- Home
- News
- India News
- Independence Day 2026: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೆಹಲಿಯಲ್ಲಿ ನೋಡಲೇಬೇಕಾದ ಈ 5 ಸ್ಥಳಗಳಿವು!
Independence Day 2026: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ದೆಹಲಿಯಲ್ಲಿ ನೋಡಲೇಬೇಕಾದ ಈ 5 ಸ್ಥಳಗಳಿವು!
ದಿನದಂದು ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈ ವಿಶೇಷ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ. ದೆಹಲಿಯಲ್ಲಿ ದೇಶದ ಸ್ವಾತಂತ್ರ್ಯ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಬಗ್ಗೆ ತಿಳಿದುಕೊಳ್ಳಲು ದೆಹಲಿಯ ಈ ಸ್ಥಳಗಳು ಮುಖ್ಯವಾದವು.

ಕೆಂಪು ಕೋಟೆ
ದಿನದಂದು ದೇಶದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಈ ವಿಶೇಷ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ. ದೆಹಲಿಯಲ್ಲಿ ದೇಶದ ಸ್ವಾತಂತ್ರ್ಯ, ಅದಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಬಗ್ಗೆ ತಿಳಿದುಕೊಳ್ಳಲು ದೆಹಲಿಯ ಈ ಸ್ಥಳಗಳು ಮುಖ್ಯವಾದವು. ಪ್ರತಿ ಭಾರತೀಯನೂ ಇಲ್ಲಿಗೆ ಭೇಟಿ ನೀಡಬೇಕು. ಅವು ಯಾವ ಸ್ಥಳಗಳು, ಎಲ್ಲಿವೆ, ತಲುಪುವುದು ಹೇಗೆ ಎಂಬುದು ಇಲ್ಲಿ ವಿವರಿಸಲಾಗಿದೆ.
ಕೆಂಪು ಕೋಟೆ
ದೆಹಲಿಗೆ ಭೇಟಿ ನೀಡಿದ್ದರೆ ಮೊದಲು ಕೆಂಪು ಕೋಟೆ ನೋಡಲೇಬೇಕು. ಆಗಸ್ಟ್ 15, 1947 ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಕೆಂಪು ಕೋಟೆಯ ಲಾಹೋರಿ ದ್ವಾರದಿಂದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಅಂದಿನಿಂದ, ಈ ಸಂಪ್ರದಾಯವು ಪ್ರತಿ ವರ್ಷ ಸ್ವಾತಂತ್ರ್ಯ ದಿನದಂದು ಮುಂದುವರಿಸಿಕೊಂಡ ಬರಲಾಗಿದೆ. ಪ್ರತಿ ವರ್ಷ, ಪ್ರಧಾನ ಮಂತ್ರಿಗಳು ಇಲ್ಲಿ ಧ್ವಜಾರೋಹಣ ಮಾಡಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾರೆ.
ರಾಜ್‌ಘಾಟ್
ಮಹಾತ್ಮ ಗಾಂಧಿಯವರ ಸ್ಮಾರಕ ಇದು. ಯಮುನಾ ನದಿಯ ದಡದಲ್ಲಿರುವ ರಾಜ್‌ಘಾಟ್‌ನಲ್ಲಿದೆ. ಕಪ್ಪು ಅಮೃತಶಿಲೆಯ ವೇದಿಕೆಯ ಮೇಲೆ 'ಹೇ ರಾಮ್' ಎಂದು ಬರೆಯಲಾಗಿದೆ, ಇದು ಗಾಂಧೀಜಿಯವರ ಕೊನೆಯ ಮಾತುಗಳನ್ನು ನೆನಪಿಸುತ್ತದೆ. ಈ ಸ್ಥಳವು ಹಚ್ಚ ಹಸಿರಿನ ಮರಗಳು ಮತ್ತು ಸಸ್ಯಗಳಿಂದ ಆವೃತವಾಗಿದ್ದು. ಅತ್ಯಂತ ನಿಶ್ಯಬ್ದ, ಶಾಂತಿಯ ಸ್ಥಳವಾಗಿದೆ.
ಇಂಡಿಯಾ ಗೇಟ್
ಯುದ್ಧದಲ್ಲಿ ಹೋರಾಡಿ ವೀರಮರಣ ಅಪ್ಪಿದ ಭಾರತೀಯ ಸೈನಿಕರ ಸ್ಮರಣಾರ್ಥವಾಗಿ ನಿರ್ಮಿಸಲಾಗಿದೆ. ದೆಹಲಿಯ ಅತ್ಯಂತ ಪ್ರಸಿದ್ಧ ಹೆಗ್ಗುರುತುಗಳಲ್ಲಿ ಇಂಡಿಯಾ ಗೇಟ್ ಒಂದು. ಅಷ್ಟೇ ಅಲ್ಲದೆ ಇಂಡಿಯಾ ಗೇಟ್ 1971 ರ ಇಂಡೋ-ಪಾಕಿಸ್ತಾನಿ ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣಾರ್ಥವಾಗಿ ನಿರ್ಮಿಸಲಾದ ಸ್ಮಾರಕವಾದ ಅಮರ್ ಜವಾನ್ ಜ್ಯೋತಿಯನ್ನು ಸಹ ನೋಡಬಹುದು. ಅಮರ್ ಜವಾನ್ ಜ್ಯೋತಿಯನ್ನು ಈಗ ರಾಷ್ಟ್ರೀಯ ಯುದ್ಧ ಸ್ಮಾರಕದೊಳಗೆ ಇರಿಸಲಾಗಿದೆ.
ರಾಷ್ಟ್ರೀಯ ಯುದ್ಧ ಸ್ಮಾರಕ
ರಾಷ್ಟ್ರೀಯ ಯುದ್ಧ ಸ್ಮಾರಕವು ಇಂಡಿಯಾ ಗೇಟ್ ಸಮೀಪದಲ್ಲೇ ಇದೆ. ಇಂಡಿಯಾ ಗೇಟ್‌ನಿಂದ ಸುಮಾರು 750 ಮೀಟರ್ ಅಷ್ಟೇ ದೂರದಲ್ಲಿದೆ. ಕಾಲ್ನಡಿಗೆಯಲ್ಲೇ ತಲುಪಬಹುದು. ರಾಷ್ಟ್ರೀಯ ಯುದ್ಧ ಸ್ಮಾರಕ ವಿಶಾಲವಾಗಿದೆ. ಸುಮಾರು 40 ಎಕರೆಗಳಷ್ಟು ವಿಸ್ತೀರ್ಣವನ್ನು ಹೊಂದಿದೆ. ಇಲ್ಲಿ, ಭಾರತ-ಪಾಕಿಸ್ತಾನ, ಭಾರತ-ಚೀನಾ ಮತ್ತು ಕಾರ್ಗಿಲ್ ಯುದ್ಧಗಳು ಸೇರಿದಂತೆ ವಿವಿಧ ಯುದ್ಧಗಳಲ್ಲಿ ಹುತಾತ್ಮರಾದ 25,942 ಸೈನಿಕರ ಹೆಸರುಗಳನ್ನು 16 ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ದಿನದಂದು ನೀವು ನೋಡಲೇಬೇಕಾದ ಸ್ಥಳವಿದು.
ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯ(Pradhanmantri Sangrahalaya)
ತೀನ್ ಮೂರ್ತಿ ಭವನದಲ್ಲಿ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯವಿದೆ. ಇದರ ವಿಶೇಷತೆ ಎಂದರೆ ಇಲ್ಲಿನ ಸಂಗ್ರಹಾಲಯದಲ್ಲಿ ಎಲ್ಲಾ ಭಾರತೀಯ ಪ್ರಧಾನ ಮಂತ್ರಿಗಳ ಬಗ್ಗೆ ಪರಿಚಯಿಸುತ್ತದೆ. ಇಲ್ಲಿನ ವಿನೂತನ ತಂತ್ರಜ್ಞಾನ, ಹೊಲೊಗ್ರಾಮ್‌ಗಳು, ಸ್ಕ್ರೀನ್‌ಗಳಲ್ಲಿ ಭಾರತ ಸ್ವಾತಂತ್ರ್ಯದ ನಂತರ ಬೆಳೆದು ನಿಂತ ಬಗ್ಗೆ ತೋರಿಸುತ್ತದೆ.
ಈ ಐದು ಸ್ಥಳಗಳನ್ನು ತಲುಪುವುದು ಹೇಗೆ?
ದೆಹಲಿ ಮೆಟ್ರೋ ಈ ಎಲ್ಲಾ ಸ್ಥಳಗಳಿಗೆ ಸುಲಭವಾಗಿ ಸಂಪರ್ಕಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಕೆಂಪು ಕೋಟೆ, ಚಾಂದನಿ ಚೌಕ್ ಅನ್ನು ನೇರಳೆ ಮತ್ತು ಹಳದಿ ಮಾರ್ಗದ ರೈಲುಗಳು ತಲುಪುತ್ತವೆ. ದೆಹಲಿ ಗೇಟ್ ಮೆಟ್ರೋ ನಿಲ್ದಾಣವು ರಾಜ್‌ಘಾಟ್‌ಗೆ ಹತ್ತಿರದಲ್ಲಿದೆ.
ಸೆಂಟ್ರಲ್ ಸೆಕ್ರೆಟರಿಯೇಟ್ ಮೆಟ್ರೋ ನಿಲ್ದಾಣದಿಂದ ಇಂಡಿಯಾ ಗೇಟ್, ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯಕ್ಕೆ ಸುಲಭವಾಗಿ ತಲುಪಬಹುದು. ಅಲ್ಲಿಂದ ನೀವು ಉಳಿದ ಸ್ಥಳಗಳನ್ನು ಆಟೋ ಅಥವಾ ಕಾಲ್ನಡಿಗೆ ರೀಚ್ ಆಗಬಹುದಷ್ಟು ಸಮೀಪದಲ್ಲಿವೆ.
ಯಾವ ಸಮಯ ಬೆಸ್ಟ್? ಟಿಕೆಟ್ ಬುಕ್ ಮಾಡೋದು ಹೇಗೆ?
ಆಗಸ್ಟ್ 15 ರ ಸುಮಾರಿಗೆ ಈ ಎಲ್ಲಾ ಸ್ಥಳಗಳಲ್ಲಿ ಭದ್ರತೆ ತುಂಬಾ ಹೆಚ್ಚಿಸಲಾಗಿರುತ್ತೆ. ಆದ್ದರಿಂದ, ಬೇಗನೆ ಮನೆಯಿಂದ ಹೊರಡುವುದು ಉತ್ತಮ. ಅದರಲ್ಲೂ ನಾಳೆ ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಟಿಕೆಟ್‌ಗಳು, ಬುಕಿಂಗ್ ದಿನಾಂಕಗಳು ಸಮಯಗಳು ಪ್ರತಿ ವರ್ಷವೂ ಬದಲಾಗುತ್ತಿರುತ್ತೆ. ಆದ್ದರಿಂದ, ಹೋಗುವ ಮೊದಲು ಅಧಿಕೃತ ಆಹ್ವಾನ ಪೋರ್ಟಲ್‌ನಲ್ಲಿ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸಲು ಮರೆಯಬೇಡಿ.
ರಾಜ್‌ಘಾಟ್, ಇಂಡಿಯಾ ಗೇಟ್ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕದಂತಹ ಸ್ಥಳಗಳಿಗೆ ಸಾಮಾನ್ಯ ದಿನಗಳಲ್ಲಿ ಟಿಕೆಟ್‌ಗಳ ಅಗತ್ಯವಿರುವುದಿಲ್ಲ. ಆದಾಗ್ಯೂ, ಆಗಸ್ಟ್ 15 ರ ಸುಮಾರಿಗೆ ಭದ್ರತಾ ತಪಾಸಣೆಗಳು ಹೆಚ್ಚು ಕಠಿಣವಿರುತ್ತೆ. ಆದ್ದರಿಂದ ಸ್ಥಳಗಳಿಗೆ ಭೇಟಿ ನೀಡುವ ಮೊದಲು ನಿಯಮ ಪರಿಶೀಲಿಸಿ ಯಾವುದೇ ಬ್ಯಾಗ್, ನೀರಿನ ಬಾಟಲಿ, ಇನ್ನಿತರ ವಸ್ತುಗಳಿಲ್ಲದೆ ಹೋಗುವುದು ಉತ್ತಮ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

