ಕತ್ತೆ ಮುಖ ನೋಡಿದ್ರೆ ಐಟಿ ರೇಡ್ ಆಗತ್ತೆ! ಖ್ಯಾತ ಪಶುವೈದ್ಯ ಡಾ. ಜಗನ್ನಾಥ್ ಇಂಟರೆಸ್ಟಿಂಗ್ ಮಾಹಿತಿ...
ಕತ್ತೆಯ ಹಾಲಿನ ಪ್ರಯೋಜನಗಳು ಲೆಕ್ಕವಿಲ್ಲದಷ್ಟು. ಈ ಬಗ್ಗೆ ಖ್ಯಾತ ಪಶುವೈದ್ಯ ಡಾ. ಜಗನ್ನಾಥ್ ಇಂಟರೆಸ್ಟಿಂಗ್ ಮಾಹಿತಿ ನೀಡಿದ್ದಾರೆ.
ಕತ್ತೆಯನ್ನು ಸಾಮಾನ್ಯವಾಗಿ ಬೈಯುವುದಕ್ಕೆ ಬಳಸಲಾಗುತ್ತದೆ. ಆದರೆ ಕತ್ತೆಯಿಂದ ಎಷ್ಟು ಪ್ರಯೋಜನ ಇದೆ ಎನ್ನುವುದನ್ನು ತಿಳಿದರೆ ಖಂಡಿತವಾಗಿಯೂ ಬೈಗುಳಕ್ಕೆ ಕತ್ತೆ ಎನ್ನುವ ಪದವನ್ನು ಬಳಸುವುದಿಲ್ಲ. ಅದರ ಪ್ರಯೋಜನ ಎಷ್ಟು ಇದೆ ಎಂದರೆ, ಕತ್ತೆ ಮುಖ ನೋಡಿದ್ರೆ ಒಳ್ಳೆಯದಾಗುತ್ತೆ ಎನ್ನುವ ಮಾತು ಮೊದಲಿನಿಂದಲೂ ಇದೆ. ಆದರೆ ಇದೀಗ ಖ್ಯಾತ ಪಶುವೈದ್ಯ ಡಾ. ಜಗನ್ನಾಥ್ ಅವರು ಕತ್ತೆಯ ಮುಖ ನೋಡಿದ್ರೆ ಐಟಿ ರೇಡ್ ಆಗತ್ತೆ ಎನ್ನುವ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಿದ್ದು ಯಾಕೆ? ಅದರ ಹಿಂದೆ ಕುತೂಹಲದ ಕಾರಣವಿದೆ. ಅದು ಕತ್ತೆಯ ಹಾಲಿನ ಪ್ರಯೋಜನ. ಒಂದಿಷ್ಟು ಕತ್ತೆಗಳನ್ನು ಸಾಕಿ, ಅದರ ಹಾಲನ್ನು ಮಾರಾಟ ಮಾಡಿದ್ರೆ ಮಾಲಾಮಾಲ್ ಆಗುವುದು ಗ್ಯಾರೆಂಟಿ ಎನ್ನುವ ಮಾತನ್ನು ಹೇಳುವುದಕ್ಕಾಗಿ ತಮಾಷೆಯಾಗಿ ವೈದ್ಯರು ಈ ಮಾತನ್ನು ಹೇಳಿದ್ದಾರೆ.
ಅಷ್ಟಕ್ಕೂ ಕತ್ತೆ ಹಾಲಿನ ಪ್ರಯೋಜನ ಒಂದೆರಡಲ್ಲ. ಕತ್ತೆ ಹಾಲು, ಹಸು ಅಥವಾ ಎಮ್ಮೆ ಹಾಲಿಗಿಂತ ತುಂಬಾ ದುಬಾರಿ. ಹಸು- ಎಮ್ಮೆ ಹಾಲು 60-80 ರೂಪಾಯಿಗಳಲ್ಲಿ ಸಿಕ್ಕರೆ, ಹಸು ಕತ್ತೆ ಹಾಲಿಗೆ 10 ಸಾವಿರದವರೆಗೂ ಇದೆ. ಅದರ ಬಗ್ಗೆನೇ ವೈದ್ಯರು, ರ್‍ಯಾಪಿಡ್ ರಶ್ಮಿ ಶೋನಲ್ಲಿ ವಿವರಿಸಿದ್ದಾರೆ. ಸೌಂದರ್ಯದ ಪ್ರತಿರೂಪವಾಗಿದ್ದ ಈಜಿಪ್ಟ್ ರಾಣಿ ಕ್ಲಿಯೋಪಾತ್ರ ಕತ್ತೆ ಹಾಲಿನೊಂದಿಗೆ ಸ್ನಾನ ಮಾಡುತ್ತಿದ್ದರು. ಅವರು ಏಳು ನೂರು ಕತ್ತೆ ಸಾಕಿದ್ದರು ಎಂಬ ವಿಷಯವನ್ನು ಅವರು ಹೇಳಿದ್ದಾರೆ. ಭಾರತದಲ್ಲಿ ಸಾಮಾನ್ಯವಾಗಿ ಬ್ಯೂಟಿ ಪ್ರಾಡೆಕ್ಟ್‌ಗಳಿಗೆ ಅಲೋವಿರಾ ಬಳಸುತ್ತಾರೆ. ಆದರೆ ಕೆಲವು ದೇಶಗಳಲ್ಲಿ ಕತ್ತೆ ಹಾಲೇ ಶ್ರೇಷ್ಠ. ಸೌಂದರ್ಯವರ್ಧನೆಯಲ್ಲಿ ಅದಕ್ಕೆ ಸರಿಸಾಟಿ ಯಾವುದೂ ಇಲ್ಲ ಎಂದು ಡಾ.ಜಗನ್ನಾಥ್ ಅವರು ಹೇಳಿದ್ದಾರೆ. ಈ ಹಾಲು ಸೂಪರ್ ಟಾನಿಕ್ ಆಗಿದ್ದು ಸೂಪರ್ ಕಾಸ್ಮೆಟಿಕ್ ಆಗಿ ಕೆಲಸ ಮಾಡುತ್ತದೆ. ಈ ಹಾಲು ಆರೋಗ್ಯ ಮತ್ತು ಸೌಂದರ್ಯ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಇತರ ರೀತಿಯ ಹಾಲಿನಲ್ಲಿ ಕಂಡುಬರುವ ಆಹಾರದಿಂದ ಹರಡುವ ರೋಗಕಾರಕಗಳನ್ನು ಕತ್ತೆ ಹಾಲು ಹೊಂದಿರುವುದಿಲ್ಲ. ಅಂದರೆ ಅದು ಬೇಗನೇ ಹಾಳಾಗುವುದಿಲ್ಲ ಎಂಬ ಮಾಹಿತಿಯನ್ನೂ ವೈದ್ಯರು ನೀಡಿದ್ದಾರೆ.
ಪಬ್ಲಿಕ್ ಟಾಯ್ಲೆಟ್‌ಗಳ ಬಾಗಿಲು ನೆಲಕ್ಕೆ ಟಚ್ ಆಗಿರಲ್ಲ- ಇದ್ರ ಹಿಂದಿರೋ ಸತ್ಯ ಏನು ಗೊತ್ತಾ?
ಕತ್ತೆ ಹಾಲು ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದಯಾಬಿಟೀಸ್ ಟೈಪ್-2 ಕಂಟ್ರೋಲ್ ಮಾಡುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಪೌಷ್ಟಿಕಾಂಶದ ಪ್ರೊಫೈಲ್ ಇದನ್ನು ಆರೋಗ್ಯಕ್ಕೆ ಪ್ರಯೋಜನಕಾರಿಯನ್ನಾಗಿ ಮಾಡುತ್ತದೆ. ಕತ್ತೆ ಹಾಲಿನಲ್ಲಿ ಚರ್ಮವನ್ನು ಯೌವನದಿಂದಿರಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಈ ಹಾಲು ಚರ್ಮಕ್ಕೆ ನೈಸರ್ಗಿಕ ವಯಸ್ಸಾಗುವಿಕೆ ತಡೆಗಟ್ಟುವ ಏಜೆಂಟ್‌ನಂತೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ಇದನ್ನು ಅನೇಕ ಸೌಂದರ್ಯ ಉತ್ಪನ್ನಗಳು ಮತ್ತು ಕ್ರೀಮ್‌ಗಳಲ್ಲಿ ಬಳಸಲಾಗುತ್ತದೆ. ಸೌಂದರ್ಯ ಉತ್ಪನ್ನಗಳಲ್ಲಿ ಕತ್ತೆ ಹಾಲನ್ನು ಬಳಸುವುದರಿಂದ ಇದರ ಬೇಡಿಕೆ ವೇಗವಾಗಿ ಹೆಚ್ಚಾಗಿದೆ. ಈ ಹಾಲನ್ನು ಫೇಸ್ ಕ್ರೀಮ್, ಬಾಡಿ ಲೋಷನ್ ಮತ್ತು ಇತರ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ ಎಂದಿದ್ದಾರೆ.
40 ಗ್ರಾಮ್ ಡಾಂಕಿ ಮಿಲ್ಕ್ ಸೋಪ್ 650 ರೂಪಾಯಿ ಇದೆ. ಆನ್‌ಲೈನ್‌ನಲ್ಲಿ ನೀವು ನೋಡಿದ್ರೆ ಗೊತ್ತಾಗುತ್ತದೆ. ಫೇಸ್‌ಕ್ರೀಮ್‌ಗೆ ಒಂದು ಸಾವಿರ ರೂಪಾಯಿ ಇದೆ. ಕತ್ತೆ ಹಾಲಿನ ಪೌಡರ್ ಒಂದು ಕೆ.ಜಿಗೆ ಹದಿನೆಂಟು ಸಾವಿರ ರೂಪಾಯಿ ಇದೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ. ಕತ್ತೆ ಹಾಲನ್ನು ಕುಡಿಯಲು ಮಾತ್ರವಲ್ಲ, ಚೀಸ್ ತಯಾರಿಸಲು ಸಹ ಬಳಸಲಾಗುತ್ತದೆ. ಉತ್ತರ ಸರ್ಬಿಯಾದಲ್ಲಿ ಈ ಹಾಲಿನಿಂದ 'ಫ್ಯೂಲ್ ಚೀಸ್' ಎಂಬ ಚೀಸ್ ತಯಾರಿಸಲಾಗುತ್ತದೆ, ಇದರ ಬೆಲೆ ತುಂಬಾ ಹೆಚ್ಚಾಗಿದ್ದು, ಅದರಲ್ಲಿ ತಿಂಗಳಲ್ಲಿ ಅನೇಕ ಕುಟುಂಬಗಳ ದಿನಸಿ ವೆಚ್ಚವನ್ನು ಪೂರೈಸಬಹುದು. ಕೆಜಿಗೆ ಸುಮಾರು 70 ಸಾವಿರದಷ್ಟು ಬೆಲೆ ಇರುವ ಈ ಚೀಸ್‌ಗೆ ಪ್ರಪಂಚದಾದ್ಯಂತ ಬೇಡಿಕೆಯಿದ್ದು, ಇದು ವಿಶ್ವದ ಅತ್ಯಂತ ದುಬಾರಿ ಚೀಸ್‌ಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಹಣ ಹೆಚ್ಚಾಗಿ ಐಟಿ ರೇಡ್ ಮಾಡ್ತಾರೆ ಎಂದು ತಮಾಷೆ ಮಾಡಿದ್ದಾರೆ.
ದುಬಾರಿ ಬಟ್ಟೆ ಧರಿಸಿದ್ರೂ ಆನೆ ಲದ್ದಿ ಹಾಕ್ತಿದ್ರೆ ಕ್ಯಾಚ್ ಹಿಡಿದೇ ಬಿಡ್ತಾಳೆ ಈ ಸುಂದ್ರಿ... ವಿಡಿಯೋ ವೈರಲ್