Should you drink tea to lose weight? ತೂಕ ಇಳಿಸಿಕೊಳ್ಳೋಕೆ ಟೀ ಬಿಡ್ಬೇಕಾ?
ತೂಕ ಇಳಿಸಿಕೊಳ್ಳೋಕೆ ಹೊರಟ್ರೆ ಟೀ ಬಿಡ್ಬೇಕು ಅಂತಾರೆ. ಆದ್ರೆ ಟೀ ಬಿಡ್ದೆ ತೂಕ ಇಳಿಸೋಕೆ ಆಗುತ್ತಾ? ಈ ಬಗ್ಗೆ ನೋಡೋಣ.

ಬೆಳಿಗ್ಗೆ ಎದ್ದ ತಕ್ಷಣ ಟೀ ಕುಡಿಯೋದು ಬಹಳಷ್ಟು ಜನರ ಪದ್ಧತಿ. ಆದ್ರೆ ತೂಕ ಇಳಿಸಿಕೊಳ್ಳೋಕೆ ಹೊರಟವ್ರಿಗೆ ಟೀ ಒಳ್ಳೆಯದಲ್ಲ ಅಂತಾರೆ. ಹಾಗಾದ್ರೆ ನಿಜಾನಾ? ಈ ಬಗ್ಗೆ ನೋಡೋಣ.
ಟೀ ಕುಡಿದ್ರೆ ತೂಕ ಜಾಸ್ತಿ ಆಗಲ್ಲ. ಆದ್ರೆ ಟೀಲಿ ಹಾಕೋ ಹಾಲು, ಸಕ್ಕರೆ ತೂಕ ಹೆಚ್ಚಿಸುತ್ತೆ. ಒಂದು ಕಪ್ ಟೀಲಿ ೧೦೦-೧೧೦ ಕ್ಯಾಲರಿ ಇರುತ್ತೆ. ಜೊತೆಗೆ ಬಿಸ್ಕತ್, ವಡೆ ತಿಂದ್ರೆ ತೂಕ ಜಾಸ್ತಿ ಆಗುತ್ತೆ.
ಟೀ ಬಿಡ್ದೆ ತೂಕ ಇಳಿಸೋಕೆ ಆಗುತ್ತೆ. ಸಕ್ಕರೆ ಬದಲು ಬೆಲ್ಲ/ಜೇನುತುಪ್ಪ ಹಾಕಿ. ಫುಲ್ ಕ್ರೀಮ್ ಹಾಲಿನ ಬದಲು ತೆಳು ಹಾಲು ಬಳಸಿ. ಜಂಕ್ ಫುಡ್ ಬದಲು ಮಖಾನ, ಹುರಿದ ಕಡಲೆಕಾಯಿ ತಿನ್ನಿ. ಇದ್ರಿಂದ ಕ್ಯಾಲರಿ ಕಡಿಮೆ ಆಗುತ್ತೆ.
ಆರೋಗ್ಯಕ್ಕೆ ಎಲ್ಲವೂ ಮಿತವಾಗಿರಬೇಕು. ದಿನಕ್ಕೆ 5-7 ಕಪ್ ಟೀ ಕುಡಿಯೋದು ಒಳ್ಳೆಯದಲ್ಲ. ಹೊಟ್ಟೆ ಹಾಳಾಗುತ್ತೆ. ದಿನಕ್ಕೆ 1-2 ಕಪ್ ಸಾಕು. ಬ್ಲ್ಯಾಕ್ ಟೀ, ಗ್ರೀನ್ ಟೀ ಆರೋಗ್ಯಕ್ಕೆ ಒಳ್ಳೆಯದು.
ತೂಕ ಇಳಿಸೋಕೆ ಟೀ ಬಿಡೋ ಅಗತ್ಯ ಇಲ್ಲ. ಟೀ ಮಾಡೋ ವಿಧಾನ, ಜೊತೆಗೆ ತಿನ್ನೋ ತಿಂಡಿಗಳ ಬಗ್ಗೆ ಗಮನ ಕೊಡಿ. ಆರಾಮಾಗಿ ಟೀ ಕುಡಿದು ತೂಕ ಇಳಿಸಬಹುದು.