Asianet Suvarna News Asianet Suvarna News

ಈ ಟೈಂನಲ್ಲಿ ಸೆಕ್ಸ್ ಮಾಡಿದ್ರೆ ರಾಕ್ಷಸನಂಥ ಮಗನ ಜನನ ; ಮುತ್ತಿನಂತ ಮಗ ಹುಟ್ಟಲು ಈ ನಿಯಮ ಪಾಲಿಸಿ..!

ಪ್ರತಿಯೊಬ್ಬರೂ ತಮ್ಮ ಮಕ್ಕಳು ಅತ್ಯುತ್ತಮ ಮತ್ತು ವಿಧೇಯರಾಗಿರಬೇಕೆಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಮಗುವನ್ನು ಪಡೆಯುವ ಅನೇಕ ನಿಯಮಗಳನ್ನು ಅನುಸರಿಸಬೇಕು. ಅಂದಹಾಗೆ ಸಂಸ್ಕಾರಯುತವಾಗಲು ಮಗುವಿನ ಪಾಲನೆಗೆ ಗಮನ ನೀಡಬೇಕು. ಆದರೆ ಗರ್ಭಾವಸ್ಥೆಯ ಸಮಯದಲ್ಲಿರುವಾಗ ಕೆಲವು ನಿಯಯ ಅನುಸರಿಸಿದರೆ ಉತ್ತಮ ಸಂತಾನ ಪ್ರಾಪ್ತಿಯಾಗಲಿದೆ.

relationship tips for getting healthy good and cultured baby as per astrology suh
Author
First Published Aug 3, 2023, 4:59 PM IST

ಪ್ರತಿಯೊಬ್ಬರೂ ತಮ್ಮ ಮಕ್ಕಳು ಅತ್ಯುತ್ತಮ ಮತ್ತು ವಿಧೇಯರಾಗಿರಬೇಕೆಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಮಗುವನ್ನು ಪಡೆಯುವ ಅನೇಕ ನಿಯಮಗಳನ್ನು ಅನುಸರಿಸಬೇಕು. ಅಂದಹಾಗೆ ಸಂಸ್ಕಾರಯುತವಾಗಲು ಮಗುವಿನ ಪಾಲನೆಗೆ ಗಮನ ನೀಡಬೇಕು. ಆದರೆ ಗರ್ಭಾವಸ್ಥೆಯ ಸಮಯದಲ್ಲಿರುವಾಗ ಕೆಲವು ನಿಯಯ ಅನುಸರಿಸಿದರೆ ಉತ್ತಮ ಸಂತಾನ ಪ್ರಾಪ್ತಿಯಾಗಲಿದೆ.

ಪ್ರತಿಯೊಬ್ಬ ಪೋಷಕರಿಗೆ ತಾವು ಉತ್ತಮವಾದ ಸಂಸ್ಕಾರವಿರುವ ಮಗುವನ್ನು ಪಡೆಯಬೇಕೆನ್ನುವ ಆಸೆ ಇರುತ್ತದೆ. ಮಕ್ಕಳು ತಮ್ಮ ಪೋಷಕರಿಂದ ಮಾತ್ರ ಮೌಲ್ಯಗಳನ್ನು ಪಡೆಯುತ್ತಾರೆ. ಸುಸಂಸ್ಕೃತ ಮಗು ಯಾವಾಗಲೂ ಉತ್ತಮ ಗುಣಗಳಿಂದ ತುಂಬಿರುತ್ತದೆ. ಪಾಲಕರು ಮಗುವಿಗೆ ಸಂಸ್ಕಾರವನ್ನು ನೀಡಿದರೆ, ಅಂತಹ ಮಕ್ಕಳು ತಮ್ಮ ತಂದೆ ತಾಯಿಯ ಹೆಸರನ್ನು ಬೆಳಗುತ್ತಾರೆ ಮತ್ತು ರಾಷ್ಟ್ರದ ಹೆಸರನ್ನು ಬೆಳಗಿಸುತ್ತಾರೆ ಎಂದು ಹೇಳಲಾಗಿದೆ. ಆದರೆ ಮಗು ಹುಟ್ಟಿದ ಮೇಲೆ ಒಳ್ಳೆಯ ಸಂಸ್ಕೃತಿ ಕಲಿಸುವುದು ತಂದೆ-ತಾಯಿದೆ ಬಿಟ್ಟಿದ್ದು. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ, ಒಂದು ಅತ್ಯುತ್ತಮ, ಅರ್ಹ ಮತ್ತು ಸುಸಂಸ್ಕೃತ ಮಗುವನ್ನು ಪಡೆಯಬಹುದು. ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಈ ನಿಯಮಗಳನ್ನು ಅನುಸರಿಸುವ ಮೂಲಕ ನೀವು ಪ್ರಜ್ಞಾವಂತ ಮಗನನ್ನು ಪಡೆಯಬಹುದು.

ಗರ್ಭಾವಸ್ಥೆಯ ಸಮಯದಲ್ಲಿ ಅನೇಕ ವಿಷಯಗಳನ್ನು ಕಾಳಜಿ ವಹಿಸಿದರೆ ನೀವು ಉತ್ತಮ ಮಗುವನ್ನು ಹೊಂದಬಹುದು. ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಈ ನಿಯಮಗಳನ್ನು ಅನುಸರಿಸುವುದರಿಂದ, ಉತ್ತಮ ಮಕ್ಕಳನ್ನು ಪಡೆಯಬಹುದು. ಮಗುವನ್ನು ಪಡೆಯುವ ನಿಯಮಗಳಲ್ಲಿ, ಗರ್ಭಧಾರಣೆಯ ಸರಿಯಾದ ಸಮಯವನ್ನು ಹೇಳಲಾಗಿದೆ . ಇದರೊಂದಿಗೆ ಸಂಭೋಗ ಮಾಡಬಾರದಂತಹ ಅನೇಕ ದಿನಾಂಕಗಳಿವೆ. ಹಾಗಾದರೆ ಗರ್ಭಾವಸ್ಥೆಯಲ್ಲಿ ಏನು ಕಾಳಜಿ ವಹಿಸಬೇಕು ಎಂಬುದನ್ನು ನಾವು ನಿಮಗೆ ಹೇಳೋಣ.

ಇವರ ಮುಂದೆ ಸತ್ಯ ಮರೆಮಾಚಲು ಆಗಲ್ಲ; ಸುಳ್ಳನ್ನು ತಕ್ಷಣವೇ ಕಂಡು ಹಿಡಿಯುತ್ತಾರೆ ಈ ರಾಶಿಯವರು..!

 

ಈ ಗಳಿಗೆಯಲ್ಲಿ ಸಂಭೋಗ ಬೇಡ

ರಾತ್ರಿ 12 ಗಂಟೆಯ ನಂತರ ಲೈಂಗಿಕ ಸಂಪರ್ಕ ಹೊಂದಬಾರದು. ಇದರಿಂದ ಅಶುಭ ಸಂತಾನ ಪ್ರಾಪ್ತಿಯಾಗುವುದು. ರಾತ್ರಿ 12ರವರೆಗಿನ ಸಮಯವು ರಾತಿಕ್ರಿಯೆಗೆ ಸೂಕ್ತವಾಗಿದೆ. ಈ ಸಮಯದಲ್ಲಿ ಗರ್ಭಾವಸ್ಥೆಯ ಕ್ರಿಯೆಯನ್ನು ಮಾಡುವುದರಿಂದ, ಮಗುವಿನಲ್ಲಿ ಅನೇಕ ಒಳ್ಳೆಯ ಗುಣಗಳು ಬರಲಿವೆ. ಆದಾಗ್ಯೂ, ಇದರ ನಂತರ ಗರ್ಭಧಾರಣೆಗಾಗಿ ಸಂಭೋಗ ಮಾಡಬಾರದು. ಈ ಸಮಯವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಈ ಸಮಯದಲ್ಲಿ ಗರ್ಭ ಧರಿಸಿ

ರಾತ್ರಿ 12 ಗಂಟೆಯ ಮೊದಲು, ನೀವು ಅರ್ಹ, ಧಾರ್ಮಿಕ, ಶಿಸ್ತು ಮತ್ತು ಸುಸಂಸ್ಕೃತ ಮಗುವನ್ನು ಪಡೆಯುತ್ತೀರಿ. ಈ ಗಳಿಗೆಯಲ್ಲಿ ಗರ್ಭಧರಿಸಿದ ಮಗು ಶಿವನಿಂದ ಆಶೀರ್ವದಿಸಲ್ಪಡಲಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅಂತಹ ಮಗುವಿನ ಅದೃಷ್ಟವು ತುಂಬಾ ಒಳ್ಳೆಯದು. ಶಾಸ್ತ್ರಗಳ ಪ್ರಕಾರ ರಾತ್ರಿ 12 ಗಂಟೆಯ ನಂತರ ಸಂಭೋಗ ಮಾಡಬಾರದು. ಈ ಸಮಯ ಅಶುಭ. ಈ ಸಮಯದಲ್ಲಿ ಗಂಡ-ಹೆಂಡತಿ ಸೇರಿದರೆ ಅನಾರೋಗ್ಯಕ್ಕೆ ಒಳಗಾಗುವ ಅಪಾಯವಿದೆ. ಈ ಪ್ರಹಾರದಲ್ಲಿ ಹುಟ್ಟಿದ ಮಗು ರಾಕ್ಷಸನ ಗುಣಗಳನ್ನು ಹೊಂದಲಿದೆ.

ಈ ದಿನಗಳು ಕೂಡ ಸೂಕ್ತವಲ್ಲ

ಗರ್ಭಾವಸ್ಥೆಯ ನಿಯಮಗಳಲ್ಲಿ ಅಮವಾಸ್ಯೆ, ಪೂರ್ಣಿಮಾ, ಚತುರ್ಥಿಗಳು ಸಹ ಇವೆ. ಅಷ್ಟಮಿ, ಭಾನುವಾರ ಮತ್ತು ಸಂಕ್ರಾಂತಿಯಂದು ಸಂಭೋಗ ಮಾಡಬಾರದು. ಇದರೊಂದಿಗೆ ಶ್ರಾವಣ, ಶ್ರಾದ್ಧ ಪಕ್ಷ ಮತ್ತು ನವರಾತ್ರಿಯ ಸಮಯದಲ್ಲಿ ಲೈಂಗಿಕ ಕ್ರಿಯೆ ಮಾಡಬೇಡಿ. ಹಾಗೂ ಗರ್ಭಾವಸ್ಥೆಯಲ್ಲಿ, ಪತಿ ಮತ್ತು ಹೆಂಡತಿ ಇಬ್ಬರೂ ಉತ್ತಮ ಆರೋಗ್ಯವನ್ನು ಹೊಂದಿರಬೇಕು. ಈ ನಿಯಮದಿಂದ ಉತ್ತಮ ಮಗುವಿಗೆ ನೀವು ಜನ್ಮ ನೀಡಲಿದ್ದೀರಿ.

Garuda Purana: ನಿಮ್ಮ ಈ 5 ಕೆಟ್ಟ ಗುಣಗಳೇ ನಿಮ್ಮ ಬಡತನಕ್ಕೆ ಕಾರಣ; ನೀವು ಎಂದಿಗೂ ಶ್ರೀಮಂತರಾಗಲ್ಲ..!

Follow Us:
Download App:
  • android
  • ios