ಭುಸ್ ಭುಸ್ ಅಂತ ಉಸಿರಾಡೋ ಬದ್ಲು ಹೀಗೆ breath ಮಾಡಿದ್ರೆ ಗಟ್ಟಿಯಾಗುತ್ತೆ ಹಾರ್ಟ್
heart health : ಹಾರ್ಟ್ ಪ್ರಾಬ್ಲಂ ಇತ್ತೀಚಿನ ದಿನಗಳಲ್ಲಿ ಜಾಸ್ತಿ ಆಗ್ತಿದೆ. ಹೃದಯ ಗಟ್ಟಿಯಾಗಿರ್ಬೇಕು, ಇನ್ನೊಂದಿಷ್ಟು ದಿನ ಹೆಚ್ಚಿಗೆ ಬದುಕ್ಬೇಕು ಅನ್ನೋರು ಒಂದು ಸಿಂಪಲ್ ಟಿಪ್ಸ್ ಫಾಲೋ ಮಾಡಿ.

ಸರಿಯಾದ ಉಸಿರಾಟ
ನಮ್ಮ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಮಹತ್ವದ ಪ್ರಭಾವ ಬೀರುತ್ತೆ ಅಂತ ನಾವು ನಂಬಿದ್ದೇವೆ. ಆದ್ರೆ ನಮ್ಮ ಹೃದಯದ ಬಡಿತ, ಜೀರ್ಣಕ್ರಿಯೆ, ಟೆನ್ಷನ್ ಎಲ್ಲವನ್ನು ನಮ್ಮ ಉಸಿರಾಟ ನಿಯಂತ್ರಿಸುತ್ತೆ ಅಂದ್ರೆ ನೀವು ನಂಬ್ಲೇಬೇಕು. ನೀವು ಹೇಗೆ ಉಸಿರಾಟ ನಡೆಸ್ತೀರಾ ಅನ್ನೋದು ನಿಮ್ಮ ಆರೋಗ್ಯದ ಮೇಲೆ ಅತೀ ಮುಖ್ಯ ಪಾತ್ರವಹಿಸುತ್ತೆ.
ನಿಧಾನ ಉಸಿರಾಟ
ನೀವೆಷ್ಟು ವೇಗವಾಗಿ ಉಸಿರಾಡ್ತಿರೋ ಅಷ್ಟೇ ಸಾವಿಗೆ ಹತ್ತಿರವಾಗ್ತೀರಿ. ನಿಧಾನವಾದ ಉಸಿರಾಟ ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತೆ. ಒಬ್ಬ ಮನುಷ್ಯ ನಿಮಿಷಕ್ಕೆ ಸರಾಸರಿ 17 -18 ಬಾರಿ ಉಸಿರಾಟ ನಡೆಸಬೇಕು. ಅದಕ್ಕಿಂತ ಹೆಚ್ಚು ಬಾರಿ ಉಸಿರಾಟ ಮಾಡಿದಾಗ, ಹೃದಯದ ಮೇಲೆ ಒತ್ತಡ ಬೀಳುತ್ತದೆ. ಹೃದಯ ರಕ್ತವನ್ನು ವೇಗವಾಗಿ ಪಂಪ್ ಮಾಡೋದ್ರಿಂದ ನಿಮ್ಮ ಆಯಸ್ಸು ಕಡಿಮೆ ಆಗುತ್ತದೆ. ನೀವು ನಿಧಾನವಾಗಿ ಉಸಿರಾಟ ನಡೆಸಿದ್ರೆ ನಿಮ್ಮ ಹೃದಯ ಮತ್ತಷ್ಟು ಗಟ್ಟಿಯಾಗುತ್ತೆ.
ರಾತ್ರಿ ಈ ಕೆಲಸ ಮಾಡಿ
ಸಂಶೋಧಕರು ಉಸಿರಾಟದ ಮೇಲೆ ಸಾಕಷ್ಟು ಸಮೀಕ್ಷೆ, ಸಂಶೋಧನೆ ಮಾಡಿದ್ದಾರೆ. ಅವರ ಪ್ರಕಾರ, ಹೃದಯ ತನ್ನನ್ನು ತಾನೇ ಗುಣಪಡಿಸಿಕೊಳ್ಳುವ ಶಕ್ತಿ ಹೊಂದಿದೆ. ನೀವು ರಾತ್ರಿ ಮಾಡುವ ಒಂದು ಕೆಲಸ ಹೃದಯಕ್ಕೆ ಇನ್ನಷ್ಟು ಶಕ್ತಿ ನೀಡುತ್ತದೆ. ಅತ್ಯಂತ ಸರಳ, ಉಸಿರಾಟ ಕ್ರಿಯೆಯನ್ನು ನೀವು ರೂಢಿಸಿಕೊಳ್ಳಬೇಕು.
ಹೃದಯ ಚಿಕಿತ್ಸೆ ನಂತ್ರ ಏನಾಯ್ತು?
ಸಂಶೋಧಕರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಕೆಲವರ ಮೇಲೆ ಸಂಶೋಧನೆ ನಡೆಸಿದ್ದಾರೆ. ಆಗ ಬಂದ ಫಲಿತಾಂಶ ಅವರನ್ನು ಬೆಚ್ಚಿ ಬೀಳಿಸಿದೆ. ಒಂದೇ ಔಷಧಿ, ಒಂದೇ ಆಸ್ಪತ್ರೆ ಹಾಗೂ ಆರೈಕೆ ಇದ್ರೂ ಕೆಲವರು ಬೇಗ ಗುಣಮುಖರಾಗಿದ್ದರು. ಮತ್ತೆ ಕೆಲವರ ಗುಣಮುಖ ಸಮಯ ನಿಧಾನವಾಗಿತ್ತು.
ಡೇಟಾ ಹೇಳಿದ್ದೇನು?
ತಜ್ಞರು ಎಲ್ಲ ರೋಗಿಗಳ ದಿನಚರಿ ಮೇಲೆ ಗಮನ ಹರಿಸಿದಾಗ ನಿದ್ರೆಗೆ ಮುನ್ನ ರೋಗಿಗಳು ಮಾಡ್ತಿದ್ದ ಕೆಲ್ಸ ಇಲ್ಲಿ ಗಮನ ಸೆಳೆದಿತ್ತು. ನಿದ್ರೆಗೆ ಮುನ್ನ ಶಾಂತ ಸ್ಥಿತಿ ಅವರನ್ನು ಬೇಗ ಗುಣಮುಖಗೊಳಿಸಿತ್ತು. ಒತ್ತಡದಲ್ಲಿದ್ದಾಗ ಹೃದಯ ಬೇಗ ಗುಣಮುಖವಾಗಲು ಸಾಧ್ಯವಿಲ್ಲ. ಮೆದುಳು ಹೃದಯಕ್ಕೆ ಒಂದು ಸಂದೇಶವನ್ನು ಕಳುಹಿಸಿದಾಗ ಹೃದಯ ಬೇಗ ಗುಣಮುಖವಾಗುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಮಾಡಿದ್ರು.
ನೀವು ಸುರಕ್ಷಿತವಾಗಿದ್ದೀರಿ
ವೈದ್ಯರು ಹೃದಯಕ್ಕೆ ಮಾತ್ರೆ ನೀಡಿ ಚಿಕಿತ್ಸೆ ಮಾಡ್ತಾರೆ. ಆದ್ರೆ ಹೃದಯ ಈ ಮಾತ್ರೆ ಜೊತೆ ಮೆದುಳಿನ ಮಾತನ್ನು ಕೇಳುತ್ತದೆ. ಮೆದುಳು ನೀವು ಸುರಕ್ಷಿತವಾಗಿದ್ದೀರಿ ಎನ್ನುವ ಸಂದೇಶವನ್ನು ಹೃದಯಕ್ಕೆ ನೀಡಬೇಕು. ಹೃದಯ ಈ ಸಂದೇಶ ಕಳುಹಿಸಬೇಕೆಂದ್ರೆ ನಿಮ್ಮ ಉಸಿರಾಟದ ವಿಧಾನ ಬದಲಾಗಬೇಕು.
ನಿಧಾನ ಉಸಿರಾಟದಿಂದ ಲಾಭ
ಹೃದಯ ಚಿಕಿತ್ಸೆಗೆ ಒಳಗಾಗಿದ್ದ ಬೇಗ ಚೇತರಿಸಿಕೊಳ್ತಿದ್ದ ರೋಗಿಗಳು ನಿಧಾನವಾಗಿ ಉಸಿರಾಡುತ್ತಿದ್ದರು. ರಾತ್ರಿ ಅವರು ನಿಧಾನ ಉಸಿರಾಟದ ರೂಲ್ಸ್ ಫಾಲೋ ಮಾಡ್ತಿದ್ದರು. ಇದ್ರಿಂದ ರಕ್ತದೊತ್ತಡ ಕಡಿಮೆಯಾಗಿತ್ತು. ಹೃದಯ ಬಡಿತದಲ್ಲಿ ಸಾಕಷ್ಟು ಸುಧಾರಣೆ ಕಾಣಿಸಿತ್ತು.
ಹೀಗಿರಲಿ ಉಸಿರಾಟ
ರಾತ್ರಿ ಮಲಗುವ ಮುನ್ನ ನೀವು ಮಾಡಬೇಕಾದ ವ್ಯಾಯಾಮ ತುಂಬಾ ಸರಳವಾಗಿದೆ. ಮೊದಲು ಬೆನ್ನಿನ ಮೇಲೆ ಮಲಗಬೇಕು. ಒಂದು ಕೈಯನ್ನು ಎದೆ ಮೇಲೆ ಇಟ್ಟುಕೊಳ್ಳಬೇಕು. ನಾಲ್ಕು ಸೆಕೆಂಡ್ ಉಸಿರನ್ನು ತೆಗೆದುಕೊಳ್ಳಬೇಕು. ಆರು ಸೆಕೆಂಡ್ ಉಸಿರನ್ನು ಬಿಡಬೇಕು. ಇದು ವಾಗಸ್ ನರವನ್ನು ಸಕ್ರಿಯಗೊಳಿಸುತ್ತದೆ. ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ. ಪ್ಯಾರಸಿಂಪಥೆಟಿಕ್ ಟೋನ್ ಅನ್ನು ಹೆಚ್ಚಿಸುತ್ತದೆ. ನೀವು ಸುರಕ್ಷಿತರಾಗಿದ್ದೀರಿ. ನೀವು ಈಗ ವಿಶ್ರಾಂತಿ ಪಡೆಯಬಹುದು ಎಂದು ಹೃದಯಕ್ಕೆ ಹೇಳುತ್ತದೆ.
ಇದರಿಂದ ಲಾಭ ಏನು?
ನೀವು ನಿತ್ಯ ಇದನ್ನು ಅಭ್ಯಾಸ ಮಾಡ್ತಾ ಬಂದಲ್ಲಿ 1 ವಾರದಲ್ಲಿಯೇ ಆಳವಾದ ನಿದ್ರೆ ಬರೋದನ್ನು ನೀವು ಗಮನಿಸಬಹುದು. ಎರಡನೇ ವಾರಕ್ಕೆ ನಿಮ್ಮೆಲ್ಲ ಆತಂಕ ಕಡಿಮೆ ಆಗಿರುತ್ತದೆ. ಒಂದು ತಿಂಗಳಲ್ಲಿ ಹೃದಯ ಲಯಗಳು ಸ್ಥಿರವಾಗುತ್ತವೆ. ಒತ್ತಡವಿಲ್ಲದೆ ಶಾಂತವಾಗಿ ಹೃದಯ ಗುಣಮುಖವಾಗ್ತಾ ಬರುತ್ತದೆ. ಹೃದಯಕ್ಕೆ ಆತುರವಿರೋದಿಲ್ಲ. ಅದು ನಿಧಾನವಾಗಿ, ಚೇತರಿಸಿಕೊಳ್ಳುತ್ತದೆ. ಈಗಾಗಲೇ ಹೃದಯಚಿಕಿತ್ಸೆಗೆ ಒಳಗಾದವರು ಇದನ್ನು ಅಭ್ಯಾಸ ಮಾಡಬಹುದು. ಆದ್ರೆ ಯಾವುದೇ ಹೊಸ ಅಭ್ಯಾಸಕ್ಕೆ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

