ಚಾಕಲೇಟ್, ಅಡುಗೆ, ಕಿಸ್ ಒತ್ತಡ ನಿವಾರಣೆ ಮಾಡಲು ಸಾಕಲ್ವಾ ಇವಿಷ್ಟು?
ಒತ್ತಡವು (stress) ಜೀವನವನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ. ಇದು ಸ್ವಯಂಚಾಲಿತವಾಗಿ ಬರುತ್ತದೆ ಎಂಬುದು ವಾಸ್ತವ ಆದರೆ ಯಾವಾಗಲೂ ಯಾವುದೇ ರೀತಿಯ ಉದ್ವಿಗ್ನತೆಯಿಂದ ಮೇಲೆ ಬರಲು ಪ್ರಯತ್ನಿಸಬೇಕು. ಪ್ರತಿಯೊಬ್ಬ ವ್ಯಕ್ತಿಯು ಗಮನ ಹರಿಸಬೇಕಾದ ಪ್ರಮುಖ ಅಂಶವೆಂದರೆ ಅವನ ದೈನಂದಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡುವುದು.
ನಿಮ್ಮ ಮನಸ್ಥಿತಿಯು ಒತ್ತಡವನ್ನು ನಿವಾರಿಸುವತ್ತ ಗಮನ ಹರಿಸಿದರೆ ಭಾವನೆಗಳನ್ನು (Emotions) ನಿರ್ವಹಿಸುವುದು ಸಾಧ್ಯ. ಒತ್ತಡವನ್ನು ಕಡಿಮೆ ಮಾಡಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಮೋಜಿನ ಒತ್ತಡ-ನಿವಾರಕ (stress free) ಚಟುವಟಿಕೆಗಳನ್ನು ಅಭ್ಯಾಸ ಮಾಡುವುದು. ಅವುಗಳಲ್ಲಿ ಕೆಲವನ್ನು ಚರ್ಚಿಸಲಾಗಿದೆ. ಅವುಗಳನ್ನು ಪಾಲಿಸಿ, ಒತ್ತಡವನ್ನು ದೂರ ಮಾಡಿ.
ವ್ಯಾಯಾಮ (exercise)
ವ್ಯಾಯಾಮದ ನಂತರ ದೇಹವು ಉತ್ತಮವಾಗುತ್ತದೆ, ಮೆದುಳಿನ ನರಸಂಪರ್ಕಗಳು ಇದನ್ನು ಅನುಭವಿಸುತ್ತವೆ. ದೈಹಿಕ ಚಟುವಟಿಕೆಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆಯನ್ನು ಉತ್ತೇಜಿಸಲು ಕಾರಣವಾದ ಎಂಡಾರ್ಫಿನ್ ಎಂಬ ಹಾರ್ಮೋನ್ ಉತ್ಪಾದನೆಗೆ ಕಾರಣವಾಗುತ್ತವೆ. ಒತ್ತಡವನ್ನು ಕಡಿಮೆ ಮಾಡಲು ಐದು ನಿಮಿಷಗಳ ಕಾಲ ನಿರಂತರ ಏರೋಬಿಕ್ ವ್ಯಾಯಾಮ ಸಾಕು.
ಅಡುಗೆ (Cooking)
ಅಡುಗೆ ಕೂಡ ಒತ್ತಡ ನಿವಾರಿಸುವ ಮೋಜಿನ ಚಟುವಟಿಕೆ. ಇದು ಮಹಿಳೆಯರಿಗೆ ದುಃಖ ಮತ್ತು ನೋವನ್ನು ಬಿಡುಗಡೆ ಮಾಡುವ ಅತ್ಯುತ್ತಮ ಮಾರ್ಗ. ತುಂಬಾ ಒತ್ತಡದಲ್ಲಿದ್ದೀರಿ ಎನಿಸಿದರೆ ನಿಮಗೆ ಇಷ್ಟ ಬಂದ ಅಡುಗೆ ಮಾಡಿ, ಅದನ್ನು ಸೇವಿಸಿ, ನಿಮ್ಮೆಲ್ಲಾ ಬೇಸರ, ಒತ್ತಡ ಎಲ್ಲವೂ ಅಡುಗೆಯೊಂದಿಗೆ ಕರಗಿ ಹೋಗುವುದಂತೂ ನಿಜ.
ಸಾಕುಪ್ರಾಣಿಗಳೊಂದಿಗೆ ಆಟವಾಡಿ (play with pets)
ಪ್ರಾಣಿ-ಪ್ರೇಮಿಗಳಿಗೆ, ಅವರ ಮೋಜಿನ ಒತ್ತಡ-ನಿವಾರಕ ಚಟುವಟಿಕೆಗಳು ಮುಖ್ಯವಾಗಿ ಸಾಕುಪ್ರಾಣಿಗಳಿಗೆ ಸಮಯವನ್ನು ನಿಗದಿಪಡಿಸುವುದರ ಸುತ್ತ ಸುತ್ತುತ್ತದೆ. ತಮ್ಮ ನಾಯಿಗಳೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಶಾಂತಿಯುತ, ಸಂತೋಷ (Happy Life) ಮತ್ತು ತೃಪ್ತಿಕರ ಜೀವನವನ್ನು ನಡೆಸುತ್ತಾರೆ. ಪ್ರಾಣಿಗಳಿಗೆ ಒತ್ತಡವನ್ನು ನಿವಾರಣೆ ಮಾಡುವ ಶಕ್ತಿಯೂ ಇದೆ.
ಹಾಸ್ಯ ಪ್ರದರ್ಶನಗಳು (comedy show)
ಹಾಸ್ಯ ಪ್ರದರ್ಶನಗಳನ್ನು ವೀಕ್ಷಿಸಿ ಮತ್ತು ನಿಮಗೆ ಸಾಧ್ಯವಾದಷ್ಟು ನಗಿ. ಒತ್ತಡವನ್ನು ಕಡಿಮೆ ಮಾಡಲು ನಗು ಉತ್ತಮವಾದ ಮಾರ್ಗ. ಇದಕ್ಕಾಗಿ ನೀವು ಕಾಮಿಡಿ ಶೋ, ಚಾರ್ಲಿ ಚಾಪ್ಲಿನ್ (Charlie Chaplin), ಮಿಸ್ಟರ್ ಬಿನ್ (Mister Bean) ಮೊದಲಾದ ಚಿತ್ರಗಳನ್ನು ನೋಡಿ ಮನಸೋ ಇಚ್ಚೆ ನಕ್ಕು ಬಿಡಬಹುದು. ಇದರಿಂದ ಯಾವುದೇ ಒತ್ತಡ ಇದ್ದರೂ ಅದು ದೂರವಾಗುತ್ತದೆ.
ಚಾಕೊಲೇಟ್ ಗಳು (chocolate)
ಉದ್ವಿಗ್ನತೆಯ ಸಮಯದಲ್ಲಿ ಚಾಕೊಲೇಟ್ ಗಳನ್ನು ತಿನ್ನುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಪರೀಕ್ಷಿಸಲಾಗುತ್ತದೆ. ಚಾಕೊಲೇಟ್ ಗಳು ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತವೆ, ಅವು ದೇಹದಲ್ಲಿ ಅತ್ಯಗತ್ಯವಾದ ಸೋಡಿಲೇಟರ್ ಗಳಾಗಿರುವ ಸಂಯುಕ್ತಗಳಾಗಿವೆ. ಅವು ಅಪಧಮನಿಗಳು ಮತ್ತು ರಕ್ತನಾಳಗಳ ಹಿಗ್ಗುವಿಕೆಗೆ ಕಾರಣವಾಗಿರುವುದರಿಂದ, ಈ ರಕ್ತನಾಳಗಳು ವಿಶ್ರಾಂತಿ ಪಡೆಯುತ್ತವೆ ಮತ್ತು ಒಟ್ಟಾರೆ ಶಾಂತಿಯ ಭಾವನೆಯನ್ನು ಒದಗಿಸುತ್ತವೆ.
ಕಿರುಚುವುದುc(shout)
ನಿಮ್ಮ ಹತಾಶೆಯನ್ನು ಹೊರತರಲು ಇದು ಅತ್ಯುತ್ತಮ ವಿಧಾನಗಳಲ್ಲಿ ಒಂದಾಗಿದೆ. ಕಟ್ಟಡ ಅಥವಾ ಟೆರೇಸ್ ನ ಮೇಲ್ಭಾಗದಲ್ಲಿ ಹೋಗಿ ಮತ್ತು ನಂತರ ನಿಮಗೆ ಸಾಧ್ಯವಾದಷ್ಟು ಜೋರಾಗಿ ಕಿರುಚಿರಿ. ಇದು ನಿಜವಾಗಿಯೂ ಕೆಲಸ ಮಾಡುತ್ತದೆ. ಹೌದು ಇದರಿಂದ ಮನಸಿನ ಉದ್ವಿಗ್ನತೆ ನಿವಾರಣೆಯಾಗಿ ಮನಸ್ಸು ಶಾಂತವಾಗುತ್ತದೆ, ನೆಮ್ಮದಿಯ ಭಾವ ಮೂಡುತ್ತದೆ.
ಸೆಕ್ಸ್ (sex)
ಕೆಲವರಿಗೆ ಸೆಕ್ಸ್ ಕೂಡ ಒತ್ತಡ ನಿವಾರಿಸಲು ಸಹಾಯ ಮಾಡುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿರುವ ಹೆಚ್ಚಿನ ವ್ಯಕ್ತಿಗಳು ತಲೆನೋವು, ಹಾಟ್ ಫ್ಲ್ಯಾಶ್ ಗಳು, ಬೆನ್ನುನೋವುಗಳು ಮತ್ತು ಋತುಚಕ್ರದ ಸೆಳೆತಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ. ಇದು ಎಂಡಾರ್ಫಿನ್ ಅನ್ನು ಸಹ ಬಿಡುಗಡೆ ಮಾಡುತ್ತದೆ, ಇದು ಆಂತರಿಕ ಸಂತೋಷವನ್ನು ಉತ್ತೇಜಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
ಕಿಸ್ ಮಾಡುವುದು (kissing)
ನೀವು ಪ್ರೀತಿಸುವ ವ್ಯಕ್ತಿಯನ್ನು ಚುಂಬಿಸುವುದು ಮತ್ತು ಮುದ್ದಾಡುವುದು ಸಹ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರೀತಿ ಪಾತ್ರ ವ್ಯಕ್ತಿಯ ಆಲಿಂಗನವೂ ಎಂತಹುದೇ ಸಮಸ್ಯೆಯನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ. ಆದುದರಿಂದ ತುಂಬಾ ಒತ್ತಡ ಎನಿಸಿದರೆ ಸಂಗಾತಿಯ ಎದೆಗೆ ಒರಗಿ ಗಟ್ಟಿಯಾಗಿ ಅಪ್ಪಿ ಬಿಡಿ. ಮನಸ್ಸು ನಿರಾಳವಾಗುತ್ತೆ.
ಧ್ಯಾನ ಮಾಡಿ (meditation)
ನಿಮಗೆ ಗೊತ್ತಾ? ಧ್ಯಾನ ಕೂಡ ಮನಸ್ಸಿನ ಒತ್ತಡವನ್ನು ನಿವಾರಣೆ ಮಾಡುತ್ತದೆ. ತುಂಬಾ ಒತ್ತಡ ಎಂದೆನಿಸಿದರೆ ಎಲ್ಲರಿಂದಲೂ ದೂರ ಬಂದು ಧ್ಯಾನ ಮಾಡಿ, ಭಜನೆ ಮಾಡಿ. ಇದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ. ಜೊತೆಗೆ ದೇಹದಲ್ಲಿ ಪಾಸಿಟಿವ್ ಎನರ್ಜಿ ಮೂಡುವ ಮೂಲಕ ಹೊಸ ಚೈತನ್ಯ ಮೂಡುತ್ತದೆ.