ಸುಮ್ ಸುಮ್ನೆ ನಕ್ಕರೆ ಹುಚ್ಚಾ ಅನ್ನೋದು ಇನ್ಮುಂದೆ ತಮಾಷೆ ಅಲ್ಲ, ನಿಜ!
ನಿಮ್ಮ ಮನಸ್ಸಿನ ದುಃಖ ಅಥವಾ ಸಂತೋಷ ಅನುಭವಿಸುವ ರೀತಿ ಮತ್ತುಅದನ್ನು ಬೇರೆಯವರಿಗೆ ಹೇಳೋ ರೀತಿ ಒಬ್ಬರಿಂದ ಒಬ್ಬರಿಗೆ ವಿಭಿನ್ನವಾಗಿರುತ್ತೆ. ಕೆಲವೊಮ್ಮೆ ಕೆಲವು ಜನರು ತುಂಬಾ ಕಾಮನ್ ಆದ ಸಣ್ಣ ವಿಷಯಕ್ಕೂ ತುಂಬಾ ಸಂತೋಷ ಪಡ್ತಾರೆ, ಇದನ್ನು ನೋಡುವವರಿಗೆ ಇದು ವಿಚಿತ್ರ ಎನಿಸಬಹುದು. ಒಬ್ಬ ವ್ಯಕ್ತಿಯುಈ ರೀತಿಯಾಗಿ ವರ್ತಿಸೋದನ್ನು ಹೈಪೋಮೇನಿಯಾ ಎನ್ನುತ್ತಾರೆ. ಈ ಲಕ್ಷಣ ಕಂಡು ಬಂದರೆ ಅದನ್ನ ಅವಾಯ್ಡ್ ಮಾಡ್ಬೇಡಿ.

ಒಂದು ಸಿಂಪಲ್ ವಿಷಯದಲ್ಲೂ ಸಹ, ಯಾರಾದರೂ ಅತಿರೇಕದ ಸಂತೋಷ(Happiness) ವ್ಯಕ್ತಪಡಿಸುತ್ತಿದ್ದರೆ, ಈ ಸಂತೋಷವನ್ನು ನಿರ್ಲಕ್ಷಿಸೋದು ಸರಿಯಲ್ಲ. ತಜ್ಞರ ಪ್ರಕಾರ, ಹೈಪೋಮೇನಿಯಾ ಖಿನ್ನತೆಯ ಮುಂದಿನ ಹಂತವೆಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ, ಕೆಲವೇ ಜನರಿಗೆ ಅದರ ಬಗ್ಗೆ ತಿಳಿದಿರುತ್ತೆ. ನಿಮಗೆ ಈ ಬಗ್ಗೆ ತಿಳಿದಿಲ್ಲಾ ಎಂದಾದ್ರೆ ಬನ್ನಿ ಹೈಪೋಮೇನಿಯಾಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳೋಣ.
ವೆರಿವೆಲ್ ಮೈಂಡ್ ಅವರ ಲೇಖನದ ಪ್ರಕಾರ, ಹೈಪೋಮೇನಿಯಾ(Hypomania) ಒಂದು ಮಾನಸಿಕ ಕಾಯಿಲೆ, ಇದರಲ್ಲಿ ವ್ಯಕ್ತಿಯು ತುಂಬಾ ಸಂತೋಷದಿಂದ ಮತ್ತು ಉತ್ಸಾಹದಿಂದ ತುಂಬಿರುವಂತೆ ಕಾಣುತ್ತಾನೆ, ಆದರೆ ಒಳಗೆ ಅವರು ಅನೇಕ ಮಾನಸಿಕ ಪರಿಸ್ಥಿತಿಗಳ ವಿರುದ್ಧ ಹೋರಾಡುತ್ತಿರುತ್ತಾನೆ. ಅಂತಹ ಜನರು ತಮ್ಮ ಬಗ್ಗೆ ಸಾಕಷ್ಟು ಉತ್ಪ್ರೇಕ್ಷಿತ ವಿಷಯಗಳನ್ನು ಇತರರಿಗೆ ಹೇಳಲು ಪ್ರಯತ್ನಿಸುತ್ತಾರೆ.
ಇಂತಹ ಜನರು ಅಪರಿಚಿತರ ಜೊತೆ ಕೂಡ ಅನೇಕ ವರ್ಷಗಳಿಂದ ಬಲ್ಲವರಂತೆ ಭೇಟಿಯಾಗ್ತಾರೆ ಮತ್ತು ಅವರೊಂದಿಗೆ ಸಾಕಷ್ಟು ಮಾತನಾಡ್ತಾರೆ. ಹೈಪೋಮೇನಿಯಾದ ಬಳಲುತ್ತಿರುವ ವ್ಯಕ್ತಿ ಅನೇಕ ಬಾರಿ ತನ್ನನ್ನು ತಾನು ತುಂಬಾ ದೊಡ್ಡ ಮನುಷ್ಯನೆಂದು ಭಾವಿಸ್ತಾನೆ ಮತ್ತು ಅವನ ನಡವಳಿಕೆ ಸಾಮಾನ್ಯ ವ್ಯಕ್ತಿಯ(Common man) ವರ್ತನೆಯಂತೆ ಇರೋದಿಲ್ಲ.
ಹೈಪೋಮೇನಿಯಾದ ಲಕ್ಷಣಗಳ ಬಗ್ಗೆ ಗಮನ ಹರಿಸೋದು ಮುಖ್ಯ
ಹಸಿವಾದರೂ, ಆಗದೇ ಇದ್ದರೂ ಈ ಜನರು ಎಲ್ಲಾ ಸಮಯದಲ್ಲೂ ಒಂದಲ್ಲ, ಒಂದು ತಿಂಡಿ ತಿನ್ನಲು(Eat) ಬಯಸ್ತಾರೆ
ಎಲ್ಲದರಲ್ಲೂ ಅಂದರೆ ಅದು ವ್ಯಕ್ತಿಯೇ ಇರಲಿ, ವಿಷಯವೇ ಇರಲಿ ಹೆಚ್ಚಿನ ಕುತೂಹಲ ತೋರಿಸ್ತಾರೆ
ನಿದ್ರೆ (Sleep) ಬರದಿದ್ದರೂ ಸಹ ದಣಿದಿರುವ ಅಥವಾ ನಿದ್ರೆಯ ಅಗತ್ಯವಿದೆ ಎಂದು ಭಾವಿಸುತ್ತಾರೆ. ಹೆಚ್ಚಿನ ಸಮಯ ನಿದ್ರೆ ಮಾಡೋದ್ರಲ್ಲೆ ಕಳೆದು ಹೋಗುತ್ತಾರೆ.
ಹೈಪೋಮೇನಿಯಾದಲ್ಲಿ, ವ್ಯಕ್ತಿ ಇದ್ದಕ್ಕಿದ್ದಂತೆ ವಿಭಿನ್ನ ಬಟ್ಟೆಗಳನ್ನು ಧರಿಸಲು ಪ್ರಾರಂಭಿಸ್ತಾರೆ. ಅದಕ್ಕೆ ಕಾರಣ ಏನೆಂದು ಅವರಿಗೇ ತಿಳಿದಿರೋದಿಲ್ಲ.
ಅಪರಿಚಿತ ಜನರೊಂದಿಗೆ ಗಂಟೆಗಳ ಕಾಲ ಕುಳಿತು ಮಾತನಾಡೋದು(Talk) ಸಹ ಒಂದು ಲಕ್ಷಣವಾಗಿದೆ.
ಸಣ್ಣ ವಿಷಯಗಳಿಗೂ ಸಹ ಈ ವ್ಯಕ್ತಿಗಳು ವಿಪರೀತ ಸಂತೋಷಪಡ್ತಾರೆ. ಅಷ್ಟೇ ಅಲ್ಲ ಈ ಜನರು ಭ್ರಮೆ ಮತ್ತು ಕಾಲ್ಪನಿಕ ವಿಷಯಗಳನ್ನು ಸತ್ಯವೆಂದು ನಂಬಲು ಪ್ರಾರಂಭಿಸ್ತಾರೆ.
ಹೈಪೋಮೋನಿಯಾದಿಂದ ಬಳಲುತ್ತಿರುವ ವ್ಯಕ್ತಿ ತಾನು ಮಾನಸಿಕ ಅಸ್ವಸ್ಥನೆಂದು ಭಾವಿಸಲು ಎಂದಿಗೂ ರೆಡಿ ಇರೋದಿಲ್ಲ. ಹಾಗಾಗಿ ಒಬ್ಬ ವ್ಯಕ್ತಿಯಲ್ಲಿ ಇದ್ದಕ್ಕಿದ್ದಂತೆ ಅಂತಹ ಅಸಹಜ ಲಕ್ಷಣ ಹೆಚ್ಚುತ್ತಿರೋದನ್ನು ನೋಡಿದರೆ, ವೈದ್ಯರನ್ನು ಸಂಪರ್ಕಿಸಬೇಕು. ಉತ್ತಮ ವೈದ್ಯರು(Doctor) ಮತ್ತು ಔಷಧಿಯಿಂದ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಆರೋಗ್ಯವಾಗಿರಲು ಮತ್ತು ಸಾಮಾನ್ಯ ಜೀವನ ನಡೆಸಲು ಸಾಧ್ಯ.