Asianet Suvarna News Asianet Suvarna News

ಬಾಯಿ ಬಿಟ್ಕೊಂಡು ಮಲಗೋ ಅಭ್ಯಾಸ ಇರೋರಿಗಿದು, ಜೋಪಾನ!

ನಿದ್ರೆ ಮಾಡಿದ್ಮೇಲೆ ನಾವು ಹೇಗಿರ್ತೇವೆ ನಮಗೆ ತಿಳಿಯೋದಿಲ್ಲ. ಗೊರಕೆ ಹೊಡೆದಿದ್ದು, ಬಾಯಿ ತೆರೆದು ಮಲಗಿದ್ದು ಎಲ್ಲವನ್ನು ನಮ್ಮ ಪಕ್ಕದಲ್ಲಿರುವವರು ಹೇಳ್ಬೇಕು. ನಿದ್ರೆ ಮಾಡ್ತಿದ್ದಂತೆ ನಿನ್ನ ಬಾಯಿ ತೆರೆಯುತ್ತೆ ಅಂತಾ ನಿಮ್ಮವರು ಹೇಳಿದ್ರೆ ಅಥವಾ ನಿಮಗೆ ಗೊತ್ತಾದ್ರೆ ಅದನ್ನ ನಿರ್ಲಕ್ಷ್ಯ ಮಾಡ್ಬೇಡಿ.
 

Is Sleeping With Your Mouth Open Dangerous
Author
First Published Jan 4, 2023, 3:28 PM IST

ನೋಡು ಹೇಗೆ ಬಾಯಿ ತೆರೆದು ಮಲಗಿದ್ದಾರೆ, ಬಾಯೊಳಗೆ ನೊಣ ಹೋದ್ರೂ ಗೊತ್ತಾಗೋದಿಲ್ಲ ಅಂತಾ ಲೇವಡಿ ಮಾಡ್ತಿರುತ್ತೇವೆ. ಅನೇಕರಿಗೆ ಬಾಯಿ ತೆರೆದು ನಿದ್ರೆ ಮಾಡುವ ಅಭ್ಯಾಸವಿರುತ್ತದೆ. ಬಾಯಿ ತೆರೆದಿದ್ದು ನಿಮ್ಮ ಅರಿವಿಗೆ ಬಂದಿರೋದಿಲ್ಲ. ಬಸ್ ನಲ್ಲಿ ಇರಲಿ, ಮನೆಯಲ್ಲಿ ಇರಲಿ, ಹಗಲಾಗಿರಲಿ, ರಾತ್ರಿಯಾಗಿರಲಿ ಅನೇಕ ಜನರು ನಿದ್ರೆಗೆ ಜಾರಿದ್ರು ಅಂದ್ರೆ ಬಾಯಿ ತೆರೆದುಕೊಳ್ಳುತ್ತದೆ. ನಿಮಗೂ ಬಾಯಿ ತೆರೆದುಕೊಂಡು ಮಲಗುವ ಅಭ್ಯಾಸವಿದ್ಯಾ? ಉತ್ತರ ಯಸ್ ಎಂದಾದ್ರೆ ಎಚ್ಚರದಿಂದಿರಿ. 

ಬಾಯಿ (Mouth) ತೆರೆದು ಮಲಗೋದು ಮುಂದೆ ಗಂಭೀರ ಕಾಯಿಲೆ (Disease) ಗೂ ಕಾರಣವಾಗಬಹುದು. 

ಸ್ಲೀಪ್ ಅಪ್ನಿಯಾ (Sleep Apnea) : ನಿದ್ರೆಯಲ್ಲಿ ಉಸಿರುಕಟ್ಟುವಿಕೆ ರೋಗದ ಲಕ್ಷಣದಲ್ಲಿ ಬಾಯಿ ತೆರೆದು ಮಲಗುವುದು ಸೇರಿದೆ. ಸ್ಲೀಪ್ ಅಪ್ನಿಯಾದಲ್ಲಿ ನಿದ್ರೆ ಮಾಡ್ತಿರುವಾಗ ಉಸಿರುಗಟ್ಟಿದಂತಾಗುತ್ತದೆ. ಹಾಗಂತ ಬಾಯಿ ತೆರೆದು ಮಲಗುವ ಎಲ್ಲರಿಗೂ ಸ್ಲೀಪ್ ಅಪ್ನಿಯಾ  ಸಮಸ್ಯೆ ಇದೆ ಎಂದಲ್ಲ. ಯಾಕೆಂದ್ರೆ ಸ್ಲೀಪ್ ಅಪ್ನಿಯಾ ಇಲ್ಲದ ವ್ಯಕ್ತಿಗಳು ಕೂಡ ಬಾಯಿ ತೆರೆದು ಮಲಗ್ತಾರೆ ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ. ಸಾಮಾನ್ಯವಾಗಿ ನಾವು ಮಲಗಿದಾಗ ನಡೆಯುವ ರಕ್ತ ಪರಿಚಲನೆಯಲ್ಲಿ  ನಮ್ಮ ಮೂಗಿನೊಳಗೆ ರಕ್ತ ತುಂಬಿಕೊಳ್ಳುತ್ತದೆ. ಇದರಿಂದಾಗಿ ಮೂಗಿನೊಳಗೆ ಊತ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಮೂಗಿನ ಮೂಲಕ ಉಸಿರಾಡಲು ಸಾಧ್ಯವಾಗುವುದಿಲ್ಲ. ಸರಾಗವಾಗಿ ಉಸಿರಾಟ ಸಾಧ್ಯವಿಲ್ಲದೆ ಹೋದಾಗ ನಾವು ನಮ್ಮ ಬಾಯಿ ತೆರೆದು ಉಸಿರಾಡಲು ಶುರು ಮಾಡ್ತೇವೆ. ಇದು ನಮ್ಮ ಅರಿವಿಗೆ ಬರದೆ ನಡೆದಿರುತ್ತದೆ. 

ಬಾಯಿಯಲ್ಲಿ ಉಸಿರಾಟ ನಡೆಸಲು ಅನೇಕ ಕಾರಣವಿದೆ. ಅದ್ಯಾವುದು ಗೊತ್ತಾ? :

ಅಲರ್ಜಿಯಿದ್ರೆ ಕಾಡುತ್ತೆ ಸಮಸ್ಯೆ : ಇತ್ತೀಚಿನ ದಿನಗಳಲ್ಲಿ ಅಲರ್ಜಿ ಸಮಸ್ಯೆ ಹೆಚ್ಚಾಗಿದೆ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆ ನಮ್ಮ ದೇಹವನ್ನು ರಕ್ಷಿಸದೆ ಹೋದಾಗ ನಮಗೆ ಅಲರ್ಜಿ ಕಾಣಿಸಿಕೊಳ್ಳುತ್ತದೆ. ಈ  ಅಲರ್ಜಿ ಇರುವ ಜನರು ಬಾಯಿಯ ಮೂಲಕ ಉಸಿರಾಡಲು ಪ್ರಾರಂಭಿಸುತ್ತಾರೆ. ಅಲರ್ಜಿಯನ್ನು ಹೊರಗೆ ಹಾಕುವ ಪ್ರಯತ್ನದಲ್ಲಿ ಉಸಿರಾಟ ವೇಗ ಪಡೆಯುತ್ತದೆ. ಇದ್ರಿಂದ ಮೂಗಿನ ಬದಲು ಬಾಯಿ ಮೂಲಕ ನಾವು ಉಸಿರಾಟ ಶುರು ಮಾಡ್ತೇವೆ. 

ಅಸ್ತಮಾ ರೋಗಿಗಳು : ಆಸ್ತಮಾ ರೋಗಿಗಳು ಕೂಡ ಮೂಗಿನ ಬದಲು ಬಾಯಿಯಲ್ಲಿ ಉಸಿರಾಟ ನಡೆಸುತ್ತಾರೆ. ಸಾಮಾನ್ಯವಾಗಿ ಅಸ್ತಮಾ ರೋಗಿಗಳ ಶ್ವಾಸಕೋಶದಲ್ಲಿ ಊತ ಉಂಟಾಗುತ್ತದೆ. ಇದರಿಂದಾಗಿ ಅವರಿಗೆ ಉಸಿರಾಡುವುದು ಕಷ್ಟವಾಗುತ್ತದೆ. ಹಾಗಾಗಿ ಅವರು ಬಾಯಿ ತೆರೆದು ಮಲಗ್ತಾರೆ. ಅವರಿಗೆ ಇದ್ರಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. 

ಬೆಚ್ಚಗಿರ್ಲಿ ಅಂತ ಮುಸುಕು ಹಾಕ್ಕೊಂಡು ಮಲಗ್ತೀರಾ ? ಹುಷಾರ್ ಜೀವಾನೇ ಹೋಗ್ಬೋದು !

ನೆಗಡಿ ಮತ್ತು ಜ್ವರದಲ್ಲಿ ಮಾಮೂಲಿ : ನೆಗಡಿ ಮತ್ತು ಜ್ವರ ಕಾಣಿಸಿಕೊಂಡ ಸಮಯದಲ್ಲಿ ನಮ್ಮ ಮೂಗು ಮುಚ್ಚಿಕೊಳ್ಳುತ್ತದೆ. ಈ ಕಾರಣದಿಂದಾಗಿ ನಮಗೆ ಮೂಗಿನ ಮೂಲಕ ಉಸಿರಾಟ ಸಾಧ್ಯವಾಗುವುದಿಲ್ಲ. ದೇಹದಲ್ಲಿ ಆಮ್ಲಜನಕದ ಕೊರತೆ ಕಾಡುತ್ತದೆ. ಆಗ ನಾವು ಬಾಯಿಯ ಮೂಲಕ ಉಸಿರಾಡಬೇಕಾಗುತ್ತದೆ. ನೆಗಡಿ ಹಾಗೂ ಜ್ವರ ಬಂದಾಗ ನೀವು ಬಾಯಿಯಲ್ಲಿ ಉಸಿರಾಡುವುದು ಸಾಮಾನ್ಯ. ಇದಕ್ಕೆ ಹೆಚ್ಚು ತಲೆಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ.  

ಸೈನಸ್ ಸಮಸ್ಯೆ : ನೆಗಡಿ ಮಾತ್ರವಲ್ಲ ಸೈನಸ್‌  ಕಾಯಿಲೆಯಿಂದ ಬಳಲುವವರು ಕೂಡ ಬಾಯಿಯ ಮೂಲಕ ಉಸಿರಾಡುತ್ತಾರೆ.  

ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗ್ಬೇಡಿ : ಹಗಲಿನಲ್ಲಿ ನೀವು ಅತಿಯಾದ ಉದ್ವೇಗಕ್ಕೆ ಒಳಗಾಗಿದ್ದರೆ ಅಥವಾ ಯಾವಾಗಲೂ ಒತ್ತಡದಲ್ಲಿರುತ್ತೀರಿ ಎಂದಾದ್ರೆ ರಾತ್ರಿ ನಿದ್ರೆಯಲ್ಲಿ ಬಾಯಿ ತೆರೆದುಕೊಳ್ಳುತ್ತದೆ. ಕೆಲವು ಬಾರಿ ನೀವು ರಾತ್ರಿ ಮಾತ್ರವಲ್ಲ ಹಗಲಿನಲ್ಲಿ ಸಾಮಾನ್ಯ ಉಸಿರಾಟ ನಡೆಸುವಾಗ್ಲೂ ಬಾಯಿಯಿಂದ ಉಸಿರಾಡಬೇಕಾಗುತ್ತದೆ. ಟೆನ್ಷನ್ ನಿಮ್ಮ ಉಸಿರಾಟದ ವೇಗವನ್ನು ಜಾಸ್ತಿ ಮಾಡುತ್ತದೆ. ಉಸಿರಾಟದ ವೇಗ ಹೆಚ್ಚಾದಾಗ ಬಾಯಿ ತೆರೆದುಕೊಳ್ಳುತ್ತದೆ. 

ಬರೀ ನಿದ್ದೆ ಮಾಡೋದಷ್ಟೇ ಕೆಲ್ಸ, ಭರ್ತಿ 15 ಲಕ್ಷ ರೂ. ಸಂಬಳ! ನೀವೂ ಟ್ರೈ ಮಾಡ್ಬೋದು

ನೆಗಡಿ,ಜ್ವರದ ಸಮಸ್ಯೆ ಬಿಟ್ಟು ಸಾಮಾನ್ಯ ದಿನಗಳಲ್ಲೂ ನೀವು ಪ್ರತಿ ರಾತ್ರಿ ಬಾಯಿ ತೆರೆದು ನಿದ್ರೆ ಮಾಡುತ್ತೀರಿ ಎಂದಾದ್ರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. 
 

Follow Us:
Download App:
  • android
  • ios