ಪೂರ್ತಿ ದಿನ ಇಲ್ಲದ ಜ್ವರ… ಸಂಜೆ ಆಗುತ್ತಿದ್ದಂತೆ ಕಾಡೋದಕ್ಕೆ ಶುರು ಮಾಡೋದು ಯಾಕೆ?
ಸಾಮಾನ್ಯವಾಗಿ ಶರೀರದಲ್ಲಿ ಹಾರ್ಮೋನಲ್ ಬದಲಾವಣೆಗಳ ಕಾರಣದಿಂದ ಸಂಜೆ ಸಮಯದಲ್ಲಿ ಜ್ವರ ಬರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಪೀರಿಯಡ್ಸ್ ಮತ್ತು ಮೆನೋಪಾಜ್ ಸಮಯದಲ್ಲಿ ಶರೀರದ ತಾಪಮಾನ ಸಂಜೆ ಸಮಯದಲ್ಲಿ ಹೆಚ್ಚಾಗಬಹುದು.

ನೀವು ಯಾವಾಗಲಾದರೂ ಇಂತಹದ್ದೇನಾದರೂ ಅನುಭವಿಸಿದ್ದೀರಾ, ನೀವು ದಿನ ಪೂರ್ತಿ ಚೆನ್ನಾಗಿಯೇ ಇರುತ್ತೀರಿ, ಆದರೆ ಸಂಜೆಯಾಗುತ್ತಿದ್ದಂತೆ ಜ್ವರ (fever in the evening) ಬರೋದಕ್ಕೆ ಶುರುವಾಗುತ್ತೆ. ಈ ಸಂದರ್ಭದಲ್ಲಿ ನಿಮಿಗೆ ಏನು ಮಾಡಬೇಕು ಅನ್ನೋದೆ ಗೊತ್ತಾಗೋದಿಲ್ಲ. ದಿನ ಪೂರ್ತಿ ಚೆನ್ನಾಗಿತ್ತು, ಸೂರ್ಯ ಮುಳುಗುವ ಸಮಯದಲ್ಲಿ ಹೀಗೆ ಜ್ವರ ಬರೋದು ಯಾಕೆ? ಈ ಕುರಿತು ಜನರ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಬನ್ನಿ ಅದರ ಕುರಿತು ತಜ್ಞರು ಏನು ಹೇಳುತ್ತಾರೆ ನೋಡೋಣ.
ತಜ್ಞರು ಸಂಜೆಯ ಹೊತ್ತು ಜ್ವರ ಬರೋದಕ್ಕೆ ಪ್ರಮುಖ ಎರಡು ಕಾರಣಗಳ ಬಗ್ಗೆ ತಿಳಿಸಿದ್ದಾರೆ. ಮೊದಲನೆಯದು ನೈಸರ್ಗಿಕ ಕಾರಣವಾಗಿರಬಹುದು ಮತ್ತು ಎರಡನೆಯದು ಯಾವುದೋ ಕಾಯಿಲೆಯ ಪರಿಣಾಮ ಇರಬಹುದು. ನ್ಯಾಚುರಲ್ ಆಗಿ ಹಲವಾರು ಕಾರಣಗಳಿಂದಾಗಿ ನಿಮಗೆ ಸಂಜೆಯ ನಂತರ ಜ್ವರ ಬರುವ ಸಾಧ್ಯತೆ ಇದೆ. ಇದಲ್ಲದೆ, ಇತರ ಕಾರಣಗಳ ಬಗ್ಗೆ ಹೇಳೋದಾದರೆ, ನೀವು ಯಾವುದೇ ಶಾರೀರಿಕ ಚಟುವಟಿಕೆ (physical activity) ಮಾಡಿದಾಗ ಅಥವಾ ಕಡಿಮೆ ನೀರು ಕುಡಿಯೋದರಿಂದ ಕೂಡ ನಿಮಗೆ ಸಂಜೆಯ ಸಮಯದಲ್ಲಿ ಜ್ವರ ಬರೋದು ಸಾಮಾನ್ಯ.
ಇದಲ್ಲದೇ ಹಾರ್ಮೋನ್ ಗಳ ಬದಲಾವಣೆಯಿಂದಲೂ (hormonal changes) ಜ್ವರ ಬರುತ್ತೆ. ಸಾಮಾನ್ಯವಾಗಿ ಶರೀರದಲ್ಲಿ ಹಾರ್ಮೋನಲ್ ಬದಲಾವಣೆಗಳ ಕಾರಣದಿಂದ ಸಂಜೆ ಸಮಯದಲ್ಲಿ ಜ್ವರ ಬರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಪೀರಿಯಡ್ಸ್ ಮತ್ತು ಋತುಬಂಧದ ಸಮಯದಲ್ಲಿ ಶರೀರದ ತಾಪಮಾನ ಸಂಜೆ ಸಮಯದಲ್ಲಿ ಹೆಚ್ಚಾಗಬಹುದು. ಅಲ್ಲದೇ ಕೆಲವು ಕಾಯಿಲೆಗಳ ಕಾರಣದಿಂದ ಕೂಡ ಸಂಜೆ ಸಮಯ ಜ್ವರ ಬರುತ್ತೆ. ಉದಾಹರಣೆಗೆ ಟಿಬಿ, ಟೈಫಾಯ್ಡ್ ಮತ್ತು ಕ್ಯಾನ್ಸರ್‌ನಿಂದ ಬಳಲುವ ರೋಗಿಯ ಶರೀರದ ತಾಪಮಾನ ಸಂಜೆ ಸಮಯದಲ್ಲಿ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರೋಗಿಯು ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.
ತಜ್ಞರು ಹೇಳುವಂತೆ ಸಾಮಾನ್ಯವಾಗಿ ಶರೀರದ ಸಾಮಾನ್ಯ ತಾಪಮಾನ 97 ಫಾರೆನ್ಹೈಟ್ ನಿಂದ 99 ಫಾರೆನ್ಹೈಟ್ ವರೆಗೆ ಇರುತ್ತದೆ. ಬಹಳಷ್ಟು ಜನರಲ್ಲಿ ಇದು 98.5 ಫಾರೆನ್ಹೈಟ್ ಇರುತ್ತದೆ, ಆದರೆ ಕೆಲವೊಮ್ಮೆ ಕೆಲವು ಕಾರಣಗಳಿಂದ ಶರೀರದ ತಾಪಮಾನ (body temperature) ಹೆಚ್ಚಾಗುತ್ತದೆ. ನಿಮ್ಮ ದೇಹದ ತಾಪಮಾನ ಇದಕ್ಕಿಂತ ಹೆಚ್ಚಿಗೆ ಹೋದರೆ ಆವಾಗ ಚಿಂತೆ ಮಾಡಬೇಕಾಗಿ ಬರುತ್ತೆ.
ತಜ್ಞರ ಪ್ರಕಾರ, ನೀವು ಸಂಜೆ ಸಮಯದಲ್ಲಿ ಕ್ಯಾನ್ಸರ್ (cancer), ಟಿಬಿ ಮುಂತಾದ ಕಾಯಿಲೆಗಳ ಕಾರಣದಿಂದ ಜ್ವರದಿಂದ ಬಳಲುತ್ತಿದ್ದರೆ, ಈ ಪರಿಸ್ಥಿತಿಯಲ್ಲಿ ನೀವು ತಕ್ಷಣವೇ ವೈದ್ಯರಿಂದ ಸಲಹೆ ಪಡೆಯಬೇಕು, ಏಕೆಂದರೆ ಈ ಪರಿಸ್ಥಿತಿಯಲ್ಲಿ ನೀವು ಮೊದಲಿಗೆ ಈ ಕಾಯಿಲೆಗಳ ಚಿಕಿತ್ಸೆ ಮಾಡಿಸಬೇಕು, ನಂತರವೇ ನೀವು ಸಂಜೆ ಸಮಯದಲ್ಲಿ ಉಂಟಾಗುವ ಜ್ವರದಿಂದ ಮುಕ್ತರಾಗುತ್ತೀರಿ.
ಇದರ ಹೊರತಾಗಿ ನೀವು ನೈಸರ್ಗಿಕ ಕಾರಣಗಳಿಂದ ನಿಮಗೆ ಜ್ವರ ಬರುತ್ತಿದೆ ಎಂದು ನಿಮಗೆ ಅನಿಸಿದರೆ, ಆ ಪರಿಸ್ಥಿತಿಯಲ್ಲಿ ನೀವು ದಿನಕ್ಕೆ ಎರಡರಿಂದ, ಎರಡೂವರೆ ಲೀಟರ್ ನೀರು ಕುಡಿಯಬೇಕು. ಇದರ ಜೊತೆಗೆ ನೀವು ಯೋಗವೂ ಮಾಡಬಹುದು. ಅಲ್ಲದೆ, ಮಧ್ಯಾಹ್ನದ ಸಮಯದಲ್ಲಿ ವಿಶ್ರಾಂತಿ ಕೂಡ ತೆಗೆದುಕೊಳ್ಳಬಹುದು, ಏಕೆಂದರೆ ಕೆಲವೊಮ್ಮೆ ದೇಹಕ್ಕೆ ಹೆಚ್ಚು ಶ್ರಮವಾದಾಗ ಕೂಡ ಜ್ವರ ಬರುತ್ತೆ. ಇದಲ್ಲದೇ ಹೊರಗಿನ ಪರಿಸರದಲ್ಲಿ ನಡೆಯುವ ಬದಲಾವಣೆಗಳ ಕಾರಣದಿಂದ ಸಂಜೆ ಹೊತ್ತಿಗೆ ಜ್ವರ ಬರುತ್ತದೆ, ಹಲವಾರು ಬಾರಿ ಹೆಚ್ಚು ತಾಪಮಾನ ಮತ್ತು ಹೆಚ್ಚು ತಂಪಿನ ಕಾರಣದಿಂದಲೂ ಜ್ವರ ಬರುವ ಸಾಧ್ಯತೆ ಇದೆ.