MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಅರ್ಧ ಗಂಟೆ ಕಡಿಮೆ ಸೋಷಿಯಲ್ ಮೀಡಿಯಾ ಬಳಸಿ, ಆರೋಗ್ಯ ಹೇಗೆ ಸುಧಾರಿಸುತ್ತೋ ನೋಡಿ!

ಅರ್ಧ ಗಂಟೆ ಕಡಿಮೆ ಸೋಷಿಯಲ್ ಮೀಡಿಯಾ ಬಳಸಿ, ಆರೋಗ್ಯ ಹೇಗೆ ಸುಧಾರಿಸುತ್ತೋ ನೋಡಿ!

ಇಂದು ಹುಡುಕಿದರೂ ಸಹ ಸೋಶಿಯಲ್ ಮೀಡಿಯಾ ಬಳಕೆ ಮಾಡದ ಯುವಕರು ಸಿಗೋದು ತುಂಬಾನೆ ಕಷ್ಟ. ಒಂದೆಡೆ, ಸಾಮಾಜಿಕ ಮಾಧ್ಯಮದ ಹೆಚ್ಚಿನ ಬಳಕೆಯು ಕೆಲವು ಪ್ರಯೋಜನಗಳನ್ನು ತರುತ್ತದೆ, ನಿಜಾ, ಆದರೆ ಮತ್ತೊಂದೆಡೆ, ಅದರ ಅನಾನುಕೂಲತೆಗಳು ಸಹ ಕಡಿಮೆಯಿಲ್ಲ.  ಹಾಗಾಗಿ ಅರ್ಧ ಗಂಟೆ ಸೋಶಿಯಲ್ ಮೀಡಿಯಾದಿಂದ ದೂರ ಉಳಿದ್ರೆ ಏನು ಪ್ರಯೋಜನಗಳಿವೆ ನೋಡೋಣ.  

2 Min read
Suvarna News
Published : Jan 10 2024, 06:19 PM IST
Share this Photo Gallery
  • FB
  • TW
  • Linkdin
  • Whatsapp
18

ಪ್ರಸ್ತುತ ಜಗತ್ತು ಕಂಪ್ಯೂಟರ್ ಕ್ರಾಂತಿಯನ್ನು ಹಿಂದಿಕ್ಕಿ ಡಿಜಿಟಲ್ ಮತ್ತು ವರ್ಚುವಲ್ ಯುಗವನ್ನು (virtual era) ಪ್ರವೇಶಿಸಿದೆ. ಈ ಡಿಜಿಟಲೀಕರಣಗೊಂಡ ಜಗತ್ತಿನಲ್ಲಿ, ಸಾಮಾಜಿಕ ಮಾಧ್ಯಮ ಹೆಚ್ಚಿನ ಜನರ ಜೀವನದ ಆಂತರಿಕ ಭಾಗವಾಗಿದೆ. ಫೇಸ್ಬುಕ್, ಟ್ವಿಟರ್ ನಂತರ, ಈಗ ಹೆಚ್ಚಿನ ಜನರು ರೀಲ್ಸ್ ನೋಡೋದ್ರಲ್ಲೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇದು ಮಾನಸಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸಾಕಷ್ಟು ಅಧ್ಯಯನಗಳೂ ನಡೆದಿವೆ. 
 

28

ಹೆಚ್ಚು ಸೋಶಿಯಲ್ ಮೀಡಿಯಾ (social media) ನೋಡೋದರಿಂದ ಮನಸ್ಸು ಹಾಯಾಗಿರುತ್ತೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ, ಆದರೆ ಹೆಚ್ಚಿನ ಅಧ್ಯಯನಗಳು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುವ ಸಮಯವು ಆತ್ಮವನ್ನು ನಕಾರಾತ್ಮಕತೆಯಿಂದ ತುಂಬುತ್ತದೆ ಎಂದು ಹೇಳಿವೆ.
 

38

ಪ್ರತಿದಿನ ಸೋಷಿಯಲ್ ಮೀಡಿಯಾ ಸಮಯವನ್ನು ಅರ್ಧ ಗಂಟೆ ಕಡಿತಗೊಳಿಸುವುದರಿಂದ ಆತಂಕ ಮತ್ತು ಖಿನ್ನತೆಯ (dpression) ಲಕ್ಷಣಗಳನ್ನು ಕಡಿಮೆ ಮಾಡಬಹುದು ಎಂದು ಈಗ ಅಧ್ಯಯನವೊಂದು ಬಹಿರಂಗಪಡಿಸಿದೆ. ಸೋಶಿಯಲ್ ಮೀಡಿಯಾ ಯಾವ ರೀತಿ ಸಮಸ್ಯೆ ಸೃಷ್ಟಿಸುತ್ತದೆ ಮತ್ತು ಅದರಿಂದ ಹೊರಗೆ ಬರೋದು ಹೇಗೆ ಅನ್ನೋ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ. 
 

48

ಬಳಕೆದಾರರ ಮಾನಸಿಕ ಆರೋಗ್ಯ
ಜರ್ಮನಿಯ ರುಹ್ರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಜೂಲಿಯಾ ಬ್ರೆಲೋಸ್ಕಿಯಾ ತಮ್ಮ ತಂಡದೊಂದಿಗೆ ಈ ವಿಷಯವನ್ನು ಅಧ್ಯಯನ ಮಾಡಿದ್ದಾರೆ. ಈ ಸಂಶೋಧನೆಯು ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಮಾನಸಿಕ ಆರೋಗ್ಯ (mental health) ಮತ್ತು ಯೋಗಕ್ಷೇಮವನ್ನು ತನಿಖೆ ಮಾಡಿದೆ. ಈ ಅಧ್ಯಯನವು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ 166 ಜನರನ್ನು ಒಳಗೊಂಡಿತ್ತು. ಈ ಜನರು ತಮ್ಮ ಕೆಲಸದ ಜೊತೆಗೆ ದಿನಕ್ಕೆ ಕನಿಷ್ಠ 35 ನಿಮಿಷಗಳ ಕಾಲ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿದ್ದರು. 

58

ಈ ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲ ಗುಂಪಿಗೆ ಅವರು ಮೊದಲು ಬಳಸಿದ ರೀತಿಯಲ್ಲಿಯೇ ಸಾಮಾಜಿಕ ಮಾಧ್ಯಮವನ್ನು ಬಳಸಲು ಅವಕಾಶ ನೀಡಲಾಯಿತು, ಆದರೆ ಎರಡನೇ ಗುಂಪಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಒಟ್ಟು ಸಮಯವನ್ನು ಕೇವಲ ಅರ್ಧ ಗಂಟೆ ಕಡಿಮೆ ಮಾಡಲು ಕೇಳಲಾಯಿತು. ಇದನ್ನು ಸುಮಾರು ಒಂದು ವಾರದವರೆಗೆ ಮಾಡಲು ಕೇಳಲಾಯಿತು. ಇದರ ನಂತರ, ಈ ಜನರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಇವುಗಳಲ್ಲಿ ಕೆಲಸದ ಹೊರೆ, ಕೆಲಸದ ತೃಪ್ತಿ, ಬದ್ಧತೆ, ಮಾನಸಿಕ ಆರೋಗ್ಯ, ಒತ್ತಡದ ಮಟ್ಟ (stress level)ಮತ್ತು ಅವರ ನಡವಳಿಕೆಗೆ ಸಂಬಂಧಿಸಿದ ಪ್ರಶ್ನೆಗಳು ಸೇರಿವೆ.

68

ಫಲಿತಾಂಶ ಹೀಗೆ ಹೇಳಿದೆ… 
ಕೇವಲ ಒಂದು ವಾರದ ನಂತರ, ಅನೇಕ ಹಂತಗಳಲ್ಲಿ ಜನರಲ್ಲಿ ಬದಲಾವಣೆಗಳು ಕಂಡುಬಂದವು. ಕೇವಲ ಒಂದು ವಾರದವರೆಗೆ ಸಾಮಾಜಿಕ ಮಾಧ್ಯಮ ಬಳಕೆಯನ್ನು ಅರ್ಧ ಗಂಟೆಗೆ ಸೀಮಿತಗೊಳಿಸುವುದು ಅದ್ಭುತ ಸಕಾರಾತ್ಮಕ ಪರಿಣಾಮಗಳನ್ನು (negative effect) ಕಂಡಿದೆ ಎಂದು ಅಧ್ಯಯನ ಕಂಡುಹಿಡಿದಿದೆ. ಇದು ಕೆಲಸದ ತೃಪ್ತಿಗೆ ಕಾರಣವಾಯಿತು ಮತ್ತು ಮಾನಸಿಕ ಆರೋಗ್ಯವು ಮೊದಲಿಗಿಂತ ಉತ್ತಮವಾಯಿತು ಎಂದು ಜನರು ಹೇಳಿದ್ದರು.

78

ಅಷ್ಟೇ ಅಲ್ಲ ಅರ್ಧ ಗಂಟೆಗಿಂತ ಕಡಿಮೆ ಕಾಲ ಸಾಮಾಜಿಕ ಮಾಧ್ಯಮವನ್ನು (social media) ಬಳಸುವ ಜನರು ಕಚೇರಿಯಲ್ಲಿ ಕಡಿಮೆ ಕೆಲಸದ ಹೊರೆಯನ್ನು ಅನುಭವಿಸುತ್ತಾರೆ ಮತ್ತು ಉತ್ತಮ ಬದ್ಧತೆಯನ್ನು ಹೊಂದಿದ್ದಾರೆ ಎಂದು ಸಂಶೋಧನೆಯ ಮುಖ್ಯಸ್ಥೆ ಜೂಲಿಯಾ ಬ್ರೆಲೋವ್ಸ್ಕಾಯಾ ಹೇಳಿದ್ದಾರೆ. ಇದೆಲ್ಲದರ ಹೊರತಾಗಿ, ಈ ಜನರು ಕಳೆದುಕೊಳ್ಳುವ ಭಯವನ್ನು ಸಹ ಕಳೆದುಕೊಂಡರು. ಈ ಮೊದಲು, ಈ ಜನರು ಸಾಕಷ್ಟು ಆತಂಕವನ್ನು ಅನುಭವಿಸುತ್ತಿದ್ದರು. ಅವರಲ್ಲಿ ಖಿನ್ನತೆಯ ಲಕ್ಷಣಗಳು ಸಹ ಕಡಿಮೆಯಾದವು. 
 

88

ಜೂಲಿಯಾ ಬ್ರೆವೊವ್ಸ್ಕಿಯಾ ಅವರು ನಾವು ಯಾವುದೇ ಎರಡು ಕೆಲಸವನ್ನು ಒಟ್ಟಿಗೆ ಮಾಡಿದಾಗ, ಆ ಕೆಲಸವನ್ನು ಹೊರತುಪಡಿಸಿ ಮನಸ್ಸು ಬೇರೆಡೆಗೆ ಅಲೆದಾಡುತ್ತದೆ. ಯಾಕೆಂದರೆ ನಮ್ಮ ಮೆದುಳಿಗೆ ಈ ವಿಷಯಗಳನ್ನು ಏಕಕಾಲದಲ್ಲಿ ಎದುರಿಸುವ ಸಾಮರ್ಥ್ಯವಿಲ್ಲ. ಇದರೊಂದಿಗೆ, ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆ ಭಯ ಮತ್ತು ಅನುಮಾನದ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಇದಕ್ಕಾಗಿಯೇ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಕಡಿಮೆ ಮಾಡುವುದು ಮುಖ್ಯ ಎಂದು ಅವರು ತಿಳಿಸಿದ್ದಾರೆ. 

About the Author

SN
Suvarna News
ಸಾಮಾಜಿಕ ಮಾಧ್ಯಮ
ಇನ್‌ಸ್ಟಾಗ್ರಾಂ
ರೀಲ್ಸ್
ಆರೋಗ್ಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved