ನಡಿಗೆ vs ಮೆಟ್ಟಿಲು ಹತ್ತುವುದು : ಬೇಗ ತೂಕ ಇಳಿಸೋಕೆ ಯಾವುದು ಬೆಸ್ಟ್ ?
Climbing Or Walking: ತೂಕ ಇಳಿಸಿಕೊಳ್ಳುವುದು ಈ ಕಾಲದಲ್ಲಿ ಹೆಚ್ಚಿನವರಿಗೆ ದೊಡ್ಡ ಸಮಸ್ಯೆ. ತೂಕ ಹೆಚ್ಚಾಗುವುದರಿಂದ ಅದೊಂದೇ ಸಮಸ್ಯೆಯಲ್ಲ, ಇತರ ಸಮಸ್ಯೆಗಳನ್ನೂ ತಂದೊಡ್ಡುವ ಅಪಾಯವಿದೆ. ಅದಕ್ಕಾಗಿಯೇ ಅನೇಕರು ತೂಕ ಇಳಿಸಿಕೊಳ್ಳುವುದರ ಮೇಲೆ ಗಮನ ಹರಿಸುತ್ತಾರೆ. ಹಾಗಾದರೆ ಹೆಚ್ಚು ಕ್ಯಾಲೊರಿಗಳನ್ನು ಕರಗಿಸಿ, ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ವ್ಯಾಯಾಮ ಯಾವುದು ಎಂದು ಇಲ್ಲಿ ನೋಡಬಹುದು.

ತೂಕ ಇಳಿಸುವ ಟಿಪ್ಸ್!
ತೂಕ ಇಳಿಸುವುದರ ಜೊತೆಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಅಂತ್ಯ ಹಾಕುವ ಉತ್ತಮ ವ್ಯಾಯಾಮ ಎಂದರೆ ಅದು ನಡಿಗೆ. ಅದೇ ರೀತಿ ಮೆಟ್ಟಿಲು ಹತ್ತುವುದರಿಂದ ಕೂಡ ಬಹಳ ಪ್ರಯೋಜನಗಳಿವೆ. ಈಗ ನಾವು ಇಲ್ಲಿ ಯಾವುದರಿಂದ ಆರೋಗ್ಯಕ್ಕೆ ಉತ್ತಮ ಲಾಭ ಎಂಬುದನ್ನು ನೋಡೋಣ.
ಮೆಟ್ಟಿಲು ಹತ್ತುವುದು vs ನಡಿಗೆ
ಕೇವಲ ವ್ಯಾಯಾಮಗಳಿಂದ ತೂಕ ಇಳಿಸಲು ಸಾಧ್ಯವಿಲ್ಲ. ಸರಿಯಾದ ಆಹಾರ ಪದ್ಧತಿ ಇರಬೇಕು. ಆದರೆ ನಡೆಯುವುದಕ್ಕಿಂತ ಮೆಟ್ಟಿಲು ಹತ್ತುವ ವ್ಯಾಯಾಮ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ.
ಮೆಟ್ಟಿಲು ಹತ್ತುವ ವ್ಯಾಯಾಮ
ನಡೆಯುವುದಕ್ಕಿಂತ ಬೇಗನೆ ಕ್ಯಾಲೊರಿಗಳನ್ನು ಬರ್ನ್ ಮಾಡಲು ಮೆಟ್ಟಿಲು ಹತ್ತುವುದು ಸಹಾಯ ಮಾಡುತ್ತದೆ. ಇದಕ್ಕೆ ನಡೆಯುವುದಕ್ಕಿಂತ ಹೆಚ್ಚು ಶಕ್ತಿಯನ್ನು ಖರ್ಚು ಮಾಡುತ್ತೇವೆ.
ನಿಮಗೆ ಗೊತ್ತಾ?
ದಿನಕ್ಕೆ ಕನಿಷ್ಠ 15 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತಿದರೆ 45 ನಿಮಿಷಗಳ ಕಾಲ ಚುರುಕಾಗಿ ನಡೆದ ಫಲಿತಾಂಶ ಸಿಗುತ್ತದೆ. ಅದಕ್ಕಾಗಿಯೇ ಮೆಟ್ಟಿಲುಗಳನ್ನು ಹತ್ತುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಮೆಟ್ಟಿಲು ಹತ್ತುವ ವ್ಯಾಯಾಮ ಏಕೆ ಉತ್ತಮ?
ನಡೆಯುವಾಗ ದೇಹವು ಸಮಾನಾಂತರ ಚಲನೆಯನ್ನು ಹೊಂದಿರುತ್ತದೆ. ಆದರೆ ಮೆಟ್ಟಿಲುಗಳನ್ನು ಹತ್ತುವಾಗ ಕಡಿಮೆ ಸಮಯದಲ್ಲಿ ಹೆಚ್ಚು ಶಕ್ತಿಯನ್ನು ಬಳಸಿ, ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.
ಮೆಟ್ಟಿಲು ಹತ್ತುವ ವ್ಯಾಯಾಮ ಏಕೆ ಉತ್ತಮ?
ನೀವು ಮೆಟ್ಟಿಲುಗಳನ್ನು ಹತ್ತಿ ಇಳಿದರೆ ಕಾಲುಗಳಿಗೆ ಮಾತ್ರವಲ್ಲದೆ ಇಡೀ ದೇಹಕ್ಕೆ ವ್ಯಾಯಾಮ ಮಾಡಿದಂತಾಗುತ್ತದೆ. ನಿಮ್ಮ ಕೀಲುಗಳು ಗಟ್ಟಿಯಾಗಿರಲು ಈ ವ್ಯಾಯಾಮ ಉತ್ತಮ.