Health Tips: ದುಃಸ್ವಪ್ನದಿಂದ ನಿದ್ರೆ ಹಾಳಾಗ್ತಿದ್ರೆ ಏನ್ ಮಾಡ್ಬೇಕು ಗೊತ್ತಾ?

ರಾತ್ರಿ ಕನಸು ಬೀಳೋದು ಸಾಮಾನ್ಯ. ಒಳ್ಳೆ ಕನಸು ಬಿದ್ರೆ ಖುಷಿಯಾಗುತ್ತೆ. ಕೆಟ್ಟ ಕನಸು ಬಿದ್ರೆ ಭಯವಾಗುತ್ತೆ. ಇದ್ರಿಂದ ನಿದ್ರೆ ಕೂಡ ಸರಿಯಾಗಿ ಬರೋದಿಲ್ಲ. ಪದೇ ಪದೇ ದುಃಸ್ವಪ್ನ ಬೀಳ್ತಿದೆ ಅಂದ್ರೆ ಅದನ್ನು ಸರಿಪಡಿಸೋ ಪ್ರಯತ್ನ ಮಾಡಿ. 
 

Practice These Ttips To Stop Nightmares

ಎಲ್ಲರೂ ಕನಸು ಕಾಣ್ತಾರೆ. ಹಗಲುಗನಸು, ನಾವೇ ಕಾರಣುವ ಕನಸುಗಳು ತುಂಬಾ ಸುಂದರವಾಗಿರುತ್ವೆ. ಆದ್ರೆ ರಾತ್ರಿ ಬೀಳುವ ಎಲ್ಲ ಕನಸುಗಳು ಮದುರವಾಗಿರುತ್ತೆ ಎನ್ನಲು ಸಾಧ್ಯವಿಲ್ಲ. ರಾತ್ರಿ ಅನೇಕ ಬಾರಿ ಭಯಾನಕ ಕನಸು ಬೀಳುತ್ತದೆ. ದುಃಸ್ವಪ್ನಗಳು ನಮ್ಮನ್ನು ನಿದ್ರೆಯಿಂದ ಎಚ್ಚರಿಸುತ್ತೆ. ನಾವು ಕಲ್ಪನೆ ಮಾಡಿಕೊಳ್ಳದ ಕನಸುಗಳು ಬೀಳುವುದಿದೆ. ಯಾರೂ ಆಪ್ತರು ಸತ್ತಂತೆ, ದೆವ್ವ ಬಂದಂತೆ, ನಮಗೆ ಅಪಘಾತವಾದಂತೆ ಹೀಗೆ ಭಯಾನಕ ಕನಸುಗಳಿಂದ ನಿದ್ರೆ ಹಾಳಾಗುತ್ತದೆ. ಪ್ರತಿ ದಿನ ಇಂಥ ಭಯಾನಕ ಕನಸುಗಳನ್ನು ಕಾಣುವವರಿದ್ದಾರೆ. ಅಪರೂಪಕ್ಕೆ ಇಂಥ ಕನಸು ಬಿದ್ರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಪದೇ ಪದೇ ಅಥವಾ ಪ್ರತಿ ದಿನ ಭಯಾನಕ ಕನಸು ಬಿದ್ರೆ ಎಚ್ಚರವಹಿಸಬೇಕು. ಇಂದು ನಾವು ಯಾಕೆ ಕೆಟ್ಟ ಸ್ವಪ್ನ ಬೀಳುತ್ತೆ ಮತ್ತೆ ಅದನ್ನು ನಿಯಂತ್ರಿಸೋದು ಹೇಗೆ ಎಂಬುದನ್ನು ನಿಮಗೆ ಹೇಳ್ತೇವೆ.

ದುಃಸ್ವಪ್ನ (Nightmares) ಬೀಳಲು ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದೆ. ಜಾನಪದ ಕಥೆಗಳ ಪ್ರಕಾರ, ಇದು ನಿಮ್ಮ ಉಪಪ್ರಜ್ಞೆ ಮನಸ್ಸನ್ನು ಮತ್ತೊಂದು ಜಗತ್ತಿಗೆ ಸಂಪರ್ಕಿಸುವ ಸೇತುವೆಯಾಗಿದೆ. ದುಃಸ್ವಪ್ನವನ್ನು ನಾವು ಸಂಪೂರ್ಣವಾಗಿ ಬಂದ್ ಮಾಡಲು ಸಾಧ್ಯವಿಲ್ಲ. ಕೆಲ ಉಪಾಯಗಳ ಮೂಲಕ ನಾವದನ್ನು ನಿಯಂತ್ರಿಸಬಹುದು. 

ನಿದ್ರೆ (Sleep) ಹಾಳು ಮಾಡುವ ಕೆಟ್ಟ ಕನಸುಗಳನ್ನು ಹೀಗೆ ನಿಯಂತ್ರಿಸಿ :

ಮಾನಸಿಕ ಆರೋಗ್ಯ (Mental Health) ಚೆನ್ನಾಗಿಟ್ಟುಕೊಳ್ಳಿ : ಕೆಟ್ಟ ಕನಸುಗಳಿಗೆ ಆತಂಕ ಮತ್ತು ಒತ್ತಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮನಸ್ಸು ಮಿತಿ ಮೀರಿ ಓಡುತ್ತಿದ್ದರೆ ದುಃಸ್ವಪ್ನ ಬೀಳುತ್ತದೆ ಎಂದು ತಜ್ಞರು ಹೇಳ್ತಾರೆ. ಖಿನ್ನತೆ, ಬೈಪೋಲಾರ್ ಡಿಸಾರ್ಡರ್ ಮತ್ತು ಎಲ್ಲಾ ಮಾನಸಿಕ ಖಾಯಿಲೆಗಳು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ದುಃಸ್ವಪ್ನ ತಡೆಯಲು ಮನಸ್ಸು ಶಾಂತವಾಗಿರುವುದು ಮುಖ್ಯ.  

ಕಹಿ ಅನುಭವಗಳನ್ನು ಮರೆಯಿರಿ : ಕಹಿ ಅನುಭವಗಳು ಮನಸ್ಸನ್ನು ಹಾಳು ಮಾಡುತ್ತವೆ. ಆಘಾತಕಾರಿ ಘಟನೆಗಳ ನೆನಪು ದುಃಸ್ವಪ್ನಕ್ಕೆ ಕಾರಣವಾಗುತ್ತದೆ. ಹಿಂಸೆ, ನೈಸರ್ಗಿಕ ವಿಪತ್ತು, ಪ್ರೀತಿಪಾತ್ರರ ಸಾವು, ಸಂಬಂಧದಲ್ಲಿ ಬಿರುಕು ಹೀಗೆ ಅನೇಕ ಕಾರಣಗಳು ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಇದ್ರಿಂದ ಕೆಟ್ಟ ಕನಸುಗಳು ಕಾಡುತ್ತವೆ. 

ಮಲಗುವ ಮುನ್ನ ಏನು ಮಾಡ್ಬೇಕು ? : ಮಲಗುವ ಮುನ್ನ ನೀವು ಯಾವ ಕೆಲಸ ಮಾಡ್ತೀರಿ ಎಂಬುದು ಮುಖ್ಯವಾಗುತ್ತದೆ. ಮಲಗುವ ಮೊದಲು ಭಯಾನಕ ಚಲನಚಿತ್ರಗಳನ್ನು ನೋಡುವುದು ಅಥವಾ ಭಯಾನಕ ಪುಸ್ತಕಗಳನ್ನು ಓದುವುದು ದುಃಸ್ವಪ್ನಕ್ಕೆ ಕಾರಣವಾಗುತ್ತದೆ. ಮಲಗುವ ಮೊದಲು ಒಳ್ಳೆಯ ವಿಷ್ಯವನ್ನು ನೋಡಿ ಇಲ್ಲವೆ ಕೇಳಿ. ಹಾಗೆಯೇ ಮಲಗುವ ಮುನ್ನ ಧ್ಯಾನ ಮಾಡಿ. 

ಮನಸ್ಸಿನಲ್ಲಿರೋದನ್ನು ಬರೆಯಿರಿ : ಮನಸ್ಸಿನಲ್ಲಿರುವ ಚಿಂತೆಯನ್ನು ಹೊರ ಹಾಕುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಮನಸ್ಸಿನ ವಿಷ್ಯವನ್ನು ನೀವು ಬೇರೆಯವರಿಗೆ ಹೇಳಲು ಸಾಧ್ಯವಿಲ್ಲವೆಂದ್ರೆ ಅದನ್ನು ಬರೆಯಿರಿ. ಇದ್ರಿಂದ ಆತಂಕಗಳು ಮತ್ತು ಒತ್ತಡಗಳು ಕಡಿಮೆಯಾಗುತ್ತದೆ. ಆಗ ಮನಸ್ಸು ಶಾಂತವಾಗುವ ಜೊತೆಗೆ ದುಃಸ್ವಪ್ನ ಬೀಳುವುದು ಕಡಿಮೆಯಾಗುತ್ತದೆ.  

ಮಲಗುವ ಮೊದಲು ಸ್ನಾನ ಮಾಡಿ : ಮಲಗುವ ಮುನ್ನ ಸ್ನಾನ ಮಾಡೋದು ಒಳ್ಳೆಯ ಹವ್ಯಾಸ. ಮಲಗುವ 90 ನಿಮಿಷ ಮೊದಲು ಬಿಸಿ ನೀರಿನಲ್ಲಿ ಸ್ನಾನ ಮಾಡಿ. ಇದ್ರಿಂದ ಮನಸ್ಸು ಶಾಂತವಾಗುತ್ತದೆ. ಇದು ನೈಸರ್ಗಿಕ ಪರಿಹಾರವಾಗಿದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ದುಃಸ್ವಪ್ನ ಬೀಳ್ಬಾರದು ಅಂದ್ರೆ ವ್ಯಾಯಾಮ ಮಾಡಿ. 

ಔಷಧಿ ಕೂಡ ದುಃಸ್ವಪ್ನಕ್ಕೆ ಕಾರಣ : ಕೆಲವು ಔಷಧಿಗಳು ದುಃಸ್ವಪ್ನ ಉಂಟುಮಾಡುತ್ತದೆ. ಇವುಗಳು ನರದ ಮೇಲೆ ಪರಿಣಾಮ ಬೀರುತ್ತವೆ. ಇದ್ರಿಂದ ಖಿನ್ನತೆಯುಂಟಾಗುತ್ತದೆ. ಇದ್ರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ನಿದ್ರೆ ಸರಿಯಾಗದೆ ಹೋದಾಗ ಮನಸ್ಸಿನ ನೋವು ದಃಸ್ವಪ್ನವಾಗಿ ಕಾಡುತ್ತದೆ.

ಇದನ್ನೂ ಓದಿ: Proteinuria: ಮೂತ್ರದಿಂದ ಹೆಚ್ಚು ಹೆಚ್ಚು ನೊರೆ ಬರ್ತಿದ್ಯಾ? ಹಾಗಿದ್ರೆ ಸಮಸ್ಯೆಯಿದೆ !

ಆಲ್ಕೋಹಾಲ್ ಹಾಗೂ ಆಹಾರ : ನಾವು ತಿನ್ನುವ ಆಹಾರ ಕೂಡ ಕೆಟ್ಟ ಕನಸು ಬೀಳಲು ಕಾರಣವಾಗುತ್ತದೆ. ಲಘು ಆಹಾರದಿಂದ ಚಯಾಪಚಯದ ವೇಗ ಹೆಚ್ಚಾಗುತ್ತದೆ. ಮೆದುಳು ವಿಶ್ರಾಂತಿ ಪಡೆಯುವ ಬದಲು ಹೆಚ್ಚು ಸಕ್ರಿಯವಾಗುತ್ತದೆ. ಕ್ರಿಯಾಶೀಲ ಮನಸ್ಸು ದುಃಸ್ವಪ್ನಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಲಗುವ ಮುನ್ನ ಸೇವನೆ ಮಾಡುವ ಆಹಾರದ ಬಗ್ಗೆ ಗಮನ ನೀಡಿ. ಹಾಗೆಯೇ ಆಲ್ಕೋಹಾಲ್ ಸೇವನೆ ಮಾಡಬೇಡಿ. 

ಇದನ್ನೂ ಓದಿ: LIFE AFTER DEATH: ಸತ್ತ ಮೇಲೆ ಆತ್ಮದ ಜೊತೆ ಏನೆಲ್ಲಾ ಹೋಗುತ್ತೆ ಗೊತ್ತಾ?

ನಿದ್ರೆ ಬಹಳ ಮುಖ್ಯ : ಅರೆ ನಿದ್ರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದ್ರಿಂದ ದುಃಸ್ವಪ್ನ ಕಾಡುತ್ತದೆ. ಹಾಗಾಗಿ ದಿನಕ್ಕೆ 7 -8 ಗಂಟೆ ನಿದ್ರೆ ಮಾಡಿ. ಪ್ರತಿ ದಿನ ಒಂದೇ ಸಮಯಕ್ಕೆ ಮಲಗಿದ್ರೆ ನಿದ್ರೆ ಸರಿಯಾಗಿ ಬರುತ್ತದೆ. ಇದ್ರಿಂದ ದುಃಸ್ವಪ್ನ ಕಾಡುವುದು ಕಡಿಮೆಯಾಗುತ್ತದೆ. 

Latest Videos
Follow Us:
Download App:
  • android
  • ios