ಹೆಣ್ಮಕ್ಳೇ ತಲೆಗೆ ಹೂ ಮುಡಿಯೋದ್ರಿಂದ ಈ ಒಂದು ಲಾಭವೂ ಇದೆ!
ಹಿಂದಿನ ಕಾಲದಲ್ಲಿ ಪ್ರತಿಯೊಬ್ಬ ಹೆಣ್ನು ಮಕ್ಕಳು ಪ್ರತಿದಿನವೂ ತಲೆಗೆ ಹೂ ಮೂಡಿಯುತ್ತಿದ್ದರು. ಆದರೆ ಇದರ ಹಿಂದಿನ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ? ನಮ್ಮ ಪೂರ್ವಿಕರು ಮಾಡಿರೋ ಒಂದೊಂದು ಪದ್ಧತಿಗೂ ತನ್ನದೇ ಆದ ವೈಜ್ಞಾನಿಕ ಕಾರಣಗಳಿವೆ. ಅಷ್ಟಕ್ಕೂ ಮಹಿಳೆಯರು ತೆಲೆಗೆ ಹೂ ಮುಡಿದರೇನು ಪ್ರಯೋಜನ?
ತಲೆಗೆ ಹೂ ಮುಡಿಯೋದ್ರ ಲಾಭ
ಹೆಣ್ಣುಮಕ್ಕಳು ಅಂದ್ರೆ ಸೌಂದರ್ಯ. ಹೂ ಮುಡ್ಕೊಂಡ್ರೆ ಅವ್ರ ಸೌಂದರ್ಯ ಇನ್ನೂ ಹೆಚ್ಚುತ್ತೆ. ತಲೆಗೆ ಹೂ ಮುಡ್ಕೊಂಡ್ರೆ ಅವರ ಮುಖದ ಕಳೆಯೂ ಹೆಚ್ಚಾಗುತ್ತೆ. ಅವ್ರಿರೋ ಜಾಗ ಪರಿಮಳಯುಕ್ತವಾಗುತ್ತೆ. ಮೊದಲೆಲ್ಲಾ ಮನೆ ಹೆಂಗಸರು ಮಕ್ಕಳೆಲ್ಲಾ ಹೂ ಮೂಡಿತಿದ್ದರು. ಆದರೆ ಈಗ ಫ್ಯಾಷನ್ ಅಂತ ಹೂ ಮುಡಿಯುವವರ ಸಂಖ್ಯೆಯೂ ಕಡಿಮೆ ಆಗಿದೆ. ಆದರೂ ಕೆಲ ಹೆಣ್ಣುಮಕ್ಳಿಗೆ ತಲೆ ತುಂಬಾ ಹೂ ಮುಡ್ಕೊಳ್ಳೋದಂದ್ರೆ ತುಂಬಾ ಇಷ್ಟ. ತಲೆಗೆ ಹೂ ಮುಡ್ಕೊಂಡ್ರೆ ಒಂಥರಾ ಪಾಸಿಟಿವ್ ಎನರ್ಜಿ ಇರುತ್ತೆ ಅನ್ನೋದು ಹಲವರ ಅಂಬೋಣ. ಹೂವು ಮುಖದ ಸೌಂದರ್ಯ ಹೆಚ್ಚಿಸೋದು ಮಾತ್ರವಲ್ಲ, ಪಾಸಿಟಿವ್ ಎನರ್ಜಿನೂ ಕೊಡುತ್ತೆ.
ಲಾಭವೇನು?
ಹಿಂದೆಲ್ಲಾ ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಾಕಿ, ತಲೆ ಬಾಚಿ ಜಡೆ ಹಾಕಿ ಹೂ ಮುಡ್ಕೊಂಡು ಅಲಂಕಾರ ಮಾಡ್ಕೊಳ್ತಿದ್ರು. ಈಗ ಕಾಲ ಬದಲಾಗಿದೆ. ವಿಶೇಷ ಸಂದರ್ಭಗಳಲ್ಲಿ, ದೇವಸ್ಥಾನಕ್ಕೆ ಹೋದಾಗ ಮಾತ್ರ ನಗರದ ಹೆಣ್ಣುಮಕ್ಕಳು ಹೂ ಮುಡ್ಕೊಳ್ತಾರೆ. ಅದೂ ಕೂಡ ಅಪರೂಪ.
ಗ್ರಾಮೀಣ ಪ್ರಾಂತ್ಯದಲ್ಲಿ ಕೆಲವೆಡೆ ಇಂದಿಗೂ ಹೆಣ್ಣುಮಕ್ಕಳು ಹೂ ಮುಡಿಯೋದು ಮಾಮೂಲು. ಮನೆಯಲ್ಲಿ ತೋಟ ಮಾಡಿ ಹೂ ಬೆಳೆಸೋರು ಪ್ರತಿದಿನವೂ ಹೂ ಮುಡ್ಕೊಳ್ತಾರೆ. ಹೀಗೆ ಪ್ರತಿದಿನ ಹೂ ಮುಡಿಯೋದ್ರಿಂದ ಹೆಣ್ಣು ಮಕ್ಕಳಿಗೆ ಹಲವಾರು ಲಾಭಗಳಿವೆ. ಅವು ಯಾವವು?
ಪ್ರತಿಯೊಂದು ಕಾಲಘಟ್ಟಕ್ಕೂ ಅನುಗುಣವಾಗಿ ಫ್ಯಾಷನ್ ಬದಲಾಗುತ್ತೆ. ಹಿಂದಿನ ಕಾಲದಲ್ಲಿ ಹೆಣ್ಣುಮಕ್ಕಳು ತಮ್ಮ ಕೂದಲನ್ನ ಬಿಗಿಯಾಗಿ ಜಡೆ ಹಾಕಿ, ಹೂ ಮುಡಿಯೋದಕ್ಕೆ ಗಮನ ಕೊಡ್ತಿದ್ರು. ಈಗಿನ ಕಾಲದ ಹೆಣ್ಣುಮಕ್ಕಳಿಗೆ ಕೂದಲನ್ನ ಬಿಗಿಯಾಗಿ ಜಡೆ ಹಾಕೋದ್ರಲ್ಲಿ ಆಸಕ್ತಿ ಇರಲ್ಲ. ಹಾಗಾಗಿ ಹೆಚ್ಚಿನ ಹೆಣ್ಣುಮಕ್ಕಳು ಕೂದಲನ್ನ ಬಿಟ್ಟುಕೊಳ್ಳೋದನ್ನೇ ಇಷ್ಟ ಪಡ್ತಾರೆ. ಆದ್ರೆ ಕೂದಲನ್ನ ಜಡೆ ಹಾಕಿದ್ರೂ, ಬಿಟ್ಟುಕೊಂಡ್ರೂ ಹೂ ಮುಡಿಯೋದು ಒಳ್ಳೆಯದು.
ಕೂದಲನ್ನ ಬಿಟ್ಟು ಹೂ ಮುಡಿಯೋದು ನೋಡಲು ಚೆಂದ ಅನ್ನಿಸಿದ್ರೂ ಅದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದೇ ರೀತಿ ಕೂದಲನ್ನ ಬಿಗಿಯಾಗಿ ಜಡೆ ಹಾಕೋದೂ ಕೂಡ ಕೂದಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೂದಲನ್ನ ಸ್ವಲ್ಪ ಲೂಸ್ ಆಗಿ ಜಡೆ ಹಾಕಿ ಅದ್ರಲ್ಲಿ ಹೂ ಮುಡಿಯೋದ್ರಿಂದ ಕೆಲವು ಲಾಭಗಳಿವೆ ಅಂತ ಆಧ್ಯಾತ್ಮ ಹೇಳುತ್ತೆ.
ಗುಲಾಬಿ:
ಕೆಲ ಹೆಣ್ಣು ಮಕ್ಕಳಿಗೆ ಮಲ್ಲಿಗೆ, ಹೂವಿನ ಪರಿಮಳ ತಲೆನೋವು ತರಬಹುದು. ಅಂಥವರು ಪ್ರತಿದಿನ ಗುಲಾಬಿ ಹೂವನ್ನು ಮುಡಿದ್ರೆ ತಲೆ ಸುತ್ತು ಬರೋದಿಲ್ಲ. ಗುಲಾಬಿ ಪರಿಮಳ ತಲೆಯಲ್ಲಿರುವ ಭಾರವನ್ನು ಕಡಿಮೆ ಮಾಡಿ, ತಲೆ ಸುತ್ತು ಬರೋದನ್ನ ತಡೆಯುತ್ತೆ ಅಂತ ಹೇಳಲಾಗುತ್ತೆ.
ಮಲ್ಲಿಗೆ:
ತಲೆಗೆ ಮಲ್ಲಿಗೆ ಹೂ ಮುಡ್ಕೊಂಡ್ರೆ ಪಾಸಿಟಿವ್ ಎನರ್ಜಿ ದುಪ್ಪಟ್ಟಾಗುತ್ತೆ. ಮಲ್ಲಿಗೆ ಹೂವನ್ನು ಕೂದಲಲ್ಲಿ ಮುಡ್ಕೊಳ್ಳೋ ಹೆಣ್ಣುಮಕ್ಕಳಿಗೆ ಮನಸ್ಸಿಗೆ ಶಾಂತಿ ಸಿಗುತೆ. ಮಾನಸಿಕ ಒತ್ತಡ ಕಡಿಮೆಯಾಗುತ್ತೆ. ಕೆಲ ಹೆಣ್ಣುಮಕ್ಕಳಿಗೆ ಮಲ್ಲಿಗೆ ಹೂ ಮುಡ್ಕೊಂಡ್ರೆ ತಲೆ ಸುತ್ತುತ್ತೆ ಅಂತ ಅದನ್ನ ಮುಡಿಯೋದಿಲ್ಲ.
ಕೆಲವರಿಗೆ ಈ ಹೂ ಅಲರ್ಜಿ ಉಂಟು ಮಾಡೋದು ನಿಜ. ಅದರ ತೀವ್ರವಾದ ಪರಿಮಳ ಉಸಿರಾಟಕ್ಕೆ ತೊಂದರೆ, ತಲೆ ಸುತ್ತು ಕಾಡಬಹುದು. ಅಂಥವರು ಬೇರೆ ಹೂ ಮುಡಿಯಬಹುದು. ಮಲ್ಲಿಗೆ ಹೂವನ್ನ ತಲೆಗೆ ಮುಡಿಯೋದ್ರಿಂದ ಕಣ್ಣುಗಳಿಗೆ ತಂಪು ಸಿಗುತ್ತೆ.
ಯಾವ ಹೂ ಬೆಸ್ಟ್?
ಸಂಪಿಗೆ & ತಾವರೆ:
ಸಂಪಿಗೆ ಹೂ ಹಳದಿ ಬಣ್ಣದಲ್ಲಿದ್ದು ಇದನ್ನು ತಲೆಗೆ ಮುಡಿದ್ರೆ ಕಣ್ಣಿನ ದೃಷ್ಟಿ ಹೆಚ್ಚುತ್ತೆ. ನಿಮ್ಮ ದೇಹ ದಣಿದಾಗ ತಾವರೆ ಮುಡಿಯಬಹುದು. ಇದ್ರಿಂದ ಒಳ್ಳೆಯ ಫಲ ಸಿಗುತ್ತೆ. ತಾವರೆ ಹೂ ಕೇವಲ ನಿಮಗೆ ಉತ್ಸಾಹವನ್ನೂ ಕೊಡುತ್ತೆ.
ಬಿಳಿ ತಾವರೆ:
ಹೆಚ್ಚಿನ ಹೆಣ್ಣುಮಕ್ಕಳು ಬಿಳಿ ತಾವರೆಯನ್ನ ತಲೆಗೆ ಮುಡಿಯಲ್ಲ. ಆದ್ರೆ ಬಿಳಿ ತಾವರೆ ತಲೆಗೆ ಮುಡಿಯೋರಿಗೆ ಮನಸ್ಸಲ್ಲಿರೋ ಆತಂಕ ದೂರವಾಗುತ್ತೆ. ನೆಮ್ಮದಿ ಸಿಗುತ್ತೆ. ನೀವು ಆಗಾಗ್ಗೆ ಬಿಳಿ ತಾವರೆ ಮುಡಿಯೋದ್ರಿಂದ ನಿಮ್ಮ ಮಾನಸಿಕ ಒತ್ತಡ ಕಡಿಮೆಯಾಗಿ ಹಗುರಾಗ್ತೀರ. ಯಾವಾಗಲೂ ಹೊಸ ಉತ್ಸಾಹದಿಂದ ಇರ್ತೀರಿ.
ಕಣಗಿಲೆ
ನಗರದ ಹೆಣ್ಣುಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಕಣಗಿಲೆ ಹೂವನ್ನ ಹೆಚ್ಚಾಗಿ ಮುಡ್ಕೊಳ್ತಾರೆ. ಈ ಹೂವಿನಲ್ಲಿ ಪರಿಮಳ ಇರೋಲ್ಲ. ಆದ್ರೆ ನೋಡಲು ತುಂಬಾ ಚೆಂದ. ಪರಿಮಳ ಇಲ್ಲದ ಕಾರಣ ತಲೆನೋವು ಬರೋ ಸಾಧ್ಯತೆಯೂ ಇರೋಲ್ಲ ಬಿಡಿ. ಹೆಚ್ಚಾಗಿ ಈ ಹೂವನ್ನ ಮುಡಿಯೋ ಹೆಣ್ಣು ಮಕ್ಕಳಿಗೆ ತಲೆನೋವೇ ಬರೋಲ್ಲ. ಆಧ್ಯಾತ್ಮಿಕವಾಗಿ ನೋಡಿದ್ರೆ, ಮಲ್ಲಿಗೆ, ಗುಲಾಬಿ ಹೂಗಳನ್ನ ತಲೆಗೆ ಮುಡ್ಕೊಂಡ್ರೆ ಲಕ್ಷ್ಮಿ ದೇವಿಯ ಕೃಪೆ ಸಂಪೂರ್ಣವಾಗಿ ಸಿಗುತ್ತೆ. ಯಾರಿಗೆ ಲಕ್ಷ್ಮಿ ದೇವಿ ಕೃಪೆ ಇರುತ್ತೋ ಅವ್ರಿಗೆ ಎಲ್ಲವೂ ಒಳ್ಳೆಯದೇ ಆಗುತ್ತೆ. ಹಾಗಾಗಿ ಹೆಣ್ಣುಮಕ್ಕಳೇ ಸಾಧ್ಯವಾದಷ್ಟು ತಲೆಗೆ ಹೂ ಮುಡ್ಕೊಳ್ಳಿ. ನಿಮ್ಮ ಜೀವನ ಸುಂದರವಾಗಿರುತ್ತೆ.