- Home
- Life
- Health
- ಬೇಸಿಗೆ ಬಿಸಿಲಿಗೆ ಅತಿಹೆಚ್ಚು ಎಳನೀರು ಕುಡಿದರೆ ಆರೋಗ್ಯಕ್ಕೆ ಹಾನಿಕರ: ದಿನಕ್ಕೆ ಎಷ್ಟು ಎಳನೀರು ಕುಡಿಯಬೇಕು?
ಬೇಸಿಗೆ ಬಿಸಿಲಿಗೆ ಅತಿಹೆಚ್ಚು ಎಳನೀರು ಕುಡಿದರೆ ಆರೋಗ್ಯಕ್ಕೆ ಹಾನಿಕರ: ದಿನಕ್ಕೆ ಎಷ್ಟು ಎಳನೀರು ಕುಡಿಯಬೇಕು?
ಬೇಸಿಗೆ ಬಿಸಿಲು ಹೆಚ್ಚಾಗಿದೆ ಎಂದು ಬೇಕಾಬಿಟ್ಟು ಯಥೇಚ್ಛವಾಗಿ ಎಳನೀರು ಕುಡಿದರೆ ಆರೋಗ್ಯಕ್ಕೆ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿದೆ. ಇದು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದ್ದರೂ, ಅತಿಯಾಗಿ ಸೇವಿಸಿದರೆ ಈ ಆರೋಗ್ಯ ಸಮಸ್ಯೆಯಾಗಬಹುದು.

ಅತಿಯಾದ ಎಳನೀರು ಆರೋಗ್ಯಕ್ಕೆ ಹಾನಿಕರ
ಬೇಸಿಗೆಯ ಬಿಸಿಲಿನಲ್ಲಿ ತಂಪಾದ ಪಾನೀಯವಾಗಿ ಎಳನೀರನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ, ಇದರ ಅತಿಯಾದ ಸೇವನೆಯು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಎಳನೀರಿನಲ್ಲಿರುವ ಅಧಿಕ ಪೊಟ್ಯಾಸಿಯಮ್
ಒಂದು ಎಳನೀರಿನಲ್ಲಿ ಮಧ್ಯಮ ಗಾತ್ರದ ಬಾಳೆಹಣ್ಣಿಗಿಂತ ಹೆಚ್ಚು ಪೊಟ್ಯಾಸಿಯಮ್ ಇರುತ್ತದೆ. ಇದು ದ್ರವ ಸಮತೋಲನ ಕಾಪಾಡಲು ಸಹಾಯ ಮಾಡುತ್ತದೆ ಆದರೆ ಅತಿಯಾದರೆ ಅಪಾಯಕಾರಿ.
ಹೈಪರ್‌ಕಲೇಮಿಯಾ ಅಪಾಯ!
ಎಳನೀರಿನಲ್ಲಿ ಪೊಟ್ಯಾಸಿಯಮ್ ಪ್ರಮಾಣ ಹೆಚ್ಚಿರುವುದರಿಂದ, ಅತಿಯಾಗಿ ಕುಡಿದರೆ ಹೈಪರ್‌ಕಲೇಮಿಯಾ ಅಥವಾ ಪೊಟ್ಯಾಸಿಯಮ್ ವಿಷತ್ವದಂತಹ ಸಮಸ್ಯೆಗಳು ಉಂಟಾಗಬಹುದು.
ಎಳನೀರು ಅತಿಯಾದರೆ ಅತಿಸಾರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ
ಎಳನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಅತಿಸಾರ ಮತ್ತು ಗ್ಯಾಸ್ಟ್ರಿಕ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ದಿನಕ್ಕೆ ಎಷ್ಟು ಎಳನೀರು ಕುಡಿಯಬಹುದು?
ಆರೋಗ್ಯವಂತ ವ್ಯಕ್ತಿ ದಿನಕ್ಕೆ ಸುಮಾರು 100-150 ಮಿಲಿ ಎಳನೀರನ್ನು ಸುರಕ್ಷಿತವಾಗಿ ಕುಡಿಯಬಹುದು. ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

