ಅಜ್ಜಿ ಹೇಳಿದ ಬೊಟ್ಟಿನ ಗುಟ್ಟು.. ಕೇವಲ ಸಂಪ್ರದಾಯವಲ್ಲ, ಇದರ ಹಿಂದಿದೆ ವೈಜ್ಞಾನಿಕ ರಹಸ್ಯ
Significance of Bindi: ಸಾಮಾನ್ಯವಾಗಿ ನಾವೆಲ್ಲರೂ ಅಲಂಕಾರಕ್ಕಾಗಿ ಬೊಟ್ಟು ಇಟ್ಟುಕೊಳ್ಳುತ್ತೇವೆ, ಆದರೆ ಎರಡು ಹುಬ್ಬುಗಳ ಮಧ್ಯೆ ತಿಲಕ ಧರಿಸುವುದರ ಹಿಂದೆ ಅಚ್ಚರಿಯ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ ಎಂಬುದು ನಿಮಗೆ ಗೊತ್ತೇ?

ಹೀಗೇಕೆ ಹೇಳುತ್ತಿದ್ದರು?
ಹೀಗೇಕೆ ಹೇಳುತ್ತಿದ್ದರು?
ಬೊಟ್ಟು ಅಥವಾ ಬಿಂದಿ ಅಥವಾ ತಿಲಕದ ವಿಶೇಷತೆಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಪ್ರತಿಯೊಬ್ಬರೂ ಹಣೆಯ ಮೇಲೆ ಬೊಟ್ಟು ಇಟ್ಟುಕೊಳ್ಳುತ್ತಾರೆ. "ಬೊಟ್ಟು ಇಟ್ಟುಕೊಳ್ಳಲೇಬೇಕು" ಎಂದು ಮನೆಯಲ್ಲಿ ಹಿರಿಯರು ಒತ್ತಾಯ ಮಾಡುವುದನ್ನು ನಾವು ಕೇಳಿರುತ್ತೇವೆ. ಅದರಲ್ಲೂ ವಿಶೇಷವಾಗಿ ಅಜ್ಜಿಯಂದಿರು "ಬೊಟ್ಟು ಇಲ್ಲದೆ ಹೊರಗೆ ಹೋಗಬೇಡ" ಎಂದು ಹೇಳುತ್ತಿರುತ್ತಾರೆ. ಅವರು ಹೀಗೆ ಏಕೆ ಹೇಳುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ? ಇದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ಮನಸೂರೆಗೊಳ್ಳುವಂತಹ ವೈಜ್ಞಾನಿಕ ರಹಸ್ಯಗಳಿವೆ. ಅವುಗಳೇನು ಎಂಬುದನ್ನು ಈಗ ನೋಡೋಣ.
3000 ವರ್ಷಗಳ ವಿಜ್ಞಾನ ಮತ್ತು ಆಧ್ಯಾತ್ಮಿಕತೆ
3000 ವರ್ಷಗಳ ವಿಜ್ಞಾನ ಮತ್ತು ಆಧ್ಯಾತ್ಮಿಕತೆ
ಹಿಂದೂ ಸಂಸ್ಕೃತಿಯಲ್ಲಿ ಬೊಟ್ಟಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಪ್ರತಿಯೊಬ್ಬರೂ ಹಣೆಯ ಮೇಲೆ ಬೊಟ್ಟು ಇಟ್ಟುಕೊಳ್ಳಲೇಬೇಕು ಎಂಬ ನಂಬಿಕೆಯಿದೆ. ಅದರಲ್ಲೂ ಹೆಣ್ಣುಮಕ್ಕಳು ಹಣೆಯ ಮೇಲೆ ಬೊಟ್ಟು ಧರಿಸುವುದು ಕಡ್ಡಾಯ ಎಂದು ಹೇಳಲಾಗುತ್ತದೆ. ಬಹಳಷ್ಟು ಜನರು ಇದು ಕೇವಲ ಸೌಂದರ್ಯಕ್ಕಾಗಿ ಅಥವಾ ಅಲಂಕಾರಕ್ಕಾಗಿ ಎಂದು ಭಾವಿಸುತ್ತಾರೆ. ಆದರೆ, ಎರಡು ಹುಬ್ಬುಗಳ ಮಧ್ಯೆ ಬೊಟ್ಟು ಇಟ್ಟುಕೊಳ್ಳುವ ಹಿಂದೆ 3000 ವರ್ಷಗಳ ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಅಡಗಿದೆ ಎಂದು ತಜ್ಞರು ಹೇಳುತ್ತಾರೆ. ಅದರ ಬಗ್ಗೆ ಈಗ ವಿವರವಾಗಿ ತಿಳಿದುಕೊಳ್ಳೋಣ.
ಮೆಲಟೋನಿನ್ ಮತ್ತು ಸಿರೊಟೋನಿನ್ ಹಾರ್ಮೋನುಗಳ ಬಿಡುಗಡೆ
ಮೆಲಟೋನಿನ್ ಮತ್ತು ಸಿರೊಟೋನಿನ್ ಹಾರ್ಮೋನುಗಳ ಬಿಡುಗಡೆ
ನಮ್ಮ ಎರಡು ಹುಬ್ಬುಗಳ ಮಧ್ಯದ ಭಾಗದಲ್ಲಿ 'ಆಜ್ಞಾ ಚಕ್ರ' ಇರುತ್ತದೆ. ಇಲ್ಲಿ ಕೆಂಪು ಬಣ್ಣದ ತಿಲಕವನ್ನು ಇಟ್ಟುಕೊಳ್ಳುವುದರಿಂದ ಇದು ಅಂತರಂಗದ ಜ್ಞಾನವನ್ನು ಹೆಚ್ಚಿಸಿ, ದೈವಿಕ ಶಕ್ತಿಗಳನ್ನು ಜಾಗೃತಗೊಳಿಸುತ್ತದೆ ಎಂದು ಪಂಡಿತರು ಹೇಳುತ್ತಾರೆ. ಇನ್ನು ವೈಜ್ಞಾನಿಕವಾಗಿ ನೋಡುವುದಾದರೆ, ಇಲ್ಲಿ 'ಪೀನಿಕಲ್ ಗ್ರಂಥಿ' (Pineal Gland) ಇರುತ್ತದೆ. ಇದು ಮೆಲಟೋನಿನ್ ಮತ್ತು ಸಿರೊಟೋನಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇವು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಉತ್ತಮ ನಿದ್ರೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೊಟ್ಟು ಇಟ್ಟುಕೊಳ್ಳುವುದರಿಂದ ಇನ್ನು ಹತ್ತು ಹಲವು ಪ್ರಯೋಜನಗಳಿವೆ.
ತಲೆನೋವು ಕಡಿಮೆಯಾಗುತ್ತೆ
ತಲೆನೋವು ಕಡಿಮೆಯಾಗುತ್ತೆ
ಪ್ರತಿದಿನ ನಿಯಮಿತವಾಗಿ ಬೊಟ್ಟು ಇಟ್ಟುಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ. ನಾವು ಬೊಟ್ಟು ಇಟ್ಟುಕೊಳ್ಳುವ ಸಮಯದಲ್ಲಿ ಎರಡು ಹುಬ್ಬುಗಳ ಮಧ್ಯದ ಭಾಗವನ್ನು ಬೆರಳಿನಿಂದ ಸ್ವಲ್ಪ ಒತ್ತುತ್ತೇವೆ. ಇದು ಆ ಭಾಗದಲ್ಲಿ ಮಸಾಜ್ ಮಾಡಿದಂತಾಗುತ್ತದೆ. ಈ ಬಿಂದುವಿನ ಮೇಲಿನ ಒತ್ತಡವು ತಲೆನೋವನ್ನು ಕಡಿಮೆ ಮಾಡಿ, ಮನಸ್ಸಿಗೆ ಪ್ರಶಾಂತತೆಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ, ಇದು ನಿಮ್ಮಲ್ಲಿ ಹೊಸ ಉತ್ಸಾಹವನ್ನು ತರುತ್ತದೆ ಮತ್ತು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಸೂರ್ಯನ ಕಿರಣಗಳಿಂದ ರಕ್ಷಣೆ
ಸೂರ್ಯನ ಕಿರಣಗಳಿಂದ ರಕ್ಷಣೆ
ಹಾಗೆಯೇ, ಬೊಟ್ಟು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ ಎಂದು ನಂಬಲಾಗಿದೆ. ಹಣೆಯ ಮೇಲೆ ಬೊಟ್ಟು ಇಡುವುದರಿಂದ ಮೆದುಳಿನ ಮುಂಭಾಗದ ಭಾಗ (Frontal Lobe) ಸಕ್ರಿಯವಾಗುತ್ತದೆ, ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಇನ್ನು ಆಧ್ಯಾತ್ಮಿಕವಾಗಿ ನೋಡುವುದಾದರೆ, ಸುಮಂಗಲೆಯರು ಕೆಂಪು ಬಣ್ಣದ ಬೊಟ್ಟು ಇಟ್ಟುಕೊಳ್ಳುವುದರಿಂದ ಪತಿಯ ಆಯುಷ್ಯ ವೃದ್ಧಿಯಾಗುತ್ತದೆ ಮತ್ತು ಲಕ್ಷ್ಮೀ ದೇವಿಯ ಕಟಾಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

