ಬೇಕಾಬಿಟ್ಟಿ ಉಪ್ಪು ತಿನ್ನೋರ ಗಮನಕ್ಕೆ! ಆರೋಗ್ಯ ಹದಗೆಡಬಹುದು ಹುಷಾರು
ಉಪ್ಪು ನಮ್ಮ ದೇಹಕ್ಕೆ ಆಗಿರಬಹುದು ಅಥವಾ ನಮ್ಮ ಆಹಾರಕ್ಕೆ ಆಗಿರಬಹುದು. ಅತ್ಯಗತ್ಯವಾಗಿ ಬೇಕಾಗಿರುವಂತಹ ವಸ್ತು. ಇದನ್ನ ಕಡಿಮೆ ತಿಂದರೆ ಹೇಗೆ ದೇಹದ ಮೇಲೆ ಪರಿಣಾಮ ಬೀರುತ್ತದೆಯೋ? ಅದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ಸೇವಿಸೋದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಉಪ್ಪು ಪ್ರತಿಯೊಬ್ಬರ ಆಹಾರದ ಅವಿಭಾಜ್ಯ ಅಂಗ. ಇದು ದೇಹದ ದ್ರವ ಸಮತೋಲನ ಕಾಪಾಡಿಕೊಳ್ಳುವಲ್ಲಿ ಮತ್ತು ನರಗಳು ಮತ್ತು ಸ್ನಾಯುಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹದ ಎಲೆಕ್ಟ್ರೋಲೈಟ್ ಸಮತೋಲನಕ್ಕೂ (Electrolyte Balance) ಸಹಾಯ ಮಾಡುತ್ತದೆ. ಉಪ್ಪಿನಿಂದ ಹಲವಾರು ಪ್ರಯೋಜನಗಳಿದ್ದರೂ, ಅತಿಯಾದ ಉಪ್ಪನ್ನು ಸೇವಿಸುವುದರಿಂದ ನಿಮ್ಮ ದೇಹದ ವಿವಿಧ ಭಾಗಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಅತಿಯಾದ ಉಪ್ಪಿನ (intake more salt) ಸೇವನೆಯು ಅಧಿಕ ರಕ್ತದೊತ್ತಡದ (Blood Pressure) ಮಟ್ಟಕ್ಕೆ ಕಾರಣವಾಗಬಹುದು, ಇದು ಅಂತಿಮವಾಗಿ ಹೃದ್ರೋಗ (Heart Problem) ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡವು ಮೂತ್ರಪಿಂಡಗಳಿಗೆ (Kidney) ಕೆಟ್ಟದ್ದು. ಕಾಲಾನಂತರದಲ್ಲಿ ಅದಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದಲ್ಲದೆ, ಇದು ಮೂಳೆಗಳ ನಷ್ಟ ಮತ್ತು ಮೆಮೊರಿ ಪವರ್ ವೀಕ್ ಆಗೋದಕ್ಕೂ ಕಾರಣವಾಗಿದೆ. ಉಪ್ಪನ್ನು ಸೇವಿಸುವುದು ಮುಖ್ಯವಾದರೂ, ಅದರ ಅತಿಯಾದ ಸೇವನೆಯು ದೇಹದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ, ಆಹಾರದಲ್ಲಿ ಅಗತ್ಯವಾದ ಪ್ರಮಾಣದ ಮಾತ್ರ ಸೇರಿಸಬೇಕು.
Image: Getty
ಉಪ್ಪಿನ ಅತಿಯಾದ ಸೇವನೆ ನಿಮ್ಮ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ.
ರಕ್ತದೊತ್ತಡ (high blood pressure)
ಉಪ್ಪಿನ ಅತಿಯಾದ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಏಕೆಂದರೆ ಉಪ್ಪಿನಲ್ಲಿ ಸೋಡಿಯಂ ಇದೆ ಮತ್ತು ದೇಹದಲ್ಲಿ ಹೆಚ್ಚು ಸೋಡಿಯಂ ನೀರಿನ ಧಾರಣಕ್ಕೆ ಕಾರಣವಾಗಬಹುದು. ಇದರಿಂದಾ ರಕ್ತದೊತ್ತಡ ಉಂಟಾಗುತ್ತೆ.
ಬುದ್ಧಿ ಶಕ್ತಿ ಕಡಿಮೆಯಾಗುತ್ತೆ (Cognitive Function)
ಉಪ್ಪು ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ಮೆಮೊರಿ ಪವರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನಿಮ್ಮ ಸ್ಮರಣೆ, ಗಮನ ಮತ್ತು ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ಮಕ್ಕಳಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತೆ.
ಮೂತ್ರಪಿಂಡಕ್ಕೆ ಹಾನಿ (kidney damage)
ಮೂತ್ರಪಿಂಡಗಳು ದೇಹದಲ್ಲಿ ಸರಿಯಾದ ದ್ರವ ಸಮತೋಲನ ಕಾಪಾಡಿಕೊಳ್ಳಲು ಸಹಾಯ ಮಾಡುವುದರಿಂದ ಅವು ಪ್ರಮುಖ ಅಂಗವಾಗಿದೆ. ಆದರೆ ಹೆಚ್ಚುವರಿ ಉಪ್ಪನ್ನು ಸೇವಿಸಿದಾಗ, ಅದು ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ ಮತ್ತು ಅವುಗಳ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಕೊನೆಗೆ ಮೂತ್ರಪಿಂಡ ಸಂಪೂರ್ಣವಾಗಿ ಹಾನಿಯಾಗುತ್ತೆ.
ಹೃದಯ ಸಂಬಂಧಿ ಸಮಸ್ಯೆ (heart problem)
ನೀವು ಅಧಿಕ ರಕ್ತದೊತ್ತಡದ ಮಟ್ಟವನ್ನು ಹೊಂದಿದ್ದರೆ, ಅದು ಹೃದ್ರೋಗ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ಎಷ್ಟು ಉಪ್ಪು ಸೇವಿಸುತ್ತಿರಿ ಎನ್ನುವ ಬಗ್ಗೆ ಜಾಗರೂಕರಾಗಿರೋದು ತುಂಬಾನೆ ಮುಖ್ಯ.
ದೇಹವು ಊದಿಕೊಳ್ಳುತ್ತದೆ (Water Retention)
ನೀವು ಹೆಚ್ಚುವರಿ ಉಪ್ಪನ್ನು ಸೇವಿಸಿದಾಗ, ನಿಮ್ಮ ದೇಹವು ಹೆಚ್ಚುವರಿ ನೀರನ್ನು ಉಳಿಸಿಕೊಳ್ಳಲು ಕಾರಣವಾಗುತ್ತದೆ, ಇದರಿಂದಾಗಿ ಕೈ, ಪಾದ ಮತ್ತು ಕಾಲುಗಳಂತಹ ನಿಮ್ಮ ದೇಹದ ಕೆಲವು ಭಾಗಗಳು ಊದಿಕೊಳ್ಳುತ್ತದೆ.
ಬಾಯಾರಿಕೆ ಹೆಚ್ಚುತ್ತೆ (feel thirsty)
ಉಪ್ಪು ನೈಸರ್ಗಿಕ ಬಾಯಾರಿಕೆ ಉತ್ತೇಜಕವಾಗಿದೆ, ಆದಾಗ್ಯೂ, ನೀವು ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇವಿಸಿದಾಗ, ಅದು ನಿಮಗೆ ಹೆಚ್ಚು ಬಾಯಾರಿಕೆಯನ್ನುಂಟು ಮಾಡುತ್ತದೆ. ಇದರಿಂದ ಹೆಚ್ಚು ಹೆಚ್ಚು ನೀರು ಸೇವಿಸಬೇಕಾಗಿ ಬರುತ್ತೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಇದೆ.
ಆಸ್ಟಿಯೊಪೊರೋಸಿಸ್ (osteoporosis)
ನೀವು ಹೆಚ್ಚಿನ ಪ್ರಮಾಣದ ಉಪ್ಪನ್ನು ಸೇವಿಸಿದಾಗ, ಅದು ಮೂತ್ರದ ಮೂಲಕ ಕ್ಯಾಲ್ಸಿಯಂ ವಿಸರ್ಜನೆಯನ್ನು ಹೆಚ್ಚಿಸುತ್ತದೆ. ಇದರಿಂದ ಆಸ್ಟಿಯೊಪೊರೋಸಿಸ್ ಸಮಸ್ಯೆ ಹೆಚ್ಚುತ್ತೆ. ಈ ಸಮಸ್ಯೆಯಿಂದಾಗಿ ದೇಹದ ಮೂಳೆಗಳು ಶಕ್ತಿ ಕಳೆದುಕೊಂಡು ತುಂಬಾನೆ ದುರ್ಬಲವಾಗುತ್ತವೆ.