ಸಣ್ಣ ವಯಸ್ಸಲ್ಲೇ ಹೃದ್ರೋಗ ಹೆಚ್ಚೋದ್ಹೇಕೆ? ಫುಡ್, ಲೈಫ್‌ಸ್ಟೈಲ್ ಕಾರಣವೇ?

First Published 3, Aug 2020, 5:10 PM

ಹೃದಯಾಘಾತ, ಸ್ಟ್ರೋಕ್, ಹೃದಯದ ಸಮಸ್ಯೆಗಳೆಂದರೆ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳೆಂಬ ಸಾಮಾನ್ಯ ನಂಬಿಕೆಯಿದೆ. ಆದರೆ, ಇತ್ತೀಚೆಗೆ ಹೃದಯ ಸಮಸ್ಯೆಗೆ ವಯೋಬೇಧವೆಂಬುದಿಲ್ಲ. ಯುವಕ ಯುವತಿಯರೇ ಹೃದಯ ಸಮಸ್ಯೆಗಳಿಂದ ಬಳಲುವ ಸಂಖ್ಯೆ ಹೆಚ್ಚಿದೆ. ಇದಕ್ಕೆ ಕಾರಣಗಳು ಹಲವಾರು. ಅವೇನೆಂದು ನೋಡೋಣ.

ಇಂದಿನ ತಲೆಮಾರು ಹಿಂದೆಂದಿಗಿಂತಲೂ ಹೆಚ್ಚಿನ ಒತ್ತಡ ಅನುಭವಿಸುತ್ತದೆ. ಈ ಒತ್ತಡಕ್ಕೆ ಆಗಾಗ್ಗೆ ಪರಿಹಾರ ಕಂಡುಕೊಳ್ಳದಿದ್ದರೆ, ಒತ್ತಡ ನಿಭಾಯಿಸುವ ಛಾತಿ ಬೆಳೆಸಿಕೊಳ್ಳದಿದ್ದರೆ, ಅದರಿಂದಲೂ ಹೃದಯ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

ಈ ಕಾರಣವನ್ನು ಜನತೆ ಮನಸ್ಸು ಮಾಡಿದರೆ ಖಂಡಿತಾ ದೂರವಿಡಬಹುದು. ಹೌದು, ಸ್ಮೋಕಿಂಗ್ ನಿಲ್ಲಿಸಿದರೆ ಹೃದಯ ಸಮಸ್ಯೆಗಳಿಂದ ಬಹಳಷ್ಟು ದೂರವಿರಲು ಸಾಧ್ಯ. ಸಿಗರೇಟ್ ಸೇದದವರಿಗಿಂತ ಸೇದುವವರು 8 ಪಟ್ಟು ಹೆಚ್ಚಾಗಿ ಹೃದಯ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಗಳಿರುತ್ತವೆ.

ಕ್ಯಾನ್ಸರ್ ಇದ್ದರೆ, ಕೀಮೋಥೆರಪಿ ಹಾಗೂ ಇತರೆ ಔಷಧಗಳನ್ನು ಕ್ಯಾನ್ಸರ್ ನಿವಾರಣೆಗಾಗಿ ತೆಗೆದುಕೊಳ್ಳುತ್ತಿದ್ದರೆ ಅವುಗಳಿಂದಲೇ ಹೃದಯದ ಕಾಯಿಲೆಗಳು ಹುಟ್ಟಬಹುದು.

ಡಯಟ್ ಸರಿ ಇಲ್ಲದಾಗ ಅಂದರೆ ಆಹಾರದಲ್ಲಿ ಸಕ್ಕರೆ, ಕೊಬ್ಬು, ಉಪ್ಪು, ರಾಸಾಯನಿಕಗಳು ಹೆಚ್ಚಿದ್ದಾಗ ಕೂಡಾ ಹೃದಯ ಸಮಸ್ಯೆ ಸಂಭಾವ್ಯತೆ ಹೆಚ್ಚುತ್ತದೆ.

ಪ್ರಗ್ನೆನ್ಸಿಯಲ್ಲಿ ಸಿಕ್ಕಾಪಟ್ಟೆ ತೂಕ ಹೆಚ್ಚಾದರೆ, ಡಯಾಬಿಟೀಸ್‌ಗೆ ಸಿಲುಕಿದರೆ, ಅವಧಿ ಮುನ್ನ ಪ್ರಸವವಾದರೆ ಅಂಥ ಮಹಿಳೆಯರಲ್ಲಿ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಂಭಾವ್ಯತೆ ಹೆಚ್ಚು.

ನಾವು ಯಾವ ಜನಾಂಗಕ್ಕೆ ಸೇರಿದವರು ಎಂಬುದು ಕೂಡಾ ನಮ್ಮ ಹೃದಯದ ಸಮಸ್ಯೆಗಳನ್ನು ನಿರ್ಧರಿಸುತ್ತದೆ. ಅಮೆರಿಕನಿವಾಸಿ ಕಪ್ಪು ವರ್ಣೀಯರಲ್ಲಿ ಹೈ ಬಿಪಿ ಹೆಚ್ಚು. ನಾಲ್ಕರಲ್ಲಿ ಮೂವರಿಗೆ 55 ವರ್ಷವಾಗುವ ಹೊತ್ತಿಗೆ ಹೈ ಬಿಪಿ ಕಂಡುಬರುತ್ತದೆ. ಹೀಗೆ ಜನಾಂಗ ಕೂಡಾ ನಮ್ಮ ಆರೋಗ್ಯ ನಿರ್ಧರಿಸುತ್ತದೆ. ಇದನ್ನು ಬದಲಿಸಲಾಗದಾದರೂ, ಜೀವನಶೈಲಿಯ ಬದಲಾವಣೆಯಿಂದ ರಿಸ್ಕ್ ಕಡಿಮೆ ಮಾಡಿಕೊಳ್ಳಬಹುದು.

ಖಿನ್ನತೆಯಿಂದ ಬಳಲುವವರಲ್ಲಿ ಹೃದಯ ಸಮಸ್ಯೆಗಳೂ ಜಾಸ್ತಿ. ಖಿನ್ನತೆ ಇದ್ದಾಗ ಸ್ಟ್ರೆಸ್ ಹಾರ್ಮೋನ್‌ಗಲು ಬಿಡುಗಡೆಯಾಗುತ್ತವೆ. ಇದರಿಂದ ದೇಹದಲ್ಲಿ ಬಿಡುಗಡೆಗೊಳ್ಳುವ ಕೆಮಿಕಲ್‌ಗಳು ಹೃದಯ ನಾಳಗಳನ್ನು ತೆಳುವಾಗಿಸಬಹುದು. ಜೊತೆಗೆ, ಖಿನ್ನತೆಯಿದ್ದಾಗ ಜೀವನಶೈಲಿಯ ಕುರಿತು ಗಮನವಿರುವುದಿಲ್ಲ. ನಿದ್ರೆ, ಆಹಾರ ಎಲ್ಲವೂ ಏರುಪೇರಾಗುತ್ತದೆ. ಇದರಿಂದಲೂ ಹೃದಯ ಸಮಸ್ಯೆ ಹೆಚ್ಚುತ್ತದೆ.

ವ್ಯಾಯಾಮ ಮಾಡದೆ ಇರುವುದು, ದೇಹಕ್ಕೆ ಚಲನೆ ಕಡಿಮೆ ಇರುವುದರಿಂದಲೂ ಬೊಜ್ಜು ಹೆಚ್ಚಿ ಹೃದಯ ಸಮಸ್ಯೆಗಳಿಗೆಡೆ ಮಾಡಬಹುದು.

ಕುಟುಂಬದಲ್ಲಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದ್ದರೆ, ಜೀನ್ಸ್‌ನಲ್ಲಿ ಕೊಲೆಸ್ಟೆರಾಲ್ ಹೆಚ್ಚಿರುವ ಸಾಧ್ಯತೆ ಇದ್ದರೆ ಅಂಥವರಲ್ಲಿ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

loader