ಶ್ರೀರಂಗಪಟ್ಟಣದ ರೈತ ಹೇಮಂತ್ ಶೇಖರ್ ತಮ್ಮ ಜೋಡಿ ಕರುಗಳಿಗೆ 'ಆರ್ಯ-ಸೂರ್ಯ' ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ಪ್ರಾಣಿಪ್ರೀತಿ ಮೆರೆದಿದ್ದಾರೆ.  ಶಾಸಕ ದರ್ಶನ್ ಪುಟ್ಟಣ್ಣಯ್ಯ ಪಾಂಡವಪುರದ ಒಣಭೂಮಿಗೆ ನೀರುಣಿಸುವ ದಶಕಗಳ ಕನಸಿನ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.

ಮಂಡ್ಯ: ಶ್ರೀರಂಗಪಟ್ಟಣದ ಗಂಜಾಂ ಗ್ರಾಮದ ಯುವ ರೈತ ತನ್ನ ರಾಸುಗಳಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ತಮ್ಮ ರಾಸುಗಳ ಮೇಲೆ ಅಭಿಮಾನ ಮೆರೆದಿದ್ದಾನೆ.

ಗ್ರಾಮದ ರೈತ ಹೇಮಂತ್ ಶೇಖರ್ ತಮ್ಮ ಎರಡು ರಾಸುಗಳಿಗೆ ಆರ್ಯ-ಸೂರ್ಯ ಎಂದು ನಾಮಕರಣ ಮಾಡಿದ್ದು, ಈ ಹಿಂದೆ ಈತ ತನ್ನೆರಡು ಹಳ್ಳಿಕಾರ್ ತಳಿಯ ಹಸುಗಳಿಗೆ ಸೀಮಂತ ಮಾಡಿ ಎಲ್ಲರ ಮನಗೆದ್ದಿದ್ದ. ಈಗ ಅದೇ ಜೋಡಿ ಹಸುಗಳ ಜೋಡಿ ಕರುಗಳಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಶಾಸ್ತ್ರ ಮುಗಿಸಿ ಮೆಚ್ಚುಗೆ ಗಳಿಸಿದ್ದಾನೆ.

ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ

ರೈತ ಹೇಮಂತ್ ಶೇಖರನ ಮನೆದೇವರಾದ ಅರವಟಿ ಕೊಪ್ಪಲು ಬಳಿಯ ಸೀಹಳ್ಳಿ ಹುಚ್ಚಮ್ಮನ ಸನ್ನಿಧಿಯಲ್ಲಿ ಸಂಬಂಧಿಕರು ಮತ್ತು ನೆಂಟರಿಸ್ಟರನ್ನು ಕರೆದು ಸಂಭ್ರಮದಿಂದ ನಾಮಕರಣ ಶಾಸ್ತ್ರ ನೆರವೇರಿಸಿ ಆ ಜೋಡಿ ಕರುಗಳಿಗೆ ಆರ್ಯ- ಸೂರ್ಯ ಎಂದು ನಾಮಕರಣ ಮಾಡಿ ಜೋಡಿ ಕರುಗಳಿಗೆ ಶಾಸ್ತ್ರೋಕ್ತವಾಗಿ ಹೆಸರಿಟ್ಟು ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾನೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ದಶಕದ ಕನಸು

ಪಾಂಡವಪುರ" ದಶಕಗಳಿಂದಲೂ ಕೇವಲ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಜಕ್ಕನಹಳ್ಳಿ ಮತ್ತು ಮಾಣಿಕ್ಯನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಈಗ ಈ ಯೋಜನೆಯಿಂದ ಕಾವೇರಿ ಮಾತೆಯ ಆಶೀರ್ವಾದ ದೊರೆಯಲಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ದಶಕದ ಕನಸು ಹಾಗೂ ಈ ಭಾಗದ ರೈತರ ಭಗೀರಥ ಪ್ರಯತ್ನಕ್ಕೆ ಕೊನೆಗೂ ಫಲ ಸಿಕ್ಕಿದೆ. ಶ್ರೀಕ್ಷೇತ್ರ ಮೇಲುಕೋಟೆ ಬೆಟ್ಟದ ತಪ್ಪಲಿನ ಗ್ರಾಮಗಳಾದ ಜಕ್ಕನಹಳ್ಳಿ ಮತ್ತು ಮಾಣಿಕ್ಯನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಒಣಭೂಮಿಗೆ ಕಾವೇರಿ ಮಾತೆ ಸಂಜೀವಿನಿಯಾಗಿ ಹರಿಯಲಿದ್ದಾಳೆ.

ಇಂದು ಕೇವಲ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿದ್ದ ಈ ಭಾಗದ 44ಕ್ಕೂ ಹೆಚ್ಚು ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ. ಸುಮಾರು 7,000 ಎಕರೆ ಕೃಷಿ ಭೂಮಿಗೆ ಶಾಶ್ವತ ನೀರಾವರಿ ಸೌಲಭ್ಯ ದೊರಕಲಿದೆ. ಕದಲಗೆರೆ, ಕಾಡೇನಹಳ್ಳಿ, ಜಕ್ಕನಹಳ್ಳಿ, ದೊಡ್ಡಿಘಟ್ಟ, ಗರುಡಾಪುರ, ಲಕ್ಷ್ಮಿಪುರ, ಚಿಟ್ಟನಹಳ್ಳಿ, ಮೇಲುಕೋಟೆ, ಗೌಡಗೆರೆ, ಬೆಳ್ಳಾಳೆ, ಮಾಣಿಕ್ಯನಹಳ್ಳಿ, ಸಿಂಗ್ರಿಗೌಡನಕೊಪ್ಪಲು ಸೇರಿದಂತೆ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೇರ ಲಾಭವಾಗಲಿದೆ.

ಇದನ್ನೂ ಓದಿ: Mandya: ಲವ್ ಮ್ಯಾರೇಜ್‌ಗೆ ಸಹಾಯ; ಯುವತಿ ತಂದೆಯಿಂದ ಸೈಜ್ ಗಲ್ಲಿನಿಂದ ಕಾಲು ಜಜ್ಜಿ ಕ್ರೌರ್ಯ

ಶಾಸಕ ದರ್ಶನ್ ಪುಟ್ಟಣ್ಣಯ್ಯ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ ವೇಳೆ ರೈತಸಂಘದ ಕಾರ್ಯಕರ್ತರು ತಾಲೂಕಿನ ಜಕ್ಕನಹಳ್ಳಿ ವೃತ್ತದಲ್ಲಿ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಅಭಿನಂದಿಸಿದರು. ನಂತರ ಬೈಕ್ ರ್‍ಯಾಲಿ ಮೂಲಕ ಶಾಸಕರನ್ನು ಹೊಸಕೆರೆ ಬಳಿ ಏತ ನೀರಾವರಿ ಯೋಜನೆ ಭೂಮಿಪೂಜೆ ಕಾರ್ಯಕ್ರಮಕ್ಕೆ ಕರೆ ತಂದರು.

ಇದನ್ನೂ ಓದಿ: ಮಂಡ್ಯ ಜಿಲ್ಲೆಯ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಖಜಾನೆ ರಹಸ್ಯ: ₹53 ಲಕ್ಷ ವಾಪಸ್ ಬಂದ ಕಥೆ