Election: ತಮಿಳುನಾಡಿನಲ್ಲಿ ಆಡಳಿತರೂಢ ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿಯುತ್ತಿರೋದು ಯಾಕೆ?
ತಮಿಳುನಾಡಿನ ರಾಜಕೀಯದಲ್ಲಿ ಆಡಳಿತರೂಢ ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿದಿದ್ದು, ನಟ ವಿಜಯ್ ಅವರ ಟಿವಿಕೆ ಪಕ್ಷ ಮೊದಲ ಸ್ಥಾನದಲ್ಲಿದೆ. ಸನಾತನ ಧರ್ಮದ ಹೇಳಿಕೆ, ವಂಶ ರಾಜಕಾರಣದ ಆರೋಪ ಮತ್ತು ನಟ ವಿಜಯ್ ಅವರ ಜನಪ್ರಿಯತೆಯು ಡಿಎಂಕೆ ಹಿನ್ನಡೆಗೆ ಪ್ರಮುಖ ಕಾರಣಗಳೆಂದು ವಿಶ್ಲೇಷಿಸಲಾಗಿದೆ.

ಡಿಎಂಕೆ ಮೂರನೇ ಸ್ಥಾನ
ಸದ್ಯದ ಟ್ರೆಂಡ್ ಪ್ರಕಾರ, ಆಡಳಿತರೂಢ ಡಿಎಂಕೆ ಮೂರನೇ ಸ್ಥಾನಕ್ಕೆ ಕುಸಿದಿದೆ. ತಮಿಳು ನಟ ವಿಜಯ್ ಅವರ ಟಿವಿಕೆ ಪಕ್ಷವರನ್ನು ತಮಿಳುನಾಡಿನ ಮತದಾರರು ಅಪ್ಪಿಕೊಂಡಂತೆ ಕಾಣಿಸುತ್ತಿದೆ. ಸದ್ಯದ ಟ್ರೆಂಡ್‌ಗಳ ಪ್ರಕಾರ, ಮೊದಲ ಸ್ಥಾನದಲ್ಲಿ ಟಿವಿಕೆ, ಎರಡನೇ ಸ್ಥಾನದಲ್ಲಿ ಎಡಿಎಂಕೆ, ಮೂರನೇ ಸ್ಥಾನದಲ್ಲಿ ಡಿಎಂಕೆ ಇದೆ.
ಡಿಎಂಕೆ ಹಿನ್ನಡೆಗೆ ಕಾರಣ ಏನು?
ಸನಾತನ ಧರ್ಮದ ಕುರಿತ ಹೇಳಿಕೆ
ಸೆಪ್ಟೆಂಬರ್ 2023ರಲ್ಲಿ ಸಿಎಂ ಸ್ಟಾಲಿನ್ ಮತ್ತು ಪುತ್ರ ಉದಯನಿಧಿ'ಸನಾತನ ಧರ್ಮ'ದ ಕುರಿತು ನೀಡಿದ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಸನಾತನ ಧರ್ಮ ಎಂಬುದು ಮಲೇರಿಯಾ, ಡೆಂಘಿ ಇದ್ದಂತೆ ಅದನ್ನು ಕೇವಲ ವಿರೋಧ ಮಾಡಿದರೆ ಸಾಲದು, ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಈ ಹೇಳಿಕೆಗೆ ದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪುತ್ರನಿಗೆ ಡಿಸಿಎಂ ಸ್ಥಾನ
ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದು (ಸಚಿವ ಸಂಪುಟದಲ್ಲಿ ಪ್ರಮುಖ ಸ್ಥಾನ ನೀಡಿರುವುದು) ವಿರೋಧ ಪಕ್ಷಗಳಿಂದ ತೀವ್ರ ವಂಶಪಾರಂಪರ್ಯ ರಾಜಕಾರಣದ ಟೀಕೆಗೆ ಒಳಗಾಗಿದೆ. ಬಿಜೆಪಿ ಇದನ್ನು ಕುಟುಂಬ ರಾಜಕಾರಣ ಎಂದು ಕಟುವಾಗಿ ಟೀಕಿಸಿತ್ತು.
ಕಾರ್ತಿಕೈ ದೀಪದ ವಿವಾದ
ಮಧುರೈನ ತಿರುಪ್ಪರಂಕುಂದ್ರಂ ಮುರುಗನ್ ದೇವಸ್ಥಾನದಲ್ಲಿ ಕಾರ್ತಿಕೈ ದೀಪ ಹಚ್ಚುವ ವಿಷಯದಲ್ಲಿ ಭಕ್ತರು ಮತ್ತು ಅಧಿಕಾರಿಗಳ ನಡುವೆ ಘರ್ಷಣೆ ನಡೆದಿತ್ತು. ಸ್ಥಳೀಯ ಅಧಿಕಾರಿಗಳು ದೀಪ ಹಚ್ಚಲು ಅನುಮತಿ ನಿರಾಕರಿಸಿದ್ದನ್ನು ವಿರೋಧ ಪಕ್ಷಗಳು ಖಂಡಿಸಿದ್ದವು, ಆದರೆ ಸ್ಟಾಲಿನ್ ಸರ್ಕಾರ ಇದನ್ನು ಸಮರ್ಥಿಸಿಕೊಂಡಿತ್ತು. ಹಿಂದೂಗಳಿಗೆ ನೋವು ಆಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ವಿಜಯ್ ಆಕರ್ಷಣೆ
ನಟ ವಿಜಯ್ ಚುನಾವಣೆಯಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದು, ಅದರಲ್ಲಿಯೂ ಯುವ ಸಮುದಾಯ ಸ್ಟಾರ್ ಹೀರೋನತ್ತ ಆಕರ್ಷವದಂತೆ ಚುನಾವಣೆಯಲ್ಲಿ ಕಂಡು ಬಂದಂತೆ ಕಾಣಿಸುತ್ತಿದೆ. ಸ್ಟಾರ್ ಆಕರ್ಷಣೆಯೂ ಡಿಎಂಕೆ ಕುಸಿತಕ್ಕೆ ಕಾರಣವಾಗಿರೋ ಸಾಧ್ಯತೆಗಳಿವೆ.
ಇದನ್ನೂ ಓದಿ: Election 2026: ದಳಪತಿ ವಿಜಯ್, ಮಮತಾ ಬ್ಯಾನರ್ಜಿ, ಪಳನಿಸ್ವಾಮಿ, ಸ್ಟಾಲಿನ್ ಜಾತಕ ಹೇಗಿದೆ? ಯಾರು ಗೆಲ್ತಾರೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

