ಬಹುತೇಕ ಮಧ್ಯ ವಯಸ್ಸಿನ ಮಹಿಳೆಯ ತಲೆ ನೋವಗಿರೋ ಹೊಟ್ಟೆ ಕೊಬ್ಬಿಗೇನು ಕಾರಣ?
ನಮ್ಮಲ್ಲಿ ಅನೇಕರಿಗೆ ಡಯಟ್ ಅನಿವಾರ್ಯವಾಗಿದೆ. "ಡಯಟ್!" ಎಂಬುದನ್ನು ಆರಂಭಿಸಲು ಪ್ರಮುಖ ಕಾರಣ ಏನೆಂದರೆ ಅದು ಹೊಟ್ಟೆಯ ಕೊಬ್ಬು. ಕೆಲವರು ತಮ್ಮ ಇಡೀ ಜೀವನಕ್ಕಾಗಿ ಹೊಟ್ಟೆ-ಕೊಬ್ಬು ಮುಕ್ತವಾಗಿರಿಸುವ ಚಯಾಪಚಯ ಕ್ರಿಯೆಯನ್ನು ಹೊಂದಿರುತ್ತಾರೆ. ಆದರೆ ನಮ್ಮಲ್ಲಿ ಹೆಚ್ಚಿನವರು ಹೊಟ್ಟೆಯ ಬೊಜ್ಜಿನ ಸಮಸ್ಯೆ ಎದುರಿಸಬೇಕಾಗುತ್ತದೆ.
ಸಾಕಷ್ಟು ದೃಢನಿಶ್ಚಯದಿಂದ, ಆಹಾರ (Food) ಮತ್ತು ವ್ಯಾಯಾಮದ (exercise) ಸಂಯೋಜನೆಯ ಮೂಲಕ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು ಅಥವಾ ದೂರವಿಡಬಹುದು. ಆದರೆ ಎಲ್ಲಾ ಮಾಡಿದರೂ ಸಹ ಬೆಲ್ಲಿ ಫ್ಯಾಟ್ (Belly Fat) ಹೆಚ್ಚಲು ಕಾರಣ ಏನು? ಆ ಹಠಮಾರಿ ಹೊಟ್ಟೆಯ ಕೊಬ್ಬನ್ನು ತಪ್ಪಿಸಲು ಅಥವಾ ತೊಡೆದು ಹಾಕಲು ಈ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕು.
#1 ವಯಸ್ಸು (age)
ದುರದೃಷ್ಟವಶಾತ್, ವಯಸ್ಸಾದ ಪ್ರಕ್ರಿಯೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದರರ್ಥ ನಾವು ನಮ್ಮ ದೇಹಗಳಿಗೆ ವಯಸ್ಸಾಗಲು ಬಿಟ್ಟು ನಮ್ಮಷ್ಟಕ್ಕೆ ನಾವು ಇರಬೇಕು ಎಂದಲ್ಲ. ನಮ್ಮಲ್ಲಿ ಅನೇಕರು, ಜೀವನಶೈಲಿಯ (Lifestyle) ಬಗ್ಗೆ ಸ್ವಲ್ಪ ಅಥವಾ ಏನೂ ಬದಲಾಯಿಸದೆ ಇದ್ದರೂ, ವಯಸ್ಸಾದಂತೆ ಹೊಟ್ಟೆಯಲ್ಲಿ ಬೊಜ್ಜು ಬೆಳೆಯಲು ಪ್ರಾರಂಭಿಸುತ್ತೇವೆ. ವ್ಯಾಯಾಮ ಪ್ರಾರಂಭಿಸುವ ಮೂಲಕ ಮತ್ತು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಹೆಚ್ಚು ಜಾಗರೂಕರಾಗಿರುವುದರ ಮೂಲಕ ಬೆಲ್ಲಿ ಫ್ಯಾಟ್ ಕಡಿಮೆ ಮಾಡಬಹುದು.
#2 ಸಂಸ್ಕರಿಸಿದ ಆಹಾರಗಳು (PROCESSED FOODS)
ಸಂಸ್ಕರಿಸಿದ ಆಹಾರಗಳಲ್ಲಿನ ಎಲ್ಲಾ ಅನಾರೋಗ್ಯಕರ ಪದಾರ್ಥಗಳು ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂಬುದರ ಬಗ್ಗೆ ನೀವು ಬಹುಶಃ ವರದಿಗಳನ್ನು ಕೇಳಿದ್ದೀರಿ. ಹೆಚ್ಚಿನ-ಫ್ರಕ್ಟೋಸ್ ಕಾರ್ನ್ ಸಿರಪ್ ಮತ್ತು ಟ್ರಾನ್ಸ್-ಫ್ಯಾಟ್ (Transfat) ಗಳಂತಹ ಆಹಾರ ಸೇವನೆ ನಮ್ಮನ್ನು ಅನಾರೋಗ್ಯಕರ (Unhealthy) ಮತ್ತು ತೂಕ ಹೆಚ್ಚುವಂತೆ (Weight Gain) ಮಾಡುತ್ತಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
#3 ಒತ್ತಡ (STRESS)
ಒತ್ತಡದ ಬಗ್ಗೆ ಬಹಳ ಕಡಿಮೆ ಹೇಳಿದರೆ ಒಳ್ಳೆಯದು. ಯಾಕೆಂದರೆ ಸಾಕಷ್ಟು ಜನ ಒತ್ತಡದ ನಡುವೆ ಬದುಕುತ್ತಿದ್ದಾರೆ. ಬಿಡುವಿಲ್ಲದ ಕೆಲಸಗಳು, ಆರ್ಥಿಕ ಸಮಸ್ಯೆಗಳು ಮತ್ತು ಬೇಡಿಕೆಯ ಉದ್ಯೋಗಗಳು ಹೆಚ್ಚಾಗಿ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತವೆ, ಇದರಿಂದ ದೇಹದಲ್ಲಿ ಕೊಬ್ಬು ಹೆಚ್ಚುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
#4 ಸರಿಯಾಗಿ ನಿದ್ರೆ ಮಾಡದೇ ಇರುವುದು (LACK OF SLEEP)
ಕೆಟ್ಟ ರಾತ್ರಿಯ ನಿದ್ರೆ ಅಥವಾ ಉತ್ತಮ ನಿದ್ರೆಯನ್ನು ಪಡೆಯಲು ಸಾಕಷ್ಟು ಸಮಯ ಸಿಗದೇ ಇದ್ದರೆ ತೂಕ ಹೆಚ್ಚುತ್ತದೆ (Weight Gain) ಎಂದು ಎಲ್ಲರಿಗೂ ತಿಳಿದಿದೆ. 16 ವರ್ಷಗಳ ಅವಧಿಯಲ್ಲಿ ನಡೆಸಲಾದ ಒಂದು ಅಧ್ಯಯನವು, ಪ್ರತಿ ರಾತ್ರಿಗೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ನಿದ್ರೆ ಮಾಡುವ ಮಹಿಳೆಯರು ಕನಿಷ್ಠ ಏಳು ಗಂಟೆಗಳ ಕಾಲ ಮಲಗಿದವರಿಗೆ ಹೋಲಿಸಿದರೆ 30 ಪ್ರತಿಶತ ಹೆಚ್ಚು ಅಥವಾ ಅದಕ್ಕಿಂತ ಹೆಚ್ಚಿನ ತೂಕ ಹೊಂದಿರುತ್ತಾರೆ ಎಂದು ತಿಳಿದು ಬಂದಿದೆ.
#5 ತಪ್ಪಾದ ವರ್ಕ್ ಔಟ್ (WRONG WORKOUT)
ತೂಕ ಇಳಿಸಿಕೊಳ್ಳಲು ವ್ಯಾಯಾಮವು ಉತ್ತಮ ಮಾರ್ಗ ಎಂದು ನಮಗೆಲ್ಲರಿಗೂ ತಿಳಿದಿದೆ. ಹೊಟ್ಟೆಯ ಕೊಬ್ಬನ್ನು ಕರಗಿಸಲು ಸರಿಯಾದ ರೀತಿಯ ವ್ಯಾಯಾಮ ಬೇಕಾಗುತ್ತದೆ ಎಂಬುದು ಸಾಮಾನ್ಯವಾಗಿ ಜನರಿಗೆ ತಿಳಿದಿರುವುದಿಲ್ಲ. ಅವರು ತಪ್ಪಾಗಿ ವ್ಯಾಯಾಮ ಮಾಡುತ್ತಾರೆ. ಹೊಟ್ಟೆಯ ಫ್ಯಾಟ್ ಹೊರಹಾಕಲು ಬಯಸುವವರಿಗೆ ಕಾರ್ಡಿಯೋ (Cardio) ಮತ್ತು ತೂಕ ತರಬೇತಿಯ (Training) ಸಂಯೋಜನೆಯು ಅತ್ಯುತ್ತಮ ವಿಧಾನವಾಗಿದೆ.
#6 ದೇಹದ ಆಕಾರ (BODY SHAPE)
ಕೆಲವು ಜನರು ಸ್ವಾಭಾವಿಕವಾಗಿ ಪ್ಲಸ್ ಸೈಜ್ ನಲ್ಲಿರುತ್ತಾರೆ, ಇದು ಮಧ್ಯಭಾಗದ ಸುತ್ತಲೂ ಹೆಚ್ಚುವರಿ ತೂಕಕ್ಕೆ ಕಾರಣವಾಗುತ್ತದೆ. ಜೆನೆಟಿಕ್ಸ್ ನಿಂದ ತೂಕ ಹೆಚ್ಚಾಗಿದ್ದರೆ ಅದರ ವಿರುದ್ಧ ಹೋರಾಡುವುದ್ ಕಠಿಣ ಯುದ್ಧವಾಗಬಹುದು, ಆದರೆ ದೃಢ ನಿರ್ಧಾರ ಮಾಡಿದರೆ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ನಿಯಂತ್ರಿಸಬಹುದು.
#7 ಹಾರ್ಮೋನ್ಸ್ (HORMONES)
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಹೆಚ್ಚು ಕಷ್ಟಕರವಾದ ಹಲವಾರು ವೈದ್ಯಕೀಯ ಪರಿಸ್ಥಿತಿಗಳಿವೆ. ಥೈರಾಯ್ಡ್ (Thyroid) ಕಾಯಿಲೆಯಿಂದ ಹಾರ್ಮೋನ್ ಮಟ್ಟ ಹೆಚ್ಚುತ್ತದೆ ನಿಮ್ಮ ಚಯಾಪಚಯ ಕ್ರಿಯೆಯನ್ನು ಕಡಿಮೆ ಮಾಡುತ್ತದೆ. ತೂಕದ ವಿಷಯಕ್ಕೆ ಬಂದಾಗ ಹಾರ್ಮೋನುಗಳು ಒಂದು ದೊಡ್ಡ ಅಂಶವಾಗಿದೆ, ಮತ್ತು ಹಾರ್ಮೋನ್ ಮಟ್ಟಗಳು ಬೊಜ್ಜು (Fat) ಹೆಚ್ಚಲು ಕಾರಣವಾಗುತ್ತವೆ.
#8 ಪ್ರೇರಣೆ ( MOTIVATION)
ಇದು ಜಯಿಸಲು ಎಲ್ಲಕ್ಕಿಂತ ಕಠಿಣ ಅಡೆತಡೆಗಳಲ್ಲಿ ಒಂದಾಗಿರಬಹುದು. ನಮ್ಮಲ್ಲಿ ಅನೇಕರಿಗೆ, ವ್ಯಾಯಾಮವು ನೀರಸವಾಗಿದೆ ಅಥವಾ ನಮ್ಮ ವೇಳಾಪಟ್ಟಿಯಲ್ಲಿ ಕೆಲಸ ಮಾಡಲು ನಮಗೆ ಕಷ್ಟವಾಗುತ್ತದೆ. ತೂಕ ಇಳಿಸುವ ಯೋಜನೆಗೆ ಗಂಭೀರ ಬದ್ಧತೆ ಯಿಲ್ಲದೆ ಹೋದರೆ ಹೊಟ್ಟೆಯ ಫ್ಯಾಟ್ ಕರಗಿಸಲು ಸಾದ್ಯವಿಲ್ಲ.