Eating Habits: ಟೈಮ್ ಇಲ್ಲ ಅಂತ ಎದ್ದುನಿಂತು ತಿಂತೀರಾ, ಹುಷಾರ್!
ಜಗತ್ತಿನಲ್ಲಿ ಅನೇಕ ರೀತಿಯ ಸಭ್ಯತೆಗಳಿವೆ. ಎಲ್ಲವನ್ನೂ ಪ್ರತಿಯೊಬ್ಬರು ವಿಭಿನ್ನವಾಗಿ ಮಾಡುತ್ತಾರೆ. ಉದಾಹರಣೆಗೆ, ತಿನ್ನುವ ವಿಧಾನವನ್ನೇ ತೆಗೆದುಕೊಳ್ಳಿ, ರೋಮ್ ಮತ್ತು ಗ್ರೀಸ್ ನ ನಾಗರಿಕತೆಯಲ್ಲಿ ಮಲಗಿ ತಿನ್ನೋದು ಫ್ಯಾಷನ್ . ಆದರೆ ಭಾರತೀಯರ ಪ್ರಕಾರ, ಆಹಾರವನ್ನು ನೆಲದ ಮೇಲೆ ಕುಳಿತು ತಿನ್ನುವುದು ಉತ್ತಮ ಮತ್ತು ಸರಿಯಾದ ವಿಧಾನ ಎನ್ನಲಾಗುತ್ತೆ.
ಇಂದಿನ ಫಾಸ್ಟ್ ಜೀವನದಲ್ಲಿ, ಎಲ್ಲವೂ ಫಾಸ್ಟ್ ಆಗಿಯೇ ನಡೆಯಬೇಕು. ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ತಿನ್ನಲು ಇಷ್ಟಪಡ್ತಾರೆ, ಕೆಲವರು ಎದ್ದು ನಿಂತು ತಿಂದ್ರೆ, ಇನ್ನೂ ಕೆಲವರು ನಡೆದಾಡುತ ತಿರುಗಾಡುತ ತಿಂತಾರೆ. ಇದು ಎಷ್ಟು ಸರಿ? ತಿನ್ನಲು (Eating) ಉತ್ತಮ ಮಾರ್ಗ ಯಾವುದು? ನೀವು ಎದ್ದು ನಿಂತು ತಿಂದ್ರೆ ಏನಾಗುತ್ತೆ ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ.
ಯಾವ ಭಂಗಿಯಲ್ಲಿ ತಿನ್ನಬೇಕು ಎಂಬುದರ ಬಗ್ಗೆ ಯಾರೂ ಕೂಡ ಹೆಚ್ಚು ತಲೆ ಕೆಡಿಸೋದಿಲ್ಲ. ಆದರೆ ಒಂದೇ ಸ್ಥಳದಲ್ಲಿ ಕುಳಿತು(Sit) ಆಹಾರ ತಿನ್ನಬೇಕು ಎಂದು ಮನೆಯ ಹಿರಿಯರು ಹೇಳಿರೋದನ್ನೇ ಕೆಲವರು ಪಾಲಿಸಿಕೊಂಡು ಬರುತ್ತಾರೆ. ನೀವು ಅವರ ಮಾತುಗಳನ್ನು ನಿರ್ಲಕ್ಷಿಸುತ್ತಿದ್ದರೆ ನೀವು ತಪ್ಪು ಮಾಡ್ತಾ ಇದ್ದೀರಿ ಎಂದು ಅರ್ಥ.
ಅನೇಕ ರೀತಿಯ ಅಧ್ಯಯನಗಳು ಎದ್ದುನಿಂತು ತಿನ್ನೋದ್ರಿಂದ, ದೇಹದಲ್ಲಿ ಅನೇಕ ರೀತಿಯ ಅಸ್ವಸ್ಥತೆಗಳು ಹುಟ್ಟುತ್ತವೆ ಎಂದು ತಿಳಿಸಿವೆ. ನೀವು ಮಲಗಿ ತಿಂದ್ರೆ ಅಥವಾ ತಿಂದ ತಕ್ಷಣ ಮಲಗಿದಾಗ, ಹೊಟ್ಟೆಯಲ್ಲಿ ಆಸಿಡ್ (Acid) ಹೆಚ್ಚಾಗುತ್ತದೆ, ಇದು ವ್ಯಕ್ತಿಗೆ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತೆ.
ಒಬೆಸಿಟಿಯ(Obesity) ಅಪಾಯ ಹೆಚ್ಚು: ಒಂದು ಸ್ಟಡಿ ಪ್ರಕಾರ, ಕುಳಿತು ತಿನ್ನೋದ್ರಿಂದ ನೀವು ಆಹಾರ ಸೇವಿಸಿದ್ದೀರಿ ಎಂಬ ಮೆಸೇಜ್ ನಿಮ್ಮ ಮೆದುಳಿಗೆ ಬೇಗನೆ ಸೆಂಡ್ ಆಗುತ್ತೆ. ಇದು ಓವರ್ ಈಟಿಂಗ್ ನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತೆ. ಇದು ಸ್ಥೂಲಕಾಯದ ಅಪಾಯ ಸಹ ಕಡಿಮೆ ಮಾಡುತ್ತೆ.
ಗ್ಯಾಸ್ಟ್ರಿಕ್ (Gastric) ಸಮಸ್ಯೆ: ವೇಗದ ಡೈಜೇಷನ್ ಅಪಾಯಕಾರಿ ಏಕೆಂದರೆ ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಕಡಿಮೆ ಸಮಯ ನೀಡುತ್ತೆ, ಇದರಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಸ್ವೇಲ್ಲಿಂಗ್ ಉಂಟಾಗುತ್ತೆ. ಕಾರ್ಬೋಹೈಡ್ರೇಟ್ ಸರಿಯಾಗಿ ಜೀರ್ಣವಾಗದಿದ್ದಾಗ, ಅದು ಗ್ಯಾಸ್ ಮತ್ತು ಹೊಟ್ಟೆಯುಬ್ಬರ ಸಮಸ್ಯೆಗಳಿಗೆ ಕಾರಣವಾಗಬಹುದು.
ಬೇಗನೆ ಹಸಿವಾಗುತ್ತೆ (Hungry): ಎದ್ದುನಿಂತು ತಿನ್ನೋದ್ರಿಂದ ಆಹಾರದ ಜೀರ್ಣಕ್ರಿಯೆ 30% ವೇಗವಾಗಿರುತ್ತೆ ಮತ್ತು ಇದು ತಿಂದ ಕೆಲವೇ ಗಂಟೆಗಳಲ್ಲಿ ನಿಮಗೆ ಹಸಿವಾಗುವಂತೆ ಮಾಡುತ್ತೆ. ಒಂದು ಸ್ಟಡಿ ಪ್ರಕಾರ, ಆರಾಮವಾಗಿ ಕುಳಿತು ತಿನ್ನುವ ಜನರಲ್ಲಿ ಈ ಸಮಸ್ಯೆ ಉಂಟಾಗೋದಿಲ್ಲ ಎಂದು ತಿಳಿದು ಬಂದಿದೆ.
ಸರಿಯಾದ ಭಂಗಿ(Posture) ಜೀರ್ಣಾಂಗ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತೆ: ತಿನ್ನುವ ಸಮಯದಲ್ಲಿ ನೀವು ಯಾವ ಭಂಗಿಯಲ್ಲಿ ಊಟ ಮಾಡುತ್ತೀರಿ ಎಂಬುದು ಜೀರ್ಣಕ್ರಿಯೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ. ಎದ್ದು ನಿಂತು ತಿನ್ನೋದ್ರಿಂದ ಹೊಟ್ಟೆ ಬೇಗನೆ ಖಾಲಿಯಾಗುತ್ತೆ. ಆಹಾರವು ಸೂಕ್ಷ್ಮ ಕಣಗಳಾಗಿ ಒಡೆಯುವ ಮೊದಲು ಕರುಳಿನೊಳಗೆ ಹೋಗುತ್ತೆ . ಇದು ಕರುಳಿನ ಮೇಲಿನ ಒತ್ತಡ ಹೆಚ್ಚಿಸುತ್ತೆ ಮತ್ತು ಡೈಜೇಷನ್ ಪ್ರಾಬ್ಲೆಮ್ಸ್ ಗೆ ಕಾರಣವಾಗಬಹುದು.