ನೀವು ಮಲಗೋ ಭಂಗಿಯಿಂದ್ಲೇ ನಿಮ್ಮ ವ್ಯಕ್ತಿತ್ವದ ಬಗ್ಗೆ ಗೊತ್ತಾಗುತ್ತೆ !
ಮನುಷ್ಯನ (Human) ವರ್ತನೆ (Behaviour) ಆಗಿಂದಾಗೆ ಬದಲಾಗುತ್ತಿರುತ್ತದೆ. ಹೀಗಾಗಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ (Personality)ವನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟ. ಆದ್ರೆ ನಿಮ್ಗೊಂದು ಅಚ್ಚರಿಯ ವಿಷ್ಯ ಗೊತ್ತಾ ? ವ್ಯಕ್ತಿ ಮಲಗೋ ರೀತಿಯಿಂದ್ಲೇ ಆತನ ವ್ಯಕ್ತಿತ್ವದ ಬಗ್ಗೆ ತಿಳಿಬೋದಂತೆ.
ವ್ಯಕ್ತಿಯಿಂದ ವ್ಯಕ್ತಿ ಹೇಗೆ ವಿಭಿನ್ನವಾಗಿರುತ್ತಾನೋ ಹಾಗೆಯೇ ಆತನ ವ್ಯಕ್ತಿತ್ವ (Personality) ಕೂಡಾ ಬೇರೆ ಬೇರೆಯಾಗಿರುತ್ತದೆ. ಕೆಲವೊಬ್ಬರ ವ್ಯಕ್ತಿತ್ವವನ್ನು ತಿಳಿದುಕೊಳ್ಳ್ಳುವುದು ಸುಲಭವಾಗಿದ್ದರೆ, ಇನ್ನು ಕೆಲವೊಬ್ಬರ ಜೊತೆ ಎಷ್ಟು ಮಾತನಾಡಿದರೂ ಅವರ ಪರ್ಸನಾಲಿಟಿ ಮಾತ್ರ ಅರ್ಥವಾಗೋದೆ ಇಲ್ಲ. ವ್ಯಕ್ತಿ ನಗೋ ರೀತಿಯಿಂದ, ಮಾತನಾಡೋ ರೀತಿಯಿಂದ , ಮೊಬೈಲ್ ಹಿಡಿಯೋ ರೀತಿಯಿಂದ ಆತನ ಪರ್ಸನಾಲಿಟಿಯ ಬಗ್ಗೆ ತಿಳಿದುಕೊಳ್ಳಬಹುದಂತೆ. ಹಾಗೆಯೇ ಮಲಗೋ ಭಂಗಿ (Sleepin position) ಯಿಂದಾನೂ ವ್ಯಕ್ತಿತ್ವದ ಬಗ್ಗೆ ತಿಳಿಯಬಹುದು ಎಂಬ ವಿಚಾರ ಬಹಿರಂಗವಾಗಿದೆ.
ಹಗಲಿರುಳು ದುಡಿದು ಬಂದ ನಂತರ ಪ್ರತಿಯೊಬ್ಬರು ನೆಮ್ಮೆದಿಯ ನಿದ್ದೆಗಾಗಿ ಬಸುತ್ತಾರೆ. ಆದರೆ ನೀವು ಯಾವ ರೀತಿ ಮಲಗುತ್ತೀರಾ ಅಥವಾ ಮಲಗುವ ಭಂಗಿಗಳು ನಿಮ್ಮ ಆಂತರಿಕ ಮತ್ತು ಆರೋಗ್ಯದ (Health) ಬಗ್ಗೆ ತಿಳಿಸುತ್ತದೆ. ಮಲಗುವ ಭಂಗಿಗಳು ವ್ಯಕ್ತಿತ್ವವನ್ನು ಸೂಚಿಸುತ್ತವೆ, ಹಾಗಾದ್ರೆ ನೀವು ಮಲಗುವ ಭಂಗಿ ಏನು ಹೇಳುತ್ತೆ ತಿಳಿಯಿರಿ.
ನೀವು ಬಾಯ್ಬಿಟ್ಟು ಏನು ಹೇಳ್ಬೇಕಾಗಿಲ್ಲ, ನೀವು ನಿಂತುಕೊಳ್ಳೋ ರೀತಿನೇ ನಿಮ್ಮ ಬಗ್ಗೆ ಎಲ್ಲಾ ಹೇಳುತ್ತೆ !
ಅಂಗಾತ ಮಲಗುವುದು: ಅಂಗಾತ ಮಲಗುವ ಅಭ್ಯಾಸದಿಂದ ನೀವು ಸಂಪೂರ್ಣವಾಗಿ ರಿಫ್ರೆಶ್ (Refresh) ಆಗಲು ಸಾಧ್ಯವಾಗುತ್ತದೆ. ಈ ರೀತಿ ಮಲಗುವವರು ಸ್ನೇಹಪರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಎಲ್ಲರ ಗಮನದ ಕೇಂದ್ರ ಬಿಂದುವಾಗಲು ಬಯಸುತ್ತಾರೆ. ಸಮಾನ ಮನಸ್ಸಿನ ಜನರ ಸಹವಾಸವನ್ನು ಪ್ರೀತಿಸುತ್ತಾರೆ. ಅಂಗಾತ ಮಲಗುವವರು ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಇಂಥವರು ಸಮಯಕ್ಕೆ ಹೆಚ್ಚು ಬೆಲೆ ನೀಡುತ್ತಾರೆ. ತಮ್ಮ ಗುರಿಗಳನ್ನು ಸಾಧಿಸಲು ನಿರಂತರವಾಗಿ ಪರಿಶ್ರಮ ಪಡುತ್ತಾರೆ.
ಬೆನ್ನು ಮೇಲೆ ಹಾಕಿ ಮಲಗುವುದು: ಇದು ಅತ್ಯಂತ ಕಡಿಮೆ ಸಾಮಾನ್ಯವಾದ ಮಲಗುವ ಸ್ಥಾನವಾಗಿದೆ. ಇದಲ್ಲದೆ, ಮುಖ ಕೆಳಗೆ ಮಲಗುವುದು ಕುತ್ತಿಗೆಯ ಗಾಯಗಳನ್ನು ಉತ್ತೇಜಿಸುತ್ತದೆ ಮತ್ತು ಗರ್ಭಿಣಿಯರಿಗೆ ಹಾನಿಕಾರಕವೆಂದು ಸಾಬೀತುಪಡಿಸಲಾಗಿದೆ. ನಿಮಗೂ ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವಿದ್ದರೆ, ನೀವು ತುಂಬಾ ಸೌಹಾರ್ದಯುತ ವ್ಯಕ್ತಿಯಾಗಿರಬಹುದು. ಯಾರೊಬ್ಬರೂ ನಿಮ್ಮನ್ನು ಟೀಕಿಸುವುದನ್ನು ಇಷ್ಟಪಡುವುದಿಲ್ಲ, ಏಕೆಂದರೆ ನೀವು ಒಳಗೆ ನಿಜವಾಗಿಯೂ ಅಸುರಕ್ಷಿತರಾಗಿದ್ದೀರಿ. ನಿಮ್ಮ ಮುಖದ ಮೇಲಿನ ನಗು ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡುತ್ತದೆ.
ಕೈ ಮತ್ತು ಕಾಲುಗಳನ್ನು ಮುಚ್ಚಿಕೊಂಡು ಮಲಗುವುದು: ನೀವು ಮಗುವಿನಂತೆ ಸುರುಳಿಯಾಗಿ ಮಲಗಿದರೆ,ನಿಮ್ಮ ಜೀವನ (Life)ದಲ್ಲಿ ನೀವು ಆರಾಮ ಮತ್ತು ರಕ್ಷಣೆಯನ್ನು ಬಯಸುತ್ತೀರಿ ಎಂದರ್ಥ. ಮಾತ್ರವಲ್ಲ ನೀವು ಜೀವನದಲ್ಲಿ ಎಲ್ಲಾ ಕಷ್ಟಗಳನ್ನು ಈಝಿಯಾಗಿ ತೆಗೆದುಕೊಂಡು, ಸಮಸ್ಯೆ (Problem) ಬಗೆಹರಿಸಿಕೊಂಡು ಮುಂದೆ ಸಾಗುತ್ತೀರಿ.
ನಿಮ್ಮ ಮುಖದ ಮಚ್ಚೆಗಳು ನಿಮ್ಮ ಬಗ್ಗೆ ಏನು ಹೇಳ್ತಿವೆ ಗೊತ್ತಾ?
ಬಲ ಬದಿಯಲ್ಲಿ ತಿರುಗಿ ಮಲಗುವುದು: ಬಲಬದಿಗೆ ತಿರುಗಿ ಮಲಗುವ ಭಂಗಿ ನೀವು ಹೆಚ್ಚು ಇಚ್ಛಾಶಕ್ತಿಯುಳ್ಳ ವ್ಯಕ್ತಿಯಾಗಿದ್ದು, ಅಪಾಯಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಮಾತ್ರವಲ್ಲ ನೀವು ಸಮಸ್ಯೆಗಳನ್ನು ಪರಿಹರಿಸಲು ಇಷ್ಟಪಡುತ್ತೀರಿ ಎಂಬುದನ್ನು ಹೇಳುತ್ತದೆ.
ಲಾಗ್ ಸ್ಲೀಪರ್: ಮಲಗುವಾಗ ನೀವು ಒಂದು ಬದಿಯಲ್ಲಿ ನಿಮ್ಮ ತೋಳುಗಳನ್ನುಇರಿಸಿದರೆ, ನೀವು ನಿಜವಾಗಿಯೂ ನೆಮ್ಮದಿಯಿಂದ ನಿದ್ರಿಸುತ್ತೀರಿ. ಈ ಮಲಗುವ ಭಂಗಿಯಲ್ಲಿ ನೀವು ನಿಮ್ಮನ್ನು ಗುರುತಿಸಿಕೊಂಡರೆ, ನೀವು ನಿಜವಾಗಿಯೂ ಸ್ನೇಹಪರ ಮತ್ತು ನಂಬಿಕೆಗೆ ಅರ್ಹರು. ಎಲ್ಲರೊಮದಿಗೂ ಖುಷಿಯಾಗಿ ಇರಲು ಇಷ್ಟಪಡುತ್ತೀರಿ ಎಂಬರ್ಥವಾಗಿದೆ.
ಎದುರಿಗೆ ಇರೋರು ಸುಳ್ಳು ಹೇಳ್ತಿದ್ದಾರ ಅನ್ನೋದನ್ನು ಬಾಡಿ ಲಾಂಗ್ವೇಜ್ ನೋಡಿ ತಿಳ್ಕೊಳ್ಳಿ
ದಿಂಬನ್ನು ತಬ್ಬಿಕೊಂಡು ಮಲಗುವುದು: ನೀವು ದಿಂಬನ್ನು (Pillow) ಮುದ್ದಾಡದೆ ಸುಮ್ಮನೆ ಮಲಗಲು ಸಾಧ್ಯವಾಗದವರಾಗಿದ್ದರೆ, ನೀವು ಕೇವಲ ಯಾವಾಗಲೂ ಸಂತೋಷವಾಗಿರಲು ಇಷ್ಟಪಡುವ ವ್ಯಕ್ತಿಯಾಗಿರಬಹುದು, ಅವರು ಜೀವನದಲ್ಲಿ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಇಂಥವರು ನಿಜವಾಗಿಯೂ ಸಹಾಯಕಾರಿ ವ್ಯಕ್ತಿ. ತಮ್ಮನ್ನು ಪ್ರೀತಿಸುವ ಮತ್ತು ತಮಗಾಗಿ ಕಾಳಜಿವಹಿಸುವ ಜನರಿಗಾಗಿ ಏನು ಮಾಡಲು ಸಹ ಸಿದ್ಧರಿರುತ್ತಾರೆ.
ಕೈ ಚಾಚಿ ಮಲಗುವ ಅಭ್ಯಾಸ: ಈ ಮಲಗುವ ಭಂಗಿ ಸಾಮಾನ್ಯ ಮಲಗುವ ಸ್ಥಾನವಾಗಿದೆ. ಇದರರ್ಥ ನೀವು ಯಾರನ್ನಾದರೂ ನಂಬಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತೀರಿ ಎಂಬುದಾಗಿದೆ. ಯಾರ ಜೊತೆಗಾದರೂ ಹೆಚ್ಚು ಆಪ್ತತೆ ಹೊಂದಲು ನೀವು ಸ್ವಲ್ಪ ಅನುಮಾನಿಸಬಹುದು ಮತ್ತು ಸಂಬಂಧದ ಬಗ್ಗೆ ದೃಢವಾದ ತೀರ್ಮಾನ ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳಬಹುದು. ನೀವು ಹೇಗೆ ಮಲಗ್ತೀರಿ ನೋಡ್ಕೊಳ್ಳಿ ಮತ್ತು ನಿಮ್ಮ ವ್ಯಕ್ತಿತ್ವದ ಬಗ್ಗೆ ತಿಳಿದುಕೊಳ್ಳಿ.