ನಿಮ್ಮ ಮನೆಯಲ್ಲೂ ಹುಟ್ಟಿದ ಮಗು ಇದೆಯೇ? ಹಾಗಿದ್ರೆ ಇದನ್ನೆಲ್ಲಾ ನಂಬಬೇಡಿ…
ನವಜಾತ ಶಿಶುವಿನ ಪೋಷಕರಾಗಿರೋದು ತುಂಬಾ ಜವಾಬ್ದಾರಿಯುತ ಕೆಲಸ. ಪೋಷಕರಾಗಿ, ನವಜಾತ ಶಿಶುವನ್ನು ನೋಡಿಕೊಳ್ಳೋದು ಬಹಳ ಮುಖ್ಯ ಮತ್ತು ಸವಾಲಾಗಿದೆ. ಆದರೆ, ಅವುಗಳಿಗೆ ಸಂಬಂಧಿಸಿದ ಕೆಲವು ನಂಬಿಕೆಗಳಿವೆ, ಅದು ಕೆಲವೊಮ್ಮೆ ಮಕ್ಕಳಿಗೆ ತೊಂದರೆ ನೀಡಬಹುದು. ನವಜಾತ ಶಿಶುವಿಗೆ ಸಂಬಂಧಿಸಿದ ಕೆಲವು ಮಿಥ್ಯೆ ಮತ್ತು ಸತ್ಯ ಸಂಗತಿಗಳನ್ನು ತಿಳಿದುಕೊಳ್ಳೋಣ-
ನವಜಾತ ಶಿಶುವನ್ನು(New born) ನೋಡಿಕೊಳ್ಳೋದು ಪೋಷಕರಾಗಿ ಬಹಳ ಮುಖ್ಯ ಮತ್ತು ಕಷ್ಟದ್ದಾಗಿದೆ. ಮಗುವಿನ ಜನನದೊಂದಿಗೆ, ಅದಕ್ಕೆ ಸಂಬಂಧಿಸಿದ ಜವಾಬ್ದಾರಿಗಳು ಸಹ ಹೆಚ್ಚಾಗುತ್ತವೆ. ಮಗುವಿನ ಆರೋಗ್ಯಕರ ಜೀವನಕ್ಕೆ ಸರಿಯಾದ ಆರೈಕೆ ಬಹಳ ಮುಖ್ಯ, ಆದರೆ ಇಂದಿಗೂ ಭಾರತದಲ್ಲಿ ಮಕ್ಕಳ ಬಗ್ಗೆ ಅನೇಕ ಮಿಥ್ಯೆಗಳಿವೆ, ಇದು ಅವರ ಸರಿಯಾದ ಬೆಳವಣಿಗೆಗೆ ಅಡ್ಡಿಯಾಗುತ್ತೆ ಮತ್ತು ಅವರಿಗೆ ಹಾನಿಕಾರಕವಾಗಿದೆ. ನವಜಾತ ಶಿಶುಗಳಿಗೆ ಸಂಬಂಧಿಸಿದ ಇಂತಹ ಕೆಲವು ಸಾಮಾನ್ಯ ಮಿಥ್ಯೆ ಮತ್ತು ಅವುಗಳ ಫ್ಯಾಕ್ಟ್ ಗಳನ್ನು ತಿಳಿದುಕೊಳ್ಳೋಣ.
ಮಿಥ್ಯೆ : ನವಜಾತ ಶಿಶು ಹುಟ್ಟಿದ ತಕ್ಷಣ ಸ್ನಾನ(Bath) ಮಾಡಬೇಕೇ?
ಸತ್ಯ : ಜನನದ ನಂತರ ನವಜಾತ ಶಿಶುವಿಗೆ ಸ್ನಾನ ಮಾಡುವ ಅಗತ್ಯವಿಲ್ಲ. ಇದಕ್ಕೆ ವಿರುದ್ಧವಾಗಿ, ಜನನದ ಕೆಲವು ದಿನಗಳ ನಂತರ ಮಗುವಿಗೆ ಸ್ನಾನ ಮಾಡೋದರಿಂದ ಬಾಡಿ ಟೆಂಪರೇಚರ್ ನಿಯಂತ್ರಿಸಲು ಮತ್ತು ಚರ್ಮ ಒಣಗೋದನ್ನು ತಡೆಯಲು ಸಹಾಯ ಮಾಡುತ್ತೆ.
ಮಿಥ್ಯ : ಮಗುವಿನ ಕಣ್ಣುಗಳಲ್ಲಿ ಕಾಡಿಗೆ(Kajal) ಹಾಕಬೇಕು.
ಸತ್ಯ: ಭಾರತದಲ್ಲಿ, ಚಿಕ್ಕ ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಕಾಡಿಗೆಯನ್ನು ಹಚ್ಚಲಾಗುತ್ತೆ ಎಂದು ನಂಬಲಾಗಿದೆ, ಆದರೆ ಮಗುವಿನ ಕಣ್ಣುಗಳಿಗೆ ಕಾಡಿಗೆ ಹಚ್ಚೋದನ್ನು ನೀವು ತಪ್ಪಿಸಬೇಕು. ಯಾಕಂದ್ರೆ ಕಾಡಿಗೆ ಹಚ್ಚೋದ್ರಿಂದ ಕಣ್ಣಿನ ಸೋಂಕುಗಳು, ಮತ್ತಿತರ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ.
ಮಿಥ್ಯೆ : ನವಜಾತ ಶಿಶುಗಳಿಗೆ ಸಾಸಿವೆ ಎಣ್ಣೆಯಿಂದ(Mustard oil) ಮಸಾಜ್ ಮಾಡಬೇಕು
ಸತ್ಯ: ಮಸಾಜ್ ನವಜಾತ ಶಿಶುಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ, ಆದರೆ ಇದಕ್ಕಾಗಿ ಸಾಸಿವೆ ಎಣ್ಣೆಯನ್ನು ಬಳಸೋದನ್ನು ತಪ್ಪಿಸಬೇಕು. ಯಾಕಂದ್ರೆ, ಸಾಸಿವೆ ಎಣ್ಣೆ ಚರ್ಮದ ಕಿರಿಕಿರಿ ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಿಥ್ಯ : ತಾಯಿಗೆ ಶೀತ ಅಥವಾ ಜ್ವರವಿದ್ದರೆ, ಸ್ತನ್ಯಪಾನ(Breast feeding) ಮಾಡೋದನ್ನು ತಪ್ಪಿಸಬೇಕು.
ಸತ್ಯ : ಶೀತ ಅಥವಾ ಜ್ವರವಿದ್ದರೂ ಶಿಶುಗಳಿಗೆ ಹಾಲುಣಿಸೋದು ಸುರಕ್ಷಿತವಾಗಿದೆ. ಯಾಕಂದ್ರೆ, ತಾಯಿಯ ಹಾಲಿನಲ್ಲಿ ಆಂಟಿ ಬಾಡೀಸ್ ಗಳಿವೆ, ಇದು ಮಗುವನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತೆ.
ಮಿಥ್ಯೆ: ಮೊದಲ ಕೆಲವು ತಿಂಗಳುಗಳವರೆಗೆ ಮಗುವನ್ನು ಹೊರಗೆ ಕರೆದುಕೊಂಡು ಹೋಗೋದನ್ನು ತಪ್ಪಿಸಬೇಕು.
ಸತ್ಯ: ಮಗುವಿಗೆ ಸೂಕ್ತವಾದ ಡ್ರೆಸ್(Dress) ಹಾಕೋದು ಮತ್ತು ಜನದಟ್ಟಣೆಯ ಸ್ಥಳಗಳನ್ನು ತಪ್ಪಿಸುವಂತಹ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ್ರೆ, ಮಗುವನ್ನು ಹೊರಗೆ ಕರೆದೊಯ್ಯುವುದು ಸುರಕ್ಷಿತವಾಗಿದೆ.
ಮಿಥ್ಯೆ: ಮಗುವಿಗೆ ನಿಗದಿತ ಸಮಯದಲ್ಲಿ ಹಾಲುಣಿಸಬೇಕು.
ಸತ್ಯ: ಶಿಶುಗಳಿಗೆ ನಿಗದಿತ ಸಮಯದಲ್ಲಿ ಹಾಲು ನೀಡಬೇಕು ಎಂದು ಅನೇಕ ಜನರು ನಂಬುತ್ತಾರೆ, ಆದರೆ ಇದು ನಿಜವಲ್ಲ. ಮಗುವಿಗೆ ಅಗತ್ಯವಿದ್ದಾಗ ಹಾಲುಣಿಸೋದು ಸೂಕ್ತ. ಹೀಗೆ ಮಾಡೋದ್ರಿಂದ ಮಗು ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತೆ.
ಮಿಥ್ಯೆ : ಡೈಪರ್(Diaper) ಬಳಸೋದನ್ನು ತಪ್ಪಿಸಬೇಕು, ಯಾಕಂದ್ರೆ ಅದು ರಾಷೆಸ್ಗಳಿಗೆ ಕಾರಣವಾಗಬಹುದು.
ಸತ್ಯ: ನವಜಾತ ಶಿಶುಗಳಿಗೆ ಡೈಪರ್ ಸುರಕ್ಷಿತ ಮತ್ತು ಅನುಕೂಲಕರವಾಗಿವೆ, ಆದರೆ ಅವುಗಳನ್ನು ಆಗಾಗ್ಗೆ ಬದಲಾಯಿಸೋದು ಮತ್ತು ಡೈಪರ್ ಗಳಿಂದ ದದ್ದುಗಳನ್ನು ತಡೆಯಲು ಡೈಪರ್ ಕ್ರೀಮ್ ಗಳನ್ನು ಬಳಸೋದು ಮುಖ್ಯ