ಕೂತು ಕೆಲಸ ಮಾಡ್ತಿದ್ರೆ ಹೊಟ್ಟೆ ಬರ್ತಿದ್ಯಾ? ಈ ಐಟಂ ತಿಂದು ಟೆನ್ಶನ್ ಕಮ್ಮಿ ಮಾಡ್ಕೊಳ್ಳಿ
ಏನೇ ತಿಂದ್ರೂ ಹೊಟ್ಟೆ ಬರ್ತಿದೆ..ಎಷ್ಟೇ ಡಯಟ್ ಮಾಡಿದರೂ ಹೊಟ್ಟೆ ಬರ್ತಿದೆ ಎಂದು ಬೇಸರ ಮಾಡಿಕೊಳ್ಳುತ್ತಿರುವ ಉದ್ಯಮಿಗಳಿಗೆ ಇಲ್ಲಿದೆ ಸಿಂಪಲ್ ಟಿಪ್ಸ್....
ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುತ್ತಿರುವ ಯುವಕ-ಯುವತಿಯರಲ್ಲಿ ಹೊಟ್ಟೆ ಬೊಜ್ಜಿನ ಸಮಸ್ಯೆ ಕಾಡಲು ಶುರು ಮಾಡಿದೆ. ಎಷ್ಟೇ ಹೆಲ್ತಿ ಫುಡ್ ತಿಂದರೂ ಹೊಟ್ಟೆ ದಪ್ಪಗಾಗುತ್ತಿದೆ ಅಂತ.
ಹೌದು! ಸಾಮಾನ್ಯವಾಗಿ ಕುಳಿತು ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಹೆಚ್ಚು. ತಿಂದು ತಿಂದು ಕೂರುವುದಕ್ಕೆ ಅಂತ ಅಪ್ಪ ಅಮ್ಮ ಬೈತಾರೆ ಆದರೆ ಅಷ್ಟೇ ಕಾರಣ ಆಗಲ್ಲ. ನೀವು ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಹಾಗೂ ಎಷ್ಟು ತಿನ್ನಬೇಕು ಅನ್ನೋದನ್ನು ಲೆಕ್ಕಾಚಾರ ಮಾಡಲೇಬೇಕು.
ಚಳಿಗಾಲದಲ್ಲಿ ಸಣ್ಣ ಕೆಲಸ ಮಾಡುವುದಕ್ಕೂ ಆಲಸ್ಯ ಬರುತ್ತೆ ಇನ್ನೂ ವರ್ಕೌಟ್ ಆಂಡ್ ವಾಕಿಂಗ್ ದೂರದ ಮಾತು. ಚಳಿ ಅಂತ ಕಂಡಿದನ್ನು ತಿನ್ನಲು ಹೋದರೆ ಖಂಡಿತಾ ದಪ್ಪಗಾಗುತ್ತೀರಾ. ಹೀಗಾಗಿ ದಿನದಲ್ಲಿ ಕನಿಷ್ಠ ಅಂದ್ರೂ 10 ಸಾವಿರ ಹೆಜ್ಜೆ ನಡೆಯಬೇಕು ಹಾಗೂ ನಿಯಮಿತವಾಗಿ ಆಹಾರ ಸೇವಿಸಬೇಕು.
ಶುಠಿ ನೀರು:
ಶುಠಿಯಲ್ಲಿ ಇರುವ ಥರ್ಮೋಜೆನಿಕ್ ಅಂಶಗಳು ನಮ್ಮ ದೇಹದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಶುಠಿ ನೀರು ಕುಡಿಯುವುದರಿಂದ ಹೊಟ್ಟೆ ಬೊಜ್ಜು ಕರಗುತ್ತದೆ.
ಪೆಪ್ಪರ್:
ಮಲೆನಾಡಿನ ಜನರು ಹೆಚ್ಚಾಗಿ ಮೆಣಸು ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಣಸಿನ ಕಾಳಿನಲ್ಲಿ ಪೆಪ್ಪರೈನ್ ಎಂಬ ಅಂಶವಿದ್ದು ನಮ್ಮ ಮೆಟಾಬಲಿಸಮ್ ಹೆಚ್ಚಿಸುತ್ತದೆ.
ಚಿಯಾ ಮತ್ತು ಅಗಸೇ ಬೀಜ
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಹಿ ವಹಿಸುವವರು ಮತ್ತು ದಿನನಿತ್ಯ ವರ್ಕೌಟ್ ಮಾಡುವವರು ತಪ್ಪದೆ ಚಿಯಾ ಮತ್ತು ಅಗಸೇ ಬೀಜ ಸೇವಿಸುತ್ತಾರೆ. ಈ ಬೀಗಳಲ್ಲಿ ಹೆಚ್ಚಿನ ಪ್ರೂಟಿನ್ ಮತ್ತು ಓಮೆಗಾ 3 ಇರುತ್ತದೆ, ಇದನ್ನು ತಿಂದರೆ ಹೆಚ್ಚಿನ ಹೊತ್ತು ಹೊಟ್ಟೆ ತುಂಬಿದಂತೆ ಇರುತ್ತದೆ ಹಾಗೂ ಪದೇ ಪದೇ ಹಸಿವು ಆಗುವುದಿಲ್ಲ.
ಮೆಂತ್ಯ ಕಾಳಿನ ಟೀ, ರಾಗಿ ಗಂಜಿ ಅಥವಾ ರಾಗಿ ಅಂಬಲಿ, ಅಪಲ್ ಸೈಡರ್ ವಿನೇಗರ್, ಚಕ್ಕೆ ಟೀ ಮತ್ತು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೆಲಸ ಮಾಡುವವರು ಒಂದು ಪ್ರಮಾಣದಲ್ಲಿ ಹೊಟ್ಟೆ ಕಡಿಮೆ ಮಾಡಿಕೊಳ್ಳಬಹುದು.