Food intolerance: ಇದೇನಪ್ಪಾ ಹೊಸತು? ಏನಾಗಬಹುದು ಆರೋಗ್ಯದ ಮೇಲೆ ತೊಂದರೆ?
ತೂಕ ನಷ್ಟ ಮತ್ತು ಫ್ಯಾಟ್ ಬರ್ನ್ ಎರಡು ವಿಭಿನ್ನ ವಿಷಯಗಳಾಗಿವೆ. ಅದೇ ರೀತಿಯಲ್ಲಿ, ಆಹಾರದ ಅಲರ್ಜಿ ಮತ್ತು ಫುಡ್ ಇನ್ ಟಾಲರೆನ್ಸ್ ಮತ್ತು ಹಸಿವಿನ ಕೊರತೆ ಕೂಡ ಎರಡು ವಿಭಿನ್ನ ವಿಷಯಗಳಾಗಿವೆ. ಕೆಲವೊಂದು ಆಹಾರ ಸೇವನೆ ಮಾಡೋದ್ರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ. ಅದರಿಂದ ಫುಡ್ ಅಲರ್ಜಿ ಉಂಟಾಗುತ್ತದೆ. ನಿಮಗೂ ಫುಡ್ ಅಲರ್ಜಿ ಉಂಟಾಗಿದ್ದರೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಬಗ್ಗೆ ತಿಳಿಯೋಣ.
ಅನೇಕ ಬಾರಿ ನಾವು ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿದ್ದಾಗ, ಅದರಿಂದ ಅಲರ್ಜಿ (food allergy) ಉಂಟಾಗುತ್ತದೆ. ಇದರಿಂದ ನಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳಲಾಗದ ಪರಿಸ್ಥಿತಿಯನ್ನು ಫುಡ್ ಇನ್ ಟಾಲರೆನ್ಸ್ ಎನ್ನುತ್ತಾರೆ.
ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿರುವುದು ಜೀರ್ಣಾಂಗ ವ್ಯವಸ್ಥೆಯ (digestion system) ಪ್ರಕ್ರಿಯೆ. ನಿಮ್ಮ ದೇಹ ಆಹಾರವನ್ನು ಕರಗಿಸಲು ಅಥವಾ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಏನನ್ನಾದರೂ ನೀವು ತಿಂದಾಗ ಅಥವಾ ಕುಡಿಯುವಾಗ ಇದು ಸಂಭವಿಸುತ್ತದೆ.
ಫುಡ್ ಇನ್ ಟಾಲರೆನ್ಸ್ (food intolerance) ನೋವಿನಿಂದ ಕೂಡಿರಬಹುದು ಮತ್ತು ಅನಾನುಕೂಲಕರವಾಗಿರಬಹುದು. ಇದು ಜೀವಕ್ಕೆ ಯಾವುದೇ ಅಪಾಯ ಉಂಟುಮಾಡುವುದಿಲ್ಲವಾದರೂ, ಕೆಲವೊಮ್ಮೆ ಆಹಾರವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಿರುವುದು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಕೆಲವೊಂದು ಆಹಾರಗಳನ್ನು ನೀವು ಅವಾಯ್ಡ್ ಮಾಡಿದರೆ ಅದರಿಂದ ಆರೋಗ್ಯದ ಹಲವಾರು ಸಮಸ್ಯೆ ನಿವಾರಣೆಯಾಗುತ್ತವೆ. ಅಂತಹ ಆಹಾರಗಳು ಯಾವುವು? ನೋಡೋಣ.
ಆಹಾರ ಅಸಹಿಷ್ಣುತೆಗೆ ಕಾರಣಗಳು
ಆಹಾರ ಜೀರ್ಣಿಸಿಕೊಳ್ಳಲು ಸಾಕಷ್ಟು ಕಿಣ್ವಗಳು ಇಲ್ಲದಿದ್ದಾಗ ಆಹಾರ ಅಸಹಿಷ್ಣುತೆ ಉಂಟಾಗುತ್ತದೆ. ಉದಾಹರಣೆಗೆ, ಹೆಚ್ಚಿನ ಜನರು ಡೈರಿ ಉತ್ಪನ್ನಗಳಿಂದ ಫುಡ್ ಇನ್ ಟಾಲರೆನ್ಸ್ ಹೊಂದಿರುತ್ತಾರೆ. ಡೈರಿ ಉತ್ಪನ್ನಗಳು ಲ್ಯಾಕ್ಟೋಸ್ ಅನ್ನು ಹೊಂದಿರುತ್ತವೆ ಮತ್ತು ಲ್ಯಾಕ್ಟೇಸ್ ಕಿಣ್ವದ ಕೊರತೆಯಿಂದ, ಡೈರಿ ಉತ್ಪನ್ನಗಳನ್ನು ಸೇವಿಸುವ ಜನರಲ್ಲಿ ಈ ಸಮಸ್ಯೆ ಕಂಡುಬರುತ್ತದೆ.
ಆಹಾರ ಅಸಹಿಷ್ಣುತೆಯಿಂದ ಉಂಟಾಗುವ ಸಮಸ್ಯೆಯ ಬಗ್ಗೆಯೂ ತಿಳಿಯಿರಿ,ಆದುದರಿಂದ ಯಾವ ಆಹಾರ ಸೇವಿಸಿದಾಗ ನಿಮಗೆ ಸಮಸ್ಯೆ ಉಂಟಾಗುತ್ತದೆಯೇ? ಅಂತಹ ಆಹಾರಗಳನ್ನು ನೀವು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ನೀವು ತಿಳಿದುಕೊಂಡರೆ ಉತ್ತಮ.
ಹೊಟ್ಟೆ ಉಬ್ಬರ ಮತ್ತು ಗ್ಯಾಸ್
ನ್ಯೂಯಾರ್ಕ್ ನಗರದ ಇಂಟರ್ನಿಸ್ಟ್ ಮತ್ತು ಗ್ಯಾಸ್ಟ್ರೋಎಂಟರಾಲಜಿಸ್ಟ್, ಎಂಡಿ, ನಿಕೇತ್ ಸೋನ್ಪಾಲ್ ಪ್ರಕಾರ, ಅತಿಯಾದ ಉರಿಯೂತ ಮತ್ತು ಗ್ಯಾಸ್ ಸಮಸ್ಯೆ ಸಹ ಆಹಾರ ಅಸಹಿಷ್ಣುತೆಯ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ಹೆಚ್ಚಿನ ನಾರಿನಂಶದ ಊಟದ ನಂತರ ಸ್ವಲ್ಪ ಊತ ಮತ್ತು ಗ್ಯಾಸ್ ಸಾಮಾನ್ಯ. ಆದರೆ ಈ ರೋಗಲಕ್ಷಣಗಳು ಅಹಿತಕರ ಅಥವಾ ನೋವಿನಿಂದ ಕೂಡಿದ್ದಾಗ ಮತ್ತು ನೀವು ಪ್ರತಿಬಾರಿಯೂ ಒಂದು ನಿರ್ದಿಷ್ಟ ಆಹಾರವನ್ನು ಸೇವಿಸಿದಾಗ, ಗ್ಯಾಸ್ ಉಂಟಾಗುವುದು ಫುಡ್ ಇನ್ ಟಾಲರೆನ್ಸ್ ಆಗಿದೆ.
ಆದರೆ ಫುಡ್ ಇನ್ ಟಾಲರೆನ್ಸ್ ಎಲ್ಲರಿಗೂ ಸಂಭವಿಸುವುದಿಲ್ಲ. ಉರಿಯೂತ ಮತ್ತು ಗ್ಯಾಸ್ ಆಗಾಗ್ಗೆ ಲ್ಯಾಕ್ಟೋಸ್ ಅಸಹಿಷ್ಣುತೆಯ ಅಥವಾ ಹಸುವಿನ ಹಾಲಿನ ಉತ್ಪನ್ನಗಳಲ್ಲಿ ಸಕ್ಕರೆಯನ್ನು (lactose) ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಅಸಮರ್ಥತೆಯ ಸಂಕೇತಗಳು. ಏಕೆಂದರೆ ಲ್ಯಾಕ್ಟೋಸ್ ಅಸಹಿಷ್ಣುತೆಯು ಅಸಹಿಷ್ಣುತೆಯ ಅತ್ಯಂತ ಸಾಮಾನ್ಯ ವಿಧ.
ಲ್ಯಾಕ್ಟೋಸ್ ಅಸಹಿಷ್ಣುತೆ ಉರಿಯೂತಕ್ಕೆ ಕಾರಣವಾಗಿದ್ದರೆ, ಹಾಲು, ಮೊಸರು, ಚೀಸ್ ಮತ್ತು ಐಸ್ ಕ್ರೀಮ್ ನಂತಹ ಡೈರಿ ಉತ್ಪನ್ನಗಳನ್ನು ಸೇವಿಸಿದ ಅಥವಾ ಕುಡಿದ ಕೆಲವು ಗಂಟೆಗಳ ನಂತರ ನೀವು ಕಿಬ್ಬೊಟ್ಟೆ ನೋವು ಅಥವಾ ಅತಿಸಾರವನ್ನು ಅನುಭವಿಸಬಹುದು.
ಸಾಮಾನ್ಯವಾಗಿ ಹೆಚ್ಚು ಊತ ಮತ್ತು ಗ್ಯಾಸ್ ಜೊತೆ, ಕಿಬ್ಬೊಟ್ಟೆಯ ನೋವು ಅಸಹಿಷ್ಣುತೆಯ ಮತ್ತೊಂದು ಸಂಕೇತ. ಹೊಟ್ಟೆ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಯಾರಿಗಾದರೂ ಆಹಾರ ಅಸಹಿಷ್ಣುತೆ ಇದ್ದರೆ, ಆಗ ಹೊಟ್ಟೆ ನೋವು ಸಾಮಾನ್ಯವಾಗಿ ಮಧ್ಯ ಮತ್ತು ಕೆಳ ಕಿಬ್ಬೊಟ್ಟೆಯಲ್ಲಿ ಸೆಳೆತದಂತೆ ಭಾಸವಾಗುತ್ತದೆ.
ತಲೆನೋವು
ಇದನ್ನ ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಅದೇನೆಂದ್ರೆ ಕೆಲವೊಂದು ಪ್ರಕರಣಗಳಲ್ಲಿ ಫುಡ್ ಇನ್ ಟಾಲರೆನ್ಸ್‌ನಿಂದ ತಲೆನೋವು ಕಾಣಿಸಿಕೊಳ್ಳುತ್ತೆ. ಇಮ್ಯುನೊಗ್ಲೋಬ್ಯುಲಿನ್ ಜಿ (ಐಜಿಜಿ) ಪ್ರತಿಕಾಯಗಳು ರಕ್ತದ ಪ್ರತಿಕಾಯಗಳ ಅತ್ಯಂತ ಸಾಮಾನ್ಯ ವಿಧ. ಕೆಲವೊಮ್ಮೆ ಐಜಿಜಿ ಪ್ರತಿಕಾಯಗಳು ಮೈಗ್ರೇನ್ ಮತ್ತು ತಲೆನೋವಿಗೆ ಕಾರಣವಾಗಬಹುದು.
ಆಯಾಸ
ನೀವು ಎಂದಾದರೂ ಏನನ್ನಾದರೂ ತಿಂದ ತಕ್ಷಣ, ಅಥವಾ ಸ್ವಲ್ಪ ಸಮಯದ ನಂತರ ದಣಿದ ಅನುಭವ ಉಂಟಾಗಿದೆಯೇ? ಹಾಗಿದ್ದರೆ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗಿಲ್ಲ ಎಂದರ್ಥ ಇದರಿಂದ ಫುಡ್ ಇನ್ ಟಾಲರೆನ್ಸ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.