ಹೆಸರು ಕಾಳು ಒಳ್ಳೇದು, ಆದ್ರೋ, ಈ ಆರೋಗ್ಯ ಸಮಸ್ಯೆ ಇರೋರು ತಿನ್ನಬಾರದು!
ಹೆಸರು ಕಾಳು ಆರೋಗ್ಯಕ್ಕೆ ಉತ್ತಮ ನಿಜ. ಇದರಲ್ಲಿರುವ ಪೋಷಕಾಂಶಗಳು ದೈಹಿಕ ಆರೋಗ್ಯಕ್ಕೆ ಉತ್ತಮ. ಆದರೆ ಹೆಸರುಬೇಳೆ ಸೇವನೆ ಕೆಲವರಿಗೆ ಹಾನಿಕಾರಕವಾಗಬಹುದು, ಹೌದು, ತಮ್ಮ ಆರೋಗ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕೆಲವರು ಹೆಸರು ಬೇಳೆ ಸೇವನೆಯನ್ನು ತಪ್ಪಿಸಬೇಕು. ಯಾರು ಹೆಸರು ಕಾಳು ತಿನ್ನಬಾರದು, ಇದರಿಂದ ಏನಾಗುತ್ತೆ ಅನ್ನೋದನ್ನು ನಾವಿಂದು ನೋಡೋಣ.
ಸಾಮಾನ್ಯವಾಗಿ, ಎಲ್ಲಾ ಬೇಳೆಕಾಳುಗಳನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಆದರೆ ಹೆಸರು ಬೇಳೆಯ (green gram) ವಿಷಯಕ್ಕೆ ಬಂದಾಗ, ಪ್ರಕರಣ ಸ್ವಲ್ಪ ವಿಭಿನ್ನವಾಗಿರುತ್ತದೆ. ಮೊಳಕೆ ಕಾಳುಗಳಾಗಿ ಬಳಸಬಹುದಾದ ಅಥವಾ ಬೇಯಿಸಿ ತಿನ್ನಬಹುದಾದ ಈ ಹೆಸರು ಬೇಳೆ ಆರೋಗ್ಯಕ್ಕೆ ಸಂಪೂರ್ಣವಾಗಿ ಒಳ್ಳೆಯದಲ್ಲ. ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಲು ಆದ್ಯತೆ ನೀಡಲಾಗುತ್ತೆ. ಯಾಕೆ ಅನ್ನೋದು ನಿಮಗೆ ಗೊತ್ತಾ?
ಹೆಸರು ಬೇಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಕೆಲವೊಂದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗೆ ವಿಶೇಷವಾಗಿ ಹೆಸರು ಬೇಳೆಯನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಅಷ್ಟಕ್ಕೂ, ಆರೋಗ್ಯಕ್ಕೆ ರಾಮಬಾಣವಾಗಿರುವ ಹೆಸರು ಬೇಳೆ, ಆರೋಗ್ಯಕ್ಕೆ ಮಾರಕ ಆಗೋದು ಯಾವಾಗ? ಅದನ್ನು ಯಾರು ಸೇವಿಸಬಾರದು ಅನ್ನೋದನ್ನು ನಾವಿಂದು ನೋಡೋಣ.
ಹೆಸರು ಬೇಳೆಯನ್ನು ಯಾರು ತಿನ್ನಬಾರದು?
ಯೂರಿಕ್ ಆಮ್ಲ (uric acid)
ಯೂರಿಕ್ ಆಮ್ಲವು ಅಧಿಕವಾಗಿರುವ ಜನರು ಹೆಸರು ಬೇಳೆ ತಿನ್ನೋದನ್ನು ತಪ್ಪಿಸಬೇಕು. ಇದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಿಳಿದು ಬಂದಿದೆ. ಈ ಕಾರಣದಿಂದಾಗಿ, ಯೂರಿಕ್ ಆಮ್ಲದ ಆಹಾರದಲ್ಲಿ ಹೆಸರು ಬೇಳೆ ಸೇರಿಸುವುದನ್ನು ತಪ್ಪಿಸುವುದು ಉತ್ತಮ.
ಹೊಟ್ಟೆಯುಬ್ಬರ ಸಮಸ್ಯೆ ಇದ್ರೆ
ಹೊಟ್ಟೆಯುಬ್ಬರಿಕೆ ಅಥವಾ ಉಬ್ಬರ (stomoch upset) ಮೊದಲಾದ ಸಮಸ್ಯೆಗಳು ಕಂಡು ಬಂದರೆ, ಹೆಸರುಬೇಳೆ ಸೇವಿಸೋದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಸಣ್ಣ ಸರಪಳಿ ಕಾರ್ಬ್ ಗಳ ಉಪಸ್ಥಿತಿಯಿಂದಾಗಿ, ಅನೇಕ ಜನರಿಗೆ ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಅಲ್ಲದೇ ಸಮಸ್ಯೆ ಉಲ್ಬಣಿಸುವ ಸಾಧ್ಯತೆ ಇದೆ.
ಕಡಿಮೆ ರಕ್ತದೊತ್ತಡ
ಅಧಿಕ ರಕ್ತದೊತ್ತಡವನ್ನು (low blood pressure) ಹೊಂದಿರುವ ಜನರಿಗೆ ಸಾಮಾನ್ಯವಾಗಿ ಹೆಸರು ಬೇಳೆಯನ್ನು ಸೇವಿಸಲು ಸೂಚಿಸಲಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮ ಕೂಡ ಹೌದು. ಆದರೆ, ಕಡಿಮೆ ರಕ್ತದೊತ್ತಡದ ಸಮಸ್ಯೆಗಳನ್ನು ಹೊಂದಿರುವ ಜನರು ಹೆಸರು ಬೇಳೆಯನ್ನು ಸೇವಿಸುವುದನ್ನು ತಪ್ಪಿಸಬೇಕು.
ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತೆ
ಈಗಾಗಲೇ ತಮ್ಮ ದೇಹದಲ್ಲಿ ಕಡಿಮೆ ಪ್ರಮಾಣದ ಸಕ್ಕರೆಯನ್ನು ಹೊಂದಿರುವ ಮತ್ತು ತಲೆತಿರುಗುವಿಕೆ ಅಥವಾ ದೌರ್ಬಲ್ಯದಂತಹ ರೋಗ ಲಕ್ಷಣಗಳನ್ನು ಹೊಂದಿರುವ ಜನರು ಹೆಸರು ಬೇಳೆಯನ್ನು ಸೇವಿಸಬಾರದು. ಇದು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದು ಈಗಾಗಲೇ ಕಡಿಮೆ ರಕ್ತದ ಸಕ್ಕರೆಯೊಂದಿಗೆ ಹೋರಾಡುತ್ತಿರುವ ಜನರಿಗೆ ಹಾನಿಕಾರಕವಾಗಿದೆ.
ಹೆಸರು ಬೇಳೆಯ ಅಡ್ಡಪರಿಣಾಮಗಳು ಈ ಕೆಳಗಿನಂತಿವೆ:
ಕಡಿಮೆ ಬೇಯಿಸಿದ ಹಸಿರು ಹೆಸರುಕಾಳು ತಲೆತಿರುಗುವಿಕೆ, ಅತಿಸಾರ ಮತ್ತು ವಾಕರಿಕೆಗೆ ಕಾರಣವಾಗಬಹುದು.
ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಮತ್ತು ಮೊಳಕೆಯೊಡೆದರೆ, ಹೆಸರು ಬೇಳೆಯು ಬ್ಯಾಕ್ಟೀರಿಯಾದ ಬೆಳವಣಿಗೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತದೆ, ಇದು ಕಿಬ್ಬೊಟ್ಟೆಯ ಸೆಳೆತ, ಗರ್ಭಿಣಿಯರಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನೀವು ಕೆಲವು ಬೀನ್ಸ್ ಗೆ ಅಲರ್ಜಿ ಹೊಂದಿದ್ದರೆ, ಹೆಸರು ಬೇಳೆಯಿಂದಲೂ ಅಲರ್ಜಿ ಹೊಂದುವ ಸಾಧ್ಯತೆ ಇರುತ್ತೆ. ಪ್ರತಿದಿನ ಹೆಸರುಬೇಳೆಯನ್ನು ಸೇವಿಸುವುದರಿಂದ ಉಸಿರಾಟದ ತೊಂದರೆ, ತುರಿಕೆ, ವಾಕರಿಕೆ, ವಾಂತಿ (vomiting) ಮತ್ತು ಅತಿಸಾರದಂತಹ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು.
ಕಡಿಮೆ ಪ್ರಮಾಣದಲ್ಲಿ ಸೇವಿಸಿದ್ರೆ ಪ್ರತಿಯೊಂದು ಆಹಾರವೂ ಉತ್ತಮ. ಹೆಸರು ಬೇಳೆಯ ಪ್ರಯೋಜನಗಳು ಅವುಗಳಲ್ಲಿರುವ ಆಹಾರದ ನಾರಿನಂಶದಿಂದಾಗಿರುತ್ತದೆ. ಆದರೆ ಆಹಾರದ ನಾರಿನಂಶದ ಅತಿಯಾದ ಸೇವನೆಯು ಹೊಟ್ಟೆಗೆ ಹಾನಿಕಾರಕವಾಗಿದೆ ಮತ್ತು ಪೋಷಕಾಂಶಗಳನ್ನು ಕಡಿಮೆ ಹೀರಿಕೊಳ್ಳಲು ಕಾರಣವಾಗುತ್ತದೆ.