ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಉಂಟಾದ್ರೆ ಏನಾಗುತ್ತೆ?
ಪ್ರತಿ ವರ್ಷ ಜೂನ್ ತಿಂಗಳಲ್ಲಿ ಪುರುಷರ ಆರೋಗ್ಯ ಸಪ್ತಾಹ (mens health week) ಆಚರಿಸಲಾಗುತ್ತದೆ, ಆ ಮೂಲಕ ಪುರುಷರಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಅಥವಾ ಜಾಗೃತಿ ಮೂಡಿಸೋದು ಇದರ ಪ್ರಮುಖ ಉದ್ದೇಶವಾಗಿದೆ. ಈ ಪುರುಷರ ಆರೋಗ್ಯ ಸಪ್ತಾಹದಲ್ಲಿ ನಾವಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಬಗ್ಗೆ ಮಾಹಿತಿ ನೀಡುತ್ತೇವೆ.
ಟೆಸ್ಟೋಸ್ಟೆರಾನ್ ಮುಖ್ಯವಾಗಿ ಪುರುಷರಲ್ಲಿ ಕಂಡುಬರುವ ಹಾರ್ಮೋನ್ ಆಗಿದೆ. ಸಂತಾನೋತ್ಪತ್ತಿ ಅಂಗಗಳ ಬೆಳವಣಿಗೆ, ಕೂದಲಿನ ಬೆಳವಣಿಗೆ, ಸದೃಢ ಮೂಳೆಗಳು(Bone) ಮುಂತಾದ ದೇಹದ ಅನೇಕ ಕಾರ್ಯಗಳಿಗೆ ಟೆಸ್ಟೋಸ್ಟೆರಾನ್ ಅತ್ಯಂತ ಪ್ರಮುಖವಾಗಿ ಬೇಕಾಗಿರುವ ಹಾರ್ಮೋನ್ ಆಗಿದೆ.
ಒಂದು ವೇಳೆ ದೇಹದಲ್ಲಿ ಟೆಸ್ಟೋಸ್ಟೆರಾನ್ ಕೊರತೆ ಉಂಟಾದರೆ ಅನೇಕ ರೀತಿಯ ಸಮಸ್ಯೆ ಪ್ರಾರಂಭವಾಗುತ್ತವೆ. ಇದರಿಂದ ಲೈಂಗಿಕ ಆಸಕ್ತಿ (Sex), ವೀಕ್ ಸ್ನಾಯು, ಕೂದಲು ಸರಿಯಾಗಿ ಬೆಳೆಯದೇ ಇರೋದು ಮೊದಲಾದ ಸಮಸ್ಯೆ ಕಂಡು ಬರುತ್ತವೆ.
ಪ್ರತಿ ವರ್ಷ, ಜೂನ್ ತಿಂಗಳಲ್ಲಿ, ಪುರುಷರ ಆರೋಗ್ಯ ಸಪ್ತಾಹ ಆಚರಿಸಲಾಗುತ್ತದೆ, ಇದರಿಂದ ಪುರುಷರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬಹುದು. ಈ ವರ್ಷ, ಈ ವಾರವನ್ನು ಜೂನ್ 13 ರಿಂದ ಜೂನ್ 19 ರವರೆಗೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟೆಸ್ಟೋಸ್ಟೆರಾನ್ (Testosterone) ಕಡಿಮೆಯಾದರೆ ಪುರುಷರಲ್ಲಿ ಏನೆಲ್ಲಾ ಸಮಸ್ಯೆ ಕಂಡು ಬರುತ್ತವೆ ಅನ್ನೋದನ್ನು ನೋಡೋಣ.
ಟೆಸ್ಟೋಸ್ಟೆರಾನ್ ಕೊರತೆ ಉಂಟಾದಾಗ ಏನಾಗುತ್ತದೆ?
ಸ್ನಾಯು (Muscle) ನಷ್ಟ: ಟೆಸ್ಟೋಸ್ಟೆರಾನ್ ಕೊರತೆಯು ಸ್ನಾಯುಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂದರೆ, ಟೆಸ್ಟೋಸ್ಟೆರಾನ್ ಮಟ್ಟಗಳಲ್ಲಿನ ಇಳಿಕೆಯು ಸ್ನಾಯುವಿನ ದ್ರವ್ಯರಾಶಿಯಲ್ಲಿ ಇಳಿಕೆಗೆ ಕಾರಣವಾಗಬಹುದು, ಇದರಿಂದಾಗಿ ಸ್ನಾಯುಗಳು ದುರ್ಬಲಗೊಳ್ಳಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಕೂದಲು ಉದುರುವಿಕೆ: ಟೆಸ್ಟೋಸ್ಟೆರಾನ್ ಕೂದಲಿನ ಉತ್ಪಾದನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಟೆಸ್ಟೋಸ್ಟೆರಾನ್ ಕೊರತೆಯು ಕೂದಲಿನ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಪರಿಣಾಮ ಬೀರುತ್ತೆ. ಕೂದಲು ಉದುರಲು (Hair fall) ಸಹ ಪ್ರಾರಂಭವಾಗುತ್ತೆ.
ಲೈಂಗಿಕ ಆಸಕ್ತಿ ಕಡಿಮೆಯಾಗುತ್ತೆ : ಟೆಸ್ಟೋಸ್ಟೆರಾನ್ ಲೈಂಗಿಕ ಆಸಕ್ತಿಯನ್ನು ನಿಯಂತ್ರಿಸುತ್ತದೆ. ದೇಹದಲ್ಲಿ ಟೆಸ್ಟೋಸ್ಟೆರಾನ್ ಅಂಶ ಕಡಿಮೆಯಾದರೆ ಇದು ಲೈಂಗಿಕ ನಿರಾಸಕ್ತಿಗೆ ಕಾರಣವಾಗುತ್ತದೆ. ಇದರಿಂದ ನಿಮ್ಮ ಸೆಕ್ಸ್ ಲೈಫ್ (Sex life)ಮೇಲೆ ಪರಿಣಾಮ ಬೀರುತ್ತದೆ.
ಕೆಂಪು ರಕ್ತ ಕಣಗಳ (RBC)ಸಂಖ್ಯೆ ಕಡಿಮೆಯಾಗುತ್ತೆ : ಟೆಸ್ಟೋಸ್ಟೆರಾನ್ ಕೊರತೆಯು ರಕ್ತಹೀನತೆಯ ಹೆಚ್ಚಿನ ಅಪಾಯವನ್ನುಂಟು ಮಾಡುತ್ತೆ. ಅಲ್ಲದೇ ಇದು ರಕ್ತದಲ್ಲಿ ಆರೋಗ್ಯಕರ ಕೆಂಪು ರಕ್ತ ಕಣಗಳ ಕೊರತೆಗೆ ಸಹ ಕಾರಣವಾಗುತ್ತೆ. ಇದು ತಲೆತಿರುಗುವಿಕೆ, ಏಕಾಗ್ರತೆಯ ಕೊರತೆ ಮತ್ತು ಹೃದಯ ಬಡಿತದ ಹೆಚ್ಚಳ ಮೊದಲಾದ ಸಮಸ್ಯೆಗಳನ್ನು ಉಂಟು ಮಾಡುತ್ತೆ.
ಖಿನ್ನತೆ: ಟೆಸ್ಟೋಸ್ಟೆರಾನ್ ಕೊರತೆಯಿಂದ ದೈಹಿಕ ಬದಲಾವಣೆ ಜೊತೆಗೆ, ಮಾನಸಿಕ ಆರೋಗ್ಯದ ಮೇಲೆ ಸುಲಭ ಪರಿಣಾಮ ಬೀರಬಹುದು. ಇದು ಜ್ಞಾಪಕಶಕ್ತಿ (Memory power) ಮತ್ತು ಏಕಾಗ್ರತೆಯ ಮೇಲೂ ಪರಿಣಾಮ ಬೀರಬಹುದು. ಈ ಸಮಸ್ಯೆ ಕಂಡು ಬಂದ ತಕ್ಷಣ ಎಚ್ಚರವಹಿಸಿ.