MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • 1 ಕಿ.ಮೀ ಆಳಕ್ಕೆ ಬೋರ್‌ವೆಲ್ ಕೊರೆದರೆ ಏನಾಗುತ್ತದೆ? 40 ವರ್ಷದಿಂದ ಭೂಮಿಯಿಂದ ಉಕ್ಕುತ್ತಿದೆ ಬಿಸಿ ನೀರು!

1 ಕಿ.ಮೀ ಆಳಕ್ಕೆ ಬೋರ್‌ವೆಲ್ ಕೊರೆದರೆ ಏನಾಗುತ್ತದೆ? 40 ವರ್ಷದಿಂದ ಭೂಮಿಯಿಂದ ಉಕ್ಕುತ್ತಿದೆ ಬಿಸಿ ನೀರು!

ಕಳೆದ 40 ವರ್ಷಗಳ ಹಿಂದೆ ಕೊರೆದ 1 ಕಿ.ಮೀ ಆಳದ ಬೋರ್‌ವೆಲ್‌ನಿಂದ ಯಾವುದೇ ಪಂಪ್ ಇಲ್ಲದೆ ಬಿಸಿ ನೀರು ಚಿಮ್ಮುತ್ತಿದೆ. ರೈತರು ಈ ನೀರನ್ನು ತಣ್ಣಗಾಗಿಸಿ ಕೃಷಿಗೆ ಬಳಸುತ್ತಿದ್ದು, ವಿಜ್ಞಾನಿಗಳು ಇದರಿಂದ ವಿದ್ಯುತ್ ಉತ್ಪಾದಿಸಲು ಮುಂದಾಗಿದ್ದಾರೆ. ಎಲ್ಲಿದೆ ಈ ಸ್ಥಳ? ಮತ್ತಷ್ಟು ಮಾಹಿತಿ ತಿಳಿಯರಿ.

2 Min read
Author : Sathish Kumar KH
Published : Oct 27 2026, 10:35 PM IST
Share this Photo Gallery
  • FB
  • TW
  • Linkdin
  • Whatsapp
15
1 ಕಿ.ಮೀ ಆಳಕ್ಕೆ ಬೋರ್‌ವೆಲ್ ಕೊರೆದರೆ ಏನಾಗಬಹುದು?
Image Credit : Geminiai

1 ಕಿ.ಮೀ ಆಳಕ್ಕೆ ಬೋರ್‌ವೆಲ್ ಕೊರೆದರೆ ಏನಾಗಬಹುದು?

ಸಾಮಾನ್ಯವಾಗಿ ನೀರಿಗಾಗಿ ನೆಲವನ್ನು ಕೊರೆದರೆ ತಂಪಾದ ಸಿಹಿನೀರು ಅಥವಾ ಕೊಂಚ ಉಪ್ಪು ನೀರು ಬರುವುದು ನಮಗೆಲ್ಲಾ ತಿಳಿದಿರುವ ವಿಚಾರ. ಆದರೆ, ಬರೋಬ್ಬರಿ 1 ಕಿಲೋಮೀಟರ್‌ಗೂ ಹೆಚ್ಚು ಆಳಕ್ಕೆ ಬೋರ್‌ವೆಲ್ ಕೊರೆದರೆ ಏನಾಗಬಹುದು ಎಂಬ ಕಲ್ಪನೆ ನಿಮಗಿದೆಯೇ? ಅಲ್ಲಿಂದ ಹೊರಬಂದಿದ್ದು ಕೈ ಸುಡುವಷ್ಟು ಕುದಿಯುವ ಬಿಸಿ ನೀರು!

ಅತ್ಯಂತ ರೋಚಕ ಸಂಗತಿಯೆಂದರೆ, ಯಾವುದೇ ಮೋಟರ್, ಪಂಪ್ ಅಥವಾ ಕರೆಂಟ್‌ನ ಹಂಗಿಲ್ಲದೆ ನೈಸರ್ಗಿಕ ಭೂಗರ್ಭ ಒತ್ತಡದಿಂದಲೇ ಕಳೆದ 40 ವರ್ಷಗಳಿಂದ ನಿರಂತರವಾಗಿ 365 ದಿನವೂ ಇಲ್ಲಿ ಕುದಿಯುವ ಜಲಧಾರೆ ಚಿಮ್ಮುತ್ತಲೇ ಇದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
60 ಡಿಗ್ರಿ ಸೆಲ್ಸಿಯಸ್ ಬಿಸಿ ನೀರು ಉಕ್ಕುತ್ತಿರುವುದೇಕೆ?
Image Credit : Geminiai

60 ಡಿಗ್ರಿ ಸೆಲ್ಸಿಯಸ್ ಬಿಸಿ ನೀರು ಉಕ್ಕುತ್ತಿರುವುದೇಕೆ?

ಭೂಮಿಯ ಆಳಕ್ಕೆ ಹೋದಂತೆಲ್ಲಾ ತಾಪಮಾನ ಹೆಚ್ಚಾಗುತ್ತದೆ. ಬರೋಬ್ಬರಿ ಒಂದು ಕಿಲೋಮೀಟರ್ ಆಳದ ಭೂಗರ್ಭದ ಪದರಗಳಲ್ಲಿರುವ ಅತಿಯಾದ ಉಷ್ಣತೆ ಹಾಗೂ ಅಲ್ಲಿನ ನೈಸರ್ಗಿಕ ಗಂಧಕದ (Sulfur) ಖನಿಜಗಳ ಪ್ರಭಾವದಿಂದಾಗಿ ಈ ನೀರು ಸುಮಾರು 60 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸದಾ ಕುದಿಯುತ್ತಿರುತ್ತದೆ. ಕೊಳವೆಬಾವಿಯ ಮುಖಭಾಗದಿಂದ ಸದಾ ಹೊಗೆ ಉಗುಳುತ್ತಾ ನೀರು ಚಿಮ್ಮುವ ದೃಶ್ಯ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

Related Articles

Related image1
ಮಂತ್ರಾಲಯಕ್ಕೆ ಹೋಗೋ ಭಕ್ತರ ಗಮನಕ್ಕೆ, ಕರ್ನಾಟಕದ ಛತ್ರದಲ್ಲಿ ಬತ್ತಿದ ಬೋರ್‌ವೆಲ್, ನೀರಿನ ಅಭಾವಕ್ಕೆ ವಸತಿಗೃಹ ಬಂದ್!
Related image2
ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಹಾಕಿಸಿದ ಹುಬ್ಬಳ್ಳಿಯ ಈರವ್ವ
35
ಕುದಿಯುವ ನೀರನ್ನೇ ಕೃಷಿಗೆ ವರವಾಗಿಸಿಕೊಂಡ ರೈತರು!
Image Credit : Geminiai

ಕುದಿಯುವ ನೀರನ್ನೇ ಕೃಷಿಗೆ ವರವಾಗಿಸಿಕೊಂಡ ರೈತರು!

ಸಾಮಾನ್ಯವಾಗಿ ಅಷ್ಟು ಬಿಸಿ ನೀರನ್ನು ನೇರವಾಗಿ ಗದ್ದೆಗಳಿಗೆ ಹರಿಸಿದರೆ ಬೆಳೆಗಳು ಸುಟ್ಟು ಕರಕಲಾಗುತ್ತವೆ. ಆದರೆ, ಸ್ಥಳೀಯ ರೈತರು ತಮ್ಮ ಜಾಣ್ಮೆಯಿಂದ ಈ ಕುದಿಯುವ ನೀರನ್ನೇ ಕೃಷಿ ವರವಾಗಿಸಿಕೊಂಡಿದ್ದಾರೆ.

ಬೋರ್‌ವೆಲ್‌ನಿಂದ ಚಿಮ್ಮುವ ಬಿಸಿ ನೀರನ್ನು ನೇರವಾಗಿ ಬೆಳೆಗೆ ಹರಿಸದೆ, ಮೊದಲು ದೊಡ್ಡ ಹೊಂಡಗಳಿಗೆ (Ponds) ಹಾಯಿಸುತ್ತಾರೆ. ಒಂದು ದಿನ ಪೂರ್ತಿ ಆ ನೀರನ್ನು ನೈಸರ್ಗಿಕವಾಗಿ ತಣ್ಣಗಾಗಲು ಬಿಡುತ್ತಾರೆ. ನೀರು ಸಂಪೂರ್ಣ ತಣ್ಣಗಾದ ಬಳಿಕ ಕಾಲುವೆಗಳ ಮೂಲಕ ಭತ್ತದ ಗದ್ದೆಗಳಿಗೆ ಹರಿಸುತ್ತಾರೆ. ಈ ಅದ್ಭುತ ಉಪಾಯದಿಂದಾಗಿ ಸುಮಾರು 200 ಎಕರೆ ಜಮೀನಿನಲ್ಲಿ ವರ್ಷಕ್ಕೆ ಎರಡು ಬೆಳೆಗಳನ್ನು ರೈತರು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ.

45
ಈ ಬಿಸಿ ನೀರಿನಿಂದ ವಿದ್ಯುತ್ ಉತ್ಪಾದನೆ!
Image Credit : Geminiai

ಈ ಬಿಸಿ ನೀರಿನಿಂದ ವಿದ್ಯುತ್ ಉತ್ಪಾದನೆ!

ಈ ನೈಸರ್ಗಿಕ ಭೂಗರ್ಭ ಉಷ್ಣಶಕ್ತಿಯನ್ನು (Geothermal Energy) ವ್ಯರ್ಥ ಮಾಡದೆ ವಿದ್ಯುತ್ ತಯಾರಿಸಲು ವಿಜ್ಞಾನಿಗಳು ಮುಂದಾಗಿದ್ದಾರೆ. ದೆಹಲಿಯ ಪ್ರಸಿದ್ಧ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿ 20 ಕಿಲೋವ್ಯಾಟ್ ಪರಿಸರಸ್ನೇಹಿ ವಿದ್ಯುತ್ ಉತ್ಪಾದಿಸುವ ಪ್ರಾಯೋಗಿಕ ಪೈಲಟ್ ಪ್ರಾಜೆಕ್ಟ್ ಸಿದ್ಧಗೊಳ್ಳುತ್ತಿದ್ದು, ಇದು ಯಶಸ್ವಿಯಾದರೆ ಗ್ರಾಮದ ಬೀದಿ ದೀಪಗಳಿಗೆ ಈ ನೈಸರ್ಗಿಕ ವಿದ್ಯುತ್ ಬೆಳಕು ನೀಡಲಿದೆ.

55
ಈ ವಿಸ್ಮಯಕಾರಿ ಬೋರ್‌ವೆಲ್ ಇರುವುದು ಎಲ್ಲಿ?
Image Credit : Geminiai

ಈ ವಿಸ್ಮಯಕಾರಿ ಬೋರ್‌ವೆಲ್ ಇರುವುದು ಎಲ್ಲಿ?

ಪ್ರಕೃತಿಯ ಈ ಅದ್ಭುತ ವಿದ್ಯಮಾನ ನಡೆಯುತ್ತಿರುವುದು ನೆರೆಯ ತೆಲಂಗಾಣ ರಾಜ್ಯದ ಭದ್ರಾದ್ರಿ ಕೊತ್ತಗುಡೆಂ ಜಿಲ್ಲೆಯ ಮಣುಗೂರು ಮಂಡಲ ವ್ಯಾಪ್ತಿಯ ‘ಪಗಿಡೇರು’ (Pagideru) ಎಂಬ ಪುಟ್ಟ ಹಳ್ಳಿಯಲ್ಲಿ. ಸುಮಾರು 40 ವರ್ಷಗಳ ಹಿಂದೆ (ನಾಲ್ಕು ದಶಕಗಳ ಹಿಂದೆ) ಕಲ್ಲಿದ್ದಲು ಗಣಿ ನಿಕ್ಷೇಪಗಳ ಶೋಧನೆಗಾಗಿ ಗಣಿ ಸಂಸ್ಥೆ ‘ಸಿಂಗರೇಣಿ’ ಹಾಗೂ ಭೂಗರ್ಭ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಇಲ್ಲಿ 1 ಕಿ.ಮೀಗೂ ಹೆಚ್ಚು ಆಳಕ್ಕೆ ಬೋರ್‌ವೆಲ್ ಕೊರೆದಿದ್ದರು. ಅಂದು ಆರಂಭವಾದ ಈ ಬಿಸಿ ನೀರಿನ ಬುಗ್ಗೆ ಇಂದಿಗೂ ನಿಂತಿಲ್ಲ.

ಪ್ರಕೃತಿಯ ಈ ಕೌತುಕವನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಪ್ರವಾಸಿಗರು ಪಗಿಡೇರು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತ ಸುದ್ದಿ
ವೈರಲ್ ಸುದ್ದಿ
ವಿಜ್ಞಾನ
ರೈತರು
 
3rd TEST • SA vs AUS
Stumps
SASA
329
AUSAUS
-
Day 1
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
ರಾಜೀವ್‌ ಗಾಂಧಿ ಪ್ರಧಾನಿ ಆಗೋದು ನನಗೆ ಇಷ್ಟ ಇರಲಿಲ್ಲ, ಆತ್ಮಕಥೆ ಬಿಡುಗಡೆಗೂ ಮುನ್ನ ಸೋನಿಯಾ ಗಾಂಧಿ ಮಾತು
Recommended image2
ನಿವೃತ್ತಿ ಜೀವನ ಕಳೆಯಲು ಭಾರತದ ಈ 8 ನಗರಗಳೇ ಬೆಸ್ಟ್! ಈ ಲಿಸ್ಟ್‌ನಲ್ಲಿವೆ ನಮ್ಮ ರಾಜ್ಯದ ಎರಡು ಸಿಟಿಗಳು
Recommended image3
ದೀಪಾವಳಿಗೆ ಚಿನ್ನ ತಗೊಳ್ಬೇಕಾ, ಕಾಯ್ಬೇಕಾ? 2027ಕ್ಕೆ ₹2 ಲಕ್ಷ ಮುಟ್ಟಲಿದೆ ಬಂಗಾರದ ಬೆಲೆ !
Related Stories
Recommended image1
ಮಂತ್ರಾಲಯಕ್ಕೆ ಹೋಗೋ ಭಕ್ತರ ಗಮನಕ್ಕೆ, ಕರ್ನಾಟಕದ ಛತ್ರದಲ್ಲಿ ಬತ್ತಿದ ಬೋರ್‌ವೆಲ್, ನೀರಿನ ಅಭಾವಕ್ಕೆ ವಸತಿಗೃಹ ಬಂದ್!
Recommended image2
ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಹಾಕಿಸಿದ ಹುಬ್ಬಳ್ಳಿಯ ಈರವ್ವ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved