MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಮಹಿಳೆ ಸೊಂಟದ ಗಾತ್ರ ಹೆಚ್ಚಾದ್ರೆ, ಬಂಜೆತನ ಸಮಸ್ಯೆಯೂ ಗ್ಯಾರಂಟಿ

ಮಹಿಳೆ ಸೊಂಟದ ಗಾತ್ರ ಹೆಚ್ಚಾದ್ರೆ, ಬಂಜೆತನ ಸಮಸ್ಯೆಯೂ ಗ್ಯಾರಂಟಿ

ಮಹಿಳೆಯರಲ್ಲಿ ಸೊಂಟದ ಗಾತ್ರ ಹೆಚ್ಚಾದ್ರೆ ಬಂಜೆತನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎಂದು ಅಧ್ಯಯನ ಒಂದರಲ್ಲಿ ತಿಳಿದು ಬಂದಿದೆ. ಹಾಗಿದ್ರೆ ಸೊಂಟದ ಗಾತ್ರ ಮತ್ತು ಬಂಜೆತನ ಹೇಗೆ ಸಂಬಂಧಿಸಿದ,  ಈ ಸಮಸ್ಯೆ ನಿರ್ವಹಿಸಲು ಏನು ಮಾಡಬೇಕು ತಿಳಿಯೋಣ.  

2 Min read
Suvarna News
Published : Dec 24 2023, 07:00 AM IST
Share this Photo Gallery
  • FB
  • TW
  • Linkdin
  • Whatsapp
18

ಪ್ರಪಂಚದಾದ್ಯಂತ ಅನೇಕ ಜನರು ಬಂಜೆತನ  ಸಮಸ್ಯೆಯಿಂದ (infertility problem) ಬಳಲುತ್ತಿದ್ದಾರೆ. ಒಂದು ಅಧ್ಯಯನ ಇದಕ್ಕೆ ಸಂಬಂಧಿಸಿದ ಕಾರಣವೊಂದನ್ನು ಬಹಿರಂಗಪಡಿಸಿದೆ, ಅದರ ಪ್ರಕಾರ ಸೊಂಟದ ಸುತ್ತಳತೆ ಮತ್ತು ಬಂಜೆತನದ ನಡುವೆ ಕೆಲವು ಸಂಬಂಧವಿದೆ. ಆದ್ದರಿಂದ, ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸೊಂಟದ ಸುತ್ತಳತೆ ಮತ್ತು ಬಂಜೆತನದ ನಡುವೆ ಈ ಅಧ್ಯಯನದಲ್ಲಿ ಏನು ಕಂಡುಬಂದಿದೆ ಮತ್ತು ಅದನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ತಿಳಿಯಿರಿ.
 

28

ವಿಶ್ವ ಆರೋಗ್ಯ ಸಂಸ್ಥೆಯ (World health organisation) ಪ್ರಕಾರ, ಬಂಜೆತನವು 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ನಿಯಮಿತ ಅಸುರಕ್ಷಿತ ಲೈಂಗಿಕತೆಯ ನಂತರ ಗರ್ಭಧರಿಸಲು ವಿಫಲವಾಗಿರುವ ಸ್ಥಿತಿಯನ್ನು ಬಂಜೆತನ ಎನ್ನಲಾಗುವುದು. ಈ ಸಮಸ್ಯೆಯು ಅನೇಕ ದಂಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಬಹಳ ಗಂಭೀರವಾದ ಸಮಸ್ಯೆ. ವಿಶ್ವಾದ್ಯಂತ ಲಕ್ಷಾಂತರ ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರಿಂದ ಜನರು ದೈಹಿಕ ಸಮಸ್ಯೆ ಮಾತ್ರವಲ್ಲ, ಮಾನಸಿಕ ಒತ್ತಡಕ್ಕೂ ಒಳಗಾಗಬೇಕಾಗುತ್ತದೆ. ಬಂಜೆತನದ ಹಿಂದೆ ಅನೇಕ ಕಾರಣಗಳಿದ್ದರೂ, ಇತ್ತೀಚಿನ ಅಧ್ಯಯನವು ಇದಕ್ಕೆ ಬಹಳ ಆಘಾತಕಾರಿ ಕಾರಣವನ್ನು ಬಹಿರಂಗಪಡಿಸಿದೆ. 
 

38

ಅಧ್ಯಯನ ಒಂದರ ಪ್ರಕಾರ, ಸೊಂಟದ ಗಾತ್ರವು ಮಹಿಳೆಯರಲ್ಲಿ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. 18 ರಿಂದ 45 ವರ್ಷ ವಯಸ್ಸಿನ 3,239 ಮಹಿಳೆಯರ ಡೇಟಾವನ್ನು ವಿಶ್ಲೇಷಿಸಲಾಗಿದ್ದು, ಇದರಲ್ಲಿ 11.1 ಪ್ರತಿಶತದಷ್ಟು ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಇತ್ತು ಮತ್ತು ಸೊಂಟದ ಗಾತ್ರದಲ್ಲಿ ಒಂದು ಸೆಂಟಿಮೀಟರ್ ಹೆಚ್ಚಳವು ಬಂಜೆತನದ ಅಪಾಯವನ್ನು ಶೇಕಡಾ 3 ರಷ್ಟು ಹೆಚ್ಚಿಸುತ್ತದೆ. ಬಂಜೆತನದ ಹೆಚ್ಚಿನ ಅಪಾಯವನ್ನು ಹೊಂದಿರುವ ಮಹಿಳೆಯರು ಅಧಿಕ ರಕ್ತ ದೊತ್ತಡ (Blood Pressure) ಮತ್ತು ಮಧುಮೇಹ (Diabetes) ಸಮಸ್ಯೆಗಳನ್ನು ಹೊಂದಿದ್ದರು ಮತ್ತು ಹೆಚ್ಚಿನ ಬಿಎಂಐ ಹೊಂದಿದ್ದರು ಎಂದು ತಿಳಿದು ಬಂದಿದೆ. 

48

ಈ ಅಧ್ಯಯನದ ಸಹಾಯದಿಂದ, ಬೊಜ್ಜು (Obesity) ಮತ್ತು ಬಂಜೆತನದ (Infertility) ನಡುವೆ ಸಂಬಂಧವಿದೆ ಎಂಬುದು ಸ್ಪಷ್ಟ. ಆದ್ದರಿಂದ, ಆರೋಗ್ಯಕರ ತೂಕವನ್ನು (healthy weight) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು, ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬಹುದು. ಹೊಟ್ಟೆಯ ಕೊಬ್ಬನ್ನು ಯಾವ ರೀತಿಯಲ್ಲಿ ಕಡಿಮೆ ಮಾಡಬಹುದು ಎಂದು ತಿಳಿಯೋಣ. 
 

58

ದೈಹಿಕ ಚಟುವಟಿಕೆ (Physical activity)
ಸ್ಥೂಲಕಾಯತೆಗೆ ದೊಡ್ಡ ಕಾರಣವೆಂದರೆ ನಮ್ಮ ಜಡ ಜೀವನಶೈಲಿ. ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆಯಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಆದ್ದರಿಂದ, ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನ. ಇದು ನಿಮ್ಮ ದೇಹದ ಕೊಬ್ಬನ್ನು ಕರಗಿಸುತ್ತದೆ ಮತ್ತು ನಿಮ್ಮ ತೂಕವನ್ನು ಸಹ ಕಾಪಾಡಿಕೊಳ್ಳುತ್ತದೆ. ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡಿ. 

68

ಆರೋಗ್ಯಕರ ಆಹಾರ (Healthy food)
ನಿಮ್ಮ ಆಹಾರದಲ್ಲಿ ತರಕಾರಿಗಳು, ಹಣ್ಣುಗಳು, ಧಾನ್ಯಗಳು ಇತ್ಯಾದಿಗಳನ್ನು ಸೇರಿಸಿ ಮತ್ತು ಸಂಸ್ಕರಿಸಿದ ಆಹಾರಗಳು, ಹೆಚ್ಚಿನ ಸಕ್ಕರೆ ಮತ್ತು ಉಪ್ಪು ಆಹಾರವನ್ನು ತಪ್ಪಿಸಿ. ಆರೋಗ್ಯಕರ ಆಹಾರದ ಸಹಾಯದಿಂದ, ನೀವು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಬಹುದು. 
 

78

ಉತ್ತಮ ನಿದ್ರೆ (Healthy sleep)
ನಿದ್ರೆಯ ಕೊರತೆಯೂ ಬೊಜ್ಜಿಗೆ ಕಾರಣವಾಗಬಹುದು. ಆದ್ದರಿಂದ ಪ್ರತಿದಿನ 8 ಗಂಟೆಗಳ ನಿದ್ರೆ ಪಡೆಯಲು ಪ್ರಯತ್ನಿಸಿ. ಇದು ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಪ್ರಯೋಜನಗಳನ್ನು ನೀಡುತ್ತದೆ. 

88

ಒತ್ತಡ ನಿರ್ವಹಿಸಿ (manage stress)
ಒತ್ತಡದಿಂದಾಗಿ, ನಮ್ಮ ದೇಹವು ಹಾರ್ಮೋನ್ ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಒತ್ತಡದಿಂದಾಗಿ ತೂಕ ಹೆಚ್ಚಾಗುವ ಅಪಾಯವೂ ಹೆಚ್ಚಾಗುತ್ತದೆ. 

About the Author

SN
Suvarna News
ಮಹಿಳೆಯರು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved