- Home
- News
- India News
- ಬೆಂಗಳೂರಿನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್‌ಗೆ ಕಿರು*ಕುಳ: ಹರಿಯಾಣದಿಂದ ಬಂದಿದ್ದ 'ಸೈಕೋ' ಸ್ಟಾಕರ್ ಬಂಧನ!
ಬೆಂಗಳೂರಿನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್‌ಗೆ ಕಿರು*ಕುಳ: ಹರಿಯಾಣದಿಂದ ಬಂದಿದ್ದ 'ಸೈಕೋ' ಸ್ಟಾಕರ್ ಬಂಧನ!
ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್ ಯುವತಿಯೊಬ್ಬರಿಗೆ ಹರಿಯಾಣ ಮೂಲದ ಸುಧೀರ್ ನಿರಂತರ ಕಿರು*ಕುಳ ನೀಡಿದ್ದಾನೆ. ಯುವತಿ ಬೆಂಗಳೂರಿನಲ್ಲಿದ್ದಾಗ ಇನ್‌ಸ್ಟಾಗ್ರಾಮ್ ಲೊಕೇಶನ್ ಆಧರಿಸಿ ಹರಿಯಾಣದಿಂದ ಬಂದು ಯುವತಿ ಹಿಂಬಾಲಿಸುತ್ತಿದ್ದನು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಫಿಟ್‌ನೆಸ್ ಇನ್ಲ್ಯೂಯೆನ್ಸರ್‌ಗೆ ಕಿರು*ಕುಳ
ಬೆಂಗಳೂರು (ಜ.21): ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್ ಇನ್ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದ ಯುವತಿಯೊಬ್ಬರಿಗೆ ನಿರಂತರ ಕಿರು*ಕುಳ ನೀಡುತ್ತಿದ್ದ ಆರೋಪಿಯನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಮೂಲದ ಸುಧೀರ್ ಬಂಧಿತ ಆರೋಪಿಯಾಗಿದ್ದು, ಯುವತಿಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಬೆನ್ನಟ್ಟುತ್ತಿದ್ದ ಎನ್ನಲಾಗಿದೆ.
ಇನ್‌ಸ್ಟಾಗ್ರಾಮ್‌ನಿಂದ ಬೆಂಗಳೂರಿನವರೆಗೆ ಬೆನ್ನತ್ತಿದ್ದ!
ಬಂಧಿತ ಆರೋಪಿ ಸುಧೀರ್ ಮತ್ತು ಸಂತ್ರಸ್ತ ಯುವತಿ ಇಬ್ಬರೂ ಮೂಲತಃ ಹರಿಯಾಣದವರು. ಇನ್‌ಸ್ಟಾಗ್ರಾಮ್‌ನಲ್ಲಿ ಯುವತಿಯ ಫೋಟೋ ಮತ್ತು ವಿಡಿಯೋಗಳನ್ನು ನೋಡಿ ಆಕರ್ಷಿತನಾಗಿದ್ದ ಸುಧೀರ್, ಆಕೆಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿದ್ದ.
ಯುವತಿ ಆತನ ಕಿರುಕುಳ ತಾಳಲಾರದೆ ಆತನ ಅಕೌಂಟ್ ಅನ್ನು ಬ್ಲಾಕ್ ಮಾಡಿದ್ದರು. ಆದರೆ, ಆರೋಪಿ ಸುಧೀರ್ ಮಾತ್ರ ಸುಮ್ಮನಾಗದೆ ಬೇರೆ ಬೇರೆ ಹೆಸರಿನಲ್ಲಿ ನಕಲಿ ಅಕೌಂಟ್‌ಗಳನ್ನು ಸೃಷ್ಟಿಸಿ ಆಕೆಗೆ ಮೆಸೇಜ್ ಮಾಡುತ್ತಿದ್ದ.
ಇನ್‌ಸ್ಟಾಗ್ರಾಮ್ ಮಾಹಿತಿ ಆಧರಿಸಿ ಬೆನ್ನತ್ತಿದ್ದ ಯುವಕ
ಯುವತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಾಗ, ಇನ್‌ಸ್ಟಾಗ್ರಾಮ್‌ನಲ್ಲಿ ಆಕೆ ಹಂಚಿಕೊಂಡಿದ್ದ ಸ್ಥಳದ ಮಾಹಿತಿಯನ್ನು (Location) ಆಧರಿಸಿ ಆರೋಪಿ ಕೂಡ ಬೆಂಗಳೂರಿಗೆ ಬಂದಿಳಿದಿದ್ದ. ಸಂತ್ರಸ್ತೆಯ ಬೆನ್ನತ್ತಿ ಆಕೆಗೆ ಮಾನಸಿಕ ಕಿರು*ಕುಳ ನೀಡಲು ಆರಂಭಿಸಿದ್ದ ಎನ್ನಲಾಗಿದೆ.
ಡಿಸಿಪಿ ಲೋಕೇಶ್ ಹೇಳಿಕೆ
ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಅವರು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದ ಹಾಗೂ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿ ಸುಧೀರ್‌ನನ್ನು ಬಂಧಿಸಲಾಗಿದೆ.
ಲೊಕೇಶನ್ ಹಂಚಿಕೊಳ್ಳುವ ಮುನ್ನ ಎಚ್ಚರ
ಆತ ಇನ್‌ಸ್ಟಾಗ್ರಾಮ್ ಮೂಲಕ ಯುವತಿಯ ಮಾಹಿತಿ ಪಡೆದು ಹರಿಯಾಣದಿಂದ ಇಲ್ಲಿಯವರೆಗೆ ಬಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಯುವತಿಯರು ತಮ್ಮ ವೈಯಕ್ತಿಕ ಮಾಹಿತಿ ಮತ್ತು ಲೊಕೇಶನ್ ಹಂಚಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ
