Mouth cancer: ಈ ಭಾಗಗಳಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ಇಗ್ನೋರ್ ಮಾಡ್ಲೇಬೇಡಿ
ಬಾಯಿಯ ಕ್ಯಾನ್ಸರ್ ಒಂದು ಗಂಭೀರ ಕಾಯಿಲೆ. ಆರಂಭಿಕ ಹಂತದಲ್ಲಿ ಇದನ್ನು ಗುರುತಿಸಿದ್ರೆ, ಚಿಕಿತ್ಸೆಯಿಂದ ಅದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಬಾಯಿಯ ಕ್ಯಾನ್ಸರ್ ನ ರೋಗಲಕ್ಷಣಗಳು ಮೊದಲ ಹಂತದಲ್ಲಿ ಸೋಂಕು ಅಥವಾ ಕೆಟ್ಟ ನೈರ್ಮಲ್ಯದಂತೆ ಕಾಣಬಹುದು. ಹೆಚ್ಚು ತಿಳಿಯಲು ಮುಂದೆ ಓದಿ.
ಪೌಷ್ಟಿಕಾಂಶ ಪಡೆಯಲು ಬಾಯಿಯು(Mouth) ದೇಹಕ್ಕೆ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತೆ . ಆಹಾರವನ್ನು ಕತ್ತರಿಸೋದು ಮತ್ತು ಅಗಿಯುವುದರಿಂದ ಹಿಡಿದು ಕರುಳುಗಳಿಗೆ ಕಳುಹಿಸುವವರೆಗೆ, ಸಂಪೂರ್ಣ ಜವಾಬ್ದಾರಿಯು ಬಾಯಿಯ ಮೇಲಿದೆ. ಬಾಯಿಯ ಭಾಗಗಳು ತುಟಿ, ವೆಸ್ಟಿಬ್ಯೂಲ್, ಒಸಡು, ಹಲ್ಲುಗಳು, ನಾಲಿಗೆ, ಲಾಲಾರಸ ಗ್ರಂಥಿಗಳನ್ನು ಒಳಗೊಂಡಿವೆ.
ಬಾಯಿಯಲ್ಲಿ ಗುಳ್ಳೆ ಆಗೋದು ತುಂಬಾ ಸಾಮಾನ್ಯ. ಇದು ಆಹಾರದ ಅಲರ್ಜಿ(Allergy), ಪೋಷಕಾಂಶಗಳ ಕೊರತೆಗಳಂತಹ ಅಂಶಗಳ ಪರಿಣಾಮವಾಗಿರಬಹುದು. ಆದರೆ, ಈ ರೋಗಲಕ್ಷಣಗಳು ಮುಂದುವರಿದರೆ ಅಥವಾ ತೀವ್ರ ಸ್ವರೂಪ ತೆಗೆದುಕೊಂಡರೆ, ಅದು ಬಾಯಿಯ ಕ್ಯಾನ್ಸರ್ ನ ಮಾರಣಾಂತಿಕ ಕಾಯಿಲೆಯ ಸಂಕೇತವಾಗಿರಬಹುದು.
ಬಾಯಿ ಕ್ಯಾನ್ಸರ್ (Mouth cancer)ಎಂದರೇನು?
ತುಟಿ ಅಥವಾ ಬಾಯಿಯಲ್ಲಿರುವ ಸೆಲ್ಸ್ ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಬಾಯಿ ಕ್ಯಾನ್ಸರ್ ಉಂಟಾಗುತ್ತೆ. ಈ ಕ್ಯಾನ್ಸರ್ ಚಪ್ಪಟೆಯಾದ, ತೆಳುವಾದ ಜೀವಕೋಶಗಳಿಂದ ಪ್ರಾರಂಭವಾಗುತ್ತೆ, ಅದು ತುಟಿ ಮತ್ತು ಬಾಯಿಯ ಒಳಭಾಗದಲ್ಲಿರುತ್ತೆ. ಬಾಯಿ ಕ್ಯಾನ್ಸರ್ ತುಟಿ, ಒಸಡು, ನಾಲಿಗೆ, ಕೆನ್ನೆಗಳ ಒಳ ಪದರ, ಬಾಯಿಯ ಮೇಲ್ಭಾಗ ಮತ್ತು ಬಾಯಿಯ ಕೆಳಭಾಗದಲ್ಲಿ ಉಂಟಾಗಬಹುದು.
ಈ ರೋಗಲಕ್ಷಣಗಳು ಬಾಯಿಯ ಕ್ಯಾನ್ಸರ್ ಅನ್ನು ಪ್ರಚೋದಿಸಬಹುದು
ಗುಣವಾಗದ ತುಟಿ ಅಥವಾ ಬಾಯಿಯ ಗಾಯ
ಬಾಯಿಯ ಒಳಗೆ ಬಿಳಿ ಅಥವಾ ಕೆಂಪು ಮಚ್ಚೆ
ದುರ್ಬಲ ಹಲ್ಲುಗಳು
ಬಾಯಿಯ ಒಳಗೆ ಗಡ್ಡೆ
ಬಾಯಿಯಲ್ಲಿ ನೋವು(Mouth pain)
ಕಿವಿಯಲ್ಲಿ ನೋವು
ನುಂಗಲು ಕಷ್ಟವಾಗೋದು
ಮಾತಿನಲ್ಲಿ ಬದಲಾವಣೆ
ನಿಯಮಿತ ತಪಾಸಣೆಗಳಿಂದ ಮೊದಲ ಹಂತದಲ್ಲೇ ಬಾಯಿಯ ಕ್ಯಾನ್ಸರ್ ಪತ್ತೆಹಚ್ಚಬಹುದು
ಆರಂಭಿಕ ಹಂತದಲ್ಲಿ(First stage) ಬಾಯಿಯ ಕ್ಯಾನ್ಸರ್ ಪತ್ತೆಯಾದರೆ, ಚಿಕಿತ್ಸೆಯ ನಂತರ ಬದುಕುಳಿಯುವ ರೇಟ್ ಎಲ್ಲಾ ಜನರಿಗೆ 5 ವರ್ಷಗಳು ಆಗಿರುತ್ತೆ. ಹಾಗಾಗಿ ಆರಂಭದಲ್ಲೇ ರೋಗ ಗುರುತಿಸಿಕೊಂಡು ಚಿಕಿತ್ಸೆ ಪಡೆಯೋದು ತುಂಬಾನೆ ಮುಖ್ಯ.
ಬಾಯಿ ಕ್ಯಾನ್ಸರ್ ನ ರೋಗಲಕ್ಷಣಗಳನ್ನು ಇತರ ಅಥವಾ ಕಡಿಮೆ ಗಂಭೀರ ಸ್ಥಿತಿಗಳೆಂದು ತಪ್ಪಾಗಿ ಗ್ರಹಿಸೋದು ಸಾಮಾನ್ಯ. ಇದು ಮುಖ್ಯವಾಗಿ ಹಲ್ಲುನೋವು ಮತ್ತು ಗುಳ್ಳೆಗಳನ್ನು ಒಳಗೊಂಡಿದೆ. ಹಾಗಾಗಿ, ನಿಯಮಿತ ದಂತ ತಪಾಸಣೆಗಳನ್ನು ಮಾಡಲು ಸೂಚಿಸಲಾಗುತ್ತೆ. ರೋಗಲಕ್ಷಣಗಳ(Symptoms) ನಿಖರವಾದ ಕಾರಣವನ್ನು ಕಂಡುಹಿಡಿಯಲು ಇದು ಅತ್ಯುತ್ತಮ ಮಾರ್ಗವಾಗಿದೆ.
ಎಷ್ಟು ಬಾರಿ ದಂತ ತಪಾಸಣೆ (Teeth test)ಮಾಡಬೇಕು?
ಬಾಯಿಗೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ನಿಯಮಿತ ದಂತ ತಪಾಸಣೆಗಳು ಅತ್ಯಗತ್ಯ. ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ನೀವು ವರ್ಷಕ್ಕೆ ಒಮ್ಮೆ ಮಾತ್ರ ದಂತ ತಪಾಸಣೆ ಮಾಡಬೇಕಾಗುತ್ತೆ. ಆದರೆ ಹೆಚ್ಚು ಸಮಸ್ಯೆಗಳನ್ನು ಹೊಂದಿರುವ ಜನರಿಗೆ ಹೆಚ್ಚು ತಪಾಸಣೆ ಮಾಡಬೇಕಾಗಬಹುದು.
ಬಾಯಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡೋದು ಹೇಗೆ?
ಬಾಯಿ ಕ್ಯಾನ್ಸರ್ ನ ಹೆಚ್ಚಿನ ಅಪಾಯವು ತಂಬಾಕು ಉತ್ಪನ್ನಗಳಿಂದ ಆಗಿದೆ. ಇದನ್ನು ಯಾವುದೇ ರೂಪದಲ್ಲಿ ಸೇವಿಸೋದರಿಂದ ಅಪಾಯ ಹೆಚ್ಚಾಗಬಹುದು. ಹಾಗಾಗಿ, ಅದನ್ನು ತಪ್ಪಿಸಿ. ಅಲ್ಲದೆ, ಅತಿಯಾದ ಸೂರ್ಯನ ಬೆಳಕಿಗೆ (Sun light) ಒಡ್ಡಿಕೊಳ್ಳೋದರಿಂದ ತುಟಿಗಳನ್ನು ರಕ್ಷಿಸಿ.
ಬಾಯಿ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಯಾವುವು?
ಬಾಯಿ ಹುಣ್ಣು, ಹಲ್ಲುನೋವು, ನುಂಗಲು ಕಷ್ಟವಾಗೋದು, ಬಾಯಿಯಲ್ಲಿ ಬಿಳಿ ದದ್ದು, ಬಾಯಿಯ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳಾಗಿರಬಹುದು.
ಬಾಯಿ ಕ್ಯಾನ್ಸರ್ ಗೆ ಕಾರಣವೇನು?
ಅತಿಯಾದ ತಂಬಾಕು ಸೇವನೆ ಬಾಯಿ ಕ್ಯಾನ್ಸರ್ ಗೆ ಮುಖ್ಯ ಕಾರಣ.
ಬಾಯಿಯ ಕ್ಯಾನ್ಸರ್ ಎಷ್ಟು ಅಪಾಯಕಾರಿ?
ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡದಿದ್ದರೆ, ಈ ಕ್ಯಾನ್ಸರ್ ಮಾರಣಾಂತಿಕವಾಗಬಹುದು.
ಮೌತ್ ಅಲ್ಸರ್(Mouth ulcer) ಮತ್ತು ಮೌತ್ ಕ್ಯಾನ್ಸರ್ ನಡುವಿನ ವ್ಯತ್ಯಾಸವೇನು?
ಬಾಯಿ ಹುಣ್ಣು ಹಲವಾರು ಕಾರಣಗಳಿಗಾಗಿ ಸಂಭವಿಸಬಹುದು. ಇದು ಕ್ಯಾನ್ಸರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಟೆಸ್ಟ್ ಮಾಡೋದ್ರಿಂದ ಮಾತ್ರ ಕಂಡುಹಿಡಿಯಬಹುದು. ಆದ್ದರಿಂದ, ಗುಳ್ಳೆ ದೀರ್ಘಕಾಲದವರೆಗೆ ಇದ್ದರೆ, ತಕ್ಷಣವೇ ವೈದ್ಯರಲ್ಲಿ ಪರೀಕ್ಷಿಸಬೇಕು.