ಬಿಜೆಪಿ ಶಾಸಕಿ
ಮೈಥಿಲಿ ಠಾಕೂರ್ ಅವರು 25ನೇ ವಯಸ್ಸಿನಲ್ಲಿ ಶಾಸಕಿಯಾದ ಬಿಹಾರದ ಅತಿ ಕಿರಿಯ ಶಾಸಕಿ. ಅವರು ದರ್ಭಾಂಗಾದ ಅಲೈನ್‌ಗರ್‌ನಿಂದ ಬಿಜೆಪಿ ಶಾಸಕಿಯಾಗಿ ಬಿಹಾರ ವಿಧಾನಸಭೆಯ ಸದಸ್ಯರಾಗಿದ್ದಾರೆ. ಇದರೊಂದಿಗೆ ಅವರು ಪ್ರಸಿದ್ಧ ಭಜನಾ ಗಾಯಕಿಯೂ ಹೌದು. ಮೈಥಿಲಿ ಠಾಕೂರ್ ಭೋಜ್‌ಪುರಿ ಹಾಡುಗಳನ್ನು, ವಿಶೇಷವಾಗಿ ಛಠ್ ಪೂಜೆ ಗೀತೆ ಮತ್ತು ಕಜ್ರಿಗಳನ್ನು ಹಾಡುತ್ತಾರೆ.
ಇದನ್ನೂ ಓದಿ: Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

