ಮುಂದೆ ಅಲ್ಲ ಹಿಂದೆಗೆ ವಾಕ್ ಮಾಡಿ... ಮಂಡಿ ನೋವಿಗಿದು ಒಳ್ಳೆ ಮದ್ದು
ಮುಂದಕ್ಕೆ ನಡೆಯೋ ಬದಲು ಹಿಂದಕ್ಕೆ ನಡೆಯೋದ್ರಿಂದ ಆರೋಗ್ಯಕ್ಕೆ ಒಳ್ಳೆಯದಾ? ಹೌದು ಹಿಂದಕ್ಕೆ ನಡೆಯೋದ್ರಿಂದ ಮೊಣಕಾಲು ನೋವು ನಿವಾರಣೆಯಿಂದ ಹಿಡಿದು ಹಲವು ಪ್ರಯೋಜನಗಳಿವೆ ಅಂತ ತಜ್ಞರು ಹೇಳ್ತಾರೆ.
ನಡಿಗೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿವೆ. ಪ್ರತಿದಿನ ನಡೆಯೋದ್ರಿಂದ ತೂಕ ಇಳಿಸಬಹುದು, ದೇಹ ಆರೋಗ್ಯವಾಗಿರುತ್ತೆ. ಆದ್ರೆ ಹಿಂದಕ್ಕೆ ನಡೆಯೋದ್ರಿಂದ ಏನಾಗುತ್ತೆ ಅಂತ ಯೋಚಿಸಿದ್ದೀರಾ? ಹಿಂದಕ್ಕೆ ನಡೆಯೋದ್ರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ.
ಮುಂದಕ್ಕೆ ನಡೆಯೋದಕ್ಕಿಂತ ಹಿಂದಕ್ಕೆ ನಡೆಯೋದ್ರಿಂದ ಹೆಚ್ಚು ಆರೋಗ್ಯ ಪ್ರಯೋಜನಗಳಿವೆ. ತೂಕ ಇಳಿಸೋದ್ರಿಂದ ಹಿಡಿದು ಮೊಣಕಾಲು ನೋವು ನಿವಾರಣೆವರೆಗೂ ಹಲವು ಲಾಭಗಳಿವೆ.
ತುಂಬಾ ಜನ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಆದರೆ ಈ ರೀತಿ ಹಿಂದಕ್ಕೆ ನಡೆಯೋದ್ರಿಂದ ಮೊಣಕಾಲು ನೋವು, ಸೊಂಟ ನೋವು ಕಡಿಮೆಯಾಗುತ್ತೆ. ಕಾಲುಗಳು ಬಲಗೊಳ್ಳುತ್ತವೆ.
ಹಿಂದಕ್ಕೆ ನಡೆಯೋದ್ರ ಲಾಭಗಳು
ಪ್ರತಿದಿನ ಹಿಂದಕ್ಕೆ ನಡೆಯೋದ್ರಿಂದ ಕಾಲುಗಳು ಬಲಗೊಳ್ಳುತ್ತವೆ,ದೇಹ ತೂಕ ಇಳಿಯುತ್ತೆ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತೆ. ಮನಸ್ಸು ಜಾಗೃತವಾಗುತ್ತದೆ. ನೋಡದೇ ಹೆಜ್ಜೆ ಇಡುವ ಕಾರಣ ಮನಸ್ಸು ಜಾಗರೂಕವಾಗಿರುತ್ತದೆ.