ಯೋಗ ಮಾತ್ರವಲ್ಲ ಮಂತ್ರ ಕೂಡ ಆರೋಗ್ಯದ ಮೇಲೆ ಮ್ಯಾಜಿಕ್ ಮಾಡುತ್ತೆ!
ಇಡೀ ಜಗತ್ತು ಮಂತ್ರಗಳ ಶಕ್ತಿಯನ್ನು ಒಪ್ಪಿಕೊಂಡಿದೆ. ಪ್ರತಿಯೊಂದು ಮಂತ್ರದ ಉಚ್ಚಾರಣೆಗೆ ತನ್ನದೇ ಆದ ಮಹತ್ವವಿದೆ. ಓಂ ಎಂಬ ಪದದಲ್ಲಿ ಮಾತ್ರ ಎಷ್ಟು ಶಕ್ತಿ ಇದೆ ಎಂದು ಎಲ್ಲರಿಗೂ ತಿಳಿದಿದೆ. ಜಠರದ ಆಳದಿಂದ ಹೊರಹೊಮ್ಮುವ ಈ ರಾಗವನ್ನು ಸರಿಯಾದ ಯೋಗಾಸನದಿಂದ ಮಾಡಿದರೆ, ಅನೇಕ ಸಮಸ್ಯೆಗಳನ್ನು ನಿವಾರಿಸುತ್ತೆ. ಮೆದುಳನ್ನು ವಿಶ್ರಾಂತಿಗೊಳಿಸುವುದರ ಜೊತೆಗೆ, ಈ ಒಂದು-ಪದದ ಮಂತ್ರವು ಶ್ವಾಸನಾಳವನ್ನು ಸ್ವಚ್ಛಗೊಳಿಸುತ್ತೆ.
ಜೀರ್ಣಕ್ರಿಯೆಗೆ ಸಹ ಮಂತ್ರ ಪಠಣ ಉತ್ತಮ. ಹಾಗೇ ಅನೇಕ ರೋಗಗಳಿಗೆ ಪರಿಹಾರ ನೀಡುವ ಇತರ ಅನೇಕ ಮಂತ್ರಗಳಿವೆ. ಆದರೆ, ಗಂಭೀರ ಸ್ಥಿತಿಯಲ್ಲಿದ್ದರೆ, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಬೇಕು. ಆದರೆ ಮಂತ್ರಗಳ ಗುಣಪಡಿಸುವ ಶಕ್ತಿಯು ಆ ಔಷಧಿಗಳ ವಿಜ್ಞಾನದೊಂದಿಗೆ ಸಂಬಂಧ ಹೊಂದಿದೆ, ಆಗ ಬೇಗನೆ ಪರಿಹಾರ ಪಡೆಯುವ ಭರವಸೆಯಿದೆ. ಯಾವ ಮಂತ್ರವು ಯಾವ ರೋಗಕ್ಕೆ ಗುಣಪಡಿಸುವ ಶಕ್ತಿ ನೀಡುತ್ತೆ ನೋಡೋಣ.
ಈ ಮಂತ್ರಗಳು ಪರಿಹಾರ ನೀಡುತ್ತೆ
ಉತ್ತಮ ಆರೋಗ್ಯಕ್ಕಾಗಿ ಒಂದು ಸಣ್ಣ ಮಂತ್ರವನ್ನು ಪಠಿಸಿ.
।।ಸೋಹಂ।।
ರಕ್ತದೊತ್ತಡ ನಿಯಂತ್ರಿಸಲು ಪ್ರತಿದಿನ ಈ ಮಂತ್ರವನ್ನು ಪಠಿಸಿ. ಈ ಮಂತ್ರವೂ ತುಂಬಾ ಚಿಕ್ಕದಾಗಿದೆ. ಬಿಪಿಯನ್ನು (control BP) ನಿಯಂತ್ರಿಸಲು ಪ್ರತಿದಿನ ।।ಹ್ರೀಮ್।।ಮಂತ್ರ ಪಠಿಸಿ. ಇದಲ್ಲದೆ, ಮತ್ತೊಂದು ಮಂತ್ರವನ್ನು ಪಠಿಸಿ. ಅದುವೇ ।।ಓಂ ಭವಾನಿ ಪಾಂಡುರಂಗ ।। ಈ ಮಂತ್ರವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕನಿಷ್ಠ 21 ಬಾರಿ ಪಠಿಸಬೇಕು.
ನೀವು ಶುಗರ್ ಪೇಷಂಟ್ ಆಗಿದ್ರೆ, ಈ ಮಂತ್ರಗಳನ್ನು ಪಠಿಸಿ
ಸಕ್ಕರೆ ರೋಗಿಗಳು (diabetes patients) ಸಹ ಬಿಪಿ ರೋಗಿಗಳಂತೆ।। ಹ್ರೀಮ್।। ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಪಠಿಸಲು ಒಂದು ಮಾರ್ಗವಿದೆ, ಆ ವಿಧಾನ ಅನುಸರಿಸಬೇಕು. ಮಂತ್ರವನ್ನು ಪಠಿಸುವಾಗ, ವಜ್ರಾಸನದಲ್ಲಿ ಕುಳಿತುಕೊಳ್ಳಿ. ನಿಮ್ಮ ಹೊಕ್ಕುಳಿನ ಮೇಲೆ ಎಲ್ಲಾ ಗಮನವನ್ನು ಕೇಂದ್ರೀಕರಿಸಿ. ಈಗ ಈ ಮಂತ್ರವನ್ನು ಪಠಿಸಿ.
ಗಟ್ಟಿಯಾಗಿ ನಾಭಿಯ ಆಳದಿಂದ ಈ ಮಂತ್ರವನ್ನು ಪಠಿಸೋದು ಪ್ರಯೋಜನಕಾರಿ. ಮಂತ್ರವನ್ನು ಪಠಿಸುವಾಗ ಒತ್ತಡವು ಹೊಕ್ಕುಳಿನ ಮೇಲೆ ಬೀಳುತ್ತೆ. ಇದು ದೇಹದಲ್ಲಿ ಸಮತೋಲನ ಸೃಷ್ಟಿಸುತ್ತೆ ಮತ್ತು ವಿಷ ಬಿಡುಗಡೆ ಮಾಡುತ್ತೆ. ಇದರಿಂದ ಮಧುಮೇಹಿಗಳ ಆರೋಗ್ಯ ಸುಧಾರಣೆಯಾಗಲು ಸಹಕಾರಿಯಾಗುತ್ತದೆ ಎಂದು ತಿಳಿದು ಬಂದಿದೆ.
ಈ ಮಂತ್ರಗಳು ಕೆಲಸದ ಒತ್ತಡ ಮತ್ತು ಆಯಾಸ ದೂರ ಮಾಡುತ್ತೆ
ದಿನವಿಡೀ ಆಫೀಸ್ ಕೆಲಸದ ಒತ್ತಡವಿದ್ದರೆ, ದಣಿದಿದ್ದರೆ, ಆಗ ನೀವು ।। ಲಮ್।। ಮಂತ್ರವನ್ನು ಪಠಿಸಿ. ಇದನ್ನು ಪಂಚ್ ಮಾಲಾ ಜಪಸರದೊಂದಿಗೆ ಮಾಡಬೇಕು. ನೀವು ಇದನ್ನು ಮಾಡಲು ಸಾಧ್ಯವಾಗದಿದ್ದರೆ, ಈ ಮಂತ್ರವನ್ನು ಸ್ವಲ್ಪ ಸಮಯದವರೆಗೆ ಪಠಿಸಿ ಮತ್ತು ವಿಶ್ರಾಂತಿ ತೆಗೆದುಕೊಳ್ಳಿ.
ಜೀರ್ಣಕ್ರಿಯೆ ಮತ್ತು ಜ್ವರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ
ನೀವು ಅಜೀರ್ಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ, ಸುಖಾಸನ ಅಥವಾ ವಜ್ರಾಸನ ಆಯ್ಕೆ ಮಾಡಿ. ಈ ಆಸನದಲ್ಲಿ ಕುಳಿತುಕೊಂಡು ।। ಓಂ ।। ಮಂತ್ರ ಪಠಿಸಿ. ಈ ಮಂತ್ರದ ಹೊರತಾಗಿ ।। ರಂ ।। ಮಂತ್ರವನ್ನು ಸಹ ಪಠಿಸಬಹುದು.
ಯಾರಿಗಾದರೂ ಹೆಚ್ಚಿನ ಜ್ವರವಿದ್ದರೆ, ಔಷಧಿಯೊಂದಿಗೆ,।। ಓಂ ನಮೋ ಭಗವತೇ ರುದ್ರಾಯ।। ಮಂತ್ರವನ್ನು ಪಠಿಸಿ. ಜ್ವರದಲ್ಲಿ ರೋಗಿಗೆ ಈ ಮಂತ್ರ ಸ್ವತಃ ಪಠಿಸುವುದು ಕಷ್ಟ. ಆದರೆ ಅವರ ಕುಟುಂಬ ಸದಸ್ಯರು ಸಹ ಅವರ ಬಳಿ ಕುಳಿತು ಈ ಮಂತ್ರವನ್ನು ಪಠಿಸಬಹುದು. ಇದರಿಂದ ಬೇಗನೆ ಗುಣಮುಖರಾಗಬಹುದು.
ಮೈಗ್ರೇನ್-ನಿವಾರಿಸುವ ಮಂತ್ರ
ಮೈಗ್ರೇನ್ ಸಮಸ್ಯೆ (migrain problem) ಇತ್ತಿಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮಗೂ ಈ ಸಮಸ್ಯೆ ಇದ್ದರೆ, ಶಿವನ ಮಂತ್ರವನ್ನು ಪಠಿಸಬೇಕು. ನೀವು ಮೈಗ್ರೇನ್ ಸಮಸ್ಯೆ ಹೊಂದಿದ್ದರೆ, ನಿಯಮದ ಪ್ರಕಾರ ।।ಓಂ ನಮಃ ಶಿವಾಯ।। ಮಂತ್ರ ಪಠಿಸಿ. ಇದು ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡುತ್ತೆ.
ಹೃದಯ ಸಂಬಂಧಿ ಕಾಯಿಲೆ
ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಆಗ ನೀವು ಪ್ರತಿದಿನ ।। ಓಂ ನಮಃ ಶಿವಾಯಃ ।। ಮಂತ್ರ ಪಠಿಸಿ. ಸುಖಾಸನದಲ್ಲಿ ಕುಳಿತು ಈ ಮಂತ್ರ ಪಠಿಸೋದರಿಂದ ಹೃದಯ ಬಡಿತವು ಸಾಮಾನ್ಯವಾಗಿರುತ್ತೆ. ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತೆ.
ಮಾರಣಾಂತಿಕ ಕಾಯಿಲೆಯಿಂದ ಮುಕ್ತಿ ಪಡೆಯಲು
ಯಾವುದೇ ಮಾರಣಾಂತಿಕ ರೋಗ ತೊಡೆದುಹಾಕಲು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಲಾಗುತ್ತೆ.
॥ ಓಂ ತ್ರಯಂಬಕಂ ಯಜಂಹೇ, ಸುಗಂಧಿಮ್ ಪುಷ್ಟಿವರ್ಧನಂ
ಊರ್ವರುಕ್ಮಿವ ಬಂಧನ, ಮೃತ್ಯೋಮೋಕ್ಷಮಮ್ರಿತತ್।।
ಇದು ಎಲ್ಲಾ ರೀತಿಯ ಮರಣ ದೋಷವನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.
ನಿದ್ರಾಹೀನತೆ ಸಮಸ್ಯೆ
ನಿದ್ರಾಹೀನತೆಯ ಸಮಸ್ಯೆ ಹೊಂದಿರುವವರು, ಮಲಗುವಾಗ ಹಾಸಿಗೆಯ ಮೇಲೆ ಮಲಗಿ ।। ಓಂ ಅಗಸ್ತ್ಯ ಶಾಯಿನ: ।। ಮಂತ್ರ ಪಠಿಸಿ. ಈ ಮಂತ್ರವನ್ನು ದಿನ ಪಠಿಸುತ್ತಿದ್ದರೆ ಯಾವಾಗ ನಿದ್ರೆ ಬರುತ್ತೆ ಎಂದು ಸಹ ತಿಳಿಯೋದಿಲ್ಲ. ಉತ್ತಮ ನಿದ್ರೆಯ ಜೊತೆಗೆ, ಉತ್ತಮ ಮಾನಸಿಕ ಆರೋಗ್ಯ ಕಾಪಾಡಲು ಈ ಮಂತ್ರ ಸಹಾಯ ಮಾಡುತ್ತೆ.